469 ದಿನ ತೆರೆಯ ಮೇಲೆ ರಾರಾಜಿಸಿದ ಕನ್ನಡದ ಕ್ಲಾಸಿಕ್ ಬಂಧನ ಸಿನಿಮಾ ಆಗಿನ ಕಾಲಕ್ಕೆ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ವಿಮರ್ಶಾತ್ಮಕ ಹಾಗೂ ವಾಣಿಜ್ಯಾತ್ಮಕವಾಗಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡಂತಹ ಬಂಧನ ಚಿತ್ರವು ಕನ್ನಡದ ಕ್ಲಾಸಿಕ್ ಸಿನಿಮಾ ಎಂದು ಪರಿಗಣಿಸಲಾಗಿದೆ.

ಸ್ನೇಹಿತರೆ, 1984ರಲ್ಲಿ ತೆರೆಕಂಡ ಬಂಧನ ಸಿನಿಮಾ (Kannada Bandhana Cinema) ಇಂದಿನ ಯುವ ಪ್ರೇಕ್ಷಕರಿಗೂ ಹಾರ್ಟ್ ಫೇವರೆಟ್ ಸಿನಿಮಾಗಳ ಪಟ್ಟಿಯಲ್ಲಿ ಉಳಿದುಕೊಂಡಿದೆ. ಡಾಕ್ಟರ್ ವಿಷ್ಣುವರ್ಧನ್ (Actor Dr Vishnuvardhan) ಅವರನ್ನು ಅಂದಿನವರೆಗೂ ಕೇವಲ ಆಂಗ್ರಿ ಯಂಗ್ ಮ್ಯಾನ್ ಪಾತ್ರಗಳಲ್ಲಿ ಕಣ್ತುಂಬಿಕೊಳ್ಳುತ್ತಿದ್ದಂತಹ ಅಭಿಮಾನಿಗಳು ಓರ್ವ ಲವರ್ ಬಾಯ್ ಆಗಿ ನೋಡ ಸಿಕ್ಕಂತಹ ಸಿನಿಮಾ ಇದು.

ಶಸ್ತ್ರ ಚಿಕಿತ್ಸಕ ಹರೀಶ್ ಪಾತ್ರದಲ್ಲಿ ವಿಷ್ಣುವರ್ಧನ್ ಅಭಿನಯಿಸಿದರೆ ವಿದ್ಯಾರ್ಥಿನಿ ಪಾತ್ರದಲ್ಲಿ ನಂದಿನಿಯಾಗಿ ಸುಹಾಸಿನಿ (Actress Suhasini) ಅವರು ಕಮಾಲ್ ಮಾಡಿದರು.

ಹೀಗೆ ಜೈ ಜಗದೀಶ್, ರೂಪದೇವಿ, ಜಿಕೆ ಗೋವಿಂದು ಸೇರಿದಂತೆ ಬಹುದೊಡ್ಡ ತಾರಾ ಬಳಗದಲ್ಲಿ ತಯಾರದಂತಹ ಈ ಒಂದು ಸಿನಿಮಾವನ್ನು ಡಿ ರಾಜೇಂದ್ರ ಸಿಂಗ್ ಬಾಬು ಅವರೇ ನಿರ್ದೇಶನ ಮತ್ತು ನಿರ್ಮಾಣವನ್ನು ಮಾಡಿದರು.

469 ದಿನ ತೆರೆಯ ಮೇಲೆ ರಾರಾಜಿಸಿದ ಕನ್ನಡದ ಕ್ಲಾಸಿಕ್ ಬಂಧನ ಸಿನಿಮಾ ಆಗಿನ ಕಾಲಕ್ಕೆ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? - Kannada News

ಇನ್ಮುಂದೆ ವಿಷ್ಣು ಜೊತೆ ನಟಿಸುವುದಿಲ್ಲ, ದಿಗ್ಗಜರು ಸಿನಿಮಾನೇ ಕೊನೆ ಎಂದು ನಟ ಅಂಬರೀಶ್ ಹೇಳಿದ್ಯಾಕೆ? ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತ್ತ?

ಆಗಸ್ಟ್ 24, 1984 ರದ್ದು ರಾಜ್ಯದಾದ್ಯಂತ ತೆರೆಕಂಡ ಬಂಧನ ಚಿತ್ರವು ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಅಲ್ಲದೆ ಡಾ. ವಿಷ್ಣುವರ್ಧನ್ ಹಾಗೂ ಸುಹಾಸಿನಿ ಅವರ ಅದ್ಭುತ ಅಭಿನಯಕ್ಕೆ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿ ಕೂಡ ದೊರಕಿತ್ತು.

ಹೀಗೆ ವಿಮರ್ಶಾತ್ಮಕ ಹಾಗೂ ವಾಣಿಜ್ಯಾತ್ಮಕವಾಗಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡಂತಹ ಬಂಧನ ಚಿತ್ರವು ಕನ್ನಡದ ಕ್ಲಾಸಿಕ್ ಸಿನಿಮಾ (Kannada Classic Cinema) ಎಂದು ಪರಿಗಣಿಸಲಾಗಿದೆ.

ಸಿನಿಮಾ ತಯಾರಾಗುವ ಸಂದರ್ಭದಲ್ಲಿ ಯಾರೂ ಕೂಡ ಈ ಚಿತ್ರ ಇಷ್ಟು ದೊಡ್ಡ ಮಟ್ಟಕ್ಕೆ ಯಶಸ್ಸನ್ನು ಸಾಧಿಸುತ್ತದೆ ಎಂಬುದನ್ನು ಊಹಿಸಿರಲಿಲ್ಲ. ಅಲ್ಲದೆ ಡಿ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ಅಂಬರೀಶ್ ಅವರಿಗೆ ಮಾಡಬೇಕೆಂದು ನಿರ್ಧರಿಸಿದ್ದರು.

Kannada Bandhana Cinemaಅಂಬರೀಶ್ ಅವರ ಬಳಿ ಸಂಪೂರ್ಣ ಕಥೆಯನ್ನು ಹೇಳಿದ ನಂತರ ಇದರಲ್ಲಿ ಸಿನಿಮಾದ ನಾಯಕನ ಪಾತ್ರ ನೆಗೆಟಿವ್ ಇದೆ, ನಾನು ಆ ರೀತಿಯಾದಂತಹ ಪಾತ್ರಗಳಲ್ಲಿ ಅಭಿನಯಿಸಲು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ಚಿತ್ರವನ್ನು ರಿಜೆಕ್ಟ್ ಮಾಡಿದರಂತೆ.

ಇದಾದ ನಂತರ ವಿಷ್ಣುವರ್ಧನ್ ಅವರನ್ನು ಅಪ್ರೋಚ್ ಮಾಡಿದ ರಾಜೇಂದ್ರ ಸಿಂಗ್ ಬಾಬು ಅವರಿಗೆ ವಿಷ್ಣು ದಾದಾನ ಕಡೆಯಿಂದ ಗ್ರೀನ್ ಸಿಗ್ನಲ್ ದೊರೆತ ನಂತರ ಚಿತ್ರಿಕರಣ ಪ್ರಾರಂಭ ಮಾಡಿದರು.

21ನೇ ವಯಸ್ಸಿಗೆ ಅಜ್ಜಿಯಾಗಿದ್ದ ಅನುಪ್ರಭಾಕರ್ ಈಗ ಸಂತೂರ್ ಮಮ್ಮಿ! ಹಾಗಾದ್ರೆ ನಟಿ ಅನು ಪ್ರಭಾಕರ್ ನಿಜವಾದ ವಯಸ್ಸೆಷ್ಟು ಗೊತ್ತೇ!

ಸುಹಾಸಿನಿ ಹಾಗೂ ವಿಷ್ಣು ದಾದನ ಕಾಂಬಿನೇಷನ್ ತೆರೆಯ ಮೇಲೆ ಮತ್ತೊಮ್ಮೆ ಅದ್ಭುತವಾಗಿ ವರ್ಕ್ ಆಗಿತ್ತು. ಸಿನಿಮಾದ ಕಥೆ ಚಿತ್ರಕಥೆ ನಿರ್ದೇಶನ ಹಾಡುಗಳೆಲ್ಲವೂ ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಹೀಗೆ ಎಲ್ಲರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾದವು. ಆಗಿನ ಕಾಲದಲ್ಲಿ ಸಾಕಷ್ಟು ಹ್ಯಾಂಗ್ರಿ ಯಂಗ್ ಮ್ಯಾನ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಂತಹ ವಿಷ್ಣುವರ್ಧನ್ ಅವರನ್ನು ತ್ಯಾಗದ ಪ್ರೇಮಿಯಾಗಿ ಕಣ್ಣು ತುಂಬಿಕೊಂಡಂತಹ ಅಭಿಮಾನಿಗಳು ಸಿನಿಮಾ ಥಿಯೇಟರ್ನಲ್ಲಿ ಕಣ್ಣೀರು ಸುರಿಸಿದ್ದರು.

ಹೀಗೆ U ಸರ್ಟಿಫಿಕೇಟ್ ಅನ್ನು ಪಡೆದ ಬಂಧನ ಸಿನಿಮಾ 18 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬರೋಬಬ್ರಿ 469 ದಿನಗಳವರೆಗೂ ಥಿಯೇಟರ್ನಲ್ಲಿ ರಾರಾಜಿಸಿತ್ತು. ಹೀಗೆ ಆಗಿನ ಕಾಲದಲ್ಲಿ ಬರೋಬ್ಬರಿ 100 ಕೋಟಿ ಹಣವನ್ನು ತನ್ನ ಗಲ್ಲಪೆಟ್ಟಿಗೆಗೆ ಬಾಚಿಕೊಳ್ಳುವ ಮೂಲಕ ಬಂಧನ ಸಿನಿಮಾ ವರ್ಷದ ಅತಿ ಹೆಚ್ಚು ಗಳಿಕೆಯ ಹಿಟ್ ಸಿನಿಮಾ (Kannada Hit Movie) ಎಂಬ ಪಟ್ಟಿಗೆ ಸೇರಿಕೊಂಡಿತ್ತು

Collections of Kannada Bandhana Cinema on That Days

Follow us On

FaceBook Google News

Collections of Kannada Bandhana Cinema on That Days