ಅಣ್ಣಾವ್ರು ಒಮ್ಮೆಯೂ ತೆರೆಯ ಮೇಲೆ ಸಿಗರೇಟ್ ಸೇದಲಿಲ್ಲ, ಶಿವಣ್ಣ ನೀವ್ಯಾಕೆ ಹಿಂಗ್ ಮಾಡಿದ್ರೀ? ಕೋಪಗೊಂಡ ದೊಡ್ಮನೆ ಫ್ಯಾನ್ಸ್

ಶಿವಣ್ಣ ಮಾಡಿರುವಂತಹ ಆ ಒಂದು ಕೆಲಸದಿಂದಾಗಿ ಸದ್ಯ ದೊಡ್ಮನೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದು ಅಣ್ಣಾವ್ರು ಕಟ್ಟು ನಿಟ್ಟಾಗಿ ಪಾಲನೆ ಮಾಡಿಕೊಂಡು ಬಂದಂತಹ ನಿಯಮಗಳನ್ನು ನೀವು ಮುರಿಯುತ್ತಿದ್ದೀರಿ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸ್ನೇಹಿತರೆ, ಕಳೆದ ಆಗಸ್ಟ್ 10ನೇ ತಾರೀಕು ದೇಶದಾದ್ಯಂತ ಬಿಡುಗಡೆಗೊಂಡ ಮೂರು ವಾರಗಳಾದರು ಹೌಸ್ ಫುಲ್ ಪ್ರದರ್ಶನ ಕಾಣುತ್ತಾ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿರುವಂತಹ ಜೈಲರ್ ಸಿನಿಮಾ (Jailer movie), ಸದ್ಯ ಒಂದಲ್ಲ ಒಂದು ವಿಚಾರದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ (Social Media) ಬಾರಿ ಸದ್ದು ಮಾಡುತ್ತಲೇ ಇದೆ. ಅದರಲ್ಲೂ ಶಿವಣ್ಣನ (Kannada Actor Shiva Rajkumar) ಖಡಕ್ ಅಭಿನಯಕ್ಕೆ ಅದೆಷ್ಟೋ ಮಂದಿ ಕ್ಲೀನ್ ಬೋಲ್ಡ್ ಆಗಿದ್ದರು.

ಆದರೆ ಈಗ ಶಿವಣ್ಣ (Shivanna) ಮಾಡಿರುವಂತಹ ಆ ಒಂದು ಕೆಲಸದಿಂದಾಗಿ ಸದ್ಯ ದೊಡ್ಮನೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದು ಅಣ್ಣಾವ್ರು ಕಟ್ಟು ನಿಟ್ಟಾಗಿ ಪಾಲನೆ ಮಾಡಿಕೊಂಡು ಬಂದಂತಹ ನಿಯಮಗಳನ್ನು ನೀವು ಮುರಿಯುತ್ತಿದ್ದೀರಿ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಶಿವರಾಜ್ ಕುಮಾರ್, ಮೋಹನ್ ಲಾಲ್, ತಮ್ಮನ್ನಾ ಭಾಟಿಯಾ ಹಾಗೂ ರಜನಿಕಾಂತ್ (Actor Rajinikanth) ಅವರ ಅಭಿನಯದಲ್ಲಿ ಮೂಡಿಬಂದಿರುವಂತಹ ಈ ಒಂದು ಸಿನಿಮಾ ಎಲ್ಲಾ ಹಂತದಲ್ಲಿಯೂ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ಅದರಲ್ಲೂ ಕ್ಲೈಮಾಕ್ಸ್ನ ಕೊನೆಯ 15 ನಿಮಿಷದಲ್ಲಿ ಬರುವಂತಹ ಶಿವರಾಜ್ ಕುಮಾರ್ ಅವರ ಕ್ಯಾಮಿಯೋ ಅಪ್ಪಿಯರೆನ್ಸ್ಗೆ ಅಭಿಮಾನಿಗಳು ಮನಸೋತು ಹೋಗಿದ್ದಾರೆ.

ಅಣ್ಣಾವ್ರು ಒಮ್ಮೆಯೂ ತೆರೆಯ ಮೇಲೆ ಸಿಗರೇಟ್ ಸೇದಲಿಲ್ಲ, ಶಿವಣ್ಣ ನೀವ್ಯಾಕೆ ಹಿಂಗ್ ಮಾಡಿದ್ರೀ? ಕೋಪಗೊಂಡ ದೊಡ್ಮನೆ ಫ್ಯಾನ್ಸ್ - Kannada News

‘ಸಾಲಾರ್’ ಚಿತ್ರದಲ್ಲಿ ಪ್ರಭಾಸ್ ಗೆ ದ್ವಿಪಾತ್ರ! ಶೂಟಿಂಗ್ ವೀಕ್ಷಿಸಿದ ಅಭಿಮಾನಿಯಿಂದ ಚಿತ್ರದ ಗುಟ್ಟೆಲ್ಲಾ ರಟ್ಟು

ಎಲ್ಲರಿಂದ ಶಿವರಾಜಕುಮಾರ್ ಅವರ ಕಡಕ್ ಅಭಿನಯಕೆ ವ್ಯಾಪಕ ಮೆಚ್ಚುಗೆಗಳು ಕೇಳಿ ಬರುತ್ತಿದ್ದು, ಶಿವಣ್ಣನನ್ನು ನರಸಿಂಹನಾಗಿ ಮಾಸ್ ಲುಕ್ನಲ್ಲಿ ಕಂಡುಕೊಂಡಂತಹ ತಮಿಳಿಗರು ಫಿದಾ ಆಗಿ ಹೋಗಿದ್ದಾರೆ. ಆದರೆ ದೊಡ್ಮನೆ ಕುಟುಂಬದ ಅಭಿಮಾನಿಗಳು ಶಿವರಾಜ್ ಕುಮಾರ್ ಅವರ ಈ ವರ್ತನೆಗೆ ಕೊಂಚ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದ ನಟಸಾರ್ವಭೌಮ, ಕಲಾ ಗಂಧರ್ವ, ಕಲಾಕೌಸ್ತುಭ ಎಂಬೆಲ್ಲ ಬಿರುದು ಪಡೆದು ನೂರಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಅಣ್ಣಾವ್ರು ಎಂದಿಗೂ ತಮ್ಮ ಒಂದೇ ಒಂದು ಸಿನಿಮಾದಲ್ಲಿಯೂ ಮಧ್ಯಪಾನ ಅಥವಾ ಧೂಮಪಾನದಂತಹ ಸೀನ್ಗಳಲ್ಲಿ ಕಾಣಿಸಿಕೊಂಡಿಲ್ಲ.

Shiva Rajkumar in Jailer movie
Image Source: ThePrime Time

ಆದರೆ ಅವರ ಮಗನೆನಿಸಿಕೊಂಡಿರುವಂತಹ ಶಿವರಾಜ್ ಕುಮಾರ್ ಜೈಲರ್ ಸಿನಿಮಾದ ಕ್ಲೈಮಾಕ್ಸ್ ಸೀನಲ್ಲಿ ನಟ ರಜನಿಕಾಂತ್ ಹಾಗೂ ಮೋಹನ್ ಲಾಲ್ ಅವರೊಂದಿಗೆ ಕುಳಿತು ಸಿಗರೇಟ್ ಸೇದುವಂತಹ ಸ್ವ್ಯಾಗ್ ಒಂದಿದೆ.

ಇದು ಜನರನ್ನು ಆಕರ್ಷಿಸುತ್ತಿದ್ದು, ಶಿವಣ್ಣ ಹೊಗೆ ಬಿಡುವಂತಹ ಬಂಗಿಗೆ ಅದೆಷ್ಟೋ ಫ್ಯಾನ್ಸ್ ಮನಸೋತು ಹೋಗಿದ್ದಾರೆ. ಈ ಕುರಿತು ಕನ್ನಡ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದು, ಅಣ್ಣಾವ್ರು ಎಂದಿಗೂ ತಮ್ಮ ಸಿನಿಮಾಗಳಲ್ಲಿ ಮಧ್ಯಪಾನ ಅಥವಾ ಧೂಮಪಾನ ಮಾಡಬೇಕಾದಂತಹ ಪಾತ್ರಗಳಲ್ಲಿ ಕಾಣಿಸಿಕೊಂಡಿಲ್ಲ.

Video: ವೇದಿಕೆ ಮೇಲೆಯೇ ಮುಲಾಜಿಲ್ಲದೆ ಸೀರೆ ಸೆರಗನ್ನು ಬಿಚ್ಚಿ ಎಸೆದ ನಟಿ ನೇಹಾ ಶೆಟ್ಟಿ! ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಬದಲಿಗೆ ಆಕಸ್ಮಿಕ ಹಾಗೂ ಶಬ್ದವೇದಿ ಅಂತಹ ಸಿನಿಮಾಗಳ ಮೂಲಕ ಅದರ ಕುರಿತು ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಆದರೆ ಶಿವಣ್ಣ ಈ ರೀತಿ ಮಾಡಿರುವುದು ನಮ್ಮೆಲ್ಲರಿಗೂ ಬೇಸರವನ್ನುಂಟು ಮಾಡಿದೆ ಎಂದಿದ್ದರು.

ಇದಕ್ಕೆ ಸಂದರ್ಶನ ಒಂದರಲ್ಲಿ ಸ್ಪಷ್ಟನೆ ನೀಡಿರುವಂತಹ ಶಿವಣ್ಣ “ಓಂ ಸಿನಿಮಾದಲ್ಲಿ ಇದು ಮೊದಲು ಶುರುವಾಯಿತು. ನಮ್ಮ ತಂದೆಯವರು ಈ ಕಾಲಕ್ಕೆ ಬದಲಾಗಬೇಕು, ಕಥೆಗೆ ತಕ್ಕಂತೆ ಎಂದು ಸದಾ ಹೇಳುತ್ತಿದ್ದರು. ಎಲ್ಲಾ ನನ್ನ ತರಹನೇ ಇರಬೇಕು ಅಂತ ಏನೂ ಇಲ್ಲ, ಮಕ್ಕಳು ಅವರದ್ದೇ ಶೈಲಿ ರೂಡಿಸಿಕೊಳ್ಳಬೇಕು ಅವರು ಎಂದು ಇದು ಮಾಡಬೇಡ ಅದು ಮಾಡಬೇಡ ಎಂದು ಹೇಳಲಿಲ್ಲ. ನಿಜ ಜೀವನದಲ್ಲಿಯೂ ಅಷ್ಟೇ ಸಿನಿ ಜೀವನದಲ್ಲೂ ಕೂಡ ಅಷ್ಟೇ ಯಾವುದೇ ನಿರ್ಬಂಧ ಹೇರಲಿಲ್ಲ. ನಾವು ಎಲ್ಲಿ ಹೋಗುತ್ತೇವೆ ಏನು ಮಾಡುತ್ತೇವೆ ಎಂದು ಯಾವತ್ತೂ ನಮ್ಮನ್ನು ಪ್ರಶ್ನೆ ಮಾಡಿರಲಿಲ್ಲ” ಎಂದರು.

Kannada Actor Shiva Rajkumar fans About Jailer movie scene

Follow us On

FaceBook Google News

Kannada Actor Shiva Rajkumar fans About Jailer movie scene