ಯಾರಿವಳು ಯಾರಿವಳು ಹಾಡಿನ ಶೂಟಿಂಗ್ ಸಮಯದಲ್ಲಿ ಮಾಲಾಶ್ರೀ ರವಿಚಂದ್ರನ್ ಮೇಲೆ ಗರಂ ಆಗಿದ್ದು ಯಾಕೆ? ಕಾರಣ ಏನು ಗೊತ್ತಾ?

ನಟಿಯರು ರವಿಚಂದ್ರನ್ ಅವರೊಂದಿಗೆ ಅಭಿನಯಿಸಲು ಬಹಳ ಇಷ್ಟಪಡುತ್ತಿದ್ದರು. ಹೀಗಿರುವಾಗ ಮಾಲಾಶ್ರೀ ಅವರು ಒಮ್ಮೆ ರವಿಚಂದ್ರನ್ ಅವರ ಮೇಲೆ ಗರಂ ಆಗಿದ್ರಂತೆ.

ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ (Kannada Film Industry) ರವಿಚಂದ್ರನ್ ಅವರು ನಟನಾಗಿ ನಿರ್ದೇಶಕನಾಗಿ ನಿರ್ಮಾಪಕನಾಗಿ ಗುರುತಿಸಿಕೊಂಡು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವಂತಹ ನಟ.

ಇಂದಿಗೂ ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸುತ್ತ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಹೊಂದಿರುವ ರವಿಚಂದ್ರನ್ (Actor Ravichandran)  ನಿರ್ದೇಶಕನ ಕ್ಯಾಪ್ ಹಾಕಿದರೆ ಸಾಕು ಒಂದು ಶಾರ್ಟ್ ಸರಿ ಬರದೆ ಹೋದರೆ ಅದನ್ನು 10 ಬಾರಿ ಅಲ್ಲ 100 ಬಾರಿಯಾದರೂ ಮರುಚಿತ್ರಿಸಿ ಸಿನಿಮಾಗೆ ನ್ಯಾಯ ಒದಗಿಸುತ್ತಿದ್ದಂತಹ ನಟ.

ರವಿಚಂದ್ರನ್ ಅವರೊಟ್ಟಿಗೆ ಯಾವುದೇ ಹೀರೋಯಿನ್ ಅಭಿನಯಿಸಿದರು ಸಿನಿಮಾದಲ್ಲಿ ಒಳ್ಳೆಯ ಸ್ಪೇಸ್ ಸಿಗುತ್ತಿತ್ತು ಹಾಗೂ ಆ ನಟಿಯ ಗ್ಲಾಮರನ್ನು ರವಿಚಂದ್ರನ್ ತೆರೆಯ ಮೇಲೆ ತೆರೆದಿಡುವಲ್ಲಿ ಯಶಸ್ವಿಯಾಗುತ್ತಿದ್ದರು.

ಯಾರಿವಳು ಯಾರಿವಳು ಹಾಡಿನ ಶೂಟಿಂಗ್ ಸಮಯದಲ್ಲಿ ಮಾಲಾಶ್ರೀ ರವಿಚಂದ್ರನ್ ಮೇಲೆ ಗರಂ ಆಗಿದ್ದು ಯಾಕೆ? ಕಾರಣ ಏನು ಗೊತ್ತಾ? - Kannada News

469 ದಿನ ತೆರೆಯ ಮೇಲೆ ರಾರಾಜಿಸಿದ ಕನ್ನಡದ ಕ್ಲಾಸಿಕ್ ಬಂಧನ ಸಿನಿಮಾ ಆಗಿನ ಕಾಲಕ್ಕೆ ಮಾಡಿದ್ದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ?

ಈ ಕಾರಣದಿಂದ ಆಗಿನ ಎಲ್ಲಾ ನಟಿಯರು ರವಿಚಂದ್ರನ್ ಅವರೊಂದಿಗೆ ಅಭಿನಯಿಸಲು ಬಹಳ ಇಷ್ಟಪಡುತ್ತಿದ್ದರು. ಹೀಗಿರುವಾಗ ಮಾಲಾಶ್ರೀ (Actress Malashree) ಅವರು ಒಮ್ಮೆ ರವಿಚಂದ್ರನ್ ಅವರ ಮೇಲೆ ಗರಂ ಆಗಿದ್ರಂತೆ.

ಯಾವ ಕಾರಣದಿಂದ ಮಾಲಾಶ್ರೀ ಬೇಸರ ವ್ಯಕ್ತಪಡಿಸಿದ್ದರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ರಾಮಾಚಾರಿ ಸಿನಿಮಾದ (Kannada Ramachari Movie) ಯಾರಿವಳು ಯಾರಿವಳು ಸೂಜಿಮಲ್ಲಿ ಕಣ್ಣವಳು ಎಂಬ ಹಾಡು ಇಂದಿಗೂ ಅದೆಷ್ಟೋ ಜನರ ಹಾರ್ಟ್ ಫೇವರೆಟ್.

Kannada Ramachari Movieಈ ಒಂದು ಹಾಡನ್ನು ಬರೆದವರು ಹಾಗೂ ನಿರ್ದೇಶಸಿದವರು ನಾದಬ್ರಹ್ಮ ಹಂಸಲೇಖ. ಹೌದು ಗೆಳೆಯರೇ ಹಂಸಲೇಖ ಹಾಗೂ ರವಿಚಂದ್ರನ್ ಅವರ ಕಾಂಬಿನೇಷನ್ ತೆರೆಯ ಮೇಲೆ ಮಾಡಿದ್ದಂತಹ ಮೋಡಿಯನ್ನು ಇಂದಿಗೂ ಸಿನಿಮಾ ಪ್ರೇಕ್ಷಕರು ಮರೆಯಲು ಸಾಧ್ಯವೇ ಇಲ್ಲ.

ಇನ್ಮುಂದೆ ವಿಷ್ಣು ಜೊತೆ ನಟಿಸುವುದಿಲ್ಲ, ದಿಗ್ಗಜರು ಸಿನಿಮಾನೇ ಕೊನೆ ಎಂದು ನಟ ಅಂಬರೀಶ್ ಹೇಳಿದ್ಯಾಕೆ? ಇವರಿಬ್ಬರ ಸ್ನೇಹದಲ್ಲಿ ಬಿರುಕು ಮೂಡಿತ್ತ?

ಹೀಗಿರುವಾಗ ಯಾರಿವಳು ಯಾರಿವಳು ಹಾಡಿನ ಶೂಟಿಂಗ್ ಸಂದರ್ಭದಲ್ಲಿ ರವಿಚಂದ್ರನ್ ಅವರು ಪದೇ ಪದೇ ಮಾಲಾಶ್ರೀ ಅವರನ್ನು ಮರು ಅಭಿನಯಿಸುವಂತೆ ಹೇಳುತ್ತಿದ್ದರಂತೆ.

ಇದರಿಂದ ಬೇಸರಗೊಂಡಂತಹ ಮಾಲಾಶ್ರೀ “ನಾನು ಇದಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದೇನೆ ಆದರೆ ರವಿಚಂದ್ರನ್ ಅವರು ಈ ಸಿನಿಮಾದಲ್ಲಿ ಯಾಕೆ ಎಷ್ಟೊಂದು ಬಾರಿ ಟೇಕ್ ಹೇಳುತ್ತಿದ್ದಾರೆ. ನಾನೇ ಚೆನ್ನಾಗಿ ನಟಿಸುತ್ತಿಲ್ವಾ? ಬೇಕು ಬೇಕಂತಲೇ ಈ ರೀತಿ ಮಾಡುತ್ತಿದ್ದಾರಾ?” ಎಂದು ಮಾಲಾಶ್ರೀ ರವಿಚಂದ್ರನ್ ಅವರ ಮೇಲೆ ಬೇಸರ ವ್ಯಕ್ತಪಡಿಸಿದ್ರಂತೆ.

ಆದರೆ ಸಿನಿಮಾ ಬಿಡುಗಡೆಯಾಗಿ ಚಿತ್ರದ ಯಾರಿವಳು ಯಾರಿವಳು ಹಾಡು ಬಹು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದ ನಂತರ ರವಿಚಂದ್ರನ್ ಅವರು ಯಾಕೆ ಅಷ್ಟೊಂದು ಬಾರಿ ಟೇಕ್ ಹೇಳಿದರು? ಎಂಬುದು ಮಾಲಾಶ್ರೀ ಅವರಿಗೆ ಅರ್ಥವಾಗುತ್ತದೆ.

21ನೇ ವಯಸ್ಸಿಗೆ ಅಜ್ಜಿಯಾಗಿದ್ದ ಅನುಪ್ರಭಾಕರ್ ಈಗ ಸಂತೂರ್ ಮಮ್ಮಿ! ಹಾಗಾದ್ರೆ ನಟಿ ಅನು ಪ್ರಭಾಕರ್ ನಿಜವಾದ ವಯಸ್ಸೆಷ್ಟು ಗೊತ್ತೇ!

ಹೌದು ಗೆಳೆಯರೇ ಸ್ಕ್ರೀನ್ನಲ್ಲಿ ಮಾಲಾಶ್ರಿಯವರನ್ನು ಬಹಳ ಸೊಗಸಾಗಿ ತೋರಿಸುವುದು ರವಿಚಂದ್ರನ್ ಅವರ ಇಚ್ಛೆಯಾಗಿತ್ತು. ಹೀಗಾಗಿ ಒಂದೊಂದು ಶಾರ್ಟನ್ನು ಕೂಡ ಬಹಳಷ್ಟು ಶ್ರದ್ಧೆ ವಹಿಸಿ ತಡವಾದರೂ ಅಚ್ಚುಕಟ್ಟಾಗಿ ಮಾಡುತ್ತಿದ್ದರು.

Unknown Facts About Ravichandran Starrer Kannada Ramachari Movie

Follow us On

FaceBook Google News

Unknown Facts About Ravichandran Starrer Kannada Ramachari Movie