ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಹುಡುಗಿ ಯಾರು ಗೊತ್ತಾ?

ಮೂಲತಃ ಬೆಳಗಾಂ ಜಿಲ್ಲೆಯ ಮುರಗೊಂಡದವರಾದ ಸಂಜು ಬಸಯ್ಯ ಅವರಿಗೆ ಕಲೆಯ ಮೇಲೆ ಚಿಕ್ಕಂದಿನಿಂದಲೂ ಅಘಾದ ಆಸಕ್ತಿ ಇದ್ದ ಕಾರಣ ಹಲವಾರು ನಾಟಕಗಳು ಹಾಗೂ ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು (Kannada Comedy Kiladigalu) ಎಂಬ ಹಾಸ್ಯ ರಿಯಾಲಿಟಿ ಕಾರ್ಯಕ್ರಮದ ಮೂಲಕ ಕರ್ನಾಟಕದ ಜನರಿಗೆ ಪರಿಚಯಗೊಂಡಂತಹ ಹಾಸ್ಯ ಕಲಾವಿದ ಸಂಜು ಬಸಯ್ಯ (Actor Sanju Basayya) ನಟನಿಗೆ ಯಾವುದೇ ರೀತಿಯ ಬಾಹ್ಯಕಾರ, ಸೌಂದರ್ಯ ಬೇಕಿಲ್ಲ ಎಂಬುದನ್ನು ತೋರಿಸಿಕೊಟ್ಟಂತಹ ನಟ.

ಹೀಗೆ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕವೇ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ (Kannada Cinema) ಅವಕಾಶ ಗಿಟ್ಟಿಸಿಕೊಂಡು ಜನಪ್ರಿಯತೆ ಪಡೆದುಕೊಂಡಿರುವ ಇವರು ತಮ್ಮ ಬಹುಕಾಲದ ಗೆಳತಿ ಪಲ್ಲವಿ ಬಳ್ಳಾರಿ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಟಿ ಶೃತಿ ಮಗಳು ಗೌರಿಗೆ ಇದೆಂಥ ಧರ್ಮ ಸಂಕಟ? ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡ ಶ್ರುತಿ ಮಗಳು!

ಹೌದು ಗೆಳೆಯರೇ ನಟ ಸಂಜು ಬಸಯ್ಯನವರೇ ಹಲವಾರು ಬಾರಿ ವೇದಿಕೆಯ ಮೇಲೆ ತಮ್ಮ ಪ್ರೇಮ್ ಕಹಾನಿಯ ಕುರಿತು ಜನರ ಮುಂದೆ ಮಾಹಿತಿ ಬಿಚ್ಚಿಟ್ಟಿದರು. ಹೀಗೆ ಹಲವು ವರ್ಷಗಳಿಂದ ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ದೊರಕುವವರೆಗೂ ಕಾದು ಕಳೆದ ಜೂನ್ 30ನೇ ತಾರೀಕಿನಂದು ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ (Marriage) ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಮೂಲತಃ ಬೆಳಗಾಂ ಜಿಲ್ಲೆಯ ಮುರಗೊಂಡದವರಾದ ಸಂಜು ಬಸಯ್ಯ ಅವರಿಗೆ ಕಲೆಯ ಮೇಲೆ ಚಿಕ್ಕಂದಿನಿಂದಲೂ ಅಘಾದ ಆಸಕ್ತಿ ಇದ್ದ ಕಾರಣ ಹಲವಾರು ನಾಟಕಗಳು ಹಾಗೂ ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಈ ಮೂಲಕ ಪ್ರಖ್ಯಾತಿ ಪಡೆದು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋಗೂ ಫಾದರ್ಪಣೆ ಮಾಡಿದರು. ಈ ಮಧ್ಯೆ ಪಲ್ಲವಿ ಬಳ್ಳಾರಿ ಅವರೊಂದಿಗಿನ ಪರಿಚಯ ಸ್ನೇಹಕ್ಕೆ ದಾರಿ ಮಾಡಿಕೊಡುತ್ತದೆ.

ಅಣ್ಣಾವ್ರು ಮೇಕಪ್ ಮ್ಯಾನ್ ಗೆ ಕೊಡುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ? ಮೇಕಪ್ ಮ್ಯಾನ್ ಸಿಗರೇಟ್ ಸೇದಿ ಬಂದಿದ್ದಕ್ಕೆ ಅಣ್ಣಾವ್ರು ಮಾಡಿದ್ದೇನು?

Kannada Comedy Kiladigalu Actor Sanju Basayya and Wifeಸ್ನೇಹದಿಂದ ಪ್ರೀತಿಗೆ ತಿರುಗಿ ಕಾನೂನು ಬದ್ಧವಾಗಿ ಅಧಿಕೃತವಾಗಿ ರಿಜಿಸ್ಟರ್ ಮ್ಯಾರೇಜ್ ಆದರು..ಅದರಂತೆ ತಮಗೆ ಆತ್ಮೀಯವಾಗಿರುವ ಸೆಲೆಬ್ರಿಟಿಗಳಾದ ರಚಿತರಾಮ್, ಶರಣ್, ಅನುಶ್ರೀ, ಶಿವರಾಜಕುಮಾರ್ ಸೇರಿದಂತೆ ಮುಂತಾದ ಕಲಾವಿದರಿಗೆ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡುವ ಮೂಲಕ ಆಹ್ವಾನಿಸಿ ಸಪ್ತಪದಿ ತುಳಿದಿದ್ದಾರೆ.

ಆ ಸಾಂಗ್ ನಲ್ಲಿ ಒಳ ಉಡುಪು ಧರಿಸಿರಲಿಲ್ಲ, ಎಂಬ ಶಾಕಿಂಗ್ ಹೇಳಿಕೆ ಕೊಟ್ಟ ಸ್ಟಾರ್ ನಟಿ! ಅಷ್ಟಕ್ಕೂ ಆನಂತರ ಆಗಿದ್ದೇನು ಗೊತ್ತಾ?

ಸಂಜು ಬಸಯ್ಯನವರು ಕೂಡ ನಿಜವಾದ ಪ್ರೀತಿಗೆ ಯಾವುದೇ ಧರ್ಮ ಜಾತಿ ಹಾಗೂ ಇನ್ನಿತರ ವಿಚಾರಗಳು ಅಡ್ಡಿ ಬರಲಾರದು. ಎಲ್ಲವನ್ನು ಎದುರಿಸಿ ಸಾಧಿಸಿ ತೋರಿಸುವುದೇ ಪ್ರೀತಿ. ನಿಜವಾದ ಪ್ರೀತಿಗೆ ಜಯ ಸಿಕ್ಕೆ ಸಿಗುತ್ತದೆ ನಾನು ಪಲ್ಲವಿ ಅದನ್ನು ಕಂಡುಕೊಂಡಿದ್ದೇವೆ. ನಮ್ಮ ಏಳು ವರ್ಷಗಳ ಪ್ರೀತಿ ಇಂದು ಮದುವೆಯ ಮೂಲಕ ಒಂದಾಗಿದೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಸದಾ ಕಾಲ ಹೀಗೆ ಇರಲಿ ಎಂಬ ಕ್ಯಾಪ್ಶನ್ ಬರೆದು ತಮ್ಮ ಪತ್ನಿಯೊಂದಿಗೆ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಹಾಸ್ಯ ನಟ ಸಂಜು ಬಸಯ್ಯಇದನ್ನು ಕಂಡಂತಹ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುವ ಮೂಲಕ ನವ ಜೋಡಿಗಳನ್ನು ನೂರು ಕಾಲ ಹೀಗೆ ಸುಖವಾಗಿ ಬಾಳಿ ಎಂದು ಹರಸಿ ಆಶೀರ್ವದಿಸುತ್ತಿದ್ದಾರೆ.

ಈಗಾಗಲೇ ಇಂತಿ ನಿಮ್ಮ ಬೈರಾ, ಯಜಮಾನ, ಅವಂತಿಕ,‌ ಪರಸಂಗ ಸೇರಿದಂತೆ ಎಂಟಕ್ಕೂ ಅಧಿಕ ಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ಬಣ್ಣ ಹಚ್ಚಿರುವ ಸಂಜು ಬಸಯ್ಯನವರಿಗೆ ಮುಂದಿನ ದಿನಗಳಲ್ಲಿ ಹೇಳಿಕೊಳ್ಳುವಂತಹ ಯಶಸ್ವಿ ಸಿನಿಮಾಗಳ ಅವಕಾಶ ದೊರಕಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ

Kannada Comedy Kiladigalu Actor Sanju Basayya Marriage