ಪತ್ನಿ ಸ್ಪಂದನಾ ನೆನೆದು ರಾಘು ಭಾವುಕ! ಪತ್ನಿ ಅಗಲಿಕೆ ನಂತರ ಮೊದಲ ಬಾರಿ ವೇದಿಕೆಯ ಮೇಲೆ ಕಾಣಿಸಿಕೊಂಡ ನಟ ವಿಜಯ್ ರಾಘವೇಂದ್ರ

ನಮ್ಮ ನಿಮ್ಮೆಲ್ಲರಿಗೂ ಸ್ಪಂದನಾ ಅವರ ಅಗಲಿಕೆ ಈ ಪರಿ ನೋವನ್ನು ತಂದಿರುವಾಗ ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಂತಹ ವಿಜಯ ರಾಘವೇಂದ್ರ ಅವರ ಮನಸ್ಥಿತಿ ಹೇಗಿರಬಹುದು ಎಂಬುದನ್ನು ನೀವೇ ಲೆಕ್ಕಾಚಾರ ಹಾಕಿ.

ಸ್ನೇಹಿತರೊಂದಿಗೆ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದ ಸ್ಪಂದನಾ ವಿಜಯ್ ರಾಘವೇಂದ್ರ (Spandana Vijay Raghavendra) ಅವರು ಲಘು ಹೃದಯಘಾತ ಸಮಸ್ಯೆಗೆ ತುತ್ತಾಗಿ ಏಳನೇ ತಾರೀಕು ಆಗಸ್ಟ್ 2023 ರಂದು ತಮ್ಮ ಪ್ರೀತಿಯ ಪತಿ ಮಕ್ಕಳು ಹಾಗೂ ಇಡೀ ಪ್ರಪಂಚವನ್ನು ಬಿಟ್ಟು ಇಹಲೋಕ ತ್ಯಜಿಸಿದರು.

ಅತಿ ಚಿಕ್ಕ ವಯಸ್ಸಿನಲ್ಲಿ ಎಲ್ಲವನ್ನು ಹಾಗೂ ಎಲ್ಲರನ್ನೂ ಬಿಟ್ಟು ಭಾರತ ಲೋಕಕ್ಕೆ ತೆರಳಿದ ಹೆಣ್ಣು ಮಗಳನ್ನು ನೆನೆದು ಕರುನಾಡು ಕಂಬನಿ ಮಿಡಿಯಿತು.

Kannada Actor Vijay Raghavendra is Emotional Remembering His Wife Spandana

ಗೊತ್ತು ಗುರಿ ಇಲ್ಲದಂತಹ ನಮ್ಮ ನಿಮ್ಮೆಲ್ಲರಿಗೂ ಸ್ಪಂದನಾ (Spandana) ಅವರ ಅಗಲಿಕೆ ಈ ಪರಿ ನೋವನ್ನು ತಂದಿರುವಾಗ ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಂತಹ ವಿಜಯ ರಾಘವೇಂದ್ರ ಅವರ ಮನಸ್ಥಿತಿ ಹೇಗಿರಬಹುದು ಎಂಬುದನ್ನು ನೀವೇ ಲೆಕ್ಕಾಚಾರ ಹಾಕಿ.

ಹೌದು ಗೆಳೆಯರೇ ವಿಜಯ್ ರಾಘವೇಂದ್ರ (Vijay Raghavendra) ಯಾವುದೇ ವೇದಿಕೆ ಮೇಲೆ ಮಾತನಾಡಿದರು ಅಲ್ಲಿ ನನ್ನ ಶಕ್ತಿ ಸ್ಪೂರ್ತಿ ನನ್ನ ಮಡದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

6 ವರ್ಷಗಳ ಮುನಿಸು ಮರೆತು ಮತ್ತೆ ಒಂದಾಗಲಿದ್ದಾರಂತೆ ದರ್ಶನ್ ಹಾಗೂ ಸುದೀಪ್! ಅಭಿಮಾನಿಗಳಲ್ಲಿ ಸಂತಸ

ಅದರಿಂದು ಸ್ಪಂದನಾ ಅವರಿಲ್ಲದ ಮೊದಲ ವೇದಿಕೆಯನ್ನು ಏರಿದ್ದು ನಾನು ಮತ್ತೆ ಕಣ್ಣೀರು ಹಾಕಬಾರದೆಂದು ನಿರ್ಧಾರ ಮಾಡಿಕೊಂಡು ಬಂದಿದ್ದೇನೆ ಎನ್ನುವ ಭಾವಕನುಡಿಗಳನ್ನಾಡಿದ್ದಾರೆ.

ಹೌದು ಗೆಳೆಯರೇ ನಿನ್ನೆ ಅಷ್ಟೇ ನಟ ವಿಜಯ್ ರಾಘವೇಂದ್ರ ಅಭಿನಯದ ಕದ್ದ ಚಿತ್ರ ಸಿನಿಮಾದ ಟೀಸರ್ (Kaddha Chitra Cinema Teaser) ಬಿಡುಗಡೆಯಾಗಿದ್ದು, ಈ ಕಾರ್ಯಕ್ರಮಕ್ಕೆ ಕೊಂಚ ಮಂಕಾಗಿಯೇ ಹೋಗಿದ್ದಾರೆ‌.

Kannada Actor Vijay Raghavendra with wife Spandana
Image Source: News18 Kannada

ಖಾಸಗಿ ಹೋಟೆಲ್ ಒಂದರಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೆ ಆಗಸ್ಟ್ 26ನೇ ತಾರೀಖಿನಂದು ಸಿನಿಮಾ (Kannada Kaddha Chitra) ಬಿಡುಗಡೆಯಾಗಬೇಕಿತ್ತು. ಆದರೆ ಸ್ಪಂದನಾ ಅವರ ಅಗಲಿಕೆಯ ನೋವಿನಿಂದ ಚಿತ್ರವನ್ನು ಮುಂದೂಡಲಾಗಿದ್ದು ವಿಜಯ್ ರಾಘವೇಂದ್ರ ಮತ್ತು ಸ್ಪಂದನ ಅವರ ವಿವಾಹ ವಾರ್ಷಿಕೋತ್ಸವದ ನೆನಪಿಗಾಗಿ ಆಗಸ್ಟ್ 26 ನೇ ತಾರೀಖಿನಂದೆ ಕದ್ದ ಚಿತ್ರ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ.

ರಾಜ್ ಬಿ ಶೆಟ್ಟಿ ಟೋಬಿ ಸಿನಿಮಾ ಮೊದಲ ದಿನ ತನ್ನ ಗಲ್ಲಾಪೆಟ್ಟಿಗೆಗೆ ಬಾಚಿಕೊಂಡ ಹಣ ಎಷ್ಟು ಕೋಟಿ ಗೊತ್ತೇ?

ಆ ಸಂದರ್ಭದಲ್ಲಿ ವೇದಿಕೆಯ ಮೇಲೆ ಮಾತನಾಡಿದಂತಹ ವಿಜಯ ರಾಘವೇಂದ್ರ ” ಸಿನಿಮಾ ರಿಲೀಸ್ ಆದ ಬಳಿಕ ಮಾತನಾಡುವುದಕ್ಕೆ ಸಾಕಷ್ಟು ವಿಷಯಗಳು ಇರುತ್ತವೆ. ಆಗ ಮಾತಾಡೋಕೆ ಕಾಯ್ತಾ ಇರ್ತೀನಿ ನೀವೆಲ್ಲ ನನ್ನ ಜೊತೆ ನಿಂತಿದ್ರಿ, ತಾಯಿ ಸ್ಥಾನದಲ್ಲಿ ನಿಂತಿದ್ರಿ, ಯಾರು ಹೊರಗಿನವರ ರೀತಿ ಇರಲಿಲ್ಲ. ಮನೆಯವರ ರೀತಿ ಇದ್ರಿ ಕಣ್ಣೀರು ಹಾಕಬಾರದು ಅಂತ ನಿರ್ಧಾರ ಮಾಡಿಕೊಂಡು ಬಂದಿದ್ದೇನೆ, ಅದು ಅವಳಿಗೂ ಇಷ್ಟ ಆಗ್ತಿರಲಿಲ್ಲ.

ನಿಮ್ಮ ಕುಟುಂಬದಲ್ಲಿ ನನ್ನನ್ನು ಒಬ್ಬನಾಗಿಸಿಕೊಂಡಿದ್ದೀರಿ ಪ್ರಮೋಷನ್ಗೆ ನಿಲ್ಲೋದು ನನ್ನ ಕರ್ತವ್ಯ, ನೀವೆಲ್ಲ ನನ್ನ ಜೊತೆಗಿರ್ತಿರಾ ಅಂತ ಅನ್ಕೊಂಡಿದ್ದೀನಿ. ನನ್ನ ಹಾಗೂ ನನ್ನ ಮಗನ ಕೈ ಹಿಡಿದು ನಡೆಸ್ತೀರಾ ಅನ್ಕೊಂಡಿದ್ದೀನಿ. ಈ ಸಿನಿಮಾದ ಗೀತೆಗಳು ತುಂಬಾ ಚೆನ್ನಾಗಿದೆ ಮ್ಯೂಸಿಕ್ ಡೈರೆಕ್ಟರ್ ಒಳ್ಳೆಯ ಸಾಂಗ್ ಕೊಟ್ಟಿದಾರೆ ಎನ್ನುತ್ತಲೆ ವಿಜಯ್ ರಾಘವೇಂದ್ರ ಕಣ್ಣಂಚಿನಲ್ಲಿ ಕಣ್ಣೀರು ತುಂಬಿಕೊಂಡು ಮಾತು ಮುಗಿಸಿದರು.

Kannada Actor Vijay Raghavendra is Emotional Remembering His Wife Spandana