ಯಾರಿಗೂ ಕಾಣಿಸಿಕೊಳ್ಳದ ವಿಷ್ಣುವರ್ಧನ್ ಅವರ ಮತ್ತೋರ್ವ ಪುತ್ರಿ ಯಾರು ಗೊತ್ತಾ? ಮಾಧ್ಯಮದ ಮುಂದೆ ಬರಲು ಹಿಂಜರಿಕೆ ಯಾಕೆ?
ತಮ್ಮ ಅಮೋಘ ಅಭಿನಯದ ವರ್ಚಸ್ಸಿನಿಂದಲೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಂತಹ ನಟ ವಿಷ್ಣುವರ್ಧನ್ (Actor Vishnuvardhan) ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗವನ್ನು (Kannada Film Industry) ಬೇರೊಂದು ಲೋಕಕ್ಕೆ ಕೊಂಡೊಯ್ಯುವಲ್ಲಿ ಮೈಲುಗಲ್ಲನ್ನು ಹಾಕಿದಂತಹ ನಟ .
2೦೦ಕ್ಕೂ ಅಧಿಕ ಪಾತ್ರಗಳಿಗೆ ಜೀವ ತುಂಬುತ್ತಾ ಬ್ಯಾಕ್ ಟು ಬ್ಯಾಕ್ ಹಿಟ್ ಎಂಬಂತೆ ಹಲವಾರು ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ (Kannada Cinema) ಕೊಡುಗೆಯಾಗಿ ನೀಡಿರುವ ವಿಷ್ಣು ದಾದಾ ಇಂದು ಅದೆಷ್ಟೋ ಅಭಿಮಾನಿಗಳ ಆರಾಧ್ಯದೈವರಾಗಿದ್ದಾರೆ.
ಹೀಗೆ ದಾದಾ ಭೌತಿಕವಾಗಿ ಇಂದು ನಮ್ಮೊಂದಿಗೆಲ್ಲವಾದರೂ ಕೂಡ ಅವರ ಒಂದಲ್ಲ ಒಂದು ಮಾಹಿತಿ ಸದಾ ಕಾಲ ಸೋಶಿಯಲ್ ಮೀಡಿಯಾದಲ್ಲಿ (Social Media) ಚರ್ಚೆಯಾಗುತ್ತಲೇ ಇರುತ್ತದೆ.
ಆ ಘಟನೆ ನಂತರ ರಾತ್ರಿ ಪೂರ್ತಿ ನಿದ್ದೆ ಮಾಡದೆ ಅತ್ತಿದ್ದೆ ಎಂದ ಅಣ್ಣಯ್ಯ ನಟಿ ಮಧು ಬಾಲ! ಅಷ್ಟಕ್ಕೂ ಏನದು ಘಟನೆ ಗೊತ್ತಾ?
ಅದರಂತೆ ನಾವಿವತ್ತು ವಿಷ್ಣು ದಾದಾ ಅವರ ಇಬ್ಬರು ಪುತ್ರಿಯರು ಯಾರು? ಹೇಗಿದ್ದಾರೆ ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಕೆಲವು ದಿನಗಳ ಹಿಂದೆ ವಿಷ್ಣುವರ್ಧನ್ ಅವರ ಮನೆಯ ಗೃಹಪ್ರವೇಶ ಬಹಳನೇ ಅದ್ದೂರಿಯಾಗಿ ನಡೆಯಿತು. ಈ ಒಂದು ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಸಾಕಷ್ಟು ಸೆಲೆಬ್ರಿಟಿಗಳನ್ನು ಆತ್ಮೀಯ, ಸ್ನೇಹಿತರನ್ನು ಆಹ್ವಾನಿಸಲಾಗಿತ್ತು.
ಅದರಂತೆ ಬಹುದೊಡ್ಡ ತಾರಾ ಬಳಗವೇ ವಿಷ್ಣುವರ್ಧನ್ ಅವರ ಮನೆಯ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮದವರ ಕಣ್ಣಿಗೆ ಬಿದ್ದಂತಹ ವಿಷ್ಣುವರ್ಧನ್ ಅವರ ಮತ್ತೋರ್ವ ಪುತ್ರಿ ಚಂದನ (Actor Vishnuvardhan Daughter Chandana) ಇಷ್ಟು ವರ್ಷಗಳಾದರೂ ಜನರ ಮುಂದೆ ಬರದಿರಲು ಕಾರಣವೇನು?
ಈ ಬಗ್ಗೆ ಅಭಿಮಾನಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆಯನ್ನು ಕೇಳತೊಡಗಿದರು. ಇದಕ್ಕೆ ಸ್ವತಃ ಭಾರತಿ ಅಮ್ಮನವರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಹೌದು ಗೆಳೆಯರೇ ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಡಾಕ್ಟರ್ ವಿಷ್ಣುವರ್ಧನ್ ಹಾಗೂ ಭಾರತಿ ಅವರು ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿರುವಾಗಲೇ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಡೀ ಕನ್ನಡ ಸಿನಿಮಾ ರಂಗವೇ ಇವರ ಅದ್ದೂರಿ ಮದುವೆ ಸಮಾರಂಭಕ್ಕೆ ಸಾಕ್ಷಿಯಾಗಿತ್ತು. ಆದರೆ ಮದುವೆಯಾದ ಹಲವಾರು ವರ್ಷಗಳ ಕಾಲ ವಿಷ್ಣುವರ್ಧನ್ ದಂಪತಿಗಳಿಗೆ ಮಕ್ಕಳಿರಲಿಲ್ಲ.
ಆ ಸಂದರ್ಭದಲ್ಲಿ ವಿಷ್ಣು ಮತ್ತು ಭಾರತಿ ಅಮ್ಮನವರು ನಿರ್ಧರಿಸಿ ಓರ್ವ ಪುಟ್ಟ ಹೆಣ್ಣುಮಗಳನ್ನು ಅನಾಥಾಶ್ರಮದಿಂದ ದತ್ತು ಪಡೆದುಕೊಳ್ಳುತ್ತಾರೆ ಅವರೇ ಚಂದನ. ಆನಂತರ ಜನಿಸಿದ ಹೆಣ್ಣು ಮಗಳು ಕೀರ್ತಿ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕೀರ್ತಿಯವರು ಅನಿರುದ್ಧ್ ಎಂಬುವರನ್ನು ಮದುವೆಯಾಗಿ ಸದ್ಯ ತಮ್ಮ ಗಂಡನ ಸಿನಿ ಕೆಲಸಗಳಿಗೆ ಸಪೋರ್ಟ್ ಮಾಡುತ್ತಾ ಆಗಾಗ ಮಾಧ್ಯಮದ ಮುಂದೆ ಬರುತ್ತಿರುತ್ತಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಹುಡುಗಿ ಯಾರು ಗೊತ್ತಾ?
ಆದರೆ ಚಂದನ ಅವರು ಅಷ್ಟಾಗಿ ಎಲ್ಲಿಯೂ ಕಾಣಿಸಿಕೊಳ್ಳದಿರುವುದನ್ನು ಕಂಡ ಮಾಧ್ಯಮದವರು ದತ್ತು ಮಗಳಾದ ಕಾರಣ ಆಕೆಯನ್ನು ಹೆಚ್ಚಾಗಿ ವಿಷ್ಣು ಕುಟುಂಬ ತೋರಿಸುವುದಿಲ್ಲ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿತು, ಆದರೆ ಇದು ಅಸಲಿ ಕಾರಣವಲ್ಲ.. ಬದಲಿಗೆ ಚಂದನ ಅವರು ಸ್ವಲ್ಪ ನಾಚಿಕೆ ಸ್ವಭಾವದವರಾದ ಕಾರಣ ಹೆಚ್ಚಾಗಿ ಜನರ ಮುಂದೆ ಬರಲು, ತಾನೋರ್ವ ಸೆಲೆಬ್ರಿಟಿಯ ಪುತ್ರಿ ಎಂದು ಹೇಳಿಕೊಳ್ಳಲು ಇಷ್ಟಪಡುವುದಿಲ್ಲವಂತೆ.
ಹೀಗಾಗಿ ತಾವಾಯಿತು ತಮ್ಮ ಸುಂದರ ಕುಟುಂಬ ಆಯ್ತು ಎಂದು ಎಲೆಮರೆಕಾಯಿಯಂತೆ ಇದ್ದಾರೆ. ಯಾವುದಾದರೂ ಸ್ಟಾರ್ ನಟರೊಂದಿಗೆ ಸೆಲ್ಫಿ ತೆಗೆದುಕೊಂಡರೆ ಅದನ್ನು ಇರೋ ಬರೋ ಸೋಶಿಯಲ್ ಮೀಡಿಯಾದಲೆಲ್ಲ ಅಪ್ಲೋಡ್ ಮಾಡಿಕೊಂಡು ಜನಪ್ರಿಯತೆ ಪಡೆದುಕೊಳ್ಳುವಂತಹ ಈ ಕಾಲದಲ್ಲಿ ವಿಷ್ಣುವರ್ಧನ್ ಅವರ ಪುತ್ರಿ ಚಂದನ ತಮ್ಮ ತಂದೆಯಂತೆ ಸರಳತೆಯನ್ನು ಅಳವಡಿಸಿಕೊಂಡು ಹೆಚ್ಚಿನ ಸ್ಟಾರ್ ಗಿರಿಯನ್ನು ಇಷ್ಟಪಡದೆ ಬಹಳ ಸಿಂಪಲ್ ಆಗಿ ಜೀವನ ನಡೆಸುತ್ತಿದ್ದಾರೆ.
Kannada Actor Vishnuvardhan Daughter Chandana Interesting Facts