ನಟ ಅಂಬರೀಶ್ ತಮ್ಮ ಹೆಂಡತಿ ಮಗನಿಗಾಗಿ ಬಿಟ್ಟು ಹೋಗಿರುವ ಆಸ್ತಿ ಎಷ್ಟು ಕೋಟಿ ಗೊತ್ತಾ? ಸುಮಲತಾಗಿಂತ ಸೊಸೆಯೇ ಹೆಚ್ಚು ಶ್ರೀಮಂತೆಯಂತೆ!
ಕನ್ನಡ ಸಿನಿಮಾ ರಂಗದ (Kannada Cinema Industry) ಕ್ಯೂಟ್ ಕಪಲ್ಸ್ಗಳು ಎನಿಸಿಕೊಂಡಿದ್ದ ಸುಮಲತಾ (Actress Sumalatha) ಮತ್ತು ಅಂಬರೀಶ್ (Actor Ambareesh) ಒಟ್ಟಾಗಿ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಪರಿಚಯ ಮಾಡಿಕೊಂಡು, ಆನಂತರ ಪ್ರೀತಿಯ ಬಲೆಯೊಳಗೆ ಬಿದ್ದು ಮದುವೆಯಾಗಬೇಕೆಂಬ ನಿರ್ಧಾರ ಮಾಡಿ ಐದಾರು ವರ್ಷಗಳ ಕಾಲ ಪ್ರೀತಿಸಿ ಆನಂತರ ಗುರು ಹಿರಿಯರ ಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂದು ಅದೆಷ್ಟೋ ಅಭಿಮಾನಿಗಳಿಗೆ ಆದರ್ಶ ದಂಪತಿಗಳಾಗಿರುವ ಸುಮಲತಾ ಮತ್ತು ಅಂಬರೀಶ್ ಅವರು ಒಟ್ಟಾಗಿ ಇದ್ದಷ್ಟು ದಿನ ಸಣ್ಣಪುಟ್ಟ ಕಿರಿಕಿರಿ ಮನಸ್ತಾಪ ಕಲಹಗಳನ್ನು ಮಾಡಿಕೊಳ್ಳದೆ ಬಹಳ ಅನ್ಯೂನ್ಯವಾಗಿ ಇದ್ದಂತಹ ಜೋಡಿಗಳು. ಇನ್ನು ಸುಮಲತಾ ಮತ್ತು ಅಂಬರೀಶ್ ಅವರಿಗೆ ಅಭಿಷೇಕ್ ಎಂಬ ಮಗ ಜನಿಸಿದ ಮೇಲೆ ಇವರಿಬ್ಬರ ಪ್ರೀತಿಯಲ್ಲಿ ಸಿಹಿ ಇನ್ನಷ್ಟು ಹೆಚ್ಚಾಯಿತು.
ಆದರೆ ವಿಧಿಯ ಆಟದಿಂದ ಅಂಬಿ ಸುಮಲತಾ ಅವರನ್ನು ಒಬ್ಬಂಟಿಯಾಗಿಸಿ ಕಳೆದ ಕೆಲವು ವರ್ಷಗಳ ಹಿಂದಷ್ಟೇ ಇಹಲೋಕ ತ್ಯಜಿಸಿದರು. ಸದ್ಯ ತಂದೆ ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿರುವ ಅಭಿಷೇಕ್ (Actor Abhishek Ambareesh) ಕಳೆದ ಕೆಲವು ದಿನಗಳ ಹಿಂದೆ ಅವಿವಾ ಬಿಡಪ್ಪ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅಂದಿನಿಂದ ಇಂದಿನವರೆಗೂ ಅಂಬರೀಶ್ ಕುಟುಂಬದ ಕುರಿತು ಒಂದಲ್ಲ ಒಂದು ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ (Social Media) ಸದಾ ಟ್ರೆಂಡಿಂಗ್ನಲ್ಲಿ ಇರುತ್ತದೆ.
ಅದರಂತೆ ಈಗ ಅಂಬರೀಶ್ ಅವರ ಮಡದಿ ಸುಮಲತಾ ಅವರಿಗಿಂತ ಅವಿವ ಅವರ ಆಸ್ತಿ ಹೆಚ್ಚಿದೆಯಾ? ಎಂಬ ಲೆಕ್ಕಾಚಾರವನ್ನು ನೆಟ್ಟಿಗರು ಜೋರಾಗಿಯೇ ಹಾಕುತ್ತಿದ್ದು, ನಾವಿವತ್ತು ಈ ಒಂದು ಕುತೂಹಲಕಾರಿ ಪ್ರಶ್ನೆಗೆ ಉತ್ತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಅಂಬರೀಶ್ ಅವರು ಸಿನಿಮಾದ ಜೊತೆಗೆ ರಾಜಕೀಯ ರಂಗದಲ್ಲಿಯೂ ಸಕ್ರಿಯರಾಗಿ ಬಹುಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಂತಹ ಸೆಲೆಬ್ರಿಟಿ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಬೀಗಿದ ಅಂಬರೀಶ್ ಅವರು ಬಹು ದೊಡ್ಡ ಮೊತ್ತದ ಆಸ್ತಿಯನ್ನೇ ಮಾಡಿದ್ದವರು.
ಲೋನ್ ಪಡೆದ ವ್ಯಕ್ತಿ ಮೃತಪಟ್ಟರೆ ಸಾಲ ಯಾರು ತೀರಿಸಬೇಕು? ಹೆಂಡತಿ ಅಥವಾ ಮಕ್ಕಳ? ಕಾನೂನು ಏನು ಹೇಳುತ್ತೆ ಗೊತ್ತಾ?
ಆದರೆ ಅದನ್ನೆಲ್ಲ ತಮ್ಮ ಮುಂದಿನ ಪೀಳಿಗೆಗೆ ಎಂದು ಕೂಡಿಡುವ ಬದಲು ಜನ ಸೇವೆಗಾಗಿ ಎಲೆಕ್ಷನ್ ಸಮಯದಲ್ಲಿ ಜನರಿಗೆ ಅನುಕೂಲವಾಗುವಂಥ ಕೆಲಸಗಳನ್ನು ಮಾಡಿಕೊಳ್ಳುವುದಕ್ಕಾಗಿ ಅಂಬಿ ಬಳಸುತ್ತಿದ್ದರು.
ಅದರಂತೆ ಸುಮಲತಾ ಅಂಬರೀಶ್ ಅವರು ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಂತಹ ಮಹಿಳೆ. ಕಳೆದ ಎಲೆಕ್ಷನ್ನಲ್ಲಿ ಸುಮಲತಾ ಅವರು ಸಲ್ಲಿಸಿದ ಅಫಿಡವಿಟ್ ಪ್ರಕಾರ ಅವರ ಬಳಿ 12 ಲಕ್ಷದ ನಗದು ಹಾಗೂ ಎರಡು ಬ್ಯಾಂಕ್ ಅಕೌಂಟ್ನಲ್ಲಿ ಎರಡು ಕೋಟಿ ಹಣವಿದೆ.
ಇದರ ಜೊತೆಗೆ ಮೈಸೂರಿನಲ್ಲಿ ತ್ರಿಭುವನ್ ಸಂಸ್ಥೆಯೊಂದಿಗೆ ಷೇರು ಇದ್ದು, ಅದರಿಂದ 41 ಲಕ್ಷ ರೂಪಾಯಿ ಹಣ ವಾರ್ಷಿಕವಾಗಿ ದೊರಕುತ್ತದೆ. ಇದರ ಜೊತೆಗೆ ಇವರ ವಾರ್ಷಿಕ ಆದಾಯವು 4,45,87,000ಗಳಿದ್ದು ಅಂಬಿ ಆದಾಯ 81,66,500 ಇತ್ತು.
ಹೀಗೆ ಇದನ್ನೆಲ್ಲಾ ಕೂಡಿಸಿಟ್ಟು ಐಶಾರಾಮಿ ಕಾರು ಮನೆ ಹಾಗೂ ಜಮೀನನ್ನು ಸುಮಲತಾ ಮತ್ತು ಅಂಬರೀಶ್ ಅವರು ಖರೀದಿಸಿದ್ದರು. ಹೀಗೆ ಈ ಎಲ್ಲಾ ವರದಿಯ ಪ್ರಕಾರ ಸುಮಲತಾ ಅವರ ಬಳಿ 23 ಕೋಟಿ 41 ಲಕ್ಷ ರೂಪಾಯಿ ಸ್ಥಿರಾಸ್ತಿ ಹಾಗೂ 17ಕೋಟಿ ಚರಾಸ್ತಿ ಇದೆ.
ಅಲ್ಲದೆ 31 ಕೆಜಿ ಬೆಳ್ಳಿ ಏಳು ಕೆಜಿ ಚಿನ್ನವನ್ನು ಸುಮಲತಾ ಅಂಬರೀಶ್ ಹೊಂದಿದ್ದಾರೆ. ಅವಿವ ಬಿಡಪ್ಪ ಅವರ ಆಸ್ತಿಯು, ಸುಮಲತಾ ಅವರ ಆಸ್ತಿಗೆ ಸರಿದೂಗುವಂತಿದ್ದು, ಆದರೆ ಎಲ್ಲಾ ಆಸ್ತಿ ಪತ್ರಗಳು ಅವರ ತಂದೆ ಪ್ರಸಾದ್ ಬಿಡಪ್ಪನವರ ಹೆಸರಿನಲ್ಲಿದ್ದು ಅವಿವಾರ ಬ್ಯಾಂಕ್ ಅಕೌಂಟ್ನಲ್ಲಿ 20 ಕೋಟಿ ಹಣ ಇರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
Unknow Facts About Kannada Actor Ambareesh Family