ಬರೋಬ್ಬರಿ 300 ಸಿನಿಮಾಗಳಲ್ಲಿ ನಟಿಸಿರುವ ಅನಂತನಾಗ್ ಅವರ ಮೊದಲ ಸಿನಿಮಾ ಯಾವುದು ಗೊತ್ತಾ?

Story Highlights

ನಟ ಅನಂತನಾಗ್ ಮೊದಲ ಸಿನಿಮಾ ಯಾವುದು ಎಂಬುದು ಸಾಕಷ್ಟು ಜನರಿಗೆ ತಿಳಿದೇ ಇಲ್ಲ. ಹೀಗಾಗಿ ನಾವಿವತ್ತು ಈ ಒಂದು ಕುತೂಹಲಕಾರಿ ಮಾಹಿತಿಯನ್ನು ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ

ನಟ ಅನಂತನಾಗ್ (Actor Anant Nag) ಎಂಬ ಹೆಸರು ಕೇಳುತ್ತಿದ್ದ ಹಾಗೆ ಅವರ ಮುಗ್ಧ ಅಭಿನಯ ಸಾಫ್ಟ್ ಹುಡುಗನಂತಿದ್ದ ರೂಪ ಎಲ್ಲವೂ ನಮ್ಮ ತಲೆಗೆ ಬಂದುಬಿಡುತ್ತದೆ. ಆಗಿನ ಕಾಲದಲ್ಲಿ ಒಂದರ ಮೇಲೊಂದು ಸಿನಿಮಾಗಳನ್ನು ನೀಡುತ್ತಾ ಅದೆಷ್ಟೋ ಮಹಿಳಾ ಅಭಿಮಾನಿಗಳ ಮನಸ್ಸನ್ನು ಗೆದ್ದಿದಂತಹ ಅನಂತನಾಗ್ ಬರೊಬ್ಬರಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಆದರೆ ಇವರ ಮೊದಲ ಸಿನಿಮಾ (Actor Anant Nag First Movie) ಯಾವುದು ಎಂಬುದು ಸಾಕಷ್ಟು ಜನರಿಗೆ ತಿಳಿದೇ ಇಲ್ಲ. ಹೀಗಾಗಿ ನಾವಿವತ್ತು ಈ ಒಂದು ಕುತೂಹಲಕಾರಿ ಮಾಹಿತಿಯನ್ನು ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಬದಲಾಯಿತು ಕಾಂತಾರ ಬೆಡಗಿಯ ಲಕ್, ಸಪ್ತಮಿ ಗೌಡ ಕೈಯಲ್ಲಿ ಸಾಲು ಸಾಲು ಸಿನಿಮಾಗಳು.. ಒಂದು ಸಿನಿಮಾಗೆ ಎಷ್ಟು ಡಿಮ್ಯಾಂಡ್ ಮಾಡ್ತಾರೆ ಗೊತ್ತಾ?

ಹೌದು ಗೆಳೆಯರೇ ಸುಮಾರು 80 ಹಾಗೂ 90ರ ದಶಕದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಸಾಕಷ್ಟು ಪಾತ್ರಗಳಿಗೆ ಜೀವ ತುಂಬಿ ಕನ್ನಡ (Kannada Cinema) ಮಾತ್ರವಲ್ಲದೆ ಪಂಚ ಭಾಷೆಗಳಲ್ಲಿಯೂ ಬೇಡಿಕೆಯನ್ನು ಗಿಟ್ಟಿಸಿಕೊಂಡಿದಂತಹ ಅನಂತನಾಗ್ ಬರೋಬ್ಬರಿ 300 ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ.

ಅದರಲ್ಲೂ ಜೂಲಿ ಲಕ್ಷ್ಮಿ ಅವರೊಟ್ಟಿಗಿನ ಚಂದನದ ಗೊಂಬೆ, ನಾ ನಿನ್ನ ಬಿಡಲಾರೆ, ಬೆಂಕಿಯ ಬಲೆ, ಇಬ್ಬನಿ ಕರಗಿತು ಎಂಬ ಸಿನಿಮಾಗಳು ಇಂದಿಗೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.

ವದಂತಿಗಳ ಬಗ್ಗೆ ನಾಗ ಚೈತನ್ಯ ಮೊದಲ ಬಾರಿಗೆ ಪ್ರತಿಕ್ರಿಯೆ, ಸಮಂತಾ ಬಗ್ಗೆ ಹೇಳೇ ಬಿಟ್ರು ಮುಚ್ಚಿಟ್ಟಿದ್ದ ಸತ್ಯ!

ಕೇವಲ ಕೌಟುಂಬಿಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದಂತಹ ಅನಂತ್ ನಾಗ್ ನಾ ನಿನ್ನ ಬಿಡಲಾರೆ ಸಿನಿಮಾದ ಮೂಲಕ ಹಾರರ್ ಪಾತ್ರಗಳಲ್ಲಿಯೂ ಕಾಣಿಸಿಕೊಳ್ಳಲು ಶುರು ಮಾಡಿದರು. ಅಷ್ಟೇ ಅಲ್ಲದೆ ಸಾಕಷ್ಟು ಮೈಕಲಾಜಿಕಲ್ ಪಾತ್ರದ ಮೂಲಕವೂ ಜನರಿಗೆ ಮನೋರಂಜನೆಯ ಮಹಾದೂಟವನ್ನು ಬಡಿಸಿರುವಂತಹ ಪ್ರಖ್ಯಾತ ನಟ ಇವರು ಎಂದರೆ ತಪ್ಪಾಗಲಾರದು.

Actor Anant Nag with His Brother Shankar Nag

ಇನ್ನು 1973 ದಲ್ಲಿ ತರೆ ಕಂಡ ‘ಸಂಕಲ್ಪ’ ಎಂಬ ಚಿತ್ರದ ಮೂಲಕ ಬಣ್ಣದ ಲೋಕವನ್ನು ಪ್ರವೇಶ ಮಾಡಿದ ಅನಂತನಾಗ್ ಮತ್ತೆಂದು ಹಿಂದಿರುಗಿ ನೋಡಿಯೇ ಇಲ್ಲಾ. ಇದಕ್ಕೂ ಮುನ್ನ ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದ ಅವರು ನಾಟಕಗಳಲ್ಲಿ ಭಾಗವಹಿಸಲು ಪ್ರಖ್ಯಾತ ರಂಗ ಕರ್ಮಿಗಳಾದ ಪ್ರಭಾಕರ್ ಮುದ್ದುರು ಮತ್ತು ವೆಂಕಟರಾವ್ ತಳಗೇರಿ ಅವರ ಸಹಾಯ ಪಡೆದರು.

ಬೋಲ್ಡ್ ಪಾತ್ರಕ್ಕೆ ನೋ ಹೇಳುವ ನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೇ?

ಹೀಗೆ ತಮ್ಮ ಅಮೋಘ ಅಭಿನಯದ ಮೂಲಕ ರಂಗಭೂಮಿಯಲ್ಲಿ ಮೊದಲ ಪ್ರಮುಖ ಬ್ರೇಕ್ ಪಡೆದು, ಚೈತನ್ಯ ಮಹಾಪ್ರಭು ನಾಟಕದಲ್ಲಿ ಹಿಂದೂ ಸನ್ಯಾಸಿ ಆದ ಅನಂತ್ ನಾಗ್ ಅವರಿಗೆ ಹೆಚ್ಚಿನ ಯಶಸ್ಸನ್ನು ತಂದು ಕೊಟ್ಟಿದ್ದು ಈ ಒಂದು ಪಾತ್ರ, ಆ ವೇಳೆ ಅವರಿಗೆ ಅಗಾಧವಾದ ಮೆಚ್ಚುಗೆಗಳು ವ್ಯಕ್ತವಾದವು.

ಹೀಗೆ ರಂಗಭೂಮಿ ಕಲಾವಿದನಾಗಿ ತಮ್ಮದೇ ಆದ ವಿಶಿಷ್ಟ ಅಭಿನಯದ ಚಾಪನ್ನು ಸ್ಥಾಪಿಸಿಕೊಂಡ ನಂತರ ಚಲನಚಿತ್ರೋದ್ಯಮಕ್ಕೆ ಕಾಲಿಟ್ಟರು ಮತ್ತು ಕನ್ನಡ ಚಲನಚಿತ್ರವಾದ ‘ಸಂಕಲ್ಪ’ದೊಂದಿಗೆ ಚಿತ್ರ ಜೀವನವನ್ನು ಶುರು ಮಾಡಿದರು.

ಡಿಂಪಲ್ ಕ್ವೀನ್ ರಚಿತಾ ರಾಮ್, ನಟ ದರ್ಶನ್ ಜೊತೆ ನಟಿಸಲು ಡಿಮ್ಯಾಂಡ್ ಮಾಡಿದ್ದು ಎಷ್ಟು ಕೋಟಿ ಗೊತ್ತೇ?

ಅನಂತನಾಗ್ ಅವರು ಸ್ವತಃ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿರುವ ಹಾಗೆ ಈ ಒಂದು ಸಿನಿಮಾಗೆ ಅವರು ಕೇವಲ 300 ರೂಪಾಯಿ ಸಂಭಾವನೆಯನ್ನು (Remuneration) ಪಡೆದಿದ್ದರಂತೆ.

Do you know the first movie and Remuneration of Kannada actor Anant Nag

Related Stories