ನಿನ್ನನ್ನು ಯಾರು ಮದುವೆಯಾಗುತ್ತಾರೆ, ಆನೆ ತರ ಇದೆಯಾ ಎಂದವರಿಗೆ ಕಡಕ್ ತಿರುಗೇಟು ಕೊಟ್ಟ ಬ್ರಹ್ಮಗಂಟು ಗುಂಡಮ್ಮ!

ಬ್ರಹ್ಮಗಂಟು ಗುಂಡಮ್ಮ! ಕಳೆದ ಮೂರೆ ಮೂರು ತಿಂಗಳಿನಲ್ಲಿ ಎಷ್ಟು ಕೆಜಿ ತೂಕ ಇಳಿಸಿಕೊಂಡಿದ್ದಾರೆ ಗೊತ್ತಾ?

ಸ್ನೇಹಿತರೆ, ನಟನೆಗೆ ದೇಹದ ಆಕಾರ ಗಾತ್ರ ಮುಖ್ಯವಲ್ಲ ಪ್ರತಿಭೆ ಒಂದಿದ್ದರೆ ಸಾಕು ಎಂಬುದನ್ನು ಸಾಕಷ್ಟು ಕಲಾವಿದರು ಸಾಬೀತು ಪಡಿಸುತ್ತಾ ಬಂದಿದ್ದಾರೆ. ಅಂತಹ ಅಪ್ರತಿಮ ಕಲಾವಿದರಲ್ಲಿ ಬ್ರಹ್ಮಗಂಟು ಸೀರಿಯಲ್ ಮೂಲಕ ಜನರಿಗೆ ಪರಿಚಯಗೊಂಡಂತಹ ಗುಂಡಮ್ಮ ಅಲಿಯಾಸ್ ಗೀತಾ ಭಾರತಿ ಭಟ್ (Geetha Bharathi Bhat) ಕೂಡ ಒಬ್ಬರು.

ತಮ್ಮ ದೇಹದ ಆಕಾರದಿಂದಾಗಿ ಸಾಕಷ್ಟು ಅವಮಾನಕ್ಕೊಳಗಾದರೂ ಎಲ್ಲಿಯೂ ಕುಗ್ಗದೆ ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡಂತಹ ಗೀತಾ ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ಗಳಲ್ಲಿ (Kannada Sireal) ಅಭಿನಯಿಸುವಂತಹ ಅವಕಾಶ ಗಿಟ್ಟಿಸಿಕೊಂಡು ಜನಪ್ರಿಯತೆ ಪಡೆದರು.

ಸದ್ಯ ವರ್ಕೌಟ್ ಮಾಡುತ್ತಾ, ಡಯಟ್ಟನ್ನು ತಪ್ಪದೇ ಫಾಲೋ ಮಾಡುತ್ತಿರುವ ಗೀತಾ ಭಾರತಿ ಭಟ್ ಕಳೆದ ಮೂರು ತಿಂಗಳಲ್ಲಿ ಇಳಿಸಿಕೊಂಡಿರುವ ತೂಕ ಎಷ್ಟು? ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನಿನ್ನನ್ನು ಯಾರು ಮದುವೆಯಾಗುತ್ತಾರೆ, ಆನೆ ತರ ಇದೆಯಾ ಎಂದವರಿಗೆ ಕಡಕ್ ತಿರುಗೇಟು ಕೊಟ್ಟ ಬ್ರಹ್ಮಗಂಟು ಗುಂಡಮ್ಮ! - Kannada News

ನಾಗರಹಾವು ಸಿನಿಮಾ ಬಳಿಕ ಪುಟ್ಟಣ್ಣ ಕಣಗಾಲ್ ಮತ್ತೆಂದೂ ವಿಷ್ಣುವರ್ಧನ್ ಅವರಿಗೆ ಆಕ್ಷನ್ ಕಟ್ ಹೇಳದೇ ಇರಲು ಕಾರಣವೇನು ಗೊತ್ತಾ?

ಹೌದು ಗೆಳೆಯರೇ ಕಿರುತೆರೆ ಲೋಕದಲ್ಲಿ ಗುಂಡಮ್ಮ ಎಂದೇ ಗುರುತಿಸಿಕೊಂಡಿದ್ದ ಗೀತಾ ಭಾರತಿ ಭಟ್ ಲವ್ ಮಾಕ್ಟೈಲ್ ಮತ್ತು ಅಂಬಿ ನಿಂಗ್ ವಯಸ್ಸಾಯ್ತು ಎಂತಹ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು.

ಅಲ್ಲದೆ ಬಿಗ್ ಬಾಸ್ (Kannada Bigg Boss Show) ಮನೆಗೂ ಸ್ಪರ್ಧಿಯಾಗಿ ಕಾಲಿಟ್ಟ ಗುಂಡಮ್ಮ ವಿಪರೀತ ತೂಕದ ಸಮಸ್ಯೆಯಿಂದ ಕಷ್ಟ ಅನುಭವಿಸುತ್ತಿದ್ದರು. ಈ ಕಾರಣದಿಂದ ಹೇಗಾದರೂ ಮಾಡಿ ತಮ್ಮ ದೇಹದ ತೂಕವನ್ನು ದಂಡಿಸಲೇಬೇಕು ಎಂಬ ಮನಸ್ಸನ್ನು ಮಾಡಿ ಜಿಮ್ಗೆ ಸೇರ್ಪಡೆಯಾಗುತ್ತಾರೆ.

Kannada Serial Actress Geetha Bharathi Bhatಹೀಗೆ ಪ್ರತಿನಿತ್ಯ ಸತತ ಎಕ್ಸರ್ಸೈಜ್ ಹಾಗೂ ಜಿಮ್ನಲ್ಲಿ ಇರುವಂತಹ ಉಪಕರಣಗಳನ್ನು ಬಳಸಿ ವಿಭಿನ್ನವಾದಂತಹ ವರ್ಕೌಟ್ಗಳನ್ನು (Workout) ಮಾಡುತ್ತಾ ಟ್ರೈನರ್ ಹೇಳುವಂತಹ ಡಯಟನ್ನು ಆಯಾ ತಪ್ಪದೆ ಅನುಸರಿಸುತ್ತಾ ಬಂದಿರುವ ಗೀತಾ ಭಾರತಿ ಭಟ್ ಅವರು ಬರೋಬ್ಬರಿ 30 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರಂತೆ.

ಇದನ್ನು ಸ್ವತಹ ಅವರೇ ತಮ್ಮ ಇನ್ಸ್ಟಾಗ್ರಾಮ್ ವಿಡಿಯೋ ಒಂದರಲ್ಲಿ ಹಂಚಿಕೊಂಡಿದ್ದು ಇನ್ನೂ 20 ಕೆಜಿ ತೂಕ ಇಳಿಸಿಕೊಳ್ಳುವ ನೆಟ್ಟಿನಲ್ಲಿ ಇದ್ದೇನೆ ಎಂಬ ಖುಷಿ ವಿಚಾರವನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ನಟ ಅಂಬರೀಶ್ ತಮ್ಮ ಹೆಂಡತಿ ಮಗನಿಗಾಗಿ ಬಿಟ್ಟು ಹೋಗಿರುವ ಆಸ್ತಿ ಎಷ್ಟು ಕೋಟಿ ಗೊತ್ತಾ? ಸುಮಲತಾಗಿಂತ ಸೊಸೆಯೇ ಹೆಚ್ಚು ಶ್ರೀಮಂತೆಯಂತೆ!

ಇತ್ತೀಚಿಗಷ್ಟೇ ಸಿಹಿ ಕಹಿ ಚಂದ್ರು ಅವರು ನಡೆಸಿಕೊಡುವ ಬೊಂಬಾಟ್ ಭೋಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗೀತಾ ಅವರ ಲುಕ್ ನೋಡಿ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದರು. ಯಾವುದೇ ಫಾರಿನ್ ಮೆಡಿಸನ್ ತೆಗೆದುಕೊಳ್ಳದೆ ಆಹಾರ ಕ್ರಮಗಳಲ್ಲಿಯೂ ಯಥೇಚ್ಛವಾದ ಬದಲಾವಣೆಗಳನ್ನು ಮಾಡಿಕೊಳ್ಳದೆ ತಾವು ದಿನನಿತ್ಯ ಏನನ್ನು ಸೇವಿಸುತ್ತಿದ್ದರೋ ಅದೇ ಆಹಾರವನ್ನು (Regular Food) ಮುಂದುವರಿಸುತ್ತಾ ಬರೋಬ್ಬರಿ 30 ಕೆಜಿ ತೂಕವನ್ನು ಇಳಿಸಿಕೊಳ್ಳುವಲ್ಲಿ (Weight Loss) ಗೀತಾ ಯಶಸ್ವಿಯಾಗಿದ್ದಾರೆ.

ಅಲ್ಲದೆ ತಮ್ಮ ಫಿಟ್ನೆಸ್ (Fitness) ಜರ್ನಿಯ ಕುರಿತು ಆಗಾಗ ವಿಡಿಯೋಗಳನ್ನು (Videos) ಹಂಚಿಕೊಳ್ಳುವ ಗೀತಾ ತಮ್ಮಂತೆ ಸಣ್ಣಗಾಗುವ ಇಚ್ಚೆಯಲ್ಲಿರುವವರಿಗೆ ಸ್ಪೂರ್ತಿಯಾಗಿದ್ದಾರೆ ಎಂದರೆ ತಪ್ಪಾಗಲಾರದು.

Kannada Serial Actress Geetha Bharathi Bhat Diet Secret

Follow us On

FaceBook Google News