ರಜನಿಕಾಂತ್ ಕನ್ನಡದಲ್ಲಿ ಅಭಿನಯಿಸಿದ ಕೊನೆಯ ಸಿನಿಮಾ ಯಾವುದು? ಕನ್ನಡ ಚಿತ್ರಗಳಿಂದ ದೂರ ಉಳಿದಿದ್ದೇಕೆ ರಜನಿ?
Actor Rajinikanth : ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಜನಿಕಾಂತ್ ಆಕಸ್ಮಾತಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಖಳ ನಟನಾಗಿ ನಟಿಸುವ ಮೂಲಕ ಬಣ್ಣದ ಲೋಕದ ಜರ್ನಿಯನ್ನು ಪ್ರಾರಂಭ ಮಾಡಿದರು.
ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಎಂಬ ಹೆಸರು ಕೇಳುತ್ತಿದ್ದ ಹಾಗೆ ತಮಿಳಿನ ಸಾಲು ಸಾಲು ಸಿನಿಮಾಗಳು ನಮ್ಮೆಲ್ಲರ ನೆನಪಿಗೆ ಬಂದು ಬಿಡುತ್ತೆ. ಹೌದು ತಮಿಳಿನ ತಲೈವಾ ಗಾಡ್ ಫಾದರ್ ಎಂದೆಲ್ಲ ಬಿರುದನ್ನು ಪಡೆದುಕೊಂಡಿರುವಂತಹ ರಜನಿಕಾಂತ್ ತಮಿಳು ಸಿನಿಮಾ ರಂಗಕ್ಕೆ ವಿಶೇಷ ಕೊಡುಗೆಯನ್ನು ನೀಡುವ ಮೂಲಕ ಹಲವಾರು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.
ಹೀಗೆ ರಜನಿಕಾಂತ್ ಕೇವಲ ತಮಿಳು ಚಿತ್ರಗಳಲ್ಲಿ ಮಾತ್ರ ನಟಿಸಿಲ್ಲ ಬದಲಿಗೆ ಇತರ ಭಾಷೆಗಳಲ್ಲಿಯೂ ಬಣ್ಣ ಹಚ್ಚಿದ್ದಾರೆ ಎಂಬ ಮಾಹಿತಿ ಸಾಕಷ್ಟು ಜನರಿಗೆ ತಿಳಿದಿರದು. ರಜನಿಕಾಂತ್ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಬರೋಬ್ಬರಿ 300 ಸಿನಿಮಾಗಳಲ್ಲಿ ನಟಿಸಿರುವ ಅನಂತನಾಗ್ ಅವರ ಮೊದಲ ಸಿನಿಮಾ ಯಾವುದು ಗೊತ್ತಾ?
ಇನ್ನು ಬೆಂಗಳೂರಿನಲ್ಲಿ (Bengaluru) ಹುಟ್ಟಿ ಬೆಳೆದ ರಜನಿಕಾಂತ್ ಆಕಸ್ಮಾತಾಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಖಳ ನಟನಾಗಿ ನಟಿಸುವ ಮೂಲಕ ಬಣ್ಣದ ಲೋಕದ ಜರ್ನಿಯನ್ನು ಪ್ರಾರಂಭ ಮಾಡಿದರು. ಅನಂತರ ಮತ್ತೊಂದು ಹಿಂದಿರುಗಿ ನೋಡದಂತಹ ಯಶಸ್ಸು ಇವರ ಬೆನ್ನತ್ತಿ ಬಂತು ಎಂದರೆ ತಪ್ಪಾಗಲಾರದು.
ಹೀಗೆ ಕನ್ನಡದ (Kannada Cinema) ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿರುವ ರಜನಿಕಾಂತ್ ಅವಕಾಶಗಳಿದ್ದರೂ ಕನ್ನಡ ಸಿನಿಮಾ ರಂಗದಿಂದ ದೂರ ಉಳಿದಿದ್ದಾದರೂ ಯಾಕೆ? ಇವರ ಕಡೆಯ ಕನ್ನಡ ಸಿನಿಮಾ ಯಾವುದು? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಪ್ರಿಯಾ, ತಪ್ಪಿದ ತಾಳ, ಮಾತು ತಪ್ಪಿದ ಮಗ, ಕಿಲಾಡಿ ಕಿಟ್ಟು, ಗಲಾಟೆ ಸಂಸಾರ, ಕುಂಕುಮ ರಕ್ಷೆ, ಸಹೋದರರ ಸವಾಲ್, ಒಂದು ಪ್ರೇಮ ಕಥೆ, ಬಾಳು ಜೇನು, ಕಥಾ ಸಂಗಮ ಹೀಗೆ ಸಾಲು ಸಾಲು ಹಿಟ್ ಕನ್ನಡ ಸಿನಿಮಾಗಳನ್ನು ನೀಡಿರುವ ರಜನಿಕಾಂತ್ ಅವರು ಸಿವಿ ರಾಜೇಂದ್ರನ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಘರ್ಜನೆ (೧೯೮೧) ಎಂಬ ಕೊನೆಯ ಕನ್ನಡ ಸಿನಿಮಾದಲ್ಲಿ ನಟಿಸಿದರು.
ಹೌದು ಗೆಳೆಯರೇ, ಈ ಒಂದು ಸಿನಿಮಾಗೆ ನಟಿ ಮಾಧವಿ ರಜಿನಿಕಾಂತ್ ಅವರ ಜೋಡಿಯಾಗಿ ತೆರೆಯ ಮೇಲೆ ಅದ್ಭುತವಾಗಿ ಅಭಿನಯಿಸಿದರು. ಈ ಚಿತ್ರ ಕನ್ನಡ ತಮಿಳು ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಾಣವಾಯಿತು.
ವದಂತಿಗಳ ಬಗ್ಗೆ ನಾಗ ಚೈತನ್ಯ ಮೊದಲ ಬಾರಿಗೆ ಪ್ರತಿಕ್ರಿಯೆ, ಸಮಂತಾ ಬಗ್ಗೆ ಹೇಳೇ ಬಿಟ್ರು ಮುಚ್ಚಿಟ್ಟಿದ್ದ ಸತ್ಯ!
ಈ ಚಿತ್ರದಲ್ಲಿ ರಜಿನಿಕಾಂತ್ ವೈದ್ಯರ ಪಾತ್ರದಲ್ಲಿ ಅಭಿನಯಿಸಿ ಕನ್ನಡಿಗರ ಹೃದಯ ಗೆದ್ದದ್ದು ಅಕ್ಷರಶಹಃ ಸತ್ಯ. ಹೌದು, ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಒಂದು ಗುಂಪನ್ನು ಬಯಲಿಗೆ ತರುವಲ್ಲಿ ವೈದ್ಯ ಹೇಗೆ ಯಶಸ್ವಿಯಾಗುತ್ತಾನೆ? ಎಂಬುದನ್ನು ಈ ಒಂದು ಕಥೆ ಆಧರಿಸಿದೆ.
ರಜನಿಕಾಂತ್ ಅವರಿಗೆ ತಮಿಳಿನ ಸಾಕಷ್ಟು ಸಿನಿಮಾಗಳ ಆಫರ್ ಬರಲಾರಂಬಿಸಿದವು ಹಾಗೂ ತಮಿಳಿನ ಪ್ರೇಕ್ಷಕರು ರಜನಿಕಾಂತ್ ಅವರನ್ನು ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನೋಡಲು ಇಷ್ಟಪಡುತ್ತಿದ್ದಂತಹ ಕಾಲವದು.
ಬೋಲ್ಡ್ ಪಾತ್ರಕ್ಕೆ ನೋ ಹೇಳುವ ನ್ಯಾಚುರಲ್ ಬ್ಯೂಟಿ ನಟಿ ಸಾಯಿ ಪಲ್ಲವಿ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತೇ?
ಇನ್ನು ಕನ್ನಡದಲ್ಲಿ ವಿಷ್ಣುವರ್ಧನ್, ರಾಜಕುಮಾರ್ ಅವರಂತಹ ದಿಗ್ಗಜ ನಟರುಗಳ ಆಳ್ವಿಕೆ ಇದ್ದ ಕಾರಣ ತಮಿಳು ಸಿನಿಮಾ ರಂಗವನ್ನು ರಜಿನಿಕಾಂತ್ ಆಯ್ಕೆ ಮಾಡಿಕೊಂಡು ಕಾಲಿವುಡ್ ನಲ್ಲಿ ಮಿಂಚಿದರು.
Actor Rajinikanth Last acted Kannada Movie, Why He stay away from Kannada films
Follow us On
Google News |