ದೇವಸ್ಥಾನದ ಮುಂದೆ ಕುಳಿತಿದ್ದ ರಜನಿಕಾಂತ್ ಅವರನ್ನು ಭಿಕ್ಷುಕ ಎಂದುಕೊಂಡ ಮಹಿಳೆ ಅದೆಂತಹ ಕೆಲಸ ಮಾಡಿದ್ದಳು ಗೊತ್ತಾ?
ಹಲವಾರು ದಶಕಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವಂತಹ ರಜನಿಕಾಂತ್ ಇಂದಿಗೂ ಒಂದರ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಪೀಕ್ನಲ್ಲಿ ಇರುವಂತಹ ನಟ.
ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿ ಬದುಕು ನಿಜಕ್ಕೂ ಯಾವ ಸಿನಿಮಾಗೂ ಕಮ್ಮಿ ಇಲ್ಲದಂತೆ ತಿರುವುಗಳನ್ನು ಪಡೆದುಕೊಳ್ಳುತ್ತಾ ಅದ್ಭುತವಾಗಿ ಸಾಗುತ್ತಿದೆ. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್ ಇದೀಗ ತಮಿಳು ಚಿತ್ರರಂಗದಲ್ಲಿ ಟಾಪ್ ನಟ. ದೇಶವೇ ಮೆಚ್ಚುವಂತೆ ಸೂಪರ್ ಸ್ಟಾರ್ ಎನಿಸಿಕೊಂಡಿರುವುದು ಸಾಮಾನ್ಯ ಮಾತಲ್ಲ.
ಹಲವಾರು ದಶಕಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಸಕ್ರಿಯರಾಗಿರುವಂತಹ ರಜನಿಕಾಂತ್ ಇಂದಿಗೂ ಒಂದರ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ ಪೀಕ್ನಲ್ಲಿ ಇರುವಂತಹ ನಟ.
ರಜನಿಕಾಂತ್ ಹಾಗೂ ತಮನ್ನ ಅಭಿನಯದ ಜೈಲರ್ ಸಿನಿಮಾ ಇನ್ನೇನು ಬಿಡುಗಡೆ ಹಂತ ತಲುಪಿದ್ದು, ಇಂತಹ ಇಳಿ ವಯಸ್ಸಿನಲ್ಲಿ ಸಕ್ಕತ್ ಎನರ್ಜಿಟಿಕ್ಕಾಗಿ ಅಭಿನಯಿಸುತ್ತ ಪ್ರೇಕ್ಷಕ ಪ್ರಭುವಗಳನ್ನು ರಂಜಿಸುತ್ತಾ ಬಂದಿದ್ದಾರೆ.
ಇಂತಹ ಸ್ಟಾರ್ ಸೆಲೆಬ್ರಿಟಿ ಒಂದು ದಿನ ಬಹಳ ಸಾಮಾನ್ಯರಂತೆ ದೇವಸ್ಥಾನದ ಮುಂದೆ ಕುಳಿತಿದ್ದರಂತೆ. ಆಗ ಭಿಕ್ಷೆ ಬೇಡುವವನು ಎಂದು ತಿಳಿದ ಮಹಿಳೆಯೊಬ್ಬಳು ಎಂತಹ ಕೆಲಸ ಮಾಡಿದರು? ಅದಕ್ಕೆ ರಜನಿಕಾಂತ್ ಅವರ ಪ್ರತಿಕ್ರಿಯೆ ಹೇಗಿತ್ತು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಸ್ನೇಹಿತರೆ, ರಜನಿಕಾಂತ್ ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ತಮ್ಮ ವೈಯಕ್ತಿಕ ಜೀವನದತ್ತ ಗಮನಹರಿಸುವುದನ್ನು ಎಂದಿಗೂ ಮರೆಯುವುದಿಲ್ಲ. ಸಿನಿಮಾದಲ್ಲಿ ಮೇಕಪ್ ಹಚ್ಚಿಕೊಂಡರೆ ಮಾತ್ರ ರಜನಿಕಾಂತ್ ಅವರ ತೆರೆಯ ಮೇಲಿನ ಮಾನರಿಸಂ ಹೊರ ಬರುತ್ತಿತ್ತೇ ಹೊರತು ಬೇರೆ ಸಮಯದಲ್ಲೆಲ್ಲ ರಜನಿಕಾಂತ್ ಅವರಷ್ಟು ಸಿಂಪಲ್ ಆದಂತಹ ವ್ಯಕ್ತಿಯನ್ನು ಮತ್ತೆಲ್ಲೂ ಕಾಣಲು ಸಾಧ್ಯವೇ ಇಲ್ಲ.
ಇತ್ತೀಚಿನ ಯುವ ಕಲಾವಿದರು ಸಣ್ಣಪುಟ್ಟ ಶಾರ್ಟ್ ಮೂವಿ ಹಾಗೂ ಸೀರಿಯಲ್ಗಳಲ್ಲಿ ಅಭಿನಯಿಸಿದರೆ ಸಾಕು ದೊಡ್ಡ ಸೆಲೆಬ್ರಿಟಿಗಳಂತೆ ಮಿಂಚುತ್ತಾರೆ. ಆದರೆ ನೂರಾರು ಹಿಟ್ ಸಿನಿಮಾಗಳನ್ನು ನೀಡಿರುವ ರಜನಿ ಬಹಳ ಸರಳ ಜೀವನವನ್ನು ನಡೆಸಲು ಇಷ್ಟಪಡುವಂತಹ ವ್ಯಕ್ತಿ. ಇನ್ನೂ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ರಜನಿಕಾಂತ್ ಅವರು ಪ್ರತಿ ವರ್ಷವೂ ಹಿಮಾಲಯಕ್ಕೆ ಹೋಗಿ ದೇವರ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ.
ಹೀಗೊಂದು ದಿನ ರಜಿನಿ ರಸ್ತೆಬದಿಯ ಹೋಟೆಲೊಂದರಲ್ಲಿ ಊಟ ಮಾಡಿ ಹಿಮಾಲಯದ ದೇವಸ್ಥಾನ ಒಂದರ ಬಳಿ ಕುಳಿತಿರುತ್ತಾರೆ. ಅವರನ್ನು ನೋಡಿದ ಒಬ್ಬ ಮಹಿಳೆ ರಜನಿ ಅವರನ್ನು ಬಿಕ್ಷುಕ ಎಂದು ತಿಳಿದು ಅವರಿಗೆ ಹತ್ತು ರೂಪಾಯಿ ನೀಡುತ್ತಾರೆ.
ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಅದನ್ನು ಪಡೆದು ಅಲ್ಲಿಂದ ಮುಂದೆ ಹೊರಟ ರಜನಿಕಾಂತ್ ನಂತರ ಹಣವನ್ನು ದೇವರ ಹುಂಡಿಗೆ ಹಾಕಿ, ನಾನು ಬಿಕ್ಷುಕನಲ್ಲ ಎನ್ನುವುದನ್ನು ತಿಳಿಸುತ್ತಾರೆ.
ನಂತರ ಅಲ್ಲಿದ್ದ ಜನರು ಅವರನ್ನು ಗುರುತಿಸಿ ಮಹಿಳೆಯ ಬಳಿಬಂದು ಆತ ಯಾರು ಎಂಬುದನ್ನು ತಿಳಿಸಿದಾಗ ಆಕೆಗೆ ಸಂಕುಚಿತ ಭಾವದಿಂದ ಬೇಸರ ವ್ಯಕ್ತ ಪಡಿಸುತ್ತ ರಜನಿಕಾಂತ್ ಅವರ ಬಳಿ ಕ್ಷಮೆ ಕೇಳುತ್ತಾರೆ. ಆಗ ರಜನಿಕಾಂತ್ ಇದರಲ್ಲಿ ನಿನ್ನ ತಪ್ಪು ಏನು ಇಲ್ಲಮ್ಮ ಇದರಿಂದಾಗಿ ದೇವರು ನಾನು ಎಲ್ಲಿಂದ ಬಂದೆ ಎಂಬುದನ್ನು ಮರೆಯಬಾರದು ಎಂದು ಈ ರೀತಿ ಸೂಚಿಸುತ್ತಾನೆ, ನಾನು ಬಂದ ದಾರಿ ನನಗೆ ನೆನಪಿದೆ ಎನ್ನುತ್ತಾರೆ.
Interesting Facts About Actor Rajinikanth Real Incident