ಅವಕಾಶಗಳಿಗಾಗಿ ಪರದಾಡುತ್ತಿದ್ದಂತಹ ಡೆಡ್ಲಿ ಸೋಮ ಅಭಿನಯಿಸಬೇಕಿದ್ದ ಆ ಸಿನಿಮಾದಲ್ಲಿ ಶ್ರೀಮುರಳಿ ಅಭಿನಯಿಸಿ ಚರಿತ್ರೆ ಸೃಷ್ಟಿಸಿಬಿಟ್ಟರು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ?
ಡೆಡ್ಲಿ ಸೋಮ ಅವರಿಂದ ಅವಕಾಶ ಕೈ ತಪ್ಪಿ ಹೋಗಲು ಕಾರಣವಾದರೂ ಏನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸ್ನೇಹಿತರೆ ಇಂತಹ ಘಟನೆಗಳು ಸಿನಿ ಬದುಕಿನಲ್ಲಿ ನಡೆಯುವುದು ಸರ್ವೇಸಾಮಾನ್ಯವಾಗಿದೆ. ಆಗಿನ ಅಣ್ಣಾವ್ರ ಕಾಲದಿಂದ (Dr.Rajkumar) ಹಿಡಿದು ಇಂದಿನ ದರ್ಶನ್ (Darshan) ಸುದೀಪ್ (Kiccha Sudeep) ರವರಂತಹ ಸ್ಟಾರ್ ನಟರುಗಳ ನಡುವೆ ಈ ಕಲಹಗಳು ಮೂಡುವುದು ಸಹಜ. ಅದೆಷ್ಟೋ ಸಿನಿಮಾಗಳನ್ನು ಡಾಕ್ಟರ್ ರಾಜಕುಮಾರ್ ಅವರಿಗೆಂದು ಮಾಡಿ ಅದರಲ್ಲಿ ವಿಷ್ಣು ದಾದಾ (Dr Vishnuvardhan) ಅಭಿನಯಿಸಿ ಚರಿತ್ರೆ ಸೃಷ್ಟಿಸಿದಂತಹ ಉದಾಹರಣೆಗಳಿವೆ.
ಹೀಗೆ ರೋರಿಂಗ್ ಸ್ಟಾರ್ ಶ್ರೀಮುರುಳಿ (Sri Murali) ಡೆಡ್ಲಿ ಸೋಮ ಅವರಿಂದಲೇ ಅವಕಾಶವನ್ನು ಕಸಿದುಕೊಂಡು ಬಹು ದೊಡ್ಡ ಮಟ್ಟದಲ್ಲಿ ಪ್ರಖ್ಯಾತಿ ಪಡೆದುಕೊಂಡ ಆ ಒಂದು ಸಿನಿಮಾ ಯಾವುದು?
ಡೆಡ್ಲಿ ಸೋಮ ಅವರಿಂದ ಅವಕಾಶ ಕೈ ತಪ್ಪಿ ಹೋಗಲು ಕಾರಣವಾದರೂ ಏನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಈ ಒಂದು ಮಾಹಿತಿ ಬರೋಬ್ಬರಿ 20 ವರ್ಷಗಳ ಹಿಂದಿನದ್ದು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಆ ವೇಳೆ ತೆರೆಕಂಡ ಚಂದ್ರ ಚಕೋರಿ ಸಿನಿಮಾಗೆ ಮೊದಲು ಡೆಡ್ಲಿ ಸೋಮ ಅವರು ನಾಯಕನಾಗಿ ಆಯ್ಕೆಯಾಗಿದ್ದರು. ಆದರೆ ಕೆಲವು ಕಾರಣಾಂತರಗಳಿಂದಾಗಿ ಆ ಸಿನಿಮಾದಲ್ಲಿ ಡೆಡ್ಲಿ ಸೋಮ ಅಲಿಯಾಸ್ ಆದಿತ್ಯ ಅಭಿನಯಿಸುವ ಅವಕಾಶ ಕೈತಪ್ಪಿ ರೋರಿಂಗ್ ಸ್ಟಾರ್ ಶ್ರೀಮುರುಳಿಯವರು ತಮ್ಮ ಅಮೋಘ ಅಭಿನಯದ ಮೂಲಕ ಸಿನಿಮಾವನ್ನು ಗೆಲ್ಲಿಸಿಕೊಟ್ಟರು.
ಯಾರೂ ತಿರುಗಿ ನೋಡದಂತಹ ಸಂದರ್ಭದಲ್ಲಿ ವಿಷ್ಣು ದಾದಾ ವಿನೋದ್ ರಾಜ್ ಗೆ ಮಾಡಿದ ಸಹಾಯವೇನು ಗೊತ್ತಾ?
ಇನ್ನು ಈ ಒಂದು ಸಿನಿಮಾಗೆ ಸಾಕಷ್ಟು ಪ್ರಶಸ್ತಿಗಳು ಕೂಡ ದೊರಕಿವೆ, ಈ ಸಿನಿಮಾದ ನಂತರ ಶ್ರೀಮುರುಳಿ ಮತ್ತೆಂದೂ ಹಿಂದಿರುಗಿ ನೋಡಿಯೇ ಇಲ್ಲ. ತಮ್ಮ ಮುಗ್ಧ ಹಾಗೂ ಅಮೋಘ ಅಭಿನಯದ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಪ್ರಖ್ಯಾತಿ ಪಡೆದುಕೊಂಡಂತಹ ಶ್ರೀಮುರುಳಿಯವರು ಚಂದ್ರ ಚಕೋರಿ ಸಿನಿಮಾದ ನಂತರ ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡರು.
ಈ ಒಂದು ಮಾಹಿತಿಯನ್ನು ಸ್ವತಃ ಚಂದ್ರ ಚಕೋರಿ ಸಿನಿಮಾದ ನಿರ್ದೇಶಕರಾದಂತಹ ಎಸ್ ನಾರಾಯಣ್ ಅವರೇ ಸಂದರ್ಶನ ಒಂದರಲ್ಲಿ ಬಿಚ್ಚಿಟ್ಟಿದ್ದು, ಸಿನಿಮಾದ ಕಥೆ ಮಾಡುವಾಗ ತಲೆಯಲ್ಲಿ ಆದಿತ್ಯನೇ ತುಂಬಿದ್ದ ಅವನಿಗಾಗಿಯೇ ಈ ಒಂದು ಕಥೆಯನ್ನು ರೂಪಿಸಿದ್ದು, ಆದರೆ ಆ ಸಂದರ್ಭದಲ್ಲಿ ಅವರು ಲವ್ ಎನ್ನುವ ಸಿನಿಮಾದಲ್ಲಿ ಬ್ಯುಸಿ ಇದ್ದರು. ಎಷ್ಟೇ ಪ್ರಯತ್ನ ಪಟ್ಟರು ಡೇಟ್ಸ್ ಕೂಡ ಸಿಗಲಿಲ್ಲ ಹೀಗಾಗಿ ಶ್ರೀಮುರಳಿ ಆ ಸಿನಿಮಾದಲ್ಲಿ ಅಭಿನಯಿಸಬೇಕಾಯಿತು ಎಂದಿದ್ದಾರೆ.
ಸದ್ಯ ಆ ವೇಳೆ ಚಂದ್ರ ಚಕೋರಿ ಸಿನಿಮಾ ಸೃಷ್ಟಿಸಿದ್ದು ಸಾಮಾನ್ಯ ಟ್ರೆಂಡ್ ಅಲ್ಲ, ಒಟ್ಟಿನಲ್ಲಿ ಚಿತ್ರ ಆಧಿತ್ಯಗಾಗಿ ಮಾಡಿದ್ದೋ ಅಥವಾ ಶ್ರೀ ಮುರಳಿಗಾಗಿ ಮಾಡಿದ್ದೋ ಅದು ಗೊತ್ತಿಲ್ಲ, ಆದರೆ ಕನ್ನಡ ಸಿನಿಮಾ ಈ ಮಟ್ಟಕ್ಕೆ ಯಶಸ್ಸು ಪಡೆದಿದ್ದು ಪಕ್ಕದ ಚಿತ್ರರಂಗ ಕೂಡ ಒಮ್ಮೆ ಇತ್ತ ತಿರುಗಿ ನೋಡುವಂತೆ ಮಾಡಿತ್ತು.
Sri Murali created history by acting in that movie where supposed to play Deadly Soma