ಪುಷ್ಪ ಸಿನಿಮಾದ ಮೊದಲ ಆಯ್ಕೆ ಅಲ್ಲು ಅರ್ಜುನ್ ಅಲ್ಲ! ಈ ಸಿನಿಮಾ ರಿಜೆಕ್ಟ್ ಮಾಡಿದ ಟಾಪ್ ನಟ ಯಾರು ಗೊತ್ತಾ?
ಪುಷ್ಪ ಚಿತ್ರಕ್ಕೆ ಅಲ್ಲು ಅರ್ಜುನ್ ಮೊದಲ ಆಯ್ಕೆಯಾಗಿರಲಿಲ್ಲವಂತೆ, ಸ್ಟಾರ್ ನಟ ಈ ಸಿನಿಮಾ ಕಥೆಯನ್ನು ರಿಜೆಕ್ಟ್ ಮಾಡಿದ್ದರಂತೆ. ಅಂದಹಾಗೆ ಆ ನಟ ಯಾರು? ಚಿತ್ರ ರಿಜೆಕ್ಟ್ ಮಾಡಲು ಕಾರಣ ಏನು ತಿಳಿಯೋಣ
ಸ್ನೇಹಿತರೆ ಸಿನಿಮಾ ರಂಗದಲ್ಲಿ ಈ ರೀತಿಯಾದಂತಹ ಪ್ರಸಂಗಗಳು ಎದುರಾಗುವುದು ಸರ್ವೇಸಾಮಾನ್ಯ ನಿರ್ದೇಶಕರು ಯಾವುದೋ ನಟನನ್ನು ತಮ್ಮ ತಲೆಯಲ್ಲಿ ಇಟ್ಟುಕೊಂಡು ಅವರಿಗಾಗಿ ಸಿನಿಮಾದ ಕಥೆಯನ್ನು ಹಂತಹಂತವಾಗಿ ಏಣೆದಿರುತ್ತಾರೆ. ಆದರೆ ಕಥೆಯನ್ನು ಆ ನಟನ ಮುಂದೆ ವಿವರಿಸಿದಾಗ ಅದರ ಸಣ್ಣ ಪುಟ್ಟ ಕಾರಣಗಳಿಂದಾಗಿ ನಟರು ಸಿನಿಮಾಗಳನ್ನು ರಿಜೆಕ್ಟ್ ಮಾಡಿ ಬಿಡುತ್ತಾರೆ.
ಹೀಗೆ ಸಿನಿಮಾ ಮತ್ತೋರ್ವ ನಟನ ಪಾಲಾಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತದೆ. ಇಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿದ್ದು ಸದ್ಯ ಪ್ಯಾನ್ ಇಂಡಿಯಾ ಸಿನಿಮಾ (Pan India Movie) ಪುಷ್ಪ ಸಿನಿಮಾಗೂ (Pushpa Cinema) ಈ ರೀತಿಯಾದಂತಹ ಪ್ರಸಂಗ ಎದುರಾಗಿದ್ದುದು ನಿಜ. ಹೌದು ಗೆಳೆಯರೇ ನಿರ್ದೇಶಕರು ಮೊದಲಿಗೆ ಆ ಸೂಪರ್ ಸ್ಟಾರ್ ನನ್ನು ತಲೆಯಲ್ಲಿ ಇಟ್ಟುಕೊಂಡು ಈ ಸಿನಿಮಾವನ್ನು ಬರೆದಿರುತ್ತಾರೆ.
ಅಂದು ಸಾಮಾನ್ಯ ನಟನಾಗಿದ್ದ ರಾಮಕುಮಾರ್ ಅಣ್ಣಾವ್ರ ಮಗಳನ್ನು ಮದುವೆಯಾದದ್ದು ಹೇಗೆ? ಆನಂತರ ನಡೆದದ್ದು ಏನು ಗೊತ್ತಾ?
ಆದರೆ ಕೆಲವು ಕಾರಣಾಂತರಗಳಿಂದ ಸಿನಿಮಾ ಅಲ್ಲು ಅರ್ಜುನ್ (Actor Allu Arjun) ಅವರ ಪಾಲಾಯಿತು… ಅಷ್ಟಕ್ಕೂ ನಟ ಯಾರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
2021 ರಲ್ಲಿ ಸಾಕಷ್ಟು ಗಳಿಕೆ ಕಂಡಂತಹ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು.
ಬರೋಬ್ಬರಿ 350 ಕೋಟಿಗೂ ಹೆಚ್ಚಿನ ಹಣವನ್ನು ಗಳಿಕೆ ಮಾಡಿ ಬಾಕ್ಸ್ ನಲ್ಲಿ ಧೂಳೆಬ್ಬಿಸಿದಂತಹ ಈ ಒಂದು ಸಿನಿಮಾ ಸದ್ಯ ಎರಡನೇ ಭಾಗದ ಶೂಟಿಂಗ್ ಕೆಲಸ ಶುರು ಮಾಡಿಕೊಂಡಿದೆ.
ಹೀಗಿರುವಾಗ ಸ್ಪೋಟಕ ಹೇಳಿಕೆ ಒಂದು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದು ಈ ಚಿತ್ರಕ್ಕೆ ಅಲ್ಲು ಅರ್ಜುನ್ ಮೊದಲ ಆಯ್ಕೆಯಾಗಿರಲಿಲ್ಲವಂತೆ. ಹೌದು ಗೆಳೆಯರೇ ಕೆಲವು ವರದಿಗಳ ಪ್ರಕಾರ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ (Director Sukumar) ಅವರು ಶ್ರೀಗಂಧದ ಕಳ್ಳ ಸಾಗಾಣಿಕೆ ಸಂಬಂಧಿಸಿದ ವಿಭಿನ್ನ ಸ್ಕ್ರಿಪ್ಟ್ ಬರೆದಿದ್ದರು.
ನಂತರ ಅವರು ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಎಂದು ಕರೆಯಲ್ಪಡುವ ಮಹೇಶ್ ಬಾಬು (Super Star Mahesh Babu) ಅವರನ್ನು ಸಂಪರ್ಕಿಸಿ ಸಿನಿಮಾದ ಕಥೆಯನ್ನು ಹೇಳುತ್ತಾರೆ. ಆದರೆ ಸಿನಿಮಾದಲ್ಲಿ ನಾಯಕ ನಟನ ಇಮೇಜ್ ಬಹಳನೇ ನೆಗೆಟಿವ್ ಆಗಿ ಕೂಡಿರುವ ಕಾರಣ ಮಹೇಶ್ ಬಾಬು ಈ ಸಿನಿಮಾವನ್ನು ರಿಜೆಕ್ಟ್ ಮಾಡುತ್ತಾರೆ.
ಅನಂತರ ಸಿನಿಮಾ ಅಲ್ಲು ಅರ್ಜುನ್ ಅವರ ಪಾಲಾಯಿತು ಎಂದರೆ ತಪ್ಪಾಗಲಾರದು. ಪುಷ್ಪರಾಜ್ ಕ್ಯಾರೆಕ್ಟರ್ ಅಲ್ಲು ಅರ್ಜುನ್ ಅವರಿಗೆ ಹೇಳಿ ಮಾಡಿಸಿದಂತಿದ್ದು, ತಮ್ಮ ಮಾಸ್ ಡೈಲಾಗ್ ಹಾಗೂ ರಗಡ್ ಲುಕ್ ಮೂಲಕ ಪುಷ್ಪನಾಗಿ ಅಲ್ಲು ಅರ್ಜುನ್ ಎಲ್ಲರ ಹೃದಯ ಗೆದ್ದಿದ್ದಾರೆ.
ನಿಮ್ಮ ಪ್ರಕಾರ ಈ ಒಂದು ಸಿನಿಮಾ ಯಾವ ನಟನಿಗೆ ಸರಿಹೊಂದುತ್ತದೆ? ಪುಷ್ಪ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸಿದ್ದರೆ ಹೇಗಿರುತ್ತಿತ್ತು? ಇಲ್ಲ ಈ ಕತೆ ಅಲ್ಲು ಅರ್ಜುನ್ ಗೆ ಸೂಕ್ತ ಎನಿಸಿತಾ?
ಒಟ್ಟಾರೆ ಚಿತ್ರ ಬಿಡುಗಡೆ ಆಗಿದ್ದು ಆಯಿತು, ಸಕ್ಸಸ್ ಕಂಡಿದ್ದೂ ಆಯಿತು… ಒಂದಂತೂ ನಿಜ ಚಿತ್ರದ ಲುಕ್ ಮಾಸ್ ಸ್ಟೈಲ್ ಒಂದೆಡೆ ಅಲ್ಲು ಅರ್ಜುನ್ ಗೆ ಮಾತ್ರ ಸೆಟ್ ಆಯಿತು ಅನಿಸುವುದಂತೂ ನಿಜ….
Allu Arjun was not the first choice for Pushpa movie, Who is the top actor who rejected this movie