ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಕನ್ನಡಕ್ಕೆ ಬಂದದ್ದು ಹೇಗೆ? ಚಿತ್ರೀಕರಣ ನಡೆದಿದ್ದು ಎಲ್ಲಿ ಗೊತ್ತಾ?
ಭಾರತೀಯ ರೈಲ್ವೆಯು ಮಾಲ್ಗುಡಿ ಡೇಸ್ ಧಾರಾವಾಹಿ ಸ್ಥಳಕ್ಕೆ ಗೌರವಾರ್ಥವಾಗಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರೈಲ್ವೆ ನಿಲ್ದಾಣವನ್ನು ಮಾಲ್ಗುಡಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಿತ್ತು.
ಮಾಲ್ಗುಡಿ ಡೇಸ್ (Malgudi Days) ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ತಟ್ ಎಂದು ಶಂಕರ್ ನಾಗ್ (Actor Shankar Nag) ಅವರು ನೆನಪಿಗೆ ಬಂದು ಬಿಡುತ್ತಾರೆ. ನಮ್ಮ ಕನ್ನಡ ಸಿನಿಮಾರಂಗದ (Kannada Film Industry) ಆತ್ಮೀಯ ನಟ ಮತ್ತು ನಿರ್ದೇಶಕರಾದ ಶಂಕರ್ ನಾಗ್ ಅವರು ನಿರ್ಮಿಸಿದ್ದು, ಈ ಧಾರಾವಾಹಿಯ ಎಲ್ಲ ಭಾಗಗಳನ್ನು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಬಹಳನೇ ಸುಂದರವಾಗಿ ಚಿತ್ರಿಸಲಾಗಿತ್ತು, ಇನ್ನು ಈ ಒಂದು ಸೀರಿಯಲ್ ಗೆ ಎಲ್ ವೈದ್ಯನಾಥನ್ ಅವರ ಸಂಗೀತ ಸಂಯೋಜನೆ ಇತ್ತು.
ರಜನಿಕಾಂತ್ ಕನ್ನಡದಲ್ಲಿ ಅಭಿನಯಿಸಿದ ಕೊನೆಯ ಸಿನಿಮಾ ಯಾವುದು? ಕನ್ನಡ ಚಿತ್ರಗಳಿಂದ ದೂರ ಉಳಿದಿದ್ದೇಕೆ ರಜನಿ?
ಪದಂ ರಾಗ್ ಫಿಲಂ ಸಂಸ್ಥೆಯ ಟಿ ಎಸ್ ನರಸಿಂಹನ್ ಅವರು ಸಂಪೂರ್ಣ ಧಾರವಾಹಿಯ ನಿರ್ಮಾಣಕ್ಕೆ ಮುಂದಾಗಿದ್ದರು. ಕಥೆಯನ್ನು ಖ್ಯಾತ ಇಂಗ್ಲೀಷ್ ಬರಹಗಾರರಾದ ಆರ್ ಕೆ ನಾರಾಯಣ್ ಅವರ ಸ್ವಾಮಿ ಅಂಡ್ ಫ್ರೆಂಡ್ಸ್ ಹಾಗೂ ದಿ ವಂಡರ್ ಆಫ್ ಸ್ವೀಟ್ಸ್ ಸಂಕಲನದಿಂದ ಆಯ್ದುಕೊಳ್ಳಲಾಗಿತ್ತು. ಎಲ್ಲಾ ಕಥೆಗಳು ದಕ್ಷಿಣ ಭಾರತದಲ್ಲಿನ ಮಾಲ್ಗುಡಿ ಎನ್ನುವ ಕಾಲ್ಪನಿಕಹಳ್ಳಿಯಲ್ಲಿ ನಡೆಯುತ್ತದೆ.
ಆರ್ಕೆ ನಾರಾಯಣ ಅವರ ಮಾತಿನಲ್ಲಿ ಮಾಲ್ಗುಡಿ ಜಗತ್ತಿನ ಯಾವುದೇ ಭಾಗದಲ್ಲಿನ ಚಿರನೂತನ ಪಾತ್ರಗಳ ಊರು. ಬೆಟ್ಟಗಳಿಂದ ಸುತ್ತುವರೆದಿರುತ್ತದೆ, ಹೀಗೆ ಈ ಒಂದು ಧಾರಾವಾಹಿಯು ಅಚ್ಚ ಹಸಿರು ತುಂಬಿರುವ ಬಹಳ ಸುಂದರವಾದ ತಾಣದಲ್ಲಿ ಚಿತ್ರೀಕರಣಗೊಂಡಿತ್ತು. ಪ್ರೇಕ್ಷಕರಿಗೆ ನೋಡಲು ಮನೋರಂಜನೆಯ ಜೊತೆಗೆ ಒಂದು ಒಳ್ಳೆ ಚಿತ್ರಣವು ಸಿಗುತ್ತಿತ್ತು.
ಬರೋಬ್ಬರಿ 300 ಸಿನಿಮಾಗಳಲ್ಲಿ ನಟಿಸಿರುವ ಅನಂತನಾಗ್ ಅವರ ಮೊದಲ ಸಿನಿಮಾ ಯಾವುದು ಗೊತ್ತಾ?
ಇದರ ಜೊತೆಗೆ ಕೆಲವು ಸಂಚಿಕೆಗಳನ್ನು ಬೆಂಗಳೂರಿನಲ್ಲಿ ಮತ್ತು ಇನ್ನು ಕೆಲವು ಸಂಚಿಕೆಗಳನ್ನು ತುಮಕೂರು ಜಿಲ್ಲೆಯ ದೇವರಾಯನ ದುರ್ಗದ ಬೆಟ್ಟದಲ್ಲಿ ಚಿತ್ರಿಸಲಾಗಿದೆ. ಹೌದು ಗೆಳೆಯರೇ ನಿತ್ಯ ಎಂಬ ಸಂಚಿಕೆಯನ್ನು ಸಂಪೂರ್ಣವಾಗಿ ದೇವರಾಯನ ದುರ್ಗದಲ್ಲಿ ಚಿತ್ರಿಸಿರುವುದು ಬಹಳ ವಿಶೇಷ.
ಇನ್ನು ಶಂಕರ್ ನಾಗ್ ಅವರ ಅಗಲಿಕೆಯ ನಂತರ ೨೦೦೪ರಲ್ಲಿ ಅವರ ಬದಲಿಗೆ ನಿರ್ಮಾಪಕ ಕವಿತಾ ಲಂಕೇಶ್ ನಿರ್ದೇಶಕರಾಗಿ ಸಂಯೋಜನೆಯನ್ನು ಪುನರ್ಚೇತನ ಗೊಳಿಸಿದರು.
ಸ್ವಾಮಿನಾಥನ್ ಪಾತ್ರಕ್ಕೆ ಮಾಸ್ಟರ್ ಮಂಜುನಾಥ್ ಜೀವ ತುಂಬಿದರೆ ಅವರ ತಂದೆಯಾಗಿ ಗಿರೀಶ್ ಕಾರ್ನಾಡ್ ಹಾಗೂ ತಾಯಿಯಾಗಿ ವೈಶಾಲಿ ಕಾಸರವಳ್ಳಿ ಅಭಿನಯಿಸಿದರು. ಸ್ವಾಮಿಯ ಅಜ್ಜಿಯ ಪಾತ್ರದಲ್ಲಿ ಸುಹಾಸಿನಿ ಬಿ ಜಯಶ್ರೀ ಅಭಿನಯಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಹೀಗೆ ಅಲ್ಪ ಅಲ್ಪಾವಧಿಯಲ್ಲಿ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಂತಹ ಈ ಒಂದು ಧಾರಾವಾಹಿಗೆ ಎಲ್ಲರಿಂದ ಮೆಚ್ಚುಗೆಗಳು ವ್ಯಕ್ತವಾದವು.
ಇನ್ನು ಭಾರತೀಯ ರೈಲ್ವೆಯು ಮಾಲ್ಗುಡಿ ಡೇಸ್ ಧಾರಾವಾಹಿ ಸ್ಥಳಕ್ಕೆ ಗೌರವಾರ್ಥವಾಗಿ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ರೈಲ್ವೆ ನಿಲ್ದಾಣವನ್ನು ಮಾಲ್ಗುಡಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಿತ್ತು.
ಆದರೆ ಇದರ ಸಾಧನೆ ಹಾಗೂ ಯಶಸ್ಸು ಬೆಳಕಿಗೆ ಬರುವ ಮುನ್ನವೇ ನಮ್ಮ ಕರ್ನಾಟಕದ ಜನಪ್ರಿಯ ಸಾಂಸ್ಕೃತಿಕ ಐಕಾನ್ ಆಟೋ ರಾಜ ಎಂದೆಲ್ಲ ಕರಿಯಲ್ಪಡುತ್ತಿದ್ದ ಶಂಕ್ರಣ್ಣ ನಮ್ಮಿಂದ ಇಲ್ಲವಾದದ್ದು ಇಂದಿಗೂ ಬೇಸರ ತರುವಂತಹ ಸಂಗತಿಯಾಗಿದೆ.
How did Shankar Nag Starrer Malgudi Days come to Kannada
Follow us On
Google News |