ರಮೇಶ್ ಅರವಿಂದ್ ಅವರ ಕಿವಿಯಲ್ಲಿ ಗುಟ್ಟಾಗಿ ಮನದರಸಿಯ ಹೆಸರನ್ನು ರಿವೀಲ್ ಮಾಡಿದ ಡಾಲಿ ಧನಂಜಯ್! ಯಾವಾಗ ಯಾರನ್ನು ಮದುವೆಯಾಗುತ್ತಾರಂತೆ ಗೊತ್ತಾ?
ಸ್ನೇಹಿತರೆ ಕಿರುತೆರೆಯ ಬಹು ಪ್ರಸಿದ್ಧಿ ಕಾರ್ಯಕ್ರಮ ಎಂದೆ ಪ್ರಖ್ಯಾತಿ ಪಡೆದಿರುವಂತಹ ವೀಕೆಂಡ್ ವಿತ್ ರಮೇಶ್ (Weekend With Ramesh) ಐದನೇ ಆವೃತ್ತಿ ಪ್ರಾರಂಭವಾಗಿ ಅದಾಗಲೇ ಹಲವಾರು ಎಪಿಸೋಡ್ಗಳು ಕೂಡ ಪ್ರಸಾರವಾಗಿದೆ.
ಇನ್ನು ಕಳೆದ ವಾರವಷ್ಟೇ, ಸಾಧಕರ ಕುರ್ಜಿಯಲ್ಲಿ ಕುಳಿತು ತಮ್ಮ ಜೀವನದ ಸಿಹಿ ಹಾಗೂ ಕಹಿ ಅನುಭವಗಳ ಕುರಿತು ಮೇಲುಕು ಹಾಕಿದಂತಹ ಡಾಲಿ ಧನಂಜಯ್ (Dolly Dhananjay) ಅವರ ಕಾರ್ಯಕ್ರಮವು ಬಹಳ ಅದ್ಭುತವಾಗಿ ಮೂಡಿ ಬಂದಿದ್ದು, ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ (Socila Media) ಈ ಕುರಿತು ಸಾಕಷ್ಟು ಪೋಸ್ಟ್ಗಳು ಹರಿದಾಡುತ್ತಿವೆ.
ರಮೇಶ್ ಅರವಿಂದ್ (Ramesh Aravind) ಅವರ ಕಿವಿಯಲ್ಲಿ ಗುಟ್ಟಾಗಿ ತಮ್ಮ ಮನದರಸಿ ಯಾರೆಂಬುದನ್ನು ರಿವೀಲ್ ಮಾಡಿದ ಧನಂಜಯ್ ಯಾವಾಗ ಮದುವೆಯಾಗಲಿದ್ದಾರೆ ಎಂಬ ಮಾಹಿತಿಯು ಬಹು ದೊಡ್ಡ ಮಟ್ಟದಲ್ಲಿ ವೈರಲಾಗುತ್ತಿದೆ.
ಹಾಗಾದ್ರೆ ಬ್ರಹ್ಮಚಾರಿಗಳ ಅಧ್ಯಕ್ಷ ನೆನೆಸಿಕೊಂಡಿರುವಂತಹ ಧನಂಜಯ್ ಅವರು ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ? ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಕಳೆದ ಕೆಲವು ತಿಂಗಳ ಹಿಂದಷ್ಟೇ ಬ್ರಹ್ಮಚಾರಿಗಳ ನಡೆ ಮಾದಪ್ಪನ ಕಡೆ ಎಂಬ ಅಭಿಯಾನಕ್ಕೆ ಸ್ವತಃ ಧನಂಜಯ್ ಅವರೇ ಚಾಲನೆ ನೀಡುವ ಮೂಲಕ ರೈತರಿಗೆ, ರೈತರ ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಇದು ಬದಲಾಗಬೇಕು ಎಂದಿದ್ದರು.
ಅವರಿದ್ದರೆ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಊಟ ಮಾಡಲು ಸಾಧ್ಯ ಎಂಬ ಹೇಳಿಕೆ ನೀಡುವ ಮೂಲಕ ಬ್ರಹ್ಮಚಾರಿಗಳ ಪರವಾಗಿ ಮಾತನಾಡಿದರು. ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿಯೂ ಕೂಡ ಪ್ರತಿಯೊಬ್ಬರು ಇವರ ಮದುವೆ ಯಾವಾಗ? ಎಂದು ಪ್ರಶ್ನೆ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಅವರ ಹಿತೈಷಿಯ ಸ್ಥಾನದಲ್ಲಿ, ಅಣ್ಣನ ಸ್ಥಾನದಲ್ಲಿ ನಿಂತು ಮಾತನಾಡಿದಂತಹ ಶಿವರಾಜ್ ಕುಮಾರ್ ಅವರು ಕೂಡ ಮದುವೆ ಯಾವಾಗ ಮಾಡಿಕೊಳ್ಳುತ್ತೀಯ ಎಂದು ಪ್ರಶ್ನೆ ಮಾಡಿದಾಗ ಧನಂಜಯ್ ಅವರು ನಾನು ಯಾವತ್ತೂ ಶಿವಣ್ಣನ ಮಾತನ್ನು ಮೀರಿಲ್ಲ ಅವರು ಹೇಳಿದ ಮೇಲೆ ಆಗ್ತೀನಿ ಎಂದರು.
ಇದಾದ ಬಳಿಕ ರಮೇಶ್ ಅರವಿಂದ್ ಅವರು ಕೂಡ ನಿಮ್ಮ ಮನಸ್ಸಿನಲ್ಲಿ ಯಾರಾದರೂ ಇದ್ದಾರ? ಎಂದು ಕೇಳಿದ್ದಕ್ಕೆ ಧನಂಜಯ್ ಅವರು ರಮೇಶ್ ಅರವಿಂದ್ ಅವರ ಕಿವಿಯಲ್ಲಿ ಗುಟ್ಟಾಗಿ ಏನೋ ಹೇಳಿದ್ದಾರೆ.
ಅದನ್ನು ಕೇಳಿಸಿಕೊಂಡ ರಮೇಶ್ ಅವರು ಬಾಯಿ ಬಿಟ್ಟು ಎಲ್ಲರದರೂ ಹೇಳಿಬಿಡಲೇ ಎಂದು ಹೇಳುತ್ತಾ ಜೋರಾಗಿ ನಕ್ಕರು. ಇದೆಲ್ಲದರ ಜೊತೆಗೆ ಧನಂಜಯ್ ಅವರು ಕೂಡ ಇದೇ ವರ್ಷ ನಮ್ಮ ಕನ್ನಡ ಸಿನಿಮಾ ರಂಗದ ಖ್ಯಾತ ನಟಿಯೊಂದಿಗೆ ಅಥವಾ ಬೇರೆರಂಗದ ಹುಡುಗಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಬಹುದು…
ಈ ಸುದ್ದಿ ಬಹು ದೊಡ್ಡ ಮಟ್ಟದಲ್ಲಿ ವೈರಲಾಗುತ್ತಿದೆ. ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಡಾಲಿ ಧನಂಜಯ್ ಅವರ ಹೆಸರು ನಟಿ ಅಮೃತ ಅಯ್ಯರ್ ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದು, ಈ ಜೋಡಿಗಳು ಮದುವೆ ಆದರೆ ಬಹಳ ಚೆನ್ನಾಗಿರುತ್ತೆ ಎಂಬ ಅಭಿಪ್ರಾಯಗಳು ಅಭಿಮಾನಿಗಳ ವತಿಯಿಂದ ಕೇಳಿಬರುತ್ತಿದೆ.
Dolly Dhananjay Marriage Gossip Goes Viral after Weekend With Ramesh TV Show