Mohan Juneja, ಮೋಹನ್ ಜುನೇಜಾ ನಿಧನಕ್ಕೆ ಕನ್ನಡ ಚಿತ್ರರಂಗ ತೀವ್ರ ಸಂತಾಪ
Mohan Juneja, ಕನ್ನಡದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕನ್ನಡದ ಖ್ಯಾತ ಹಾಸ್ಯ ನಟ ಮೋಹನ್ ಜುನೇಜಾ (Mohan Juneja) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮೋಹನ್ ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಧಾರಾವಾಹಿ ನಟನಾಗಿ ವೃತ್ತಿ ಜೀವನ ಆರಂಭಿಸಿದ ಮೋಹನ್ ಇತ್ತೀಚಿನ ದಿನಗಳಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಉತ್ತಮ ನಟನಾಗಿ ಗುರುತಿಸಿಕೊಂಡಿದ್ದರು. ಅವರು ಇಲ್ಲಿಯವರೆಗೆ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕೊನೆಯ ಬಾರಿಗೆ ಕೆಜಿಎಫ್ ಚಾಪ್ಟರ್ -2 ರಲ್ಲಿ ಕಾಣಿಸಿಕೊಂಡರು. ಮೋಹನ್ ನಿಧನಕ್ಕೆ ಕನ್ನಡ ಚಿತ್ರರಂಗ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮೋಹನ್ ಜುನೇಜಾ ಅವರು ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿ ಜನಿಸಿದರು. ‘ಚೆಲ್ಲಾಟ’ ಚಿತ್ರದ ಮೂಲಕ ಕನ್ನಡದಲ್ಲಿ ಅವರಿಗೆ ಒಳ್ಳೆಯ ಮನ್ನಣೆ ಸಿಕ್ಕಿತು. ಒಂದು ರೀತಿಯಲ್ಲಿ ಈ ಚಿತ್ರ ಅವರ ವೃತ್ತಿ ಬದುಕಿಗೆ ಒಳ್ಳೆಯ ಬ್ರೇಕ್ ನೀಡಿತು.
ಈ ಚಿತ್ರದಲ್ಲಿ ಮೋಹನ್ ಹಾಸ್ಯನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ‘ಮಾಸ್ತಿ’, ‘ರಾಮ್ ಲೀಲಾ’, ‘ಬಚ್ಚನ್’, ‘ಕೆಜಿಎಫ್’ ಚಿತ್ರಗಳಲ್ಲಿ ಉತ್ತಮ ನಟನೆಂದೇ ಗುರುತಿಸಿಕೊಂಡಿದ್ದಾರೆ.
ಕೆಜಿಎಫ್ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಚಿತ್ರದ ಡೈಲಾಗ್ ಅವರಿಗೆ ಕನ್ನಡ ಸೇರಿದಂತೆ… ಹಿಂದಿ, ತೆಲುಗಿನಲ್ಲೂ ಒಳ್ಳೆಯ ಜನಪ್ರಿಯತೆ ತಂದುಕೊಟ್ಟಿತ್ತು.
ಕನ್ನಡದ ಖ್ಯಾತ ಹಾಸ್ಯ ನಟರಾದ ಮೋಹನ್ ಜುನೇಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ.
ನಮ್ಮ ಕೆಜಿಎಫ್ ಚಿತ್ರ ತಂಡದ ಜತೆಗಿನ ಅವರ ಅವಿನಾಭಾವ ಸಂಬಂಧ ಮರೆಯಲಾರೆವು.
Our heartfelt Condolences to actor Mohan Juneja's family, friends & well-wishers. He was one of the best-known faces in Kannada films & our KGF family. pic.twitter.com/xDDHanWuY0
— Hombale Films (@hombalefilms) May 7, 2022
ಕನ್ನಡದ ಹೆಸರಾಂತ ಹಾಸ್ಯನಟ ಮೋಹನ್ ಜುನೇಜಾ ಅನಾರೋಗ್ಯದಿಂದ ಮೃತಪಟ್ಟ ಸುದ್ದಿ ಆಘಾತ ತಂದಿದೆ.
ಸುಮಾರು 150 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಜುನೇಜಾ ತಮ್ಮ ಹಾಸ್ಯ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.
ನಟ ಮೋಹನ್ ಜುನೇಜಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/BNBnjRCeX4— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) May 7, 2022
ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಜನಪ್ರಿಯ ಹಾಸ್ಯ ನಟ ಮೋಹನ್ ಜುನೇಜಾ ಅವರು ಅನಾರೋಗ್ಯದಿಂದ ನಿಧನರಾದ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು. ಭಗವಂತ ಅವರ ಆತ್ಮಕ್ಕೆ ಸದ್ಗತಿ ಕರುಣಿಸಿ, ಕುಟುಂಬ ಸದಸ್ಯರು, ಅಭಿಮಾನಿಗಳು ಹಾಗೂ ಆಪ್ತರಿಗೆ ಈ ದುಃಖ ಭರಿಸುವ ಶಕ್ತಿ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ. pic.twitter.com/Pjf7yxmU9z
— Kourava B.C.Patil (@bcpatilkourava) May 7, 2022
ಕೆ. ಜಿ. ಎಫ್. ಚಿತ್ರದಲ್ಲಿ "ಮಾನ್ಸ್ಟರ್" ಎಂದ ನಟ ಮೋಹನ್ ಜುನೇಜಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.#ಮೋಹನ್_ಜುನೇಜಾ pic.twitter.com/T9G9D8cLhc
— Koo Kannada (@KooKannada) May 7, 2022
Sandalwood Actor Mohan Juneja Passed Away
ಇದನ್ನೂ ಓದಿ : Mohan Juneja: ಸ್ಯಾಂಡಲ್ವುಡ್ ನಟ ಮೋಹನ್ ಜುನೇಜಾ ಇನ್ನಿಲ್ಲ
Follow Us on : Google News | Facebook | Twitter | YouTube