ಸೀರೆಗೆ ಕೈ ಹಾಕಿದ ವ್ಯಕ್ತಿಗೆ ನಟಿ ಜಯಲಲಿತಾ ಎಂತಹ ಪಾಠ ಕಲಿಸಿದ್ರು ಗೊತ್ತಾ? ನಾರಿ ಮುನಿದರೆ ಮಾರಿ ಅನ್ನೋದು ತೋರಿಸಿ ಬಿಟ್ಟಿದ್ದರು

ನಟಿ ಜಯಲಲಿತಾ (Actress Jayalalithaa) ಅವರು ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡು ತಮ್ಮದೇ ಆದ ವಿಶೇಷ ಹೆಸರನ್ನು ಸೃಷ್ಟಿ ಮಾಡಿಕೊಂಡಂತಹ ಓರ್ವ ದಿಟ್ಟ ಹೆಣ್ಣುಮಗಳು.

ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಯಶಸ್ಸನ್ನು ಸಾಧಿಸಿದಂತಹ ಜಯಲಲಿತಾ (Jayalalithaa) ಅವರು ಅದೊಂದು ದಿನ ಅಸೆಂಬ್ಲಿಯಲ್ಲಿ ಕುಳಿತು ಚರ್ಚಿಸುತ್ತಿದ್ದಾಗ ಓರ್ವ ವ್ಯಕ್ತಿ ಆಕೆಯ ಸೀರೆಗೆ ಕೈ ಹಾಕಿದ್ದಕ್ಕೆ ಅದೆಂತಹ ಪಾಠ ಕಲಿಸಿದರು? ಹೆಣ್ಣನ್ನು ಕೆಣಕಿದರೆ ಏನಾಗುತ್ತದೆ ಎಂಬುದನ್ನು ಜಯಲಲಿತಾ ಅವತ್ತೇ ಇಡೀ ಜಗತ್ತಿಗೆ ತೋರಿಸಿದಂತಹ ನಾಯಕಿ.

ಹೌದು ಗೆಳೆಯರೇ ತಮಿಳುನಾಡಿನ ರಾಜಕೀಯ ಎಂಬ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ನೆನಪಿಗೆ ಬರುವಂತಹ ಏಕೈಕ ಹೆಸರು ಎಂದರೆ ಅದು ಜಯಲಲಿತಾ. ಅದರಲ್ಲೂ ಜಯಲಲಿತಾ ಹಾಗೂ ಕರುಣಾನಿಧಿಯವರ ರಾಜಕೀಯ ಕಾಲಘಟ್ಟ ತಮಿಳುನಾಡಿನಾದ್ಯಂತ (Tamil Nadu) ತೀವ್ರ ಸಂಚಲನ ಸೃಷ್ಟಿ ಮಾಡಿತ್ತು.

ಬಾಲ್ಯದಲ್ಲಿ ಮೇಘನಾ ರಾಜ್ ಅವರನ್ನು ಅಪ್ಪಿ ಮುದ್ದಾಡುತ್ತಿದ್ದ ವಿಷ್ಣು ದಾದಾ ಅದೆಂತಹ ದುಬಾರಿ ಉಡುಗೊರೆ ನೀಡಿದ್ದರು ಗೊತ್ತಾ?

ಇವರಿಬ್ಬರ ನಡುವೆ ಯಾವ ಬಗೆಯ ಸಾರ್ವಜನಿಕ ಪ್ರತೀಕಾರ ಇತ್ತು ಎಂದರೆ ಒಬ್ಬರ ಮುಖವನ್ನು ಮತ್ತೊಬ್ಬರು ನೋಡುವುದಕ್ಕೂ ಇಷ್ಟ ಪಡುತ್ತಿರಲಿಲ್ಲ.

ಅಷ್ಟರ ಮಟ್ಟಕ್ಕೆ ಹಗೆ ಸಾಧಿಸುತ್ತಿದ್ದರು. ಇದಕ್ಕೆ ಮುಖ್ಯ ಕಾರಣ ಕರುಣಾನಿಧಿ ಬಜೆಟ್ ಮಂಡಿಸುತ್ತಿದ್ದಾಗ ಅದರಲ್ಲಿ ಅಂಕಿ ಅಂಶಗಳ ಸಾಕಷ್ಟು ಬದಲಾವಣೆಗಳಿದ್ದ ಕಾರಣ ಜನ ಸಾಗರವೇ ತುಂಬಿದಂತಹ ಅಸೆಂಬ್ಲಿಯಲ್ಲಿ ಜಯಲಲಿತಾ ಕರುಣಾನಿಧಿಯವರನ್ನು ಕ್ರಿಮಿನಲ್ ಎಂದು ಕರೆದು ಬಿಡುತ್ತಾರೆ.

ಇದರೊಂದಿಗೆ ಜಯಲಲಿತಾ ಅವರ ಬೆಂಬಲಿಗರು ಕೂಡ ಕ್ರಿಮಿನಲ್ ಕ್ರಿಮಿನಲ್ ಎಂದು ಕರುಣಾನಿಧಿಯವರನ್ನು ಹೀಯಾಳಿಸಲು ಶುರು ಮಾಡಿದಾಗ ಡಿಎಂಕೆ ಬೆಂಬಲಿಗರು ಜಯಲಲಿತ ಮತ್ತು ಆಕೆಯ ಬೆಂಬಲಿಗರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ.

Actress Jayalalithaaಈ ಸಂದರ್ಭದಲ್ಲಿ ದೊರೆ ಮುರುಗನ್ ಎಂಬ ಕರುಣಾನಿಧಿಯ ಬೆಂಬಲಿಗ ಜಯಲಲಿತಾ ಅವರ ಬಳಿ ಬಂದು ತಲೆಗೆ ರಭಸವಾಗಿ ಹೊಡೆದು ಸೀರೆಯನ್ನು ಜಗ್ಗಿ ಬಿಡುತ್ತಾರೆ. ಅದರ ರಭಸಕ್ಕೆ ಸೆರಗಿಗೆ ಹಾಕಿದ ಪಿನ್ ಸಮೇತ ಬ್ಲೌಸ್ ಕೂಡ ಹರೆದು ಬರುತ್ತದೆ.

ಪಲ್ಲವಿ ಅನುಪಲ್ಲವಿ ಖ್ಯಾತಿಯ ಬಾಲ ನಟ ರೋಹಿತ್ ಶ್ರೀನಾಥ್ ಈಗ ಹೇಗಿದ್ದಾರೆ? ಏನ್ ಕೆಲಸ ಮಾಡ್ತಾ ಇದ್ದಾರೆ ಗೊತ್ತಾ?

ಯಾವ ಸ್ಥಳವನ್ನು ದೇವರ ಮನೆ ಎಂದು ಕರೆಯಲಾಗುತ್ತದೆ ಅಂತಹ ಸ್ಥಳದಲ್ಲಿ ಹೆಣ್ಣಿಗೆ ಈ ರೀತಿಯಾದಂತಹ ದೌರ್ಜನ್ಯ ಆದಂತಹ ವಿಚಾರ ಬಹು ದೊಡ್ಡ ಮಟ್ಟದ ಸಂಚಲನ ಸೃಷ್ಟಿ ಮಾಡುತ್ತದೆ.

ಜಯರವರ ಸ್ಥಿತಿ ಅಂದು ಬಹಳ ಸೂಚನಿಯವಾಗಿತ್ತು. ಆ ಘಟನೆಯಿಂದ ಕೆದಡಿದ ಮುಡಿ ಕದಡಿದ ಸೀರೆಯಲ್ಲಿ ಅಳುತ್ತಲೇ ಹೊರಬಂದ ಜಯಲಲಿತಾ ಅವರನ್ನು ಕವರ್ ಮಾಡಿದಂತಹ ಮಾಧ್ಯಮಗಳಿಗೆ (Media) ಒಮ್ಮೆಲೆ ಅವರನ್ನು ಆ ಸ್ಥಿತಿಯಲ್ಲಿ ನೋಡಿ ಅಚ್ಚರಿಗೊಳಗಾಯಿತು.

ಇತ್ತ ಜಯ ಅಪಮಾನವನ್ನು ತಾಳಲಾರದೆ ಒಂದೇ ಸಮ ಕಣ್ಣೀರಿಡುತ್ತಲೆ ಇದೇನಾ ರಾಜಕೀಯ? ಇದೇನಾ ಮಹಿಳೆಯೊಬ್ಬಳಿಗೆ ನೀವು ಕೊಡುತ್ತಿರುವಂತಹ ಗೌರವ? ಅಂದು ದ್ರೌಪದಿಯ ವಸ್ತ್ರಾಭರಣಕ್ಕೆ ಇಡೀ ಭಾರತವೇ ಸಾಕ್ಷಿಯಾಯಿತು.

Jayalalithaaಇಂದಿಗೂ ಅದಕ್ಕೂ ಮೀರಿದಂತಹ ದೌರ್ಜನ್ಯ ಹೆಣ್ಣು ಮಗಳ ಮೇಲೆ ನಡೆದಿದೆ. ಇವತ್ತು ನನ್ನನ್ನು ಈ ಪರಿಸ್ಥಿತಿಗೆ ತಂದಂತಹ ಡಿಎಂಕೆ ನಾಯಕರಿಗೆ ಹಾಗೂ ಕರುಣಾ ನಿಧಿಗೆ ಈ ಶಾಪ ತಟ್ಟದೆ ಬಿಡೋದಿಲ್ಲ.

ಪ್ರಾಣ ಇರೋತನಕ ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾ ಮಾಡೋಲ್ಲ ಎಂದು ಶಪಥ ಮಾಡಿದ್ದ ನಟ ಭಯಂಕರ ವಜ್ರಮುನಿ! ಕಾರಣ ಏನು ಗೊತ್ತಾ?

ಇಂದು ನಾನು ಓರ್ವ ಮಹಿಳೆ ಎಂದು ನನ್ನನ್ನು ಈ ರೀತಿ ಅವಮಾನ ಮಾಡಿರಬಹುದು ಆದರೆ ಮುಂದೊಂದು ದಿನ ಇದೇ ಅಸೆಂಬ್ಲಿಗೆ ಮುಖ್ಯಮಂತ್ರಿ ಆಗಿ ಕಾಲಿಡುತ್ತೇನೆ ಎಂದು ಜಯ ಶಪಥ ಮಾಡಿದ್ರು.

ಮುಂದೆ ಈ ರೀತಿ ಕೌರವ ದುಶ್ಯಾಸನರು ಎಷ್ಟು ಜನರು ಬೇಕಾದರೂ ಬರಲಿ ನಾನು ಮಾತ್ರ ಮುಖ್ಯಮಂತ್ರಿ ಆಗಿಯೇ ಇಲ್ಲಿಗೆ ಕಾಲಿಡೋದು ಎಂದು ಜಯ ಹೇಳುತ್ತಾರೆ..

ಹೇಳಿದಂತೆ ಜಯಲಲಿತಾ ಅವರು ಮುಂದಿನ ಎಲೆಕ್ಷನ್ನಲ್ಲಿ ಗೆದ್ದು ಜಯಭೇರಿ ಬಾರಿಸಿದರು. ಆಗಿನ ರಾಜಕೀಯ ಕಾಲಘಟ್ಟದಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಬಹು ಮತಗಳಿಂದ ಗೆದ್ದಿದಂತಹ ಕರುಣಾನಿಧಿಗೆ ಜಯಲಲಿತ ಅವರ ವಿರುದ್ಧವಾಗಿ ಕೇವಲ ಎರಡೇ ಎರಡು ಕ್ಷೇತ್ರವನ್ನು ಗೆಲ್ಲಲಾಯಿತು.

ಹೀಗೆ ಅತೀವವಾದ ಮುಖ ಭಂಗದ ಜೊತೆಗೆ ಎಲೆಕ್ಷನ್ ರಿಸಲ್ಟ್ ಕೂಡ ತಲೆಕೆಳಗಾದ ಕಾರಣದಿಂದ ಕರುಣಾನಿಧಿ ಮತ್ತೆಂದು ಜಯಲಲಿತಾ ಅವರ ಮುಂದೆ ಸುಳಿಯಲೇ ಇಲ್ಲ.

Interesting Facts About Actress Jayalalithaa Real Life Story

TRENDING ARTICLES1 / 5
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories