ತಂದೆಯ ಜೇಬಿನಿಂದ ದುಡ್ಡು ಕದ್ದಿದ್ದಕ್ಕೆ ತಾಯಿಯೇ ಬಾಲಣ್ಣನವರನ್ನು ಮನೆಯಿಂದ ಆಚೆ ಹಾಕಿದ್ರಂತೆ! ಅಷ್ಟಕ್ಕೂ ಬಾಲಣ್ಣ ನಟನಾದದ್ದು ಹೇಗೆ ಗೊತ್ತಾ?
ನಟ ಬಾಲಣ್ಣನವರು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವಾಗಲೇ ನಾಟಕದ ಹುಚ್ಚನ್ನು ಬೆಳೆಸಿಕೊಳ್ಳುತ್ತಾರೆ. ಈ ಕಾರಣದಿಂದ ತಮ್ಮ ಸಾಕು ತಂದೆಯ ಜೇಬಿನಲ್ಲಿ ಅಂದು ದುಡ್ಡು ಕದ್ದಿದ್ದರಂತೆ.
ಡಾಕ್ಟರ್ ರಾಜಕುಮಾರ್ ನರಸಿಂಹ ರಾಜು ಹಾಗೂ ಬಾಲಣ್ಣನವರ ಕಾಂಬಿನೇಷನ್ ತೆರೆಯ ಮೇಲೆ ಬಂದರೆ ಸಾಕು ಅಲ್ಲಿ ಜನರಿಗೆ ಪೈಸ ವಸೂಲ್ ಮನೋರಂಜನೆ ಇರುವುದು ಪಕ್ಕ ಎಂದು ಊಹಿಸುತ್ತಿದ್ದಂತಹ ಕಾಲವದು.
ತಮ್ಮ ಅಮೋಘ ಅಭಿನಯ ಹಾಗೂ ಕಾಮಿಡಿ ಟೈಮಿಂಗ್ ಮೂಲಕ ಕನ್ನಡ ಸಿನಿಮಾರಂಗದಲ್ಲಿ (Kannada Cinema Industry) ವಿಶೇಷ ಹೆಸರನ್ನು ಸಂಪಾದಿಸಿದ್ದ ಸಾಕಷ್ಟು ಕಲಾವಿದರಲ್ಲಿ ನಟ ಬಾಲಕೃಷ್ಣ (Actor Balakrishna) ಅಲಿಯಾಸ್ ಬಾಲಣ್ಣನವರು ಕೂಡ ಒಬ್ಬರು.
1911 ರಲ್ಲಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜನಿಸಿದ ಬಾಲಣ್ಣನವರು ದಿನ ಗೂಲಿ ಕಾರ್ಮಿಕನ ಮಗನಾಗಿ ಜನಿಸುತ್ತಾರೆ. ತಂದೆ ತೀವ್ರವಾದ ಕಾಯಿಲೆಗೆ ತುತ್ತಾದ ಕಾರಣ ತಾಯಿಯಾದವಳು ಕಂಡ ಕಂಡಲ್ಲಿ ಭಿಕ್ಷೆ ಬೇಡಿ ಹಣ ಹೊಂದಿಸಿ ಗಂಡನ ಆಸ್ಪತ್ರೆ ಖರ್ಚು ಹಾಗೂ ಮಕ್ಕಳ ಊಟದ ವ್ಯವಸ್ಥೆ ಮಾಡುತ್ತಿದ್ದರು.
ಹೀಗೆ ಕಡು ಬಡತನದ ಕುಟುಂಬದಲ್ಲಿ ಬೆಳೆದಂತಹ ಬಾಲಣ್ಣನವರು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವಾಗಲೇ ನಾಟಕದ ಹುಚ್ಚನ್ನು ಬೆಳೆಸಿಕೊಳ್ಳುತ್ತಾರೆ. ಈ ಕಾರಣದಿಂದ ತಮ್ಮ ಸಾಕು ತಂದೆಯ ಜೇಬಿನಲ್ಲಿ ಅಂದು ದುಡ್ಡು ಕದ್ದಿದ್ದರಂತೆ.
ಯಾರಿಗೂ ಕಾಣಿಸಿಕೊಳ್ಳದ ವಿಷ್ಣುವರ್ಧನ್ ಅವರ ಮತ್ತೋರ್ವ ಪುತ್ರಿ ಯಾರು ಗೊತ್ತಾ? ಮಾಧ್ಯಮದ ಮುಂದೆ ಬರಲು ಹಿಂಜರಿಕೆ ಯಾಕೆ?
ಹೌದು ಗೆಳೆಯರೇ ಎಲ್ಲರೂ ಕೈ ಬಿಟ್ಟ ಪರಿಸ್ಥಿತಿಯಲ್ಲಿ ಬಾಲಣ್ಣನವರ ತಾಯಿ ಉಮಾ ಅವರ ಕೈ ಹಿಡಿದಿದ್ದು ಸಾಕು ತಂದೆ, ಅಂಥವರ ಜೇಬಿನಲ್ಲೇ ದುಡ್ಡು ಕದ್ದ ಮಾಹಿತಿ ತಿಳಿದೊಡನೆ ಅವರ ತಾಯಿ ಹೊಡೆದು ಬಡೆದು ಬಾಲಣ್ಣನವರನ್ನು ಮನೆಯಿಂದ ಆಚೆ ಕಳುಹಿಸಿಬಿಡುತ್ತಾರೆ.
ಹೀಗೆ ಇದ್ದಂತಹ ಒಂದೇ ಒಂದು ಸೂರಿನ ಋಣವು ಅಂದು ಬಾಲಣ್ಣನವರ ಪಾಲಿಗೆ ತೀರಿ ಹೋಗಿತ್ತು. ಮುಂದೆ ಎಲ್ಲಿ ಹೋಗಬೇಕು ಏನು ಮಾಡಬೇಕು ಎಂಬುದರ ಸಣ್ಣ ಅರಿವು ಅವರಿಗಿರಲಿಲ್ಲ ಅಂತಹ ಸಂದರ್ಭದಲ್ಲಿ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರಂತೆ.
ಆನಂತರ ಬೋರ್ಡ್ ಬರೆಯುವುದು ಗೇಟ್ ಕಾಯುವುದು ಪೋಸ್ಟರ್ ಅಂಟಿಸುವುದು ಹೀಗೆ ಮುಂತಾದ ಕೆಲಸಗಳನ್ನು ಮಾಡುತ್ತಾ ಹೇಗೋ ತಮ್ಮ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಿದ್ದ ಬಾಲಣ್ಣನವರು ಕೃಷ್ಣ ಲೀಲಾ ಎಂಬುವ ನಾಟಕದ ಮೂಲಕ ತಮ್ಮ ನಟನಾ ಪಯಣವನ್ನು ಶುರು ಮಾಡಿದರು. ಹೀಗೆ ಹಲವಾರು ನಾಟಕ ಕಂಪನಿಗಳಲ್ಲಿ ಕೆಲಸ ಮಾಡತೊಡಗಿದ ಬಾಲಣ್ಣನವರು ಐವತ್ತಕ್ಕೂ ಹೆಚ್ಚಿನ ನಾಟಕಗಳನ್ನು ಬರೆದಿದ್ದಾರೆ.
ಹೀಗೆ ನಾಟಕ ರಂಗದಲ್ಲಿ ನಂಟನ್ನು ಬೆಳೆಸಿಕೊಂಡ ಬಾಲಣ್ಣನವರು 1943ರಲ್ಲಿ ರಾಧಾ ರಮಣ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಹಾಸ್ಯ ಕಲಾವಿದನಾಗಿ ಎಂಟ್ರಿ ಕೊಟ್ಟರು.
ತಮ್ಮ ಅಮೋಘ ಅಭಿನಯ, ಎಂತಹ ಪಾತ್ರ ನೀಡಿದರು ಅದರೊಳಗೆ ಪರಕಾಯ ಪ್ರವೇಶ ಮಾಡುವ ಈ ನಟ ಸುಮಾರು ಐನೂರ ಹತ್ತಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡರು.
ಅದರಲ್ಲೂ ಡಾಕ್ಟರ್ ರಾಜಕುಮಾರ್ ಅವರ ಅತಿ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಬಾಲಣ್ಣ ತಾವೇ ಅಭಿಮಾನ್ ಸ್ಟುಡಿಯೋ ಒಂದನ್ನು ಸಹ ನಿರ್ಮಿಸಿ, ತನ್ನಂತೆ ಕಷ್ಟಪಟ್ಟು ಸಿನಿ ಬದುಕಿನಲ್ಲಿ ಯಶಸ್ಸನ್ನು ಕಾಣಬೇಕೆಂಬ ಆಸೆ ಕನಸನ್ನು ಹೊಂದಿರುವ ಕಲಾವಿದರನ್ನು ಪ್ರೋತ್ಸಾಹಿಸಿದರು. ಸದ್ಯ ಬಾಲಣ್ಣನವರ ಅಗಲಿಕೆಯ ನಂತರ ಅವರ ಮಕ್ಕಳು ಈ ಸ್ಟುಡಿಯೋವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಹುಡುಗಿ ಯಾರು ಗೊತ್ತಾ?
Kannada Senior Actor Balakrishna Real Life Story interesting Facts