Kannada Actresses : ಸ್ನೇಹಿತರೆ, ಅದೆಷ್ಟೋ ನಟ ನಟಿಯರು ನಿರ್ದೇಶಕರು ಹಾಗೂ ಇನ್ನಿತರೆ ಪೋಷಕ ಪಾತ್ರಧಾರಿಗಳು ನಮ್ಮ ಕನ್ನಡ ಸಿನಿಮಾ ರಂಗದ (Kannada Film Industry) ಮೂಲಕವೇ ಬಣ್ಣದ ಲೋಕದೊಳಗೆ ಧುಮುಕಿ ಅನಂತರ ತಮ್ಮ ಅಭಿನಯದ ಚಾಪಿನಿಂದ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾ ರಂಗದಲ್ಲಿ ಅವಕಾಶಗಳ ಸುರಿಮಳೆಯನ್ನು ಪಡೆದುಕೊಂಡು ಸಖತ್ ಆಕ್ಟಿವ್ ಇದ್ದಾರೆ.
ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಇಂದು ಬೇರೆ ಬೇರೆ ಭಾಷೆಗಳ ಸಿನಿಮಾ ಮೂಲಕ ಮಿಂಚುತ್ತಿರುವ ಅನೇಕ ನಟಿಯರಿದ್ದಾರೆ.
ಕೊನೆಗೂ ಮದುವೆಯ ಬಗ್ಗೆ ಮೌನ ಮುರಿದ 36 ವರ್ಷದ ನಿರೂಪಕಿ ಅನುಶ್ರೀ ಯಾವಾಗ ಮದುವೆ ಆಗ್ತಾರಂತೆ ಗೊತ್ತಾ?
ಅಂತಹ ನಟಿಯರು ಯಾರ್ಯಾರು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ದೀಪಿಕಾ ಪಡುಕೋಣೆ – Deepika Padukone
ಇಂದು ಭಾರತ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಹಾಗೂ ದುಬಾರಿ ಸಂಭಾವನೆ ಪಡೆಯುವಂತಹ ನಟಿಯರ ಪೈಕಿ ದೀಪಿಕಾ ಪಡುಕೋಣೆ ಅಗ್ರಸ್ಥಾನವನ್ನು ಅಲಂಕರಿಸುತ್ತಾರೆ. ಆದರೆ ಈ ನಟಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮೊದಲು ಮಾಡ್ಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಆನಂತರ 2೦೦6ರ ಸಮಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಐಶ್ವರ್ಯ ಸಿನಿಮಾದ ನಾಯಕ ನಟಿಯಾಗಿ ಕಾಣಿಸಿಕೊಂಡು ನಂತರ ಬೇರೆ ಭಾಷೆಗೆ ಹಾರಿ ಇಂದು ಅಸಂಖ್ಯಾತ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ.
ಮುಲಾಜಿಲ್ಲದೆ, ಫಸ್ಟ್ ನೈಟ್ ಅಲ್ಲಿ ನೀವೆಲ್ಲ ಏನ್ ಮಾಡ್ತೀರೋ? ನಾನು ಅದನ್ನೇ ಮಾಡಿದೀನಿ ಎಂದ ರಚಿತಾ ರಾಮ್!
ನಿತ್ಯ ಮೆನನ್ – Nithya Menon
ನಟಿ ನಿತ್ಯ ಮೆನನ್ ಅವರು 2006ರಲ್ಲಿ ತೆರೆಕಂಡ ಸವೆನೋ ಕ್ಲಾಕ್ ಎಂಬ ಕನ್ನಡ ಸಿನಿಮಾದ (Kannada Cinema) ಮೂಲಕ ಡಬ್ಲ್ಯೂ ಮಾಡುತ್ತಾರೆ. ಆನಂತರ ತಮಿಳು, ತೆಲುಗು, ಮಲಯಾಳಂ ಸಿನಿಮಾಗಳು ನಿತ್ಯ ಅವರನ್ನು ಹರಸಿ ಬಂದ ಕಾರಣ ಇಂದು ಬಹು ಭಾಷಾ ನಟಿಯಾಗಿ ಹೊರಹೊಮ್ಮಿ ತಮ್ಮ ನಟನ ಪ್ರವೃತ್ತಿಯ ಮೂಲಕ ಬೇಡಿಕೆಯನ್ನು ಗಿಟ್ಟಿಸಿ ಕೊಂಡಿದ್ದಾರೆ.
ರಾಕುಲ್ ಪ್ರೀತ್ ಸಿಂಗ್ – Rakul Preet Singh
ಮಾಡ್ಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ರಾಕುಲ್ ಪ್ರೀತ್ ಸಿಂಗ್ ಅವರಿಗೆ ಗಿಲ್ಲಿ ಸಿನಿಮಾದ ನಾಯಕ ನಟಿಯಾಗುವ ಅವಕಾಶ ಸಿಗುತ್ತದೆ. ಹೀಗೆ ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಈ ನಟಿ ಇಂದು ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದ್ದಾರೆ.
ಶ್ರೀನಿಧಿ ಶೆಟ್ಟಿ – Srinidhi Shetty
ಮಿಸ್ ಅವಾರ್ಡ್ ಅನ್ನು ತಮ್ಮ ಮುಡಿಗೇರಿಸಿಕೊಂಡ ಶ್ರೀನಿಧಿ ಶೆಟ್ಟಿ ಅವರಿಗೆ ಸಿನಿಮಾಗಳ ಆಫರ್ ಬರಲು ಆರಂಭಿಸಿದವು. ಆದರೆ ಶ್ರೀನಿಧಿ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಸಿನಿಮಾದ ಮೂಲಕ ಡಬ್ಲ್ಯೂ ಮಾಡಿ ಇಂದು ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ. ಕೋಬ್ರಾ ಸಿನಿಮಾದಲ್ಲಿ ಅಭಿನಯಿಸಿ ಬೇರೆ ಭಾಷೆಯ ಚಿತ್ರರಂಗದಲ್ಲಿಯೂ ತೊಡಗಿಕೊಂಡಿರುವ ಶ್ರೀನಿಧಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಪ್ರಣಿತ ಸುಭಾಷ್ – Pranitha Subhash
ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೃಜನ್ ಲೋಕೇಶ್ ಅಭಿನಯದ ಪೊರ್ಕಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಈ ನಟಿ ಪ್ರಣಿತ ಸುಭಾಷ್ ತೆಲುಗು, ತಮಿಳು ಸಿನಿಮಾ ರಂಗದಲ್ಲಿ ಅಭಿನಯಿಸುತ್ತ ಬಹು ಬೇಡಿಕೆಯನ್ನು ಪಡೆದುಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ – Rashmika Mandanna
ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರ ಕಾಂಬಿನೇಷನ್ನಲ್ಲಿ ಮೂಡಿಬಂದಿದ್ದ ಕಿರಿಕ್ ಪಾರ್ಟಿ ಸಿನಿಮಾದ ಸಾನ್ವಿ ಜೋಸೆಫ್ ಆಗಿ ಸಿನಿಮಾ ರಂಗ ಪ್ರವೇಶ ಮಾಡಿದ ರಶ್ಮಿಕಾ ಇಂದು ಬಾಲಿವುಡ್ ನ ಬಿಗ್ ಬಿ ಅಮಿತಾ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಳ್ಳುವಷ್ಟರ ಮಟ್ಟಕ್ಕೆ ಬೆಳೆದು ತಮ್ಮ ನಟನಾ ಚಾಪನ್ನು ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯ ಸಿನಿಮಾ ರಂಗಕ್ಕೆ ಬೀರುತ್ತಿದ್ದಾರೆ.
ಅದರಂತೆ ನಟಿ ಚಾಯ ಸಿಂಗ್, ಸೌಂದರ್ಯ, ಜಯಲಲಿತ ಮುಂತಾದ ನಟಿಯರು ಕನ್ನಡ ಸಿನಿಮಾ ರಂಗದ ಮೂಲಕ ತಮ್ಮ ಸಿನಿ ಜರ್ನಿಯನ್ನು ಪ್ರಾರಂಭಿಸಿ ಬೇರೆ ಭಾಷೆಯ ಸಿನಿಮಾ ಅಂಗಳದಲ್ಲಿ ಮಿಂಚಿದವರು.
Actresses who entered through Kannada cinema and are shining in Bollywood and Hollywood
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.