ಕಪಾಳಕ್ಕೆ ಹೊಡೆಯೋದ್ರಲ್ಲಿ ನಂಬರ್ ಒನ್ ಆಗಿದ್ದ ಪುಟ್ಟಣ್ಣ ಕಣಗಾಲ್, ನಟ ಅಂಬರೀಶ್ ಶೂಟಿಂಗ್ ಗೆ ತಡವಾಗಿ ಬಂದಿದ್ದಕ್ಕೆ ಮಾಡಿದ್ದೇನು ಗೊತ್ತಾ?
ಸ್ನೇಹಿತರೆ, ಕನ್ನಡ ಸಿನಿಮಾ ರಂಗದ (Kannada Film Industry) ಮಾಂತ್ರಿಕ ನಿರ್ದೇಶಕನೆಂದು ಕರೆಯಲ್ಪಡುತ್ತಿದ್ದ ಪುಟ್ಟಣ್ಣ ಕಣಗಾಲ್ (Puttanna Kanagal) ತಮ್ಮ ಅದ್ಭುತ ನಿರ್ದೇಶನದ ಶೈಲಿಯಿಂದಾಗಿ ಕನ್ನಡ ಚಿತ್ರರಂಗಕ್ಕೆ (Kannada Movies) ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಡುಗೆಯನ್ನಾಗಿ ನೀಡಿದ್ದಾರೆ.
ಅಲ್ಲದೆ ಪುಟ್ಟಣ್ಣ ಕಣಗಾಲ್ ಅವರ ಅಭೂತ ಪೂರ್ವ ನಿರ್ದೇಶನದಿಂದ ಸ್ಟಾರ್ ಆಗಿ ಮೆರೆದಂತಹ ನಟ ನಟಿಯರ ಸಂಖ್ಯೆ ಅಪಾರ. ಡಾಕ್ಟರ್ ವಿಷ್ಣುವರ್ಧನ್, ಅಂಬರೀಶ್, ಆರತಿ, ಕಲ್ಪನಾ ಅವರಂತಹ ನಟ ನಟಿಯರನ್ನು ತಿದ್ದಿ ತೀಡಿ ಕನ್ನಡ ಸಿನಿಮಾ ರಂಗದಲ್ಲಿ ಬೆಳೆಯುವಂತೆ ಮೈಲುಗಲ್ಲನ್ನು ಹಾಕಿ ಕೊಟ್ಟವರು ಎಂದರೆ ತಪ್ಪಾಗಲಾರದು.
ಎಂತಹ ಕಥೆ ಇದ್ದರೂ ಅದಕ್ಕೆ ತಮ್ಮದೇ ಆದ ವಿಶೇಷ ನಿರ್ದೇಶನದ ಮೆರುಗನ್ನು ನೀಡಿ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗುವಂತೆ ಮಾಡುತ್ತಿದ್ದಂತಹ ಮಾಂತ್ರಿಕ ನಿರ್ದೇಶಕ. ಮೊದಲ ಬಾರಿಗೆ ವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳಿದ್ದು ನಾಗರಹಾವು ಸಿನಿಮಾದಲ್ಲಿ.
ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದ ಯಶಸ್ಸನ್ನು ಪಡೆದು ಆಂಗ್ರಿ ಯಂಗ್ ಮ್ಯಾನ್ ಆಗಿ ಕನ್ನಡ ಸಿನಿಮಾ ರಂಗದಲ್ಲಿ ಬೆಳೆಯಲು ಆರಂಭಿಸಿದರು.
ಆನಂತರ ವಿಷ್ಣುವರ್ಧನ್ ಅವರ ಪರ್ವವೇ ಪ್ರಾರಂಭವಾಯಿತು ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ನು ಇದೇ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದ ಅಂಬರೀಶ್ (Actor Ambareesh) ಅವರು ತಮ್ಮ 19ನೇ ವಯಸ್ಸಿಗೆ ಖಳನಟನಾಗಿ ಜಲೀಲನ ಪಾತ್ರದಲ್ಲಿ ಅಭಿನಯಿಸಲು ಪ್ರಾರಂಭಿಸಿದ್ದರು.
ಹೀಗೆ ಸಿನಿಮಾ ರಂಗ ಹಾಗೂ ಶೂಟಿಂಗ್ ಸಮಯದಲ್ಲಿ ಸಾಕಷ್ಟು ಶಿಸ್ತನ್ನು ಪಾಲಿಸುತ್ತಿದ್ದಂತಹ ಪುಟ್ಟಣ್ಣ ಕಣಗಾಲ್ ಅವರಿಗೆ ಯಾರಾದರೂ ತಾನು ಹೇಳಿಕೊಟ್ಟ ಅಭಿನಯವನ್ನು ಸರಿಯಾಗಿ ಮಾಡದೆ ಇದ್ದರೆ ಕಪಾಳಕ್ಕೆ ಹೊಡೆದು ಬಿಡುತ್ತಿದ್ದರಂತೆ.
ಅಷ್ಟು ಸ್ಟ್ರಿಕ್ಟ್ ಆದ ವ್ಯಕ್ತಿ ಪುಟ್ಟಣ್ಣ ಕಣಗಾಲ್, ಹೀಗಿರುವಾಗ ಅಂಬರೀಶ್ ಅವರು ಪ್ರತಿದಿನ ಶೂಟಿಂಗ್ ಗೆ ಒಂದು ಗಂಟೆ ಲೇಟಾಗಿ ಹೋಗುತ್ತಿದ್ದರಂತೆ. ಆಗ ಪುಟ್ಟಣ್ಣ ಕಣಗಾಲ್ ಅದೆಂತಹ ಕೆಲಸ ಮಾಡ್ತಿದ್ರು ಎಂಬುದನ್ನು ಅಂಬರೀಶ್ ಇದ್ದಾಗ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.
ಯಾರಿವಳು ಯಾರಿವಳು ಹಾಡಿನ ಶೂಟಿಂಗ್ ಸಮಯದಲ್ಲಿ ಮಾಲಾಶ್ರೀ ರವಿಚಂದ್ರನ್ ಮೇಲೆ ಗರಂ ಆಗಿದ್ದು ಯಾಕೆ? ಕಾರಣ ಏನು ಗೊತ್ತಾ?
ಹೌದು ಗೆಳೆಯರೇ ಕೆ ಎಫ್ ಐ ಯೂಟ್ಯೂಬ್ ಚಾನೆಲ್ ಜೊತೆಗೆ ಸಂದೇಶನದಲ್ಲಿ ಮಾತನಾಡಿದ ಅಂಬಿ ಸುಮಲತಾ ಅವರ ಜೊತೆಗೆ ಕುಳಿತುಕೊಂಡು ತಮ್ಮ ಸಿನಿ ಬದುಕಿನ ಆರಂಭ ದಿನಗಳ ಕುರಿತು ಮೆಲುಕು ಹಾಕಿದರು.
” ಆಗ ನಾನು 19 ವರ್ಷ ಇದ್ದಾಗಲೇ ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಸಿನಿಮಾಗೆ ಸೆಲೆಕ್ಟ್ ಆಗಿದ್ದೆ, ವಿಷ್ಣುವರ್ಧನ್ ರಾಮಾಚಾರಿಯಾಗಿದ್ದರು ನನಗೆ ಈ ದಿನ ಶೂಟಿಂಗ್ ಇದೆ ಎಂದು ಹೇಳಿ ಕಳಿಸಿದಾಗ ನನಗೆ ಅವತ್ತೇ ತಡವಾಗುತ್ತಿತ್ತು.
ಒಂದು ಇಡ್ಲಿ ತಿನ್ನಲು ಹೋದರೆ ಅದಕ್ಕೆ ಅರ್ಧ ಗಂಟೆ ಅದರ ಜೊತೆ ಕಾಫಿ ಸೇರಿದರೆ ಒಂದು ಗಂಟೆ ಆಗಿಬಿಡುತ್ತಿತ್ತು. ಹೀಗೆ ಒಂದು ಗಂಟೆ ಲೇಟಾಗಿ ಬಂದಾಗ ಪುಟ್ಟಣ್ಣ ನನ್ನನ್ನು ಗುರಾಯಿಸಿ ನೋಡಿದರು. ಏನಯ್ಯ ಟೈಮ್? ಎಲ್ಲರೂ ಬಂದ ಮೇಲೆ ನೀನು ಬರ್ತೀಯಾ? ಎಂದು ಕೇಳಿದಾಗ ಕ್ಷಮಿಸಿ ಸರ್ ಟ್ರಾಫಿಕ್ ಇತ್ತು ಎಂದಿದ್ದೆ.
ಆಗ ಪುಟ್ಟಣ್ಣ ಕಣಗಾಲ್ ಅಲ್ಲಿದ್ದಂತಹ ತಮಿಳು ಕಲಾವಿದರಿಗೆ ಇವನು ಸಿನಿಮಾ ಕಥೆ ಕೇಳಲು ಬರುತ್ತಾನೋ ಇಲ್ಲ ನನ್ನ ಕಥೆ ಮುಗಿಸಲು ಬರುತ್ತಾನೋ ಎಂದು ನನ್ನ ಕುರಿತು ಬೈದಿದ್ದರು. ಅನಂತರ ಮೇಕಪ್ ಹಾಕೊ ಹೋಗು ಎಂದು ಹೇಳಿ ಡೈಲಾಗ್ ನೀಡಿದರು, ನನಗೆ ಮಾತ್ರ ಅವರು ತಮ್ಮ ಶಿಸ್ತದ ಸ್ವಭಾವವನ್ನು ತೋರುತ್ತಿರಲಿಲ್ಲ.
ಬೇರೆ ಕಲಾವಿದರೊಂದಿಗೆ ಟೆಕ್ನಿಶನ್ಗಳೊಂದಿಗೆ ಶಿಸ್ತು ಪರಿಪಾಲನೆಯನ್ನು ಮಾಡುತ್ತಿದ್ದರು ಟೈಮ್ ಅಂದ್ರೆ ಟೈಮ್ ಅವರಿಗಿಂತ ಮುಂಚೆನೇ ಇರಬೇಕಿತ್ತು” ಎಂದು ಅಂಬಿ ಪುಟ್ಟಣ್ಣ ಹಾಗೂ ತಮ್ಮ ಬಾಂಧವ್ಯದ ಮೆಲುಕು ಹಾಕಿದರು.
Real Incident Of Kannada Actor Ambareesh and Puttanna Kanagal in Shooting Set