6 ವರ್ಷಗಳ ಮುನಿಸು ಮರೆತು ಮತ್ತೆ ಒಂದಾಗಲಿದ್ದಾರಂತೆ ದರ್ಶನ್ ಹಾಗೂ ಸುದೀಪ್! ಅಭಿಮಾನಿಗಳಲ್ಲಿ ಸಂತಸ
ಸುಮಲತಾ ಅಂಬರೀಶ್ ಅವರ ಸಾರಥ್ಯದಲ್ಲಿ ಕಿಚ್ಚ ಸುದೀಪ್ ಮತ್ತು ದರ್ಶನ್ ಅವರ ಸಂಧಾನ ನಡಿಗೆಯಲ್ಲಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಸ್ನೇಹಿತರೆ, ಅಭಿಮಾನಿಗಳ ಪಾಲಿನ ಡಿ ಬಾಸ್ ದರ್ಶನ್ (Kannada Actor Darshan) ಅವರು ಕಳೆದ ಕೆಲವು ದಿನಗಳಿಂದ ತಮ್ಮಿಂದ ನೋವಾಗಿರುವವರ ಬಳಿ ಕ್ಷಮೆ ಕೇಳಿ, ನಡುವೆ ಸೃಷ್ಟಿಯಾಗಿದ್ದಂತಹ ಗೋಡೆಯನ್ನು ಒಡೆದು ಹಾಕುವ ಪ್ರಯತ್ನದಲ್ಲಿ ಇದ್ದಾರೆ.
ಹೌದು ಗೆಳೆಯರೇ ಕರಿಯ ಸಿನಿಮಾದ ನಂತರ ಜೋಗಿ ಪ್ರೇಮ್ ದರ್ಶನ್ ಅವರ ನಡುವೆ ಮುನಿಸು ಮೂಡಿದೆ ಮತ್ತೆಂದು ಒಟ್ಟಿಗೆ ಕೆಲಸ ಮಾಡುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು.
ಅದರಂತೆ ಬರೋಬ್ಬರಿ 20 ವರ್ಷಗಳ ಕಾಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಜೋಗಿ ಪ್ರೇಮ್ ಅವರ ಕಾಂಬಿನೇಷನ್ ನಲ್ಲಿ ಯಾವ ಸಿನಿಮಾಗಳು ಬಂದಿರಲಿಲ್ಲ. ಆದರೆ ಈಗ ಮುನಿಸು ಮರೆತು ಒಂದಾಗಿರುವ ಪ್ರೇಮ್ ಮತ್ತು ದರ್ಶನ್ ಕೆವಿಎನ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಲಿದ್ದಾರೆ ಎಂಬ ಮಾಹಿತಿ ಸದ್ಯ ಸ್ಯಾಂಡಲ್ವುಡ್ನಲ್ಲಿ ಜೋರಾಗಿ ಚರ್ಚೆಗೊಳಗಾಗುತ್ತದೆ.
ರಾಜ್ ಬಿ ಶೆಟ್ಟಿ ಟೋಬಿ ಸಿನಿಮಾ ಮೊದಲ ದಿನ ತನ್ನ ಗಲ್ಲಾಪೆಟ್ಟಿಗೆಗೆ ಬಾಚಿಕೊಂಡ ಹಣ ಎಷ್ಟು ಕೋಟಿ ಗೊತ್ತೇ?
ಇನ್ನು ಎರಡನೆಯದಾಗಿ ದರ್ಶನ್ ಮತ್ತು ಮಾಧ್ಯಮದವರ ನಡುವೆ ಸೃಷ್ಟಿಯಾಗಿದ್ದಂತಹ ವಿವಾದಕ್ಕೆ ಕ್ಷಮಾಪಣ ಪತ್ರವನ್ನು ಹಂಚಿಕೊಳ್ಳುವ ಮೂಲಕ ಸ್ವತಃ ದರ್ಶನ್ ಅವರೆ ತಮ್ಮಿಂದ ಆದಂತಹ ತಪ್ಪಿಗೆ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದರು.
ಅಲ್ಲದೆ ಈ ಹಿಂದೆ ರಾಕ್ ಲೈನ್ ವೆಂಕಟೇಶ್ ಮತ್ತು ಕನ್ನಡದ ಹಿರಿಯ ಸಂಪಾದಕರು ಮತ್ತು ದರ್ಶನ್ ಒಟ್ಟಾಗಿ ಸೇರಿ ಸಭೆಯನ್ನು ಏರ್ಪಡಿಸಿ ಕುಳಿತು ಆದ ವಿಚಾರಗಳನ್ನೆಲ್ಲ ವಿವರಿಸಿ ದರ್ಶನ್ ಮಾಧ್ಯಮದವರಿಗೆ ಕ್ಷಮೆ ಕೇಳಿದರಂತೆ.
ಇದೀಗ ಎಲ್ಲವೂ ಅಂದುಕೊಂಡಂತೆ ಆದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರ ಸಾರಥ್ಯದಲ್ಲಿ ಕಿಚ್ಚ ಸುದೀಪ್ (Kiccha Sudeep) ಮತ್ತು ದರ್ಶನ್ (Actor Darshan) ಅವರ ಸಂಧಾನ ನಡಿಗೆಯಲ್ಲಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಸಿನಿಮಾರಂಗದ ಆರಂಭಿಕ ದಿನಗಳಿಂದಲೂ ಕುಚುಕು ಗೆಳೆಯರಾಗಿದ್ದಂತಹ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರು ಕೆಲ ಕಾರಣಾಂತರಗಳಿಂದ ಮಾತು ಬಿಟ್ಟಿದ್ದರು. ಇವತ್ತಲ್ಲ ನಾಳೆ ದರ್ಶನ್ ಮತ್ತು ಕಿಚ್ಚ ಒಂದಾಗುತ್ತಾರೆ, ಒಟ್ಟಿಗೆ ವೇದಿಕೆಯ ಮೇಲೆ ಮತ್ತೆ ಡ್ಯಾನ್ಸ್ ಮಾಡಲಿದ್ದಾರೆ ಎಂಬೆಲ್ಲ ನಿರೀಕ್ಷೆಯನ್ನು ಅಭಿಮಾನಿಗಳು ಇಂದಿಗೂ ಇಟ್ಟುಕೊಂಡಿದ್ದಾರೆ.
ಹೌದು ಗೆಳೆಯರೇ ಈ ಕುರಿತು ಮಾತುಕತೆಯನ್ನು ಖಾಸಗಿ ಹೋಟೆಲ್ ಒಂದರಲ್ಲಿ ಆಯೋಜಿಸಲಾಗುತ್ತದೆ. ಅವರಿಬ್ಬರ ನಡುವೆ ಸೃಷ್ಟಿ ಆಗಿರುವಂತಹ ತಪ್ಪು ಉಪ್ಪುಗಳನ್ನೆಲ್ಲ ಕೇಳಿ ದರ್ಶನ್ ಮತ್ತು ಸುದೀಪ್ ಇಬ್ಬರಲ್ಲಿ ಯಾರದ್ದು ತಪ್ಪಿದೆ ಎಂಬುದರ ಲೆಕ್ಕಾಚಾರ ಹಾಕಿ ಕ್ಷಮೆ ಯಾಚಿಸುವಂತೆ ಹೇಳುವುದರ ಮೂಲಕ ಒಂದು ಮಾಡುವ ನಿಟ್ಟಿನಲ್ಲಿದ್ದಾರಂತೆ.
ಕನ್ನಡಿಗರ ವಿಷಯದಲ್ಲಿ ರಶ್ಮಿಕಾ ಮಂದಣ್ಣ ಮತ್ತೊಂದು ಎಡವಟ್ಟು! ಬೇಕಂತಲೇ ಕನ್ನಡ ಕಡೆಗಣಿಸುವ ನ್ಯಾಷನಲ್ ಕ್ರಶ್
ಹೌದು ಗೆಳೆಯರೇ ಇದೆ ಆಗಸ್ಟ್ 27ನೇ ತಾರೀಕು 2023 ರಂದು ಸುಮಲತಾ ಅವರ ಹುಟ್ಟುಹಬ್ಬವಿದ್ದು ಇದರ ಬರ್ತಡೆ ಸೆಲೆಬ್ರೇಶನ್ ಪಾರ್ಟಿಗೆ ಸುಮಲತಾ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆಹ್ವಾನಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಇಬ್ಬರು ಭಾಗಿಯಾಗುವ ಸಾಧ್ಯತೆಯಿದ್ದು, ಆರು ವರ್ಷಗಳ ನಂತರ ಕುಚಿಕು ಗೆಳೆಯರು ಒಂದಾಗಲಿರುವ ಸುದ್ದಿ ಕೆಲ ನಿಮಿಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದೆ.
Kiccha Sudeep and Darshan Friendship Will Be Reunite Soon
Follow us On
Google News |