KGF 2 ಯಶಸ್ಸಿನ ಬಗ್ಗೆ ಯಶ್ ಹೇಳಿದ್ದೇನು ? Yash ಹೇಳಿಕೆ ವೈರಲ್

ಸದ್ಯ ದೇಶಾದ್ಯಂತ 'ಕೆಜಿಎಫ್‌-2' ಮೇನಿಯಾ ನಡೆಯುತ್ತಿದೆ. ಭಾಷಿಕ ಭಿನ್ನತೆಗಳನ್ನು ಮೀರಿ ಚಿತ್ರ ದಾಖಲೆಯ ಕಲೆಕ್ಷನ್ಸ್‌ನಲ್ಲಿ ಮುನ್ನುಗ್ಗುತ್ತಿದೆ, ಈ ನಡುವೆ ಯಶ್ ಟ್ವೀಟ್ ವೈರಲ್ ಆಗಿದೆ.

KGF Fame Yash Tweet Goes Viral : ಸದ್ಯ ದೇಶಾದ್ಯಂತ ‘ಕೆಜಿಎಫ್‌-2’ ಮೇನಿಯಾ ನಡೆಯುತ್ತಿದೆ. ಭಾಷಿಕ ಭಿನ್ನತೆಗಳನ್ನು ಮೀರಿ ಚಿತ್ರ ದಾಖಲೆಯ ಕಲೆಕ್ಷನ್ಸ್‌ನಲ್ಲಿ ಮುನ್ನುಗ್ಗುತ್ತಿದೆ. ಚಿತ್ರದ ಅಗಾಧ ಯಶಸ್ಸಿಗೆ ನಾಯಕ ಯಶ್ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

‘ಒಂದು ಪುಟ್ಟ ಗ್ರಾಮ ಹಲವು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದೆ. ಗ್ರಾಮಸ್ಥರೆಲ್ಲ ಸೇರಿ ಮಳೆಗಾಗಿ ಪ್ರಾರ್ಥಿಸುತ್ತಾರೆ. ಅಲ್ಲಿಗೆ ಒಬ್ಬ ಹುಡುಗ ಕೊಡೆ ಹಿಡಿದು ಬರುತ್ತಾನೆ. ಎಲ್ಲಾ ಜನರು ಅವನನ್ನು ನೋಡುತ್ತಾರೆ ಮತ್ತು ನಗುತ್ತಾರೆ. ಕೆಲವರು ಮೂಢನಂಬಿಕೆ ಎಂದು ಮೂದಲಿಸುತ್ತಾರೆ.

KGF 2 ಯಶಸ್ಸಿನ ಬಗ್ಗೆ ಯಶ್ ಹೇಳಿದ್ದೇನು ? Yash ಹೇಳಿಕೆ ವೈರಲ್

KGF 2 ಯಶಸ್ಸಿನ ಬಗ್ಗೆ ಯಶ್ ಹೇಳಿದ್ದೇನು ? Yash ಹೇಳಿಕೆ ವೈರಲ್ - Kannada News

ಆದ್ರೆ ಆ ಹುಡುಗನ ಬಳಿ ಏನಿದೆ ಗೊತ್ತಾ.. ನಂಬಿಕೆ. ಮಳೆ ಬರುತ್ತದೆ ಎಂಬ ನಂಬಿಕೆ…. ನಾನು ಆ ಚಿಕ್ಕ ಹುಡುಗನಂತೆಯೇ ಇದ್ದೇ, ಹಾಗಾಗಿ ಇಂದು ಈ ಯಶಸ್ಸನ್ನು ಆನಂದಿಸುತ್ತಿದ್ದೇನೆ. ನಿಮ್ಮೆಲ್ಲರಿಗೂ ಧನ್ಯವಾದ ಹೇಳುವುದು ಬಹಳ ಚಿಕ್ಕ ವಿಷಯ, ಕೇವಲ ದನ್ಯವಾದದಿಂದ ಇದು ಮುಕ್ತಾಯ ಆಗುವುದಿಲ್ಲ.. ಆದರೂ ಹೇಳಲೇಬೇಕು… ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು.

‘ಕೆಜಿಎಫ್’ ತಂಡವು ಅಂತಹ ಅದ್ಭುತ ಯಶಸ್ಸನ್ನು ಸಾಧಿಸಿದೆ. ಚಿತ್ರಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಯಶ್ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Yash Tweet Goes Viral – Web Story

https://kannadanews.today/web-stories/kgf-fame-yash-makes-a-optimistic-tweet/

KGF Fame Yash Tweet Goes Viral

Follow us On

FaceBook Google News