ಆಗಿನ ಕಾಲದಲ್ಲೇ ಕೆಜಿಎಫ್ ಕಾಂತಾರ ಸಿನಿಮಾ ದಾಖಲೆ ಮುರಿದಿದ್ದ ಅಣ್ಣಾವ್ರ ಸಿನಿಮಾ ಯಾವುದು ಗೊತ್ತಾ? ಮೊದಲ ದಿನವೇ 1 ಕೋಟಿ ಟಿಕೆಟ್ ಮಾರಾಟವಾಗಿತ್ತು
ಸ್ನೇಹಿತರೆ ಸಿನಿಮಾದ ಕಥೆ ಡೈರೆಕ್ಷನ್ ಹಾಗೂ ನಟರ ಅಭಿನಯ ಅದ್ಭುತವಾಗಿದ್ದರೆ ಸಿನಿಮಾ ನೂರು ದಿನಗಳ ಕಾಲ ಥಿಯೇಟರ್ ನಲ್ಲಿ ರಾರಾಜಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಇತ್ತೀಚಿಗಷ್ಟೇ ತೆರೆ ಕಂಡಂತಹ ಕಾಂತರಾ ಸಿನಿಮಾ ಅದ್ಬುತ ಉದಾಹರಣೆ.
ಈ ಸಿನಿಮದಲ್ಲಿನ ಡೈರೆಕ್ಷನ್ ಹಾಗೂ ರಿಶಬ್ ಶೆಟ್ಟಿ ಸಪ್ತಮಿ ಗೌಡ ಅವರ ಅಭಿನಯ ಸಿನಿಮಾದ ಕಥೆ ಹಂದರ ಜನರನ್ನು ತನ್ನತ್ತ ಸೆಳೆದುಕೊಂಡಿತ್ತು.
ಕೇವಲ 16 ಕೋಟಿ ಬಜೆಟ್ ನಲ್ಲಿ ತಯಾರಾದಂತಹ ಈ ಒಂದು ಸಿನಿಮಾ 350 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಯಾರು ಕನಸಿನಲ್ಲಿ ಊಹಿಸಿರಲಿಲ್ಲ. ಇಂತಹದೇ ಒಂದು ಸಾಧನೆಯನ್ನು ಡಾಕ್ಟರ್ ರಾಜಕುಮಾರ್ ಅವರ ಆ ಒಂದು ಸಿನಿಮಾ ಅದಾಗಲೇ ಈ ಸಾಧನೆ ಮಾಡಿಬಿಟ್ಟಿತ್ತಂತೆ.
ಹೌದು ಗೆಳೆಯರೇ ಬರೋಬ್ಬರಿ ಒಂದು ಕೋಟಿ ಟಿಕೆಟ್ ಮಾರಾಟವಾಗಿ ಅಸಂಖ್ಯಾತ ಪ್ರೇಕ್ಷಕರನ್ನು ರಂಜಿಸಿದ 88ರ ಸಿನಿಮಾ ಇದು.
ಹಾಗಂತ ನಾವು ಕಾಂತರಾ ಸಿನಿಮಾ ಸಾಧನೆ ಬಗ್ಗೆ ಚಕಾರವಾಗಿ ಹೇಳುತ್ತಿಲ್ಲ ಬದಲಿಗೆ ಇದಕ್ಕಿಂತಲೂ ದೊಡ್ಡದಾಗಿ ಸಾಧನೆ ಮಾಡಿದ ಕನ್ನಡ ಸಿನಿಮಾಗಳು ಇವೆ ಎಂದು ತಿಳಿಸ ಹೊರಟಿದ್ದೇವೆ. ಕನ್ನಡ ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರುತ್ತಿರುವುದು ಇತ್ತೀಚೆಗೆ ಹೊಸದೇ ಇರಬಹುದು ಆದರೆ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದಂತಹ ಸಾಕಷ್ಟು ಸಿನಿಮಾಗಳಿವೆ.
15 ವರ್ಷವಿದ್ದಾಗ 35 ವರ್ಷದ ನಟನನ್ನು ಮದುವೆಯಾದ ನಟಿ ಸರಿತಾ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ?
ಆದರೆ ಅಂದಿನ ಕಾಲಕ್ಕೆ ಅದು ಲಕ್ಷದ ಲೆಕ್ಕ ಬಂದರೆ ಇವತ್ತಿನ ಲೆಕ್ಕಕ್ಕೆ ಅದು ಕೋಟಿ ಬರುತ್ತದೆ ಹೀಗಿರುವಾಗ ಅಣ್ಣಾವ್ರ ಬಂಗಾರದ ಮನುಷ್ಯ ಸಿನಿಮಾ ಬರೋಬ್ಬರಿ ಎರಡು ವರ್ಷ ತೆರೆಯ ಮೇಲೆ ರಾರಾಜಿಸಿತ್ತು. ಅಲ್ಲಿ ಮಾರಾಟವಾಗುತ್ತಿದ್ದಂತಹ ಟಿಕೆಟ್ಗಳ ಸಂಖ್ಯೆಯ ಬಗ್ಗೆ ಲೆಕ್ಕ ಇಟ್ಟಿರುವವರು ಈಗ ಯಾರಿದ್ದಾರೆ?
ಬರೋಬ್ಬರಿ ಎರಡು ವರ್ಷ ಒಂದೇ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂದರೆ ಅದರ ಕ್ರೇಜ್ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ನೀವೇ ಲೆಕ್ಕಾಚಾರ ಹಾಕಿ ಇದರ ಜೊತೆಜೊತೆಗೆ ಹುಲಿ ಹಾಲಿನ ಮೇವು, ಗಂಧದಗುಡಿ, ಶಂಕರ್ ಗುರು, ಎಲ್ಲ ಸಿನಿಮಾಗಳು ಕೂಡ ಹಲವಾರು ತಿಂಗಳುಗಳ ಕಾಲ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದ್ದವು
ಇದರ ಜೊತೆಜೊತೆಗೆ ಕನ್ನಡದ ಆಲ್ ಟೈಮ್ ಹಿಟ್ ಎಂಬ ಪಟ್ಟಿಗೆ ಸೇರಿಕೊಳ್ಳುವಂತಹ ಓಂ ಯಜಮಾನ ಮುಂಗಾರು ಮಳೆ ಹಾಗೂ ಜೋಗಿ ಸಿನಿಮಾಗಳ ಟಿಕೆಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದಂತಹ ನಿದರ್ಶನಗಳಿವೆ. ಈ ಮೇಲ್ಕಂಡ ಸಿನಿಮಾಗಳ ಪೈಕಿ ನಿಮಗೆ ಯಾವ ಸಿನಿಮಾ ಹೆಚ್ಚು ಇಷ್ಟ ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.