ನೆನಪಿದ್ದಾರಾ ಜೋಗಿ ಸಿನಿಮಾ ನಟಿ ಜೆನಿಫರ್ ಕೊತ್ವಾಲ್! ಲಾಂಗ್ ಹಿಡಿದರು ಶಿವಣ್ಣನನ್ನು ಬಿಡದೆ ಕಾಡಿದ ಈ ನಟಿ ಏನಾದ್ರೂ?
ಅಪ್ರತಿಮ ಸುಂದರಿಯರಲ್ಲಿ ಜೆನಿಫರ್ ಕೊತ್ವಾಲ್ (Actress Jennifer Kotwal) ಅಲಿಯಾಸ್ ಜೋಗಿ ಸಿನಿಮಾದ (Jogi Cinema) ನಾಯಕನಟಿ ಕೂಡ ಒಬ್ಬರು. ಮೂಲತಃ ಮುಂಬೈ ಬೆಡಗಿಯಾದ ಈ ನಟಿ ಕನ್ನಡ ಸಿನಿಮಾ ರಂಗದ ಮೂಲಕ ತಮ್ಮ ಅಭಿನಯದ ಕರಿಯರ್ರನ್ನು ಪ್ರಾರಂಭ ಮಾಡಿ ಬಹುದೊಡ್ಡ ಹೆಸರನ್ನು ಸಂಪಾದನೆ ಮಾಡಿಕೊಂಡರು.
ಸ್ನೇಹಿತರೆ ಎಲ್ಲೋ ಬೆರಳೆಣಿಕೆಯಷ್ಟು ನಟಿಯರು ಮಾತ್ರ ದಶಕಗಳ ಕಾಲ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ತಮ್ಮ ಅಮೋಘ ಅಭಿನಯದ ಮೂಲಕ ಬಾರಿ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಇನ್ನಷ್ಟು ನಟಿಯರು ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿ ಇದ್ದಕ್ಕಿದ್ದ ಹಾಗೆ ಕನ್ನಡ ಸಿನಿಮಾ ರಂಗದಿಂದ (Kannada Film Industry) ಮಾಯವಾಗಿ ಬಿಡುತ್ತಾರೆ.
ಅಂತಹ ಅಪ್ರತಿಮ ಸುಂದರಿಯರಲ್ಲಿ ಜೆನಿಫರ್ ಕೊತ್ವಾಲ್ (Actress Jennifer Kotwal) ಅಲಿಯಾಸ್ ಜೋಗಿ ಸಿನಿಮಾದ (Jogi Cinema) ನಾಯಕನಟಿ ಕೂಡ ಒಬ್ಬರು. ಮೂಲತಃ ಮುಂಬೈ ಬೆಡಗಿಯಾದ ಈ ನಟಿ ಕನ್ನಡ ಸಿನಿಮಾ ರಂಗದ ಮೂಲಕ ತಮ್ಮ ಅಭಿನಯದ ಕರಿಯರ್ರನ್ನು ಪ್ರಾರಂಭ ಮಾಡಿ ಬಹುದೊಡ್ಡ ಹೆಸರನ್ನು ಸಂಪಾದನೆ ಮಾಡಿಕೊಂಡರು.
ಆದರೆ ಇದ್ದಕ್ಕಿದ್ದ ಹಾಗೆ ನಟಿ ಜನಿಫರ್ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸದೆ ಇರುವುದು ಅಭಿಮಾನಿಗಳಿಗೆ ಕೊಂಚ ಬೇಸರವನ್ನು ತಂದಂತಹ ಸಂಗತಿ. ಅಷ್ಟಕ್ಕೂ ಇದ್ದಕ್ಕಿದ್ದ ಹಾಗೆ ಜೆನಿಫರ್ ಕೊತ್ವಾಲ್ ಸಿನಿಮಾ ರಂಗದಿಂದ ದೂರ ಉಳಿಯುವ ನಿರ್ಧಾರಕ್ಕೆ ಬಂದಿದ್ದಾದರೂ ಯಾಕೆ?
ವೈಯಕ್ತಿಕ ಘಟನೆಯಿಂದಾಗಿ ಚಿತ್ರರಂಗ ತೋರೆದ್ರ ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಮೂಲತಹ ಮುಂಬೈನವರಾದ ಜನಿಫರ್ ಒಬ್ಬಳೇ ಮಗಳಾಗಿದ್ದ ಕಾರಣ ಬಹಳನೇ ಮುದ್ದಾಗಿ ಬೆಳೆಸಿರುತ್ತಾರೆ. ಹೀಗೆ ಚಿಕ್ಕಂದಿನಿಂದಲೂ ಮಾಡ್ಲಿಂಗ್ ಕ್ಷೇತ್ರದ ಮೇಲೆ ಬಹಳನೇ ಆಸಕ್ತಿ ಹೊಂದಿದ್ದ ಜನಿಫರ್ ತಮ್ಮ ಮಾದಕ ಮೈಮಾಟದ ಮೂಲಕ ಸಾಕಷ್ಟು ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಆಗಿ ಮಾಡಲಾಗಿ ಗುರುತಿಸಿಕೊಂಡಿದ್ದರು.
ಬೆರಳೆಣಿಕೆಯಷ್ಟು ಕನ್ನಡ ಸಿನಿಮಾಗಳಲ್ಲಿ (Kannada Movies) ಅಭಿನಯಿಸಿ ಸೆಲೆಬ್ರಿಟಿ ಪಟ್ಟವನ್ನು ಗಿಟ್ಟಿಸಿಕೊಂಡರು ಕೂಡ ಸಾಮಾನ್ಯ ಹೆಣ್ಣು ಮಗಳಂತೆ ಬದುಕಲು ಇಷ್ಟಪಡುತ್ತಿದ್ದರಂತೆ. ಈ ಕಾರಣದಿಂದ ಕರ್ನಾಟಕದಲ್ಲಿ ಇದ್ದಷ್ಟು ದಿನ ಮಾತ್ರ ಸೆಲೆಬ್ರಿಟಿಯಾಗಿ ಬದುಕುತ್ತಿದ್ದರು.
ಕನ್ನಡ ಸಿನಿಮಾ ರಂಗದಲ್ಲಿಯೂ ಕೆಲವೇ ಕೆಲವು ಆತ್ಮೀಯ ಸ್ನೇಹಿತರನ್ನು ಹೊಂದಿದ್ದ ಜೆನಿಫರ್ ಕೊತ್ವಾಲ್ ಅವರು ಶರ್ಮಿಳಾ ಮಾಂಡ್ರೆ ಅವರೊಂದಿಗೆ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದರು.
ಜೋಗಿ ಸಿನಿಮಾದ ಮೂಲಕ ಬಹುದೊಡ್ಡ ಹೆಸರನ್ನು ಸಂಪಾದಿಸಿದ ಈ ನಟಿಗೆ ಕನ್ನಡದಲ್ಲಿ ಸಾಲು ಸಾಲು ಅವಕಾಶಗಳು ಹರಸಿ ಬಂದವು. ಒಂದು ಕಾಲಘಟ್ಟದಲ್ಲಿ ಹಲವಾರು ಕನ್ನಡ ಸಿನಿಮಾಗಳಲ್ಲಿ (Kannada Cinema) ಬಣ್ಣ ಹಚ್ಚಿದ ಈ ನಟಿಗೆ ಇಂಜುರಿಯಾಗುತ್ತದೆ.
ಇದಾದ ನಂತರ ಯಾವುದೇ ಐಟಂ ಸಾಂಗ್ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಹೇಳಿಕೆ ನೀಡಿದರು, ಅಲ್ಲದೆ ಪೋಷಕ ಪಾತ್ರಗಳಲ್ಲಿಯೂ ಅಭಿನಯಿಸಲು ನಟಿ ಜೆನಿಫರ್ ಕೊತ್ವಾಲ್ ಅವರಿಗೆ ಇಷ್ಟ ಇರ್ಲಿಲ್ವಂತೆ.
ಹೀಗೆ ಕಾಲಕ್ರಮೇಣ ಅವಕಾಶಗಳು ಕೈತಪ್ಪಿದ ಕಾರಣ ತಮ್ಮ ವೈಯಕ್ತಿಕ ಬದುಕಿನತ್ತ ಗಮನಹರಿಸಿದ ಜೆನಿಫರ್ ಬೆಂಗಳೂರನ್ನು ತೊರೆದು ತಮ್ಮ ತವರೂರು ಮುಂಬೈಗೆ ಹಾರಿ ತಮ್ಮ ತಂದೆ ತಾಯಿಯ ಬಿಸಿನೆಸ್ ನೋಡಿಕೊಳ್ಳುತ್ತಿದ್ದಾರೆ.
Kannada Jogi Cinema Fame Actress Jennifer Kotwal Unknown Facts
Follow us On
Google News |