ಇತಿಹಾಸ ಸೃಷ್ಟಿಸಿದ ಅಂತ ಸಿನಿಮಾ ಆಗಿನ ಕಾಲಕ್ಕೆ ಮಾಡಿದ ದಾಖಲೆಯ ಕಲೆಕ್ಷನ್ ಎಷ್ಟು ಗೊತ್ತಾ?

ಕನ್ನಡ ಸಿನಿಮಾ ರಂಗಕ್ಕೆ (Kannada Film Industry) ತಮ್ಮ ಅದ್ಭುತ ಹಾಗು ಅಭೂತಪೂರ್ವವಾದ ಅಭಿನಯದ ಕೊಡುಗೆಯನ್ನು ನೀಡುತ್ತಾ, ಒಂದರ ಮೇಲೆ ಒಂದು ಹಿಟ್ ಸಿನಿಮಾಗಳನ್ನು ನೀಡಿ ಕನ್ನಡ ಸಿನಿಮಾದ ಯಶಸ್ಸನ್ನು ಬೇರೊಂದು ಲೋಕಕ್ಕೆ ಕೊಂಡಯುವಲ್ಲಿ ಮೈಲಿಗಲ್ಲನ್ನು ಹಾಕಿದಂತಹ ರಾಜಕುಮಾರ್ (Dr Raj Kumar), ವಿಷ್ಣುವರ್ಧನ್ (Dr Vishnuvardhan), ಶಂಕರ್ ನಾಗ್ (Shankar Nag) ರಂತಹ ದಿಗ್ಗಜ ನಟರುಗಳ ನಡುವೆ ಅಂಬರೀಶ್ (Actor Ambareesh) ಅವರದ್ದು ಕೂಡ ಎತ್ತಿದ ಕೈ ಎಂದರೆ ತಪ್ಪಾಗಲಾರದು.
ವಿಷ್ಣುವರ್ಧನ್ ಅವರ ನಾಗರಹಾವು ಸಿನಿಮಾದಲ್ಲಿ ಜಲೀಲ ಎಂಬ ಪಾತ್ರಕ್ಕೆ ಜೀವ ತುಂಬುವ ಮೂಲಕ ಖಳನಟನಾಗಿ ಕನ್ನಡ ಸಿನಿಮಾ ರಂಗವನ್ನು ಪ್ರವೇಶ ಮಾಡಿದಂತಹ ಅಂಬರೀಶ್ ಅನಂತರ ತಮ್ಮ ಅತ್ಯದ್ಭುತ ಅಭಿನಯದ ಕಲೆಯಿಂದಲೆ ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ನಟನಾಗಿ ಬೆಳೆದರು. ಇನ್ನು ಅಂಬರೀಶ್ ಅಭಿನಯದ ಹಲವು ಸಿನಿಮಾಗಳಲ್ಲಿ ಅಂತ ಸಿನಿಮಾ (Antha Cinema) ಬೇರೆ ವರ್ಚಸ್ಸಿನಲ್ಲಿ ನಿಂತುಕೊಳ್ಳುತ್ತದೆ ಎಂದರೆ ತಪ್ಪಾಗಲಾರದು.
ಹೌದು ಈ ಒಂದು ಸಿನಿಮಾವನ್ನು ಎಸ್ ವಿ ರಾಜೇಂದ್ರ ಬಾಬು ಅವರು ನಿರ್ದೇಶಿಸಿದ್ದರು. ಮಾರುತಿ ವೇಣು, ಕೆ ಸಿ ಎನ್ ರಾಜು, ಚಂದ್ರಶೇಖರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.
ಹೀಗೆ 1981 ರಲ್ಲಿ ತೆರೆಕಂಡಂತಹ ಈ ಒಂದು ಸಿನಿಮಾ ಮಾಡಿದ ದಾಖಲೆಯ ಮೊತ್ತ ಹಾಗೂ ಹೂಡಿಕೆ ಎಷ್ಟು ಎಂಬ ಮಾಹಿತಿಯನ್ನು ರಾಜೇಂದ್ರ ಸಿಂಗ್ ಬಾಬು ಅವರು ಸಂದರ್ಶನ ಒಂದರಲ್ಲಿ ರಿವೀಲ್ ಮಾಡಿದ್ದಾರೆ.
ನಿಮಗೂ ಕೂಡ ಈ ಒಂದು ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೆಣ್ಣಿನೊಂದಿಗೆ ಅಸಭ್ಯವಾಗಿ ನಟಿಸ ಬೇಕಿದ್ರೆ ನಟ ಭಯಂಕರ ವಜ್ರಮುನಿ ಅದೆಂತಹ ಕೆಲಸ ಮಾಡುತ್ತಿದ್ದರು ಗೊತ್ತಾ?
ಹೌದು ಈ ಒಂದು ಸಿನಿಮಾ ತಯಾರಾಗುತ್ತಿದೆ ಎಂಬುವಾಗ ನಿರ್ದೇಶಕರು ದೊಡ್ಡ ತಾರಾ ಗಣವನ್ನೇ ಸೃಷ್ಟಿ ಮಾಡಿದರು. ಅಂಬರೀಶ್, ಲಕ್ಷ್ಮಿ, ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಸೇರಿದಂತೆ ಕನ್ನಡದ ದಿಗ್ಗಜರು ಈ ಚಿತ್ರದಲ್ಲಿ ನಟಿಸಿದ್ದರು.
ಹೀಗೆ ಅಂತ ಸಿನಿಮಾ ಇಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಂಡುಕೊಳ್ಳುತ್ತದೆ ಎಂದು ಯಾರು ಸಹ ಊಹಿಸಿರಲಿಲ್ಲ, ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿದ ರಾಜೇಂದ್ರ ಸಿಂಗ್ ಬಾಬು “ಅಂತ ರಿಲೀಸ್ ಆದ ಮೊದಲ ದಿನ ಸಂಜೆ 4 ಗಂಟೆಗೆ ಥಿಯೇಟರ್ಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿ ಮಾಡಿತ್ತು ಅಂತಹ ಬ್ಲಾಕ್ ಮಾರ್ಕೆಟ್ ಅನ್ನು ನಾನು ನೋಡಿರಲಿಲ್ಲ, ನಂತರ 7ರ ಶೋ 8ರ ಶೋ ಪ್ರದರ್ಶನ ಕಂಡಿದ್ದು ಜನರು ಥಿಯೇಟರ್ನಿಂದ ಹೊರ ಬರುತ್ತಲೇ ಇರಲಿಲ್ಲ.
ಯಾರೆ ನೀನು ಚೆಲುವೆ ಸಿನಿಮಾ ನಟಿ ಸಂಗೀತ ಈಗ ಹೇಗಿದ್ದಾರೆ ಗೊತ್ತೆ? ಆಕೆ ಸಂಪೂರ್ಣ ಸಿನಿರಂಗದಿಂದ ದೂರವಾದದ್ದು ಏಕೆ?
ಬೆಂಗಳೂರಿನ ಅಲಂಕಾರ್ ಅಂತಹ ಥಿಯೇಟರ್ನಲ್ಲಿ ಆಪರೇಟರ್ ಅನ್ನು ಹಿಡಿದು ಇನ್ನೊಂದು ಶೋ ಹಾಕಿ ಅಂತ ಕೇಳಿಕೊಂಡಿದ್ದರು”. ಎಂದು ಸಿನಿಮಾದ ಸಕ್ಸಸ್ ಕುರಿತು ನಿರ್ದೇಶಕರು ಮಾತನಾಡಿದರು. ಹೀಗೆ ಕೇವಲ 20 ಲಕ್ಷ ಹಣದಲ್ಲಿ ತಯಾರದಂತಹ ಈ ಒಂದು ಸಿನಿಮಾ ಗಳಿಕೆ ಮಾಡಿದ್ದು ಬರೋಬರಿ 40 ಲಕ್ಷ ರೂಪಾಯಿ.
ಇವತ್ತಿನ ಲೆಕ್ಕಾಚಾರಕ್ಕೆ ಅದು 40 ಕೋಟಿ ರೂಪಾಯಿಗಳು. ಹೌದು ಆಗಿನ ಕಾಲದಲ್ಲಿ ಚಿತ್ರಮಂದಿರಗಳಿಗೆ ಹೋಗಿ ನೋಡಬೇಕೆಂದರೆ ಅಂದು ಬಾಲ್ಕನಿಗೆ ಎರಡು ರೂಪಾಯಿ ಮತ್ತು ಗಾಂಧಿ ಕ್ಲಾಸ್ ಗೆ ಒಂದು ರೂಪಾಯಿ ಇತ್ತು. ಇವತ್ತಿನ ದಿನಗಳಲ್ಲಿ ಒಂದು ಸಿನಿಮಾ ನೋಡಲು ಒಂದೊಂದು ಸಾವಿರ ರೂಪಾಯಿ ಖರ್ಚು ಮಾಡುವ ಅಗತ್ಯವಿದೆ. ಆ ಲೆಕ್ಕಾಚಾರದಲ್ಲಿ ಈ ಸಿನಿಮಾ ದಾಖಲೆ ಅಷ್ಟಿಷ್ಟಲ್ಲ…
Antha Kannada Cinema Total Collections and records made for that time




