ಬೋಲ್ಡ್ ಪಾತ್ರಕ್ಕೆ ನೋ ಹೇಳುವ ನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೇ?

ನಟಿ ಸಾಯಿ ಪಲ್ಲವಿ ಸಿನಿಮಾದ ಹೊರತಾಗಿ ಸಾಕಷ್ಟು ಸಾಮಾಜಿಕ ಚಟುವಟಿಕೆಗಳ ಮೂಲಕವೂ ಇತರೆ ಸೆಲೆಬ್ರಿಟಿಗಳಿಗೆ ಮಾದರಿಯಾಗುವಂತೆ ಬದುಕುತ್ತಿದ್ದಾರೆ. ಇನ್ನು ಅವರು ಎಂಬಿಬಿಎಸ್ ಓದುತ್ತಿರುವಾಗಲೇ ಸಿನಿಮಾದ ಅವಕಾಶವನ್ನು ಪಡೆದುಕೊಂಡರು.

ಸ್ನೇಹಿತರೆ, ದಕ್ಷಿಣ ಕನ್ನಡ ಸಿನಿಮಾ (Kannada Cinema) ನಟಿಯರು ಎಂಬ ಹೆಸರು ಕೇಳುತ್ತಿದ್ದ ಹಾಗೆ ಅದರ ಪಟ್ಟಿಯಲ್ಲಿ ಸಾಯಿ ಪಲ್ಲವಿ (Actress Sai Pallavi) ಅವರ ಹೆಸರು ಇದ್ದೆ ಇರುತ್ತದೆ. ಹೆಚ್ಚಾದ ಮೇಕಪ್ ಧರಿಸದೆ ಸಿನಿಮಾ ರಂಗದಲ್ಲಿ ನ್ಯಾಚುರಲ್ ಬ್ಯೂಟಿ (Natural Beauty) ಎಂದೇ ಪ್ರಖ್ಯಾತಿ ಆಗಿರುವ ಸಾಯಿ ಪಲ್ಲವಿ ತಮ್ಮ ನಟನೆ, ಡ್ಯಾನ್ಸ್ ಹಾಗೂ ಮುಖ್ಯವಾಗಿ ತಮ್ಮ ಪಾತ್ರದ ಆಯ್ಕೆಯಲ್ಲಿ ಹೆಸರುವಾಸಿ.

ತಮ್ಮ ಅಂಗಾಂಗಗಳ ಪ್ರದರ್ಶನ ಮಾಡದೆ ಇತರೆ ನಟಿಯರಿಗೆ ಮಾದರಿಯಾಗುವಂತೆ ಬದುಕುತ್ತಿರುವಂತಹ ಸಾಯಿ ಪಲ್ಲವಿ ಅವರು ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದು, ಇಂದಿಗೂ ಕೂಡ ಅದೇ ಬೇಡಿಕೆಯನ್ನು ಗಿಟ್ಟಿಸಿಕೊಂಡು ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದಾರೆ.

ಮಹಾನ್ ನಟಿ ಪಂಡರಿ ಬಾಯಿ ಅವರು ಸಿನಿಮಾ ಒಂದಕ್ಕೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

ಬೋಲ್ಡ್ ಪಾತ್ರಕ್ಕೆ ನೋ ಹೇಳುವ ನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೇ? - Kannada News

ಹೀಗೆ ಸರಾಗವಾಗಿ ಡ್ಯಾನ್ಸ್ ಮಾಡುತ್ತಾ ಸಿನಿಮಾದ ಡೈಲಾಗ್ ಗಳನ್ನು ಹೇಳುತ್ತಾ ತಮ್ಮ ಸಿಂಪಲ್ ವ್ಯಕ್ತಿತ್ವದ ಮೂಲಕ ಅದೆಷ್ಟೋ ಜನ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಸಾಯಿ ಪಲ್ಲವಿವರು ತಮ್ಮ ವೃತ್ತಿ ಬದುಕಿನಿಂದಾಗಿ ಸಂಪಾದಿಸಿರುವ ಹಣ ಎಷ್ಟು ಕೋಟಿ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಸದ್ಯ ದಕ್ಷಿಣ ಚಿತ್ರರಂಗಗಳಲ್ಲಿ ಒಂದಾದ ತೆಲುಗು ತಮಿಳು ಸಿನಿಮಾ ರಂಗದಲ್ಲಿ ನಟಿ ಸಾಯಿ ಪಲ್ಲವಿ ಅವರ ಹೆಸರು ಕೇಳದವರೇ ಇಲ್ಲಯೆನ್ನುವಷ್ಟರ ಮಟ್ಟಿಗೆ ಇವರ ಅದ್ಭುತ ನಟನೆಯ ಕೌಶಲ್ಯ ಹಬ್ಬಿದೆ.

ಡಿಂಪಲ್ ಕ್ವೀನ್ ರಚಿತಾ ರಾಮ್, ನಟ ದರ್ಶನ್ ಜೊತೆ ನಟಿಸಲು ಡಿಮ್ಯಾಂಡ್ ಮಾಡಿದ್ದು ಎಷ್ಟು ಕೋಟಿ ಗೊತ್ತೇ?

ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ ಎರಡು ಮೂರು ವರ್ಷಗಳಲ್ಲಿಯೇ ನಂಬರ್ ವನ್ ನಟಿ ಎಂಬ ಸ್ಥಾನವನ್ನು ಗಿಟ್ಟಿಸಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆರೇ ವರ್ಷದಲ್ಲಿ ಎರಡು ಸೈಮ ಅವಾರ್ಡ್ಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಸಾಯಿ ಪಲ್ಲವಿ.

Tollywood Actress Sai Pallavi

ಸಾಯಿ ಪಲ್ಲವಿ ಅವರು ಸಿನಿಮಾದ ಹೊರತಾಗಿ ಸಾಕಷ್ಟು ಸಾಮಾಜಿಕ ಚಟುವಟಿಕೆಗಳ ಮೂಲಕವೂ ಇತರೆ ಸೆಲೆಬ್ರಿಟಿಗಳಿಗೆ ಮಾದರಿಯಾಗುವಂತೆ ಬದುಕುತ್ತಿದ್ದಾರೆ. ಇನ್ನು ಎಂಬಿಬಿಎಸ್ ಓದುತ್ತಿರುವಾಗಲೇ ಸಿನಿಮಾದ ಅವಕಾಶವನ್ನು ಪಡೆದುಕೊಂಡು ಎರಡು ಸಿನಿಮಾಗಳಲ್ಲಿ ಅಭಿನಯಿಸಿ ವೈದ್ಯಕೀಯ ಕೋರ್ಸನ್ನು ಮುಗಿಸಿ ಖ್ಯಾತ ವೈದ್ಯರಾಗಬೇಕೆಂದು ಅಂದು ಕೊಂಡಿದ್ದರು.

2 ವರ್ಷ ತೆರೆ ಮೇಲೆ ರಾರಾಜಿಸಿದ ಬಂಗಾರದ ಮನುಷ್ಯ ಸಿನಿಮಾದ ಒಟ್ಟು ಕಲೆಕ್ಷನ್ ಎಷ್ಟು ಗೊತ್ತಾ? ಇಂದಿನ ಸಿನಿಮಾಗಳು ಲೆಕ್ಕಕ್ಕೆ ಇಲ್ಲ !

ಆದರೆ ಅದೃಷ್ಟ ಎಂಬುದು ಈಕೆಯನ್ನು ಸಿನಿ ಪ್ರಪಂಚಕ್ಕೆ ಕರೆದುಕೊಂಡು ಬರುತ್ತದೆ. ಹೌದು ಅಚಾನಕ್ಕಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಂತಹ ಸಾಯಿ ಪಲ್ಲವಿ ಅವರಿಗೆ ತಾನೂರ್ವ ನಟಿಯಾಗಬೇಕು ಎಂಬ ಯಾವುದೇ ಉದ್ದೇಶ ಇರಲಿಲ್ಲ.

Natural Beauty Actress Sai Pallavi

ಆದರೆ ಅವರೊಳಗಿದ್ದ ಅಗಾಧವಾದ ಕಲೆ ಹಾಗೂ ಅದ್ಭುತ ಡ್ಯಾನ್ಸಿಂಗ್ ಚಾತುರ್ಯ ಎಲ್ಲವೂ ಪ್ರೇಕ್ಷಕರಿಗೆ ಹಿಡಿಸಿ ಸಾಯಿ ಪಲ್ಲವಿಯವರನ್ನು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನೋಡ ಬಯಸಿದರು.

ಹೀಗೆ ಸಿನಿಮಾದಲ್ಲಿ ಅತಿ ಹೆಚ್ಚಾದ ಮೇಕಪ್ ಧರಿಸದೆ ತಮ್ಮ ಮೈಮಾಟದ ಅನಾವರಣವನ್ನು ಮಾಡದೆ ಇತರೆ ನಟಿಯರಿಗೆ ಮಾದರಿಯಾಗುವಂತೆ ಬದುಕುತ್ತಿರುವ ಸಾಯಿ ಪಲ್ಲವಿ ಅವರ ಬಳಿ ಬರೋಬ್ಬರಿ 60 ಕೋಟಿ ಆಸ್ತಿ (Net Worth) ಇರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಟಾಪ್ ನಟಿ ಆಗಿದ್ರೂ ಮಾಲಾಶ್ರೀ ಜೊತೆ, ವಿಷ್ಣುವರ್ಧನ್ ರವರು ಯಾಕೆ ನಟಿಸಲಿಲ್ಲ ಗೊತ್ತೇ?

ತಮ್ಮ ಪಾತ್ರ ಹಾಗೂ ಚಿತ್ರ ಕಥೆ ಆಯ್ಕೆಯಲ್ಲಿ ತಮ್ಮದೇ ಸಿದ್ದಾಂತ ಹೊಂದಿರುವ ಅವರು ಬೋಲ್ಡ್ ಪಾತ್ರಕ್ಕೆ ನೋ ಹೇಳುತ್ತಾರೆ. ಯಾವುದೇ ಅವಕಾಶ ಸಿಗದೇ ಇದ್ದರೆ ಕ್ಲಿನಿಕ್ ನಡೆಸುತ್ತೇನೆಯೇ ಹೊರತು ಬೋಲ್ಡ್ ಪಾತ್ರ ಮಾಡುವುದಿಲ್ಲ ಎಂದು ನೇರವಾಗಿ ಹೇಳಿಬಿಟ್ಟಿದ್ದಾರೆ.

Natural Beauty Tollywood Actress Sai Pallavi Net Worth, Remuneration Details

Follow us On

FaceBook Google News

Natural Beauty Tollywood Actress Sai Pallavi Net Worth, Remuneration Details

Read More News Today