ಇನ್ಮುಂದೆ ರೀಮೇಕ್ ಸಿನಿಮಾ ಮಾಡಲ್ಲ; ಮೆಗಾಸ್ಟಾರ್ ಚಿರಂಜೀವಿ ಖಡಕ್ ನಿರ್ಧಾರ! ಯಾಕೆ ಗೊತ್ತಾ?
Chiranjeevi: ಮೆಗಾಸ್ಟಾರ್ ಚಿರಂಜೀವಿ ತಮ್ಮ ಮುಂದಿನ ಸಿನಿಮಾವನ್ನು ಯುವ ನಿರ್ದೇಶಕರೊಬ್ಬರ ಜೊತೆ ಮಾಡಲು ರೆಡಿಯಾಗುತ್ತಿದ್ದಾರೆ. ಈ ಸಿನಿಮಾವನ್ನು ರೀಮೇಕ್ ಸಿನಿಮಾ ಮಾಡದೇ ನೇರವಾಗಿ ತೆಲುಗು ಸಿನಿಮಾ ಮಾಡಲು ಚಿರು ಆಸಕ್ತಿ ತೋರುತ್ತಿದ್ದಾರೆ.
Chiranjeevi: ಮೆಗಾಸ್ಟಾರ್ ಚಿರಂಜೀವಿ ಅವರ ಹೊಸ ಸಿನಿಮಾ ‘ಭೋಲಾ ಶಂಕರ್’ ಈಗಾಗಲೇ ಶರವೇಗದಲ್ಲಿ ಚಿತ್ರೀಕರಣ ನಡೆಸುತ್ತಿದೆ. ಈ ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶನ ಮಾಡುತ್ತಿದ್ದು, ತಮಿಳಿನ ‘ವೇದಾಲಂ’ ಚಿತ್ರದ ತೆಲುಗು ರಿಮೇಕ್ ಆಗಿ ಚಿತ್ರತಂಡ ಈ ಚಿತ್ರವನ್ನು ನಿರ್ಮಿಸುತ್ತಿದೆ.
ಈಗಾಗಲೇ ಈ ಚಿತ್ರವು ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ, ಜೊತೆಗೆ ಚಿತ್ರದ ಪೋಸ್ಟರ್ ಗಳು, ಚಿತ್ರದ ಅಪ್ಡೇಟ್ ಗಳೂ ಸಹ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿವೆ.
ಇನ್ನು ಈ ಚಿತ್ರವನ್ನು ಆದಷ್ಟು ಬೇಗ ಮುಗಿಸುವ ಭರವಸೆ ಚಿತ್ರತಂಡದ್ದು. ಏತನ್ಮಧ್ಯೆ, ಈ ಚಿತ್ರ ಮುಗಿಯುವ ಮುನ್ನವೇ ಚಿರು ತಮ್ಮ ಮುಂದಿನ ಚಿತ್ರವನ್ನು ಓಕೆ ಮಾಡಲು ಸಿದ್ಧರಾಗುತ್ತಿದ್ದಾರೆ.
ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿಸಿದ ಸಮಂತಾ, ಬೆಲೆ ಎಷ್ಟು ಕೋಟಿ ಗೊತ್ತಾ? ಈ ಬೆಲೆಗೆ 50 ಮನೆ ಕಟ್ಟಬಹುದು
ಈಗಾಗಲೇ ಅನೇಕ ನಿರ್ದೇಶಕರು ಚಿರಂಜೀವಿಗೆ ತಮ್ಮ ಕಥೆಗಳನ್ನು ಹೇಳುತ್ತಿದ್ದಾರೆ. ಈ ಕ್ರಮದಲ್ಲಿ ಇಬ್ಬರು ಯುವ ನಿರ್ದೇಶಕರಿಗೆ ಚಿರಂಜೀವಿ ಓಕೆ ಹೇಳಿದ್ದಾರೆ ಎಂಬ ವರದಿಗಳೂ ಇವೆ. ಅವರಲ್ಲಿ ಯುವ ನಿರ್ದೇಶಕ ಕಲ್ಯಾಣ್ ಕೃಷ್ಣ ಕೂಡ ಒಬ್ಬರು.
ಆದ್ರೆ, ಅವರು ಚಿರಂಜೀವಿ ಜೊತೆ ಮಾಡಲೊರಟಿರುವ ಸಿನಿಮಾ ಮಲಯಾಳಂ ಸಿನಿಮಾವೊಂದರ ರಿಮೇಕ್.. ಮಲಯಾಳಂನ ‘ಬ್ರೋ ಡ್ಯಾಡಿ’ ಸಿನಿಮಾವನ್ನು ತೆಲುಗಿಗೆ ರಿಮೇಕ್ ಮಾಡಲು ಚಿರು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಇಂಡಸ್ಟ್ರಿ ವಲಯದಲ್ಲಿ ಕೇಳಿ ಬರುತ್ತಿದೆ.
ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣಗಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ ಕೆಲವರು ಚಿರಂಜೀವಿ ಅವರು ಮತ್ತೆ ರಿಮೇಕ್ ಮಾಡುವುದು ಬೇಡ ಎಂದರೆ ಇನ್ನು ಕೆಲವರು ಕಥೆ ಚೆನ್ನಾಗಿದ್ದರೆ ಮಾಡುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
ಬಾಹುಬಲಿ ಸಿನಿಮಾ ಹೀರೋಯಿನ್ ಅನುಷ್ಕಾ ಶೆಟ್ಟಿಗೆ ಎಂತಾ ಕಷ್ಟ ಬಂದಿದೆ ಗೊತ್ತಾ? ಟಾಪ್ ನಟಿ ಸಂಕಷ್ಟದಲ್ಲಿ!
ಈ ನಡುವೆ ಇತ್ತೀಚೆಗಷ್ಟೇ ಸರಣಿ ರೀಮೇಕ್ ಚಿತ್ರಗಳ ಮೂಲಕ ತೆರೆಗೆ ಬರುತ್ತಿರುವ ಚಿರಂಜೀವಿ, ಭೋಲಾಶಂಕರ್ ಕೂಡ ರಿಮೇಕ್ ಸಿನಿಮಾ ಆಗಿದ್ದು, ಅವರ ಮುಂದಿನ ಸಿನಿಮಾ ತೆಲುಗು ಸ್ಕ್ರಿಪ್ಟ್ ನಲ್ಲೇ ಇರಬೇಕು, ರಿಮೇಕ್ ಬೇಡ ಎಂಬುದರ ಬಗ್ಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಟಾಪ್ ನಟಿ ಆಗಿದ್ರೂ ಮಾಲಾಶ್ರೀ ಜೊತೆ, ವಿಷ್ಣುವರ್ಧನ್ ರವರು ಯಾಕೆ ನಟಿಸಲಿಲ್ಲ ಗೊತ್ತೇ?
ಇದರೊಂದಿಗೆ ಚಿರು ತಮ್ಮ ಮುಂದಿನ ಸಿನಿಮಾವನ್ನು ರೀಮೇಕ್ ಸಿನಿಮಾ ಮಾಡುವ ಯಾವ ಲಕ್ಷಣ ಕಾಣುತ್ತಿಲ್ಲ. ಹೊಸ ಕಥೆ ಹೊಸ ನಿರ್ದೇಶಕರ ಮೇಲೆ ಚಿರಂಜೀವಿ ಆಸಕ್ತಿ ತೋರುತ್ತಿದ್ದಾರೆ. ಈ ಸುದ್ದಿಯೊಂದಿಗೆ, ಕಲ್ಯಾಣ್ ಕೃಷ್ಣ ಅವರೊಂದಿಗಿನ ಚಿರು ಮುಂಬರುವ ಚಿತ್ರವು ಖಂಡಿತವಾಗಿಯೂ ಮೂಲ ತೆಲುಗು ಚಿತ್ರವಾಗಬಹುದು ಎಂಬ ಸುದ್ದಿ ಮತ್ತೊಮ್ಮೆ ಸುತ್ತುತ್ತಿದೆ. ಆದರೆ, ಈ ಸುದ್ದಿ ಎಷ್ಟು ಸತ್ಯ ಎಂಬುದು ತಿಳಿಯಬೇಕಾದರೆ ಚಿತ್ರತಂಡದಿಂದ ಅಧಿಕೃತ ಘೋಷಣೆಯಾಗುವವರೆಗೆ ಕಾಯಲೇಬೇಕು.
No more remake movies, Megastar Chiranjeevi Decision