Sandalwood News

ಅತಿ ಚಿಕ್ಕ ವಯಸ್ಸಿಗೆ ಸಾಕಷ್ಟು ಬೇಡಿಕೆ ಗಿಟ್ಟಿಸಿಕೊಂಡಿದ್ದ ನಟಿ ಬೇಬಿ ಶ್ಯಾಮಿಲಿ ಈಗ ಬೇಡಿದ್ರು ಚಾನ್ಸ್ ಸಿಗ್ತಿಲ್ಲ! ಕಾರಣ ಏನು ಗೊತ್ತಾ?

ನಟಿ ಬೇಬಿ ಶ್ಯಾಮಿಲಿ (Actress Baby Shamili) ಅವರ ಹೆಸರು ಕೇಳುತ್ತಿದ್ದ ಹಾಗೆ ಆಕೆಯ ಮುದ್ದಾದ ಮಾತು ಬಹು ಹಾಸ್ಯಸ್ಪದ, ತರ್ಲೆ ಎನಿಸುವಂತಹ ಸಂಭಾಷಣೆ, ಕ್ಯೂಟಾದ ಫ್ರಾಕ್, ಎರಡು ತೆಂಗಿನ ಮರದಂತಹ ಜುಟ್ಟು ನಮ್ಮೆಲ್ಲರ ಕಣ್ಣ ಮುಂದೆ ಬಂದುಬಿಡುತ್ತದೆ.

ಅತಿ ಚಿಕ್ಕ ವಯಸ್ಸಿಗೆ ಸಿನಿಪ್ರೇಕ್ಷಕರ ಮುದ್ದು ಮಗಳಾಗಿ ಕನ್ನಡ (Kannada Movies) ತೆಲುಗು ತಮಿಳು ಹಿಂದಿ ಸೇರಿದಂತೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿಯೂ ಬಾಲ ನಟಿಯಾಗಿ ಅಭಿನಯಿಸುತ್ತ ಉತ್ತುಂಗದ ಶಿಖರದಲ್ಲಿದ್ದಂತಹ ಬೇಬಿ ಶ್ಯಾಮಿಲಿ ಇಂದು 35 ವರ್ಷದ ಹೆಣ್ಣು ಮಗಳು.

Interesting Facts About Actress Baby Shamili

ನಿರ್ದೇಶಕ ನಿರ್ಮಾಪಕರು ಇವರ ಡೇಟ್ಸ್ಗಾಗಿ ಮನೆ ಮುಂದೆ ಕ್ಯೂ ನಿಲ್ಲುತ್ತಿದ್ದಂತಹ ಕಾಲ. ಆದರೆ ಈಗ ಸ್ವತಃ ಬೇಬಿ ಶ್ಯಾಮಿಲಿಯವರೆ ನಿರ್ದೇಶಕರನ್ನು ಕೇಳಿಕೊಂಡರು ಅವಕಾಶ ಸಿಗುತ್ತಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ದೇವಸ್ಥಾನದ ಮುಂದೆ ಕುಳಿತಿದ್ದ ರಜನಿಕಾಂತ್ ಅವರನ್ನು ಭಿಕ್ಷುಕ ಎಂದುಕೊಂಡ ಮಹಿಳೆ ಅದೆಂತಹ ಕೆಲಸ ಮಾಡಿದ್ದಳು ಗೊತ್ತಾ?

ಹಾಗಾದ್ರೆ ನೋಡಲು ಸುರದ್ರೂಪಿಯಂತಿರುವ ಈ ನಟಿಗೆ ಚಾನ್ಸ್ ಸಿಗದೇ ಇರಲು ಕಾರಣವೇನು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಕನ್ನಡ ಸಿನಿಮಾ ರಂಗ (Kannada Film Industry) ಆಗಷ್ಟೇ ಬಹು ದೊಡ್ಡ ಮಟ್ಟದಲ್ಲಿ ಹೆಸರು ಗಳಿಸುತ್ತಿದ್ದ ಸಂದರ್ಭದಲ್ಲಿ ಪುಟ್ಟ ಪುಟ್ಟ ಹೆಜ್ಜೆಯನ್ನು ಇಡುತ್ತಾ ಚಿತ್ರರಂಗವನ್ನು ಪ್ರವೇಶ ಮಾಡಿದ ಬೇಬಿ ಶಾಮಿಲಿಯವರು ಪಂಚ ಭಾಷೆಯ ಸಿನಿಮಾಗಳಲ್ಲಿಯೂ ಅಭಿನಯಿಸಿ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದು ಎಲ್ಲರ ಮನೆಮಗಳಾಗಿ ಹೋಗಿದಂತಹ ನಟಿ.

ಬಾಲ್ಯದಲ್ಲಿಯೇ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ಬೇಬಿ ಶ್ಯಾಮಿಲಿಯವರು ಬೆಳೆದು ದೊಡ್ಡವರಾದ ಮೇಲೆ ಅಭಿನಯಿಸಿದ್ದು ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಮಾತ್ರ.

ಕಪಾಳಕ್ಕೆ ಹೊಡೆಯೋದ್ರಲ್ಲಿ ನಂಬರ್ ಒನ್ ಆಗಿದ್ದ ಪುಟ್ಟಣ್ಣ ಕಣಗಾಲ್, ನಟ ಅಂಬರೀಶ್ ಶೂಟಿಂಗ್ ಗೆ ತಡವಾಗಿ ಬಂದಿದ್ದಕ್ಕೆ ಮಾಡಿದ್ದೇನು ಗೊತ್ತಾ?

actress Baby Shamleeಹೌದು ಗೆಳೆಯರೇ 1987 ಜುಲೈ 10 ನೇ ತಾರೀಖಿನಂದು ಜನಿಸಿದ ಬೇಬಿ ಶ್ಯಾಮಿಲಿ ಬಹಳನೇ ಆಕ್ಟಿವ್ ಆಗಿ ತಮ್ಮ 12ನೇ ವಯಸ್ಸಿಗೆ ತಮಿಳು ಚಿತ್ರ ಒಂದರ ಮೂಲಕ ನಟನಾ ಕರಿಯರನ್ನು ಶುರು ಮಾಡಿದರು.

ಹೀಗೆ ತಮ್ಮ ಅತಿ ಅದ್ಭುತ ಅಭಿನಯದ ಮೂಲಕ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ಅಭಿನಯಿಸುವಂತಹ ಅವಕಾಶವನ್ನು ಗಿಟ್ಟಿಸಿಕೊಂಡ ಬೇಬಿ ಶ್ಯಾಮಿಲಿಯವರು ಕನ್ನಡದ ಖ್ಯಾತ ನಟರಾದ ವಿಷ್ಣುವರ್ಧನ್ ಅಂಬರೀಶ್ ಶ್ರೀನಾಥ್ ಅಭಿಜಿತ್ ಅವರೊಂದಿಗೆ ಕಾಣಿಸಿಕೊಂಡು ಮಿಂಚಿದರು.

ಸ್ವಲ್ಪ ಎಕ್ಸ್ಪೋಸ್ ಮಾಡಿ ಎಷ್ಟು ಬೇಕೋ ಅಷ್ಟು ದುಡ್ಡು ಕೊಡುತ್ತೇನೆ ಎಂದು ಕೇಳಿದ್ದಕ್ಕೆ ನಟಿ ಸೌಂದರ್ಯ ಮಾಡಿದ್ದೇನು ಗೊತ್ತಾ?

ಮತ್ತೆ ಹಾಡಿತು ಕೋಗಿಲೆ, ಕಾದಂಬರಿ, ಶಾಂಭವಿ, ಪೋಲಿಸ್ ಲಾಕಪ್, ಬೈರವಿ, ಕರುಳಿನ ಕುಡಿ ಸೇರಿದಂತೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅದಲ್ಲದೆ ಮಣಿರತ್ನಂ ಅವರ ಅಂಜಲಿ ಮತ್ತು ಭರತನ್ ಅವರ ಮಾಲೂಟಿ ಎಂಬ ಮಲಯಾಳಂ ಸಿನಿಮಾಗಳು ಅಭಿನಯಿಸಿ ಮಾಲಿವುಡ್ನಲ್ಲೂ ಕಮಾಲ್ ಮಾಡಿದಂತಹ ನಟಿ.

ಹೀಗೆ ಚಿಕ್ಕಂದಿನಲ್ಲಿ ತಮ್ಮ ಕ್ಯೂಟ್ ಕ್ಯೂಟ್ ಮಾತುಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದಂತಹ ಶ್ಯಾಮಿಲಿಯವರು ಇಷ್ಟು ಖ್ಯಾತಿ ಹಾಗೂ ಸೌಂದರ್ಯವನ್ನು ಹೊಂದಿದ್ದರೂ ಸದ್ಯ ಹೇಳಿಕೊಳ್ಳುವಂತಹ ಆಫರ್ ಸಿಗುತ್ತಿಲ್ಲವಂತೆ.

ಹೌದು ಗೆಳೆಯರೇ ಬೇಬಿ ಶ್ಯಾಮಿಲಿ ಅವರ ಅಕ್ಕ ಸೂಪರ್ ಸ್ಟಾರ್ ಅಜಿತ್ ಅವರ ಮಡದಿಯಾದ ಕಾರಣ ನಿರ್ದೇಶಕ ನಿರ್ಮಾಪಕರೊಂದಿಗೆ ಇವರ ವರ್ತನೆ ಸರಿ ಇರಲಿಲ್ಲವಂತೆ. ಅಹಂಕಾರ ಹೆಚ್ಚಾದ ಕಾರಣ ಸಿನಿಮಾಗಳಿಂದ ಅವಕಾಶ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಪತ್ರಿಕೆಗಳಲ್ಲಿ ವರದಿಯಾಗಿತ್ತು.

Interesting Facts About Actress Baby Shamili

Our Whatsapp Channel is Live Now 👇

Whatsapp Channel

Related Stories