ಡಾ ರಾಜಕುಮಾರ್ ಬಿಟ್ರೆ ಅತೀ ಹೆಚ್ಚು ಫ್ಯಾನ್ ಬೇಸ್ ಇರೋದು ನಿಮಗೆ ಎಂದಾಗ ನಟ ದರ್ಶನ್ ರಿಯಾಕ್ಷನ್ ಹೇಗಿತ್ತು ಗೊತ್ತಾ?

Challenging Star Darshan: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಡಾಕ್ಟರ್ ರಾಜಕುಮಾರ್ ಅವರನ್ನು ಬಿಟ್ರೆ ಅತಿ ಹೆಚ್ಚು ಫ್ಯಾನ್ ಬೇಸ್ ಇರುವುದು ದರ್ಶನ್ ಅವರಿಗೆ ಮಾತ್ರ ಎಂಬ ಹೇಳಿಕೆ ಕೇಳಿಬಂದಿತ್ತು

Challenging Star Darshan: ಸ್ನೇಹಿತರೆ, ವರನಟ ಡಾಕ್ಟರ್ ರಾಜಕುಮಾರ್ (Dr Rajkumar) ತಮ್ಮ ಅಮೋಘ ಅಭಿನಯದ ಮೂಲಕ ವರ್ಷ ಒಂದರಲ್ಲೇ 16ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಾ ಹೆಚ್ಚು ಪಾತ್ರಗಳಿಗೆ ಜೀವ ತುಂಬಿ ಕನ್ನಡ ಸಿನಿಮಾ ರಂಗವನ್ನು ಮತ್ತೊಂದು ಲೋಕಕ್ಕೆ ಕೊಂಡೊಯ್ಯುವಲ್ಲಿ ಮೈಲುಗಲ್ಲನ್ನು ಹಾಕಿದವರು.

ಹೀಗಾಗಿ ಆಗಿನ ಕಾಲದ ಜನರಿಗೆ ಮಾತ್ರವಲ್ಲದೆ ಈಗಿನ ಕಾಲದ ಯುವಕರಿಗೂ ಕೂಡ ರಾಜ್ ಕುಮಾರ್ ಎಂದೊಡನೆ ಗೌರವ ಪ್ರೀತಿ ಅಭಿಮಾನ. ಅವರ ಪಾತ್ರಗಳನ್ನೂ ನೋಡಿ ಕಲಿತವರಿದ್ದಾರೆ, ಅವರ ಚಿತ್ರಗಳನ್ನು ನೋಡಿ ಬದಲಾದವರಿದ್ದಾರೆ. ಉದಾಹರಣೆಗೆ ಅವರ ಅಮೋಘ ಅಭಿನಯದ ಚಿತ್ರ ಬಂಗಾರದ ಮನುಷ್ಯ ಚಿತ್ರ ನೋಡಿ ಸಿಟಿಯಿಂದ ಹಳ್ಳಿಗೆ ಬಂದ ಅನೇಕರಿದ್ದಾರೆ.

ಈಗೆ ಅಣ್ಣಾವ್ರ ಬಗ್ಗೆ ಹೇಳುತ್ತಾ ಹೋದರೆ ಪದಗಳು ಸಾಕಾಗುವುದಿಲ್ಲ, ಅಂತಹ ಮೇರುನಟನನ್ನು ಪಡೆದ ನಾವೇ ಧನ್ಯ, ನಮ್ಮ ನಾಡು ಪುನೀತ ಎಂದರೆ ತಪ್ಪಾಗುವುದಿಲ್ಲ.

ಆಗಿನ ಕಾಲದಲ್ಲೇ ಕೆಜಿಎಫ್ ಕಾಂತಾರ ಸಿನಿಮಾ ದಾಖಲೆ ಮುರಿದಿದ್ದ ಅಣ್ಣಾವ್ರ ಸಿನಿಮಾ ಯಾವುದು ಗೊತ್ತಾ? ಮೊದಲ ದಿನವೇ 1 ಕೋಟಿ ಟಿಕೆಟ್ ಮಾರಾಟವಾಗಿತ್ತು

ಇಂತಹ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರ ಕ್ರಾಂತಿ ಸಿನಿಮಾದ (Kranti Cinema) ಪ್ರೆಸ್ ಮೀಟ್ ನಲ್ಲಿ ಡಾಕ್ಟರ್ ರಾಜಕುಮಾರ್ ಅವರನ್ನು ಬಿಟ್ರೆ ಅತಿ ಹೆಚ್ಚು ಫ್ಯಾನ್ ಬೇಸ್ ಇರುವುದು ದರ್ಶನ್ ಅವರಿಗೆ ಮಾತ್ರ ಎಂಬ ಹೇಳಿಕೆ ಕೇಳಿಬಂದಿತ್ತು. ಇದನ್ನು ಕೇಳಿಸಿಕೊಂಡಂತಹ ದರ್ಶನ್ (Actor Darshan) ಎಂಥ ಮಾತು ಹೇಳಿದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಮುಂದೆ ಓದಿ.

ಹೌದು ಗೆಳೆಯರೇ ಮೆಜೆಸ್ಟಿಕ್ ಸಿನಿಮಾದಿಂದ ಹಿಡಿದು ಇಂದಿನ ಕ್ರಾಂತಿ ಸಿನಿಮದವರಿಗೂ ಬಹು ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿ ಮಾಡಿಕೊಂಡಿರುವಂತಹ ದರ್ಶನವರು ದಿನೇ ದಿನೇ ತಮ್ಮ ಅಭಿನಯದ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ವಿಶೇಷ ಹಾಗೂ ಸಾಮಾಜಿಕ ಕಳಕಳಿ ಇರುವಂತಹ ಸಿನಿಮಾಗಳನ್ನು ಮಾಡಿ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ.

ಪ್ರೀತಿಸಿದ ಹುಡುಗ ನಂಬಿಸಿ ಕೈ ಕೊಟ್ಟಾಗ ಪ್ರಾಣವನ್ನು ಕಳೆದುಕೊಳ್ಳಲು ಮುಂದಾಗಿದ್ರಾ ನಟಿ ಮಂಜುಳಾ? ಇವರ ಬಾಳಲ್ಲಿ ನಡೆದದ್ದು ಎಂತ ಘಟನೆ ಗೊತ್ತೇ?

Challenging Star Darshan

ಇನ್ನು ಸ್ಯಾಂಡಲ್ವುಡ್ ನಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗ ಇರುವುದು ದರ್ಶನ್ ಅವರಿಗೆ ಮಾತ್ರ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ದೊಡ್ಡಮಟ್ಟದಲ್ಲಿ ವೈರಲಾಗುತ್ತಲೇ ಇರುತ್ತದೆ. ಅಲ್ಲದೆ ದರ್ಶನ್ ಅವರು ಯಾವುದೇ ಪ್ರೆಸ್ ಮೀಟ್ ನಡೆಸಿದರು, ಕೂಡ ಅಲ್ಲಿ ದರ್ಶನ್ ಅವರು ತಮ್ಮ ಅಭಿಮಾನಿಗಳ ಬಗ್ಗೆ ಹೇಳದೆ ಮಾತನ್ನು ಮುಗಿಸುವುದೇ ಇಲ್ಲ.

ತಮ್ಮ 16ನೇ ವಯಸ್ಸಿನ ಬ್ಲಾಕ್ ಅಂಡ್ ವೈಟ್ ಫೋಟೋ ಶೇರ್ ಮಾಡಿದ ಸಮಂತಾ! ನೆಟ್ಟಿಗರ ಕಾಮೆಂಟ್ ಹೇಗಿತ್ತು ಗೊತ್ತಾ? ಭಾರೀ ವೈರಲ್

ಸಾಕಷ್ಟು ಕಡೆಗಳಲ್ಲಿ ದರ್ಶನವರು ತಮ್ಮ ಅಭಿಮಾನಿ ಬಗ್ಗೆ ಹೆಮ್ಮೆ ಪಟ್ಟಿದ್ದುಂಟು, ಹೀಗಿರುವಾಗ ದರ್ಶನವರು ಸಿನಿ ಬಜ್ ಎಂಬ ಯುಟ್ಯೂಬ್ ಚಾನೆಲ್ ಒಂದರಲ್ಲಿ ಸಂದರ್ಶನ ನೀಡುತ್ತಿದ್ದ ಸಮಯದಲ್ಲಿ ಸಂದರ್ಶಕರು ಡಾಕ್ಟರ್ ರಾಜಕುಮಾರ್ ಅವರನ್ನು ಬಿಟ್ಟರೆ ಅತಿ ದೊಡ್ಡ ಫ್ಯಾನ್ಸ್ ಹೊಂದಿರುವ ನಟನೆಂದರೆ ನೀವೇ ಎಂದು ಹೇಳಿದಾಗ ದರ್ಶನ್ ಅವರು ‘ಈ ವಿಚಾರ ಬೇಡ ಚೇಂಜ್ ಮಾಡೋಣ ಎನ್ನುತ್ತಾ ನೀವು ಹೇಳುತ್ತಿರುವುದು ತಪ್ಪು ಎಲ್ಲ ನಟರಿಗೂ ಅಭಿಮಾನಿಗಳಿದ್ದಾರೆ.

ಅದರಲ್ಲಿ ದೊಡ್ಡದು ಅಥವಾ ಚಿಕ್ಕದು ಎಂದಿಲ್ಲ’ ಈ ರೀತಿ ಹೋಲಿಸಿ ಯಾರನ್ನು ಪರೋಕ್ಷವಾಗಿ ಅಳಿಯಬಾರದು ಎನ್ನುವ ಮುಖಾಂತರ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದರು..

Challenging Star Darshan Reaction About His Fanbase Goes Viral

Follow us On

FaceBook Google News