ಕಷ್ಟದಲ್ಲೂ ಎಲ್ಲರನ್ನೂ ನಗಿಸುತ್ತಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ನಿಜ ಜೀವನ ಹೇಗಿತ್ತು ಗೊತ್ತಾ?

ನಾವಿವತ್ತು ನಟನೆಗೆ ಸೌಂದರ್ಯ ಮುಖ್ಯವಲ್ಲ ಬದಲಿಗೆ ಒಳ್ಳೆ ಅಭಿನಯದ ಕಲೆ ಇರಬೇಕು ಎಂಬುದನ್ನು ತೋರಿಸಿಕೊಟ್ಟಂತಹ ಸರ್ವ ಶ್ರೇಷ್ಠ ಹಿರಿಯ ನಟ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಜೀವನದ ಪರಿಚಯ ಮಾಡ ಹೊರಟಿದ್ದೇವೆ.

ಸ್ನೇಹಿತರೆ, ಸುಮಾರು 80-90 ರ ದಶಕದಲ್ಲಿ ಜನರಿಗೆ ಮನೋರಂಜನೆ ನೀಡುತ್ತಿದ್ದಂತಹ ಸಾಕಷ್ಟು ಸಿನಿಮಾಗಳಲ್ಲಿ (Kannada Films) ಕಲಾವಿದರ ಸೌಂದರ್ಯಕ್ಕಿಂತ ಅಭಿನಯಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗುತ್ತಿತ್ತು.

ಈ ಕಾರಣದಿಂದಲೇ ವಜ್ರಮುನಿ, ಬಾಲಣ್ಣ, ನರಸಿಂಹ ರಾಜು, ಲೋಕೇಶ್ ಅವರಂತಹ ಸಾಕಷ್ಟು ಪೋಷಕ ಕಲಾವಿದರು ತಮ್ಮ ಅಮೋಘ ಅಭಿನಯ ಕೌಶಲ್ಯದ ಮೂಲಕವೇ ವಿಶೇಷ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದರು.

ನಾವಿವತ್ತು ನಟನೆಗೆ ಸೌಂದರ್ಯ ಮುಖ್ಯವಲ್ಲ ಬದಲಿಗೆ ಒಳ್ಳೆ ಅಭಿನಯದ ಕಲೆ ಇರಬೇಕು ಎಂಬುದನ್ನು ತೋರಿಸಿಕೊಟ್ಟಂತಹ ಸರ್ವ ಶ್ರೇಷ್ಠ ಹಿರಿಯ ನಟ ಹಾಸ್ಯ ಚಕ್ರವರ್ತಿ ನರಸಿಂಹರಾಜು (Kannada Actor Hasya Chakravarthy Narasimharaju) ಅವರ ಜೀವನದ ಪರಿಚಯ ಮಾಡ ಹೊರಟಿದ್ದೇವೆ.

ಕಷ್ಟದಲ್ಲೂ ಎಲ್ಲರನ್ನೂ ನಗಿಸುತ್ತಿದ್ದ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ನಿಜ ಜೀವನ ಹೇಗಿತ್ತು ಗೊತ್ತಾ? - Kannada News

ಸಾಹಸಸಿಂಹ ವಿಷ್ಣುದಾದಾ ಯಾವಾಗಲೂ ಧರಿಸುತ್ತಿದ್ದ ಕೈ ಖಡಗ ಸದ್ಯ ಯಾರ ಬಳಿ ಇದೆ ಗೊತ್ತಾ?

ಹೌದು ಗೆಳೆಯರೇ ತಮ್ಮ ಹಾಸ್ಯ ಪ್ರತಿಭೆಯ ಮೂಲಕ ಎಲ್ಲರಿಗೂ ನಗೆಯ ಕಚಗುಳಿ ಇಡುತ್ತಿದಂತಹ ನರಸಿಂಹ ರಾಜು ಅವರ ವೈಯಕ್ತಿಕ ಜೀವನ ಹೇಗಿತ್ತು?ಎಷ್ಟೆಲ್ಲಾ ಏಳು ಬೀಳುಗಳನ್ನು ಕಂಡು ನರಸಿಂಹರಾಜು ಇಂತಹ ಸಾಧನೆ ಮಾಡಿದರು? ಎಂಬ ಎಲ್ಲಾ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದಲ್ಲಿ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಅದೊಂದು ಕಾಲದಲ್ಲಿ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕವೇ ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ಎಂಬ ಬಿರುದನ್ನು ಗಿಟ್ಟಿಸಿಕೊಂಡಿದ್ದ ನರಸಿಂಹರಾಜು ಅವರು ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಂತಹ ರಾಮರಾಜು ವೆಂಕಟ ಲಕ್ಷ್ಮಮ್ಮ ನವರಿಗೆ 24 ಜುಲೈ 1923 ರಂದು ತಿಪಟೂರಿನಲ್ಲಿ ಜನಿಸಿದರು.

ಕಿವಿ ಕೇಳಿಸದಿದ್ರು ಅಮೋಘ ಅಭಿನಯ ಮಾಡ್ತಿದ್ರು ನಟ ಬಾಲಕೃಷ್ಣ, ಕಿಂಚಿತ್ತು ಕೇಳಿಸದೆ ಹೋದರು 560 ಸಿನಿಮಾಗಳಲ್ಲಿ ಅಭಿನಯಿಸಿದ್ದಾದರೂ ಹೇಗೆ?

ಇನ್ನು ಚಿಕ್ಕಂದಿನಿಂದಲೂ ಕಲೆಯ ಮೇಲೆ ಅಗಾಧ ಆಸಕ್ತಿಯನ್ನು ಹೊಂದಿದಂತಹ ನರಸಿಂಹರಾಜು ಅವರು ರಂಗಭೂಮಿ ಕಲಾವಿದನಾಗಿ ಬಣ್ಣ ಹಚ್ಚಲು ಪ್ರಾರಂಭ ಮಾಡಿದರು. ಆನಂತರ ಚಿತ್ರರಂಗ ಇವರನ್ನು ಕೈಬೀಸಿ ಕರೆಯಿತು.

Kannada Actor Hasya Chakravarthy Narasimharajuಇನ್ನು ವಿಶೇಷವಾಗಿ ಬಾಲಣ್ಣನವರದ್ದು ಸದಾ ಕಾಲ ರೇಗುವ ಅಥವಾ ಇತರರ ಮೇಲೆ ಕಿರುಚಾಡುವ ಪಾತ್ರಗಳಿದ್ದರೆ ನರಸಿಂಹರಾಜು ಅವರದ್ದು ಸದಾ ಕಾಲ ಹಾಸ್ಯಗಾರನಾಗಿ, ಪೇಚಾಡುವ ಪೆದ್ದ ಪಾತ್ರವೇ ಆಗಿರುತ್ತಿತ್ತು.

ಹೀಗಾಗಿ ತಮ್ಮ ಸರಳ ಸಜ್ಜನಿಕೆಯ ಅಭಿನಯದ ಮೂಲಕ ನರಸಿಂಹರಾಜು ಅವರು ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ, ಜೊತೆಗೆ 250ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು ಕನ್ನಡಕ್ಕೆ ತಮ್ಮದೇ ಅದ್ಭುತ ಅಭಿನಯದ ಮೂಲಕ ಕೊಡುಗೆಯನ್ನು ನೀಡಿರುವ ಈ ನಟ ಸಿನಿಮಾ ರಂಗದಲ್ಲಿ ಹೊಸತನವನ್ನು ಮೂಡಿಸಬೇಕು ವೈವಿಧ್ಯ ಪ್ರಯೋಗಗಳನ್ನು ಜಾರಿಗೆ ತರಬೇಕು, ಹೊಸ ಕಲಾವಿದರಿಗೆ ಅವಕಾಶ ನೀಡಬೇಕು ಎನ್ನುವ ಸಲುವಾಗಿ ತಮ್ಮದೇ ಆದ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭ ಮಾಡಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡರು.

ಟಾಪ್ ಬಾಲನಟಿಯಾಗಿದ್ದ ಬೇಬಿ ಶ್ಯಾಮಿಲಿ ಈಗ ಸಿನಿಮಾ ರಂಗಕ್ಕೆ ಬೇಡವಾದ್ರ? ಅಷ್ಟಕ್ಕೂ ಈಕೆ ಈಗ ಹೇಗಿದ್ದಾರೆ, ಎಲ್ಲಿದ್ದಾರೆ?

ಹೀಗೆ ಅಲ್ಪಾವಧಿಯಲ್ಲಿ ತಮ್ಮ ನಟನೆಯ ಮೂಲಕ ಉತ್ತುಂಗ ಶಿಖರವನ್ನು ಏರಿದಂತಹ ನರಸಿಂಹ ರಾಜು ಅವರ ಆರಂಭಿಕ ಬದುಕು ಅಷ್ಟು ಸುಗಮವಾಗಿರಲಿಲ್ಲ.

ಸಾಕಷ್ಟು ಏಳು ಬೀಳುಗಳನ್ನು ಕಂಡಂತಹ ಈ ನಟ ತಮ್ಮ ಕೊನೆಯ ಕ್ಷಣಗಳಲ್ಲಿ ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಕುಟುಂಬ ವತ್ಸಲರಾಗಿ ಬೆಂಗಳೂರಿನಲ್ಲಿ ವಾಸ್ತವ್ಯವನ್ನು ಊಡಿದರು.

ಹೀಗೆ ಅದೊಂದು ಕರಾಳ ದಿನದಂದು ತಮ್ಮ 56ನೇ ವಯಸ್ಸಿಗೆ ನರಸಿಂಹ ರಾಜು ಅವರು ಕೊನೆ ಉಸಿರೆಳೆದರು. ಹೌದು ಗೆಳೆಯರೇ 1979ರ ಜುಲೈ 20ನೇ ತಾರೀಕಿನಂದು ನರಸಿಂಹ ರಾಜು ಅವರು ರಾತ್ರಿ ಊಟ ಸೇವಿಸಿ ಮಲಗಿ ಮತ್ತೆ ಹೇಳಲೇ ಇಲ್ಲ. ತೀವ್ರವಾದ ಹೃದಯಘಾತ ಸಮಸ್ಯೆ ಇಂದಾಗಿ ಹಾಸ್ಯ ಚಕ್ರವರ್ತಿ ನಮ್ಮೆಲ್ಲರಿಂದ ಅಗಲಿ ಇಹಲೋಕ ತ್ಯಜಿಸಿದರು.

Do you know how was the real life of Kannada Actor Hasya Chakravarthy Narasimharaju

Follow us On

FaceBook Google News

Do you know how was the real life of Kannada Actor Hasya Chakravarthy Narasimharaju