21ನೇ ವಯಸ್ಸಿಗೆ ಅಜ್ಜಿಯಾಗಿದ್ದ ಅನುಪ್ರಭಾಕರ್ ಈಗ ಸಂತೂರ್ ಮಮ್ಮಿ! ಹಾಗಾದ್ರೆ ನಟಿ ಅನು ಪ್ರಭಾಕರ್ ನಿಜವಾದ ವಯಸ್ಸೆಷ್ಟು ಗೊತ್ತೇ!

ಸ್ನೇಹಿತರೆ, ನಟಿ ಅನು ಪ್ರಭಾಕರ್ (Actress Anu Prabhakar) ಬಾಲ ನಟಿಯಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು (Kannada Cinema Industry) ಪ್ರವೇಶಿಸಿ ಇಂದಿಗೂ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ.

ಡಾಕ್ಟರ್ ವಿಷ್ಣುವರ್ಧನ್, ಅಂಬರೀಶ್, ಶಶಿಕುಮಾರ್, ರಾಮ್ ಕುಮಾರ್, ರಮೇಶ್ ರಂತಹ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡು ಬೆಳ್ಳಿ ಪರದೆ ಮೇಲೆ ಮಿಂಚಿದಂತಹ ಅನುಪ್ರಭಾಕರ್ 21ನೇ ವಯಸ್ಸಿಗೆ ಚಿತ್ರ ಒಂದರಲ್ಲಿ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಹೀಗೆ ಅತಿ ಚಿಕ್ಕ ವಯಸ್ಸಿನಲ್ಲಿ ವಯಸ್ಸಾದ ಮುದುಕಿಯ ಪಾತ್ರದಲ್ಲಿ ಅಭಿನಯಿಸಿದ ಅನುಪ್ರಭಾಕರ್ ಅವರ ಈಗಿನ ಅಸಲಿ ವಯಸ್ಸೆಷ್ಟು (Actress Anu Prabhakar Age) ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸ್ನಾನಕ್ಕೆ ಹೋದ್ರೆ ಬಾತ್ರೂಮಿಗೆ ನುಗ್ತಾ ಇದ್ರು, ಮಲಗಿದ್ರೆ ಮುಟ್ಟ ಬಾರದ ಜಾಗವನ್ನೆಲ್ಲ ಮುಟ್ಟುತ್ತಿದ್ದರು! ಕಹಿ ಅನುಭವ ಹಂಚಿಕೊಂಡ ಸಿತಾರಾ

1990ರಲ್ಲಿ ತೆರೆಕಂಡ ಚಪಲ ಚೆನ್ನಿಗರಾಯ ಎಂಬ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗವನ್ನು (Kannada Movies) ಪ್ರವೇಶ ಮಾಡಿದ ಅನುಪ್ರಭಾಕರ್ ಮುಖರ್ಜಿಯವರು ಶಾಂತಿ ಕ್ರಾಂತಿ, ಮಿಸ್ತ್ರಿ ಆಫ್ ದಿ ಡಾರ್ಕ್ ಜಂಗಲ್ ಸೇರಿದಂತೆ ಹಲವು ಚಿತ್ರಗಳಲ್ಲಿ ಬಾಲ ನಟಿಯಾಗಿ ಅಭಿನಯಿಸಿದರು.

1999 ಹೃದಯ ಹೃದಯ ಎಂಬ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಬೆಳ್ಳಿ ಪರದೆ ಮೇಲೆ ಮಿಂಚಿದ ಅನು ವಿಷ್ಣುವರ್ಧನ್ ಅವರೊಡನೆ ಸೂರಪ್ಪ, ಜಮೀನ್ದಾರು, ವರ್ಷ ಹಾಗೂ ಹೃದಯವಂತದಂತಹ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದರು.

Kannada Actress Anu Prabhakarಹೀಗೆ ಶ್ರೀರಸ್ತು ಶುಭಮಸ್ತು, ಯಾರಿಗೆ ಸಾಲುತ್ತೆ ಸಂಬಳ, ಗೀತಾಂಜಲಿ, ಕನಸುಗಾರ, ಮಿಸ್ಟರ್ ಹರೀಶ್ ಚಂದ್ರ, ಸೂರಪ್ಪ ನಾಯಕ, ವಿಶಾಲಕ್ಷಮ್ಮನ ಗಂಡ, ತವರಿಗೆ ಬಾ ತಂಗಿ, ಪ್ರೀತಿ ಪ್ರೇಮ ಪ್ರಯಾಣ, ಅರ್ಧಂಗಿ ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಚಿತ್ರ ರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ಹಿರಿಯ ನಟಿ ಜಯಂತಿಯವರ ಪುತ್ರ ಕೃಷ್ಣಕುಮಾರ್ ಅವರೊಂದಿಗೆ 2002ರಲ್ಲಿ ಮದುವೆಯಾದರು.

ಕೆಜಿಎಫ್ ಅಲ್ಲ, ಕಾಂತಾರ ಅಲ್ಲ.. ಬಾಹುಬಲಿಯಂತೂ ಅಲ್ವೇ ಅಲ್ಲ, ಮೊದಲ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಯಾವುದು ಗೊತ್ತಾ?

ಆದರೆ ಅನುಪ್ರಭಾಕರ್ 2014 ಜನವರಿ ತಿಂಗಳಿನಲ್ಲಿ ಅವರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ ಕಾರಣದಿಂದ ವಿಚ್ಛೇದನ ಪಡೆದು ದೂರಾಗಿ ತಮ್ಮ ಬಹುಕಾಲದ ಗೆಳೆಯ ರಘು ಮುಖರ್ಜಿಯವರೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ.

ಆನಂತರ ಇವರಿಬ್ಬರ ಪ್ರೀತಿಗೆ ಮನೆಯವರೆಲ್ಲರ ಒಪ್ಪಿಗೆ ದೊರೆತ ನಂತರ 2016 ಏಪ್ರಿಲ್ ತಿಂಗಳಿನಲ್ಲಿ ರಘು ಮುಖರ್ಜಿಯವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಈ ದಂಪತಿಗಳಿಗೆ ನಂದನ ಎಂಬ ಮುದ್ದಾದ ಮಗಳಿದ್ದು ಆಗಾಗ ತಮ್ಮ ಮಗಳೊಂದಿಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ. ಹೀಗೆ 42 ವರ್ಷ ವಯಸ್ಸಾದರೂ ಕೂಡ ಇನ್ನೂ 20ರ ಹರೆಯರಂತೆ ಕಾಣುವ ಅನುಪ್ರಭಾಕರ್ ರವರನ್ನು ಅಭಿಮಾನಿಗಳು ಸಂತೂರು ಮಮ್ಮಿ ಎಂದು ಕಾಲೆಳೆಯುತ್ತಲೇ ಇರುತ್ತಾರೆ.

Do You Know The Real age of Kannada Actress Anu Prabhakar

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories