Samantha: ಮೂರು ಭಾರಿ ಪ್ರಾಜೆಕ್ಟ್ ರಿಜೆಕ್ಟ್ ಮಾಡಿದ್ದ ಸಮಂತಾ, ಅವೆಲ್ಲವೂ ಸಹ ಈಗ ಸೂಪರ್ ಹಿಟ್ ಸಿನಿಮಾಗಳು

Samantha: ಸ್ಟಾರ್ ಬ್ಯೂಟಿ ಸಮಂತಾ ಇತ್ತೀಚೆಗಷ್ಟೇ ‘ಯಶೋದಾ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಸಿನಿಮಾ ಪಾಸಿಟಿವ್ ಟಾಕ್ ಪಡೆದಿದೆ. ಆದರೆ ತನ್ನ ವೃತ್ತಿಜೀವನದಲ್ಲಿ ಯಾರೂ ನಿರೀಕ್ಷಿಸದ ಮೂರು ಬೃಹತ್ ಪ್ರಾಜೆಕ್ಟ್‌ಗಳನ್ನು ತಿರಸ್ಕರಿಸಿದ್ದೇನೆ ಎಂದು ಸಮಂತಾ ಹೇಳಿದ್ದಾರೆ.

Samantha: ಸ್ಟಾರ್ ಬ್ಯೂಟಿ ಸಮಂತಾ ಇತ್ತೀಚೆಗಷ್ಟೇ ‘ಯಶೋದಾ’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದು, ಸಿನಿಮಾ ಪಾಸಿಟಿವ್ ಟಾಕ್ ಪಡೆದಿದೆ. ಆದರೆ ತನ್ನ ವೃತ್ತಿಜೀವನದಲ್ಲಿ ಯಾರೂ ನಿರೀಕ್ಷಿಸದ ಮೂರು ಬೃಹತ್ ಪ್ರಾಜೆಕ್ಟ್‌ಗಳನ್ನು ತಿರಸ್ಕರಿಸಿದ್ದೇನೆ ಎಂದು ಸಮಂತಾ ಹೇಳಿದ್ದಾರೆ.

ಯಶೋದಾ ಚಿತ್ರವು ಈಗಾಗಲೇ ಉತ್ತಮ ನಿರೀಕ್ಷೆಗಳನ್ನು ಹುಟ್ಟುಹಾಕಿದೆ ಮತ್ತು ಕಥೆ ಕೂಡ ರಿಫ್ರೆಶ್ ಆಗಿದ್ದು, ಈ ಚಿತ್ರವು ಸಕಾರಾತ್ಮಕ ಟಾಕ್‌ನೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ಸ್ ಮಾಡುತ್ತಿದೆ. ಅಲ್ಲದೇ ವಿದೇಶಗಳಲ್ಲೂ ಈ ಸಿನಿಮಾದ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಅನಾರೋಗ್ಯದ ಬಗ್ಗೆ ಮಾತನಾಡಿರುವ ಸಮಂತಾ, ತಮ್ಮ ವೃತ್ತಿಜೀವನದಲ್ಲಿ ಯಾರೂ ನಿರೀಕ್ಷಿಸದ ಮೂರು ಬೃಹತ್ ಪ್ರಾಜೆಕ್ಟ್‌ಗಳನ್ನು ತಿರಸ್ಕರಿಸಿದ್ದೇನೆ ಎಂದು ಹೇಳಿದ್ದಾರೆ.

These are the 3 big budget films that Samantha rejected

ಸಮಂತಾ ರಿಜೆಕ್ಟ್ ಮಾಡಿದ 3 ಬಿಗ್ ಬಜೆಟ್ ಚಿತ್ರಗಳು

ಸಮಂತಾ ರಿಜೆಕ್ಟ್ ಮಾಡಿರುವ ಮೂರು ಅದ್ಧೂರಿ ಪ್ರಾಜೆಕ್ಟ್ ಯಾವುದು ಗೊತ್ತಾ.. ಆ ಚಿತ್ರಗಳನ್ನು ಯಾಕೆ ರಿಜೆಕ್ಟ್ ಮಾಡಿದರು ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಮಂತಾ ತಿರಸ್ಕರಿಸಿದ ಆ ಸಿನಿಮಾಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.

ಸ್ಟಾರ್ ಡೈರೆಕ್ಟರ್ ಶಂಕರ್ ನಿರ್ದೇಶನದಲ್ಲಿ ವಿಕ್ರಮ್ ಅಭಿನಯದ ವೈವಿಧ್ಯಮಯ ಸಿನಿಮಾ ‘ಐ’ಗೆ ಮೊದಲು ನಾಯಕಿಯಾಗಿ ಸಮಂತಾ ಅವರನ್ನು ಯೋಚಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅವರು ಈ ಚಿತ್ರವನ್ನು ತಿರಸ್ಕರಿಸಿದ್ದಾರೆ.

ಆ ನಂತರ ಸುಕುಮಾರ್ ನಿರ್ದೇಶನದ ‘ಪುಷ್ಪ’ ಮಾಸ್ ಎಂಟರ್‌ಟೈನರ್ ಸಿನಿಮಾದಲ್ಲಿ ಸಮಂತಾ ಅವರನ್ನು ನಾಯಕಿಯಾಗಿ ಪರಿಗಣಿಸಲಾಗಿತ್ತು. ಆದರೆ, ಡೇಟ್ಸ್ ಅಡ್ಜೆಸ್ಟ್ ಆಗದ ಕಾರಣ ಈ ಚಿತ್ರಕ್ಕೆ ನೋ ಹೇಳಿದ್ದಾರಂತೆ.

ಡಿವೋರ್ಸ್ ರದ್ದು ಮಾಡಿ ಒಂದಾಗಲು ಸಮಂತಾ ನಿರ್ಧಾರ

ಮೇಲಾಗಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಇತ್ತೀಚಿನ ‘ಪಠಾಣ್’ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಈ ಚಿತ್ರವನ್ನು ತಿರಸ್ಕರಿಸಿದ್ದಾರೆ. ತನಗೆ ಬಂದ ಮೂರು ದೊಡ್ಡ ಪ್ರಾಜೆಕ್ಟ್‌ಗಳನ್ನು ಸಮಂತಾ ತಿರಸ್ಕರಿಸಿದ್ದಾರೆ ಎಂದು ತಿಳಿದ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಜೊತೆ ಖುಷಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Here is the Samantha Rejected 3 Big Budget Movies