ಬರೋಬ್ಬರಿ 50 ವರ್ಷಗಳಾದರು ನಟಿ ಭಾವನಾ ಮದುವೆಯಾಗದೆ ಒಂಟಿಯಾಗಿರುವುದ್ಯಾಕೆ ಗೊತ್ತಾ? ಅಸಲಿ ಸತ್ಯ ಬಹಿರಂಗ
ಹಿರಿತೆರೆಯಲ್ಲಿ ಮಾತ್ರವಲ್ಲದೆ ಕನ್ನಡ ಕಿರುತೆರೆಯ ಕೆಲ ಸೀರಿಯಲ್ ಗಳಲ್ಲಿಯೂ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಜಬರ್ದಸ್ತ್ ಮನೋರಂಜನೆ ನೀಡುತ್ತಿರುವ ನಟಿ ಭಾವನಾ ಐವತ್ತು ವರ್ಷ ವಯಸ್ಸಾದರೂ ದಾಂಪತ್ಯ ಜೀವನಕ್ಕೆ ಕಾಲಿಡದಿರಲು ಕಾರಣವೇನು?
ಸ್ನೇಹಿತರೆ, ನಟಿ ಭಾವನಾ (Actress Bhavana) ಅವರ ಹೆಸರು ಕೇಳುತ್ತಿದ್ದ ಹಾಗೆ ಅವರ ಮುಗ್ಧ ಅಭಿನಯದ ಸಿನಿಮಾಗಳೆಲ್ಲವು ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ. ಅದರಲ್ಲಿಯೂ ಭಾವನಾ ಅವರ ಸಂಗೀತ ಪ್ರಧಾನ ಸಿನಿಮಾವಾಗಿದ್ದ ಚಂದ್ರಮುಖಿ ಪ್ರಾಣಸಖಿ ಚಿತ್ರದಲ್ಲಿನ ಅಭಿನಯ ನಮ್ಮೆಲ್ಲರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ.
ರಮೇಶ್ ಅರವಿಂದ್ ಮತ್ತು ಪ್ರೇಮ ಅವರೊಂದಿಗೂ ಸಹನಟಿಯಾಗಿ ಅಭಿನಯಿಸಿದ ಇವರು ಕನ್ನಡದ (Kannada Cinema) ಪ್ರಥಮ ಸಿನಿಮಾದಲ್ಲಿಯೇ ಪ್ರೇಕ್ಷಕರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಯಶಸ್ವಿಯಾದರು.
ಬಹಳ ಮುಗ್ಧ ಹಾಗೂ ಮನೋಜ್ಞ ಅಭಿನಯ ಮಾಡುತ್ತಾ ಎಲ್ಲರ ಮನಸ್ಸನ್ನು ಗೆಲ್ಲುವ ಸಾಮರ್ಥ್ಯ ಹೊಂದಿದ್ದ ನಟಿ ಭಾವನಾ ಹಲವಾರು ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾರೆ.
ದುಡ್ಡಿಗಾಗಿ ಜೀವನವನ್ನೇ ಹಾಳು ಮಾಡಿಕೊಂಡ್ರ ನಟಿ ಮೀರಾ ಜಾಸ್ಮಿನ್? ಪಾಪ ಈಗ ಆಕೆಯ ರಿಯಲ್ ಲೈಫ್ ಹೇಗಿದೆ ಗೊತ್ತಾ?
ಹಿರಿತೆರೆಯಲ್ಲಿ ಮಾತ್ರವಲ್ಲದೆ ಕನ್ನಡ ಕಿರುತೆರೆಯ (Kannada Serial) ಕೆಲ ಸೀರಿಯಲ್ ಗಳಲ್ಲಿಯೂ ಖಡಕ್ ವಿಲನ್ ಆಗಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಜಬರ್ದಸ್ತ್ ಮನೋರಂಜನೆ ನೀಡುತ್ತಿರುವ ನಟಿ ಭಾವನಾ ಐವತ್ತು ವರ್ಷ ವಯಸ್ಸಾದರೂ ದಾಂಪತ್ಯ ಜೀವನಕ್ಕೆ ಕಾಲಿಡದಿರಲು ಕಾರಣವೇನು?
ಪ್ರೀತಿಯಲ್ಲಿ ಮೋಸ ಹೋದ ಕಾರಣದಿಂದ ಈ ನಟಿ ಮದುವೆಯಾಗದೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರಾ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ದಕ್ಷಿಣ ಭಾರತದ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಭಾವನಾ ಅವರ ಮೂಲ ಹೆಸರು ನಂದಿನಿ ರಾಮಣ್ಣ.
ಇವರ ಹೆಸರನ್ನು ಕೊಡ್ಲು ರಾಮಕೃಷ್ಣ ಅವರು ಚಿತ್ರಕ್ಕಾಗಿ ಬದಲಿಸುತ್ತಾರೆ, ಆನಂತರ ಭಾವನಾ ಎಂದೇ ಸಿನಿಮಾ ರಂಗದಲ್ಲಿ (Kannada Film Industry) ಪ್ರಖ್ಯಾತಿ ಪಡೆದ ಈ ನಟಿ ನೃತ್ಯಗಾರ್ತಿಯಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.
ಭರತನಾಟ್ಯಂ ನಲ್ಲಿ ಪ್ರವೀಣರಾಗಿರುವ ಭಾವನಾ ಅವರು ತಮ್ಮದೇ ಆದ ತರಬೇತಿ ಶಾಲೆಯನ್ನು ಹೊಂದಿದ್ದರು. ಸಿನಿ ಕ್ಷೇತ್ರ ಪ್ರವೇಶಿಸುವ ಸಣ್ಣ ಯೋಚನೆಯು ಆರಂಭಿಕ ದಿನಗಳಲ್ಲಿ ಭಾವನಾ ಅವರಿಗೆ ಇರಲಿಲ್ಲವಂತೆ.
ಆದರೆ ಮದುವೆ ಸಮಾರಂಭ ಒಂದರಲ್ಲಿ ಭಾವನಾ ಅವರ ಅದ್ಭುತವಾದ ನೃತ್ಯ ನೋಡಿ ಪ್ರಭಾವಿತರಾದ ಕೃಷ್ಣಪ್ಪ ಉಪ್ಪೂರ್ ಅವರು ತುಳು ಚಿತ್ರ ಮರಿ ಬೆಲೆ ಎಂಬುದರ ಮೂಲಕ ನಟಿ ಭಾವನವರನ್ನು ಸಿನಿ ಪ್ರಪಂಚಕ್ಕೆ ಪರಿಚಯಿಸಿದರು.
ಅಲ್ಲಿಂದ ಶುರುವಾದ ಇವರ ಪರ್ವ ಸಾಲು ಸಾಲು ಯಶಸ್ವಿ ಸಿನಿಮಾಗಳ ಮೂಲಕ ಮುಂದುವರಿಯುತ್ತಲೇ ಇವೆ. ಇನ್ನು 1997ರಲ್ಲಿ ತೆರೆಕಂಡ ನೀ ಉಳಿದ ಮಲ್ಲಿಗೆ ಎಂಬ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಭಾವನಾ ಅವರು 1999ರ ಚಂದ್ರಮುಖಿ ಪ್ರಾಣಸಖಿ, ದೀಪಾವಳಿ, ಎಲ್ಲರ ಮನೆ ದೋಸೆನು ತೂತೆ, ಪರ್ವ,
ನಿನಗಾಗಿ, ಶ್ರಮ, ರಾಂಗ್ ನಂಬರ್, ಪ್ರೀತಿ ಪ್ರೇಮ ಪಯಣ, ಶಾಂತಿ, ಕ್ರೇಜಿಸ್ಟಾರ್ ಹಾಗೂ ನಿರಂತರ ಎಂಬ ಸಿನಿಮಾದ ಮೂಲಕ ಕನ್ನಡಿಗರನ್ನು ರಂಜಿಸಿದ್ದಾರೆ. ಹೀಗೆ ವೃತ್ತಿ ಬದುಕಿನಲ್ಲಿ ಯಶಸ್ಸನ್ನು ಕಂಡಂತಹ ಈ ನಟಿ ತಮ್ಮ ವೈಯಕ್ತಿಕ ಬದುಕಿನಿಂದಾಗಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ.
ಹೌದು ಕಳೆದ ಕೆಲವು ದಿನಗಳ ಹಿಂದಷ್ಟೇ ಸಂದರ್ಶನ ಒಂದರಲ್ಲಿ “ನಾನು ಸ್ವಲ್ಪ ಚಂಚಲ ಸ್ವಭಾವದ ಮನಸ್ಸನ್ನು ಹೊಂದಿರುವವಳು ಹಾಗೂ ಕೋಪವು ನನಗೆ ಅಧಿಕವಾಗಿದೆ.
ನನ್ನ ಮನೋಭಾವಕ್ಕೆ ಅನುಗುಣವಾಗಿರುವಂತಹ ವ್ಯಕ್ತಿಯನ್ನು ನಾನು ಮದುವೆ ಆಗಬೇಕು, ಇಲ್ಲದಿದ್ದರೆ ದಾಂಪತ್ಯ ಜೀವನ ಹಾಳಾಗಿಬಿಡುತ್ತದೆ. ಇದೇ ರೀತಿ ಜೀವನವನ್ನು ಹಾಳು ಮಾಡಿಕೊಂಡಂತಹ ಸಾಕಷ್ಟು ಜನರನ್ನು ನಾನು ನೋಡಿದ್ದೇನೆ.
ಹೀಗಾಗಿ ಆ ತಾಪತ್ರಯಕ್ಕೆ ಹೋಗುವುದೇ ಬೇಡ ಎಂದು ಸೇಫ್ ಆಗಿ ಇದ್ದೇನೆ” ಎಂಬ ಹೇಳಿಕೆ ನೀಡುವ ಮೂಲಕ ತಮಗೆ ಮದುವೆಯಾಗುವುದರಲ್ಲಿ ಇಂಟರೆಸ್ಟ್ ಇಲ್ಲ ಎಂಬ ಮಾಹಿತಿಯನ್ನು ನಟಿ ಭಾವನಾ ಸ್ಪಷ್ಟವಾಗಿ ತಿಳಿಸಿದರು. ಆದರೂ ಕೂಡ ಇವರ ಹೆಸರು ಸಾಕಷ್ಟು ನಟರೊಂದಿಗೆ ಆಗಾಗ ತಳಕು ಹಾಕಿಕೊಳ್ಳುತ್ತ ಗಾಸಿಪ್ಗೊಳಗಾಗುತ್ತಲೇ ಇರುತ್ತದೆ.
Do You Know the Kannada Actress Bhavana Real Life Story