‘ಸಾಲಾರ್’ ಚಿತ್ರದಲ್ಲಿ ಪ್ರಭಾಸ್ ಗೆ ದ್ವಿಪಾತ್ರ! ಶೂಟಿಂಗ್ ವೀಕ್ಷಿಸಿದ ಅಭಿಮಾನಿಯಿಂದ ಚಿತ್ರದ ಗುಟ್ಟೆಲ್ಲಾ ರಟ್ಟು

ಸಾಲಾರ್ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಕೆಜಿಎಫ್ ಮತ್ತು ಕೆಜಿಎಫ್ 2 ನಂತಹ ಸೂಪರ್‌ಹಿಟ್ ಚಿತ್ರಗಳನ್ನು ಬರೆದು ನಿರ್ದೇಶಿಸಿದ ಅದೇ ನಿರ್ದೇಶಕ ಪ್ರಶಾಂತ್ ನೀಲ್ ಇನ್ನೊಂದು ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ

ಸಾಲಾರ್ ಚಿತ್ರವನ್ನು (Salaar Movie) ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಕೆಜಿಎಫ್ ಮತ್ತು ಕೆಜಿಎಫ್ 2 ನಂತಹ ಸೂಪರ್‌ಹಿಟ್ ಚಿತ್ರಗಳನ್ನು ಬರೆದು ನಿರ್ದೇಶಿಸಿದ ಅದೇ ನಿರ್ದೇಶಕ ಪ್ರಶಾಂತ್ ನೀಲ್ (Director Prashanth Neel) ಇನ್ನೊಂದು ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ.

ಪ್ರಭಾಸ್ ಅಭಿನಯದ ‘ಸಾಲಾರ್’ ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಗೆ ಸೇರಿದೆ. ಪ್ರತಿ ದಿನ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ಹೊಸ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತದೆ.

ಇದುವರೆಗೂ ‘ಸಾಲಾರ್’ ಚಿತ್ರದ ಕಥೆಯು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಕೆಜಿಎಫ್-2 ಗೆ ಸಂಬಂಧಿಸಿರಬಹುದು ಎಂದು ಹೇಳಲಾಗುತ್ತಿತ್ತು, ಇದೀಗ ಇತ್ತೀಚಿನ ಮಾಹಿತಿಯ ಪ್ರಕಾರ, ಪ್ರಭಾಸ್ (Actor Prabhas) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಪ್ರಭಾಸ್ ಅವರ ಅಭಿಮಾನಿಯೊಬ್ಬರು ಸ್ವತಃ ಚಿತ್ರದ ಶೂಟಿಂಗ್ ನೋಡಿರುವುದಾಗಿ ಹೇಳಿಕೊಂಡಿದ್ದಾರೆ.

'ಸಾಲಾರ್' ಚಿತ್ರದಲ್ಲಿ ಪ್ರಭಾಸ್ ಗೆ ದ್ವಿಪಾತ್ರ! ಶೂಟಿಂಗ್ ವೀಕ್ಷಿಸಿದ ಅಭಿಮಾನಿಯಿಂದ ಚಿತ್ರದ ಗುಟ್ಟೆಲ್ಲಾ ರಟ್ಟು - Kannada News

‘ಸಾಲಾರ್’ ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸುತ್ತಾರಾ?

ಪ್ರಭಾಸ್ ಅವರ ಅಭಿಮಾನಿಗಳ ಪುಟದಲ್ಲಿ, ಅಭಿಮಾನಿಯೊಬ್ಬರು ತನಗೆ ‘ಸಾಲಾರ್’ ಚಿತ್ರದ ಶೂಟಿಂಗ್ ನೋಡುವ ಅವಕಾಶ ಸಿಕ್ಕಿತು ಮತ್ತು ಒಂದು ದೃಶ್ಯದಲ್ಲಿ, ಪ್ರಭಾಸ್ ಇಡೀ ಸೈನ್ಯದ ಮುಂದೆ ಏಕಾಂಗಿಯಾಗಿ ನಿಂತಿರುವುದನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ, ಕಥೆಯಲ್ಲಿ ಟ್ವಿಸ್ಟ್ ಬರುತ್ತದೆ, ಪ್ರಭಾಸ್ ಅನ್ನು ಉಳಿಸಲು ಅವರನ್ನೇ ಹೋಲುವ ಇನ್ನೊಬ್ಬ ವ್ಯಕ್ತಿ ಯುದ್ಧಕ್ಕೆ ಧುಮುಕುತ್ತಾರೆ… ಎನ್ನುವ ಚಿತ್ರದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ

ಈ ಅಭಿಮಾನಿಯ ಈ ಹೇಳಿಕೆಯು ‘ಸಾಲಾರ್’ಗಾಗಿ ಬಹಳ ದಿನಗಳಿಂದ ಕಾಯುತ್ತಿರುವ ಅಭಿಮಾನಿಗಳ ಉತ್ಸಾಹವನ್ನು ಇನ್ನಷ್ಟೂ ಹೆಚ್ಚಿಸಿದೆ.

Actor Prabhas Salaar Movie‘ಕೆಜಿಎಫ್’ ಚಿತ್ರಕ್ಕೂ ‘ಸಾಲಾರ್’ಗೂ ಲಿಂಕ್ ಇದಿಯಾ?

ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ ಎಲ್ಲರಿಗೂ ಗೊತ್ತಿರುವ ವಿಚಾರ. ಕೆಜಿಎಫ್ ಮತ್ತು ಕೆಜಿಎಫ್ 2 ನಂತಹ ಸೂಪರ್‌ಹಿಟ್ ಚಿತ್ರಗಳನ್ನು ಬರೆದು ನಿರ್ದೇಶಿಸಿದ ಅದೇ ನಿರ್ದೇಶಕ ಪ್ರಶಾಂತ್ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ.

ಈ ಕಾರಣಕ್ಕೆ ಕೆಜಿಎಫ್ ಜೊತೆ ‘ಸಾಲಾರ್’ ಕಥೆಯ ಲಿಂಕ್ ಇರಬಹುದು ಎಂದು ಹೇಳಲಾಗುತ್ತಿದೆ. ಚಿತ್ರವು ಸೆಪ್ಟೆಂಬರ್ 28 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಈ ಚಿತ್ರವೂ ಬ್ಲಾಕ್ ಬಸ್ಟರ್ ಹಿಟ್ ಆಗಲಿದೆ ಎಂದು ಪ್ರಶಾಂತ್ ಅವರ ಹಳೆಯ ದಾಖಲೆ ಹೇಳುತ್ತಿದೆ.

ಪ್ರಭಾಸ್‌ನ ಹಳೆಯ ದಾಖಲೆಯ ಪ್ರಕಾರ ಪ್ರಭಾಸ್‌ನ ಚಿತ್ರಗಳನ್ನೆಲ್ಲ ಇದು ಬೀಟ್ ಮಾಡಲಿದೆ ಎಂಬ ನಿರೀಕ್ಷೆ ಇದೆ, ‘ಬಾಹುಬಲಿ’ ಮತ್ತು ‘ಬಾಹುಬಲಿ-2’ ನಂತರ, ಪ್ರಭಾಸ್ ಅವರ ಒಂದು ಚಿತ್ರವೂ ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.

ಪ್ರಭಾಸ್ ಅವರ ಲಾಸ್ಟ್ ಸಿನಿಮಾ ‘ಆದಿಪುರುಷ’ ದಲ್ಲಿ ಅವರ ಅಭಿನಯವು ಹೆಚ್ಚು ಮೆಚ್ಚುಗೆ ಪಡೆದಿತ್ತು ಆದರೆ ಚಿತ್ರವು ವಿವಾದಗಳಿಂದಾಗಿ ಅದರ ಬಂಡವಾಳವನ್ನು ಕೂಡ ಮರುಪಡೆಯಲು ಸಾಧ್ಯವಾಗಲಿಲ್ಲ.

ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ಸುಮಾರು 700 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರದ ಒಟ್ಟು ಗಳಿಕೆ ಕೇವಲ 286 ಕೋಟಿ ರೂಪಾಯಿಗಳು.

Actor Prabhas Double Role in Salaar Movie, Fan Reveals After Watching Shooting

Follow us On

FaceBook Google News

Actor Prabhas Double Role in Salaar Movie, Fan Reveals After Watching Shooting