ಒಂದಲ್ಲ ಎರಡಲ್ಲ ರಾಜ್ ಬಿ ಶೆಟ್ಟಿ ಬಾಳಲ್ಲಿ ಬಂದ ಮೂವರು ಹುಡುಗಿಯರು ಸಹ ರಿಜೆಕ್ಟ್ ಮಾಡಿದ್ಯಾಕೆ ಗೊತ್ತಾ?

ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿರುವ ರಾಜ್ ಬಿ ಶೆಟ್ಟಿ, ಸದ್ಯ ತಮ್ಮ ಟೋಬಿ ಸಿನಿಮಾದಿಂದಾಗಿ ಬಹು ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದಾರೆ.

ಸ್ನೇಹಿತರೆ, ನಮ್ಮೆಲ್ಲರಿಗೂ ರಾಜ್ ಬಿ ಶೆಟ್ಟಿ (Actor Raj B Shetty) ಎಂಬ ಹೆಸರು ಕೇಳುತ್ತಿದ್ದ ಹಾಗೆ ದೇಸಿ ಸೊಗಡಿನ ಅಭಿನಯ, ಎಂತಹ ಪಾತ್ರ ನೀಡಿದರು ತಮ್ಮದೇ ಶೈಲಿಯಲ್ಲಿ ನಟಿಸುವ ಮೂಲಕ ಸಿನಿ ಪ್ರೇಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ ನೀಡುವಂತಹ ನಟನ ಪರಿಚಯವಾಗಿ ಬಿಡುತ್ತದೆ.

ಒಂದು ಮೊಟ್ಟೆಯ ಕಥೆ ಎಂಬ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಂತಹ ರಾಜ್ ಬಿ ಶೆಟ್ಟಿ ಇಂದು ಕನ್ನಡ ಸಿನಿಮಾ ರಂಗದ ಸ್ಟಾರ್ ನಟರುಗಳ ಪಟ್ಟಿಯಲ್ಲಿದ್ದಾರೆ.

ಅದರಲ್ಲೂ ಗರುಡಗಮನ ವೃಷಭ ವಾಹನ ಸಿನಿಮಾದ ಸೋಜುಗಾದ ಸೂಜುಮಲ್ಲಿಗೆ ಹಾಡಿನಲ್ಲಿ ನಟ ರಾಜ್ ಬಿ ಶೆಟ್ಟಿ ಮಳೆಯಲ್ಲಿ ತೋರಿದ ರೌದ್ರಾವತಾರವನ್ನು ಎಂದಾದರೂ ಸಿನಿ ಪ್ರೇಕ್ಷಕರು ಮರೆಯಲು ಸಾಧ್ಯವೇ?

ಒಂದಲ್ಲ ಎರಡಲ್ಲ ರಾಜ್ ಬಿ ಶೆಟ್ಟಿ ಬಾಳಲ್ಲಿ ಬಂದ ಮೂವರು ಹುಡುಗಿಯರು ಸಹ ರಿಜೆಕ್ಟ್ ಮಾಡಿದ್ಯಾಕೆ ಗೊತ್ತಾ? - Kannada News

ನಿನ್ನನ್ನು ಯಾರು ಮದುವೆಯಾಗುತ್ತಾರೆ, ಆನೆ ತರ ಇದೆಯಾ ಎಂದವರಿಗೆ ಕಡಕ್ ತಿರುಗೇಟು ಕೊಟ್ಟ ಬ್ರಹ್ಮಗಂಟು ಗುಂಡಮ್ಮ!

ಹೀಗೆ ತಮ್ಮ ಅಮೋಘ ಅಭಿನಯದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿರುವ ರಾಜ್ ಬಿ ಶೆಟ್ಟಿ, ಸದ್ಯ ತಮ್ಮ ಟೋಬಿ ಸಿನಿಮಾದಿಂದಾಗಿ (Kannada Toby Cinema) ಬಹು ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದಾರೆ.

ಹೌದು ಗೆಳೆಯರೇ ಒಂದು ಒಳ್ಳೆ ವಿಭಿನ್ನ ಕಥಾ ಹಂದರ ಹೊಂದಿರುವ ಚಿತ್ರವನ್ನು ಕನ್ನಡಕ್ಕೆ ನೀಡುವ ಪ್ರಯತ್ನದಲ್ಲಿರುವ ಟೋಬಿ ಸಿನಿಮಾ ತಂಡ ಅದಾಗಲೇ ಪ್ರಚಾರದ ಕೆಲಸವನ್ನು ಭರ್ಜರಿಯಾಗಿ ನಡೆಸುತ್ತಿದ್ದು, ನಿನ್ನೆಯಷ್ಟೇ ರಚಿತರಾಮ್ ಹಾಗೂ ರವಿಚಂದ್ರನ್ ಅವರ ನೇತೃತ್ವದಲ್ಲಿ ಮೂಡಿ ಬರುವ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮಕ್ಕೆ ಬಂದು ತಮ್ಮ ಜೀವನದಲ್ಲಿ ಬಂದಂತಹ ಮೂವರು ಹೆಣ್ಣು ಮಕ್ಕಳು ಹಾಗೂ ಅವರಿಂದ ತಾವು ಕಲಿತಂತಹ ಪಾಠದ ಕುರಿತು ಮಾತನಾಡಿದ್ದಾರೆ.

Actor Raj B shetty
Image Source: Times Of India

ಹೌದು ಗೆಳೆಯರೇ ಸಾಮಾನ್ಯವಾಗಿ ಕರ್ನಾಟಕದ (Karnataka) ಬಹುತೇಕರು ನಟ ರಾಜ್ ಬಿ ಶೆಟ್ಟಿಯವರಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದೆ ಎಂಬ ತಪ್ಪು ಕಲ್ಪನೆಯಲ್ಲಿದ್ದಾರೆ. ಆದರೆ ನಮ್ಮೆಲ್ಲರ ಪ್ರೀತಿಯ ರಾಜ್ ಬಿ ಶೆಟ್ಟಿ ಅವರು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದರೆ ತಪ್ಪಾಗಲಾರದು.

ಈ ಕಾರಣದಿಂದ ಟೋಬಿ ಸಿನಿಮಾದ ಪ್ರಮೋಷನ್ ನಿಮಿತ್ತ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮಕ್ಕೆ ಬಂದ ಈ ನಟ ಕೂಡ ಒಂದು ಕಾಲದಲ್ಲಿ ಪ್ರೀತಿಯಲ್ಲಿ ಬಿದ್ದಿದರಂತೆ.

ನಾಗರಹಾವು ಸಿನಿಮಾ ಬಳಿಕ ಪುಟ್ಟಣ್ಣ ಕಣಗಾಲ್ ಮತ್ತೆಂದೂ ವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳದೇ ಇರಲು ಕಾರಣವೇನು ಗೊತ್ತಾ?

ಒಂದಲ್ಲ ಎರಡಲ್ಲ ಬರೋಬ್ಬರಿ ಆರು ವರ್ಷದ ಪ್ರೀತಿಯನ್ನು ರಾಜ್ ಬಿ ಶೆಟ್ಟಿಯವರು ಕಳೆದುಕೊಂಡಿದ್ದಾರೆ. ಆಕೆ ಹೋದ ನಂತರ ತಮ್ಮ ಜೀವನದಲ್ಲಿ ಆದಂತಹ ಬದಲಾವಣೆಗಳೇ ನನ್ನನ್ನು ಈ ಹಂತಕ್ಕೆ ತಂದಿದೆ ಎಂದು ಪ್ರೇಮ ಕಹಾನಿಯ ಮೆಲುಕು ಹಾಕಿದರು. ಹೌದು ಗೆಳೆಯರೇ ಡಿಗ್ರಿಯಲ್ಲಿ ಒಬ್ಬಳು ಹುಡುಗಿ ಇದ್ದಳು ನನ್ನ ಮತ್ತು ಅವಳ ನಡುವೆ ಆರು ವರ್ಷದ ರಿಲೇಶನ್ ಇತ್ತು.

ಆರು ವರ್ಷದ ಬಳಿಕ ಮೇಲೆ ನಮ್ಮಿಬ್ಬರ ಬ್ರೇಕಪ್ ಆಯ್ತು, ನಾನು ಕಾರಣ ಏನೆಂದು ಕೇಳಲಿಲ್ಲ ಆದರೆ ಆಕೆ ನನ್ನಿಂದ ದೂರವಾಗಿದ್ದರಿಂದ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು. ಇಲ್ಲದೆ ಹೋಗಿದ್ದರೆ ನಾನು ಇನ್ನಷ್ಟು ಕೆಟ್ಟ ಮನುಷ್ಯನಾಗುತ್ತಿದ್ದನೋ ಏನೋ? ಅವಳು ಹೋದ ಮೇಲೆ ನನಗೆ ತಿಳಿದ ಒಂದೇ ವಿಚಾರ ನನಗೆ ಸರಿಯಾಗಿ ಪ್ರೀತಿಸಲು ಬರುವುದಿಲ್ಲ. ನೀನು ಯೋಗ್ಯನಲ್ಲ ಎಂಬುದನ್ನು ನನಗೆ ಚೆನ್ನಾಗಿ ಅರ್ಥ ಮಾಡಿಸಿ ಬಿಟ್ಟು ಹೋದಳು.

ಆಕೆಯನ್ನು ಈ ವಿಚಾರದಿಂದ ನಾನೆಂದು ದ್ವೇಷಿಸುವುದಿಲ್ಲ ಬದಲಿಗೆ ಗೌರವಿಸುತ್ತೇನೆ ಎಂದು ತಮ್ಮ ಹಳೆ ಪ್ರೇಮ್ ಕಹಾನಿ ನೆನೆದು, ಮುಂದೆ ಲವ್ ಮ್ಯಾರೇಜೇ ಆಗುವುದು ಎಂದು ರಾಜ್ ಬಿ ಶೆಟ್ಟಿ ಕಡ ಖಂಡಿತವಾಗಿ ಹೇಳಿಬಿಟ್ಟಿದ್ದಾರೆ.

Kannada Actor Raj B Shetty Shares His Love Story in Toby Cinema Promotion

Follow us On

FaceBook Google News

Kannada Actor Raj B Shetty Shares His Love Story in Toby Cinema Promotion