ಟೋಬಿ ಸಿನಿಮಾ ಚೂರು ಚೆನ್ನಾಗಿಲ್ಲ ಎಂದ ಹುಡುಗಿಗೆ ಅವಾಚ್ಯವಾಗಿ ನಿಂದಿಸಿದ ಯುವಕ! ರಾಜ್ ಬಿ ಶೆಟ್ಟಿ ಗರಂ
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಟೋಬಿ ಸಿನಿಮಾದ ಕುರಿತಾದ ವಿಡಿಯೋ ಒಂದು ಬಾರಿ ವೈರಲ್ ಆಗುತ್ತಿದ್ದು, ಯುವತಿ ಥಿಯೇಟರ್ ಮುಂದೆ ನಿಂತು ರಾಜ್ ಬಿ ಶೆಟ್ಟಿಯವರ ಟೋಬಿ ಮೂವಿ ಚೆನ್ನಾಗಿಲ್ಲ ಚೂರು ಚೆನ್ನಾಗಿಲ್ಲ ಎಂದು ಆಕೆಯ ಅಭಿಪ್ರಾಯ ಜೋರಾಗಿ ಹೇಳುತ್ತಾಳೆ.
Toby Viral Video : ಸ್ನೇಹಿತರೆ, ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಆಗಸ್ಟ್ 25ನೇ ತಾರೀಕು 2023 ರಂದು ರಾಜ್ಯದಾದ್ಯಂತ ಬಹುತೇಕ ಎಲ್ಲಾ ಥಿಯೇಟರ್ಗಳಲ್ಲಿಯೂ ಬಿಡುಗಡೆಯಾಗಿರುವ ರಾಜ್ ಬಿ ಶೆಟ್ಟಿ (Actor Raj B Shetty) ಹಾಗೂ ಚೈತ್ರ ಜೆ ಆಚಾರ್ ನಟನೆಯ ಟೋಬಿ ಸಿನಿಮಾ (Toby Cinema) ಹೌಸ್ ಫುಲ್ ಪ್ರದರ್ಶನ ಕಾಣುವ ಮೂಲಕ ದಿನೇ ದಿನೇ ಗಲ್ಲಾ ಪೆಟ್ಟಿಗೆಯಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿದೆ.
ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ (Social Media) ಸದ್ಯ ಟೋಬಿ ಸಿನಿಮಾದ ಕುರಿತಾದ ವಿಡಿಯೋ ಒಂದು ಬಾರಿ ವೈರಲ್ (Toby Video Viral) ಆಗುತ್ತಿದ್ದು, ಯುವತಿ ಥಿಯೇಟರ್ ಮುಂದೆ ನಿಂತು ರಾಜ್ ಬಿ ಶೆಟ್ಟಿಯವರ ಟೋಬಿ ಮೂವಿ ಚೆನ್ನಾಗಿಲ್ಲ ಚೂರು ಚೆನ್ನಾಗಿಲ್ಲ ಎಂದು ಆಕೆಯ ಅಭಿಪ್ರಾಯ ಜೋರಾಗಿ ಹೇಳುತ್ತಾಳೆ.
ಇದರಿಂದ ಕೋಪಗೊಂಡಂತಹ ರಾಜ್ ಬಿ ಶೆಟ್ಟಿ ಮತ್ತು ಟೋಬಿ ಸಿನಿಮಾದ ಅಭಿಮಾನಿ ಒಬ್ಬ ರೊಚ್ಚಿಗೆದ್ದು ‘ಏನ್ ಚೆನ್ನಾಗಿಲ್ಲ ಏನ್ ಚೆನ್ನಾಗಿಲ್ಲ ಹೇಳು? ಇಲ್ಲಿಂದ ಒಯ್ತಾ ಇರಬೇಕು. ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವುದನ್ನು ಮೊದಲು ಕಲಿರಿ ಎಲ್ಲೆಲ್ಲಿಂದಲೋ ಬಂದು ಇಲ್ಲಿ ನಿಮ್ಮ ಜಂಬ ತೋರಿಸಬೇಡಿ. ಇಲ್ಲಿಂದ ಈಗಲೇ ಹೋಯ್ತಾ ಇರ್ಬೇಕು ಎಂದು ಬೆರಳು ತೋರಿಸುತ್ತಾ ಆಕೆಯ ಮೇಲೆ ಜಗಳಕ್ಕೆ ಎರೆಗಿದ್ದಾನೆ.
ಆಗ ಯುವತಿ ನಾನು ಪೊಲೀಸರಿಗೆ ದೂರು ನೀಡುತ್ತೇನೆ, ನಾನು ನನ್ನ ಅಭಿಪ್ರಾಯವನ್ನು ಹೇಳಿದೆ ನಿಜವಾಗಲೂ ಸಿನಿಮಾ ಚೆನ್ನಾಗಿಲ್ಲ ಎಂದು ಪದೇ ಪದೇ ಅದನ್ನೇ ಹೇಳಿದಾಗ ಹುಡುಗ ಇನ್ನಷ್ಟು ಕೋಪಗೊಂಡು ಯಾರಿಗೆ ಫೋನ್ ಮಾಡ್ತೀಯೋ ಮಾಡು ಅವರನ್ನು ಇಲ್ಲಿಗೆ ಕರೆಸು ನಾನು ಪೊಲೀಸರನ್ನು ಕರೆಸ್ತೀನಿ, ನಾನಾ ನೀನಾ ನೋಡೋಣ. ಮೊದಲು ಕನ್ನಡ ಸಿನಿಮಾಗಳಿಗೆ ಗೌರವ ಕೊಡುವುದನ್ನು ಕಲಿತ್ಕೋ ಅಂತ ಬೈಯಲು ಶುರು ಮಾಡಿದ್ದಾನೆ.
ರಾಜ್ ಬಿ ಶೆಟ್ಟಿ ಟೋಬಿ ಸಿನಿಮಾ ಮೊದಲ ದಿನ ತನ್ನ ಗಲ್ಲಾಪೆಟ್ಟಿಗೆಗೆ ಬಾಚಿಕೊಂಡ ಹಣ ಎಷ್ಟು ಕೋಟಿ ಗೊತ್ತೇ?
6 ವರ್ಷಗಳ ಮುನಿಸು ಮರೆತು ಮತ್ತೆ ಒಂದಾಗಲಿದ್ದಾರಂತೆ ದರ್ಶನ್ ಹಾಗೂ ಸುದೀಪ್! ಅಭಿಮಾನಿಗಳಲ್ಲಿ ಸಂತಸ
ಸದ್ಯ ನಟ ರಾಜ್ ಬಿ ಶೆಟ್ಟಿ ಅವರ ಈ ನಡೆಗೆ ಎಲ್ಲೆಡೆಯಿಂದ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗುತ್ತಿದ್ದು ಜನರು ರಾಜ್ ಬಿ ಶೆಟ್ಟಿ ಅವರ ಈ ನಡೆಯನ್ನು ಗೌರವಿಸಿದ್ದಾರೆ. ಹೌದು ಸ್ನೇಹಿತರೆ ಹಣಕೊಟ್ಟು ಸಿನಿಮಾ ನೋಡುವಂತಹ ಪ್ರೇಕ್ಷಕರು ಅವರಿಗೆ ಇಷ್ಟ ಬಂದ ಹಾಗೆ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದಾದಂತಹ ಎಲ್ಲಾ ಹಕ್ಕು ಅವರಿಗಿರುತ್ತದೆ.
ಸಿನಿಮಾವನ್ನು ಒಪ್ಪಿಕೊಳ್ಳುವ ಅಥವಾ ಒಪ್ಪಿಕೊಳ್ಳದೆ ಇರುವ ಸ್ವಾತಂತ್ರ್ಯವು ಸಿನಿ ಪ್ರೇಕ್ಷಕರಿಗೆ ಖಂಡಿತ ಇರುತ್ತದೆ. ಅಲ್ಲದೆ ಸಿನಿಮಾ ನೋಡಿದ ನಂತರ ಅವರಿಗಾದಂತಹ ಅನುಭವವನ್ನು ಹೊರ ಹಾಕುವುದು ಅವರವರಿಗೆ ಸಂಬಂಧಪಟ್ಟ ವಿಚಾರವಾಗಿರುತ್ತದೆ ಆದರೆ ಯಾರೂ ಕೂಡ ಸಿನಿಮಾದ ಕುರಿತು ಸಕಾರಾತ್ಮಕ ಅಭಿಪ್ರಾಯ ಹೇಳುವಂತೆ ಕಿರುಕುಳ ನೀಡಬಾರದೆಂದು ರಾಜ್ ಬಿ ಶೆಟ್ಟಿ ಅವರು ತಮ್ಮ ಮಾತುಗಳಲ್ಲಿ ಹೇಳಿದ್ದಾರೆ.
Kannada Actor Raj B Shetty Reaction About Abused Women by Youth Near Theater
Follow us On
Google News |