ಶೀಘ್ರದಲ್ಲೇ ಸೆಟ್ಟೇರಲಿದೆ ಸೂಪರ್ ಹಿಟ್ ಸಿನಿಮಾ ಪುಷ್ಪಾ ಸೀಕ್ವೆಲ್ Pushpa 2
Pushpa sequel Pushpa 2 is coming soon : ಪುಷ್ಪಾ ಸೀಕ್ವೆಲ್ ಪುಷ್ಪಾ..ದಿ ರೂಲ್ (ಪುಷ್ಪಾ 2) ಬರಲಿದೆಯಂತೆ. ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ, ಈ ಬಗ್ಗೆ ತಯಾರಿ ಜೋರಾಗಿ ನಡೆದಿದೆ.
Pushpa sequel Pushpa 2 is coming soon : ಸುಕುಮಾರ್ – ಡಿಎಸ್ ಪಿ ಮತ್ತು ಅಲ್ಲು ಅರ್ಜುನ್.. ಈ ಕ್ರೇಜಿ ಕಾಂಬಿನೇಷನ್ ಸಿನಿಪ್ರೇಮಿಗಳಿಗೆ ಬೇಕಾದ ಎಲ್ಲಾ ಅಂಶಗಳನ್ನು ನೀಡುವ ಚಮತ್ಕಾರಿ ಕಾಂಬಿನೇಷನ್, ಹೌದು ಈಗ ಅಭಿಮಾನಿಗಳಿಗೆ ಮತ್ತೊಂದು ಸುದ್ದಿ ನೀಡಿದ್ದಾರೆ. ಅದುವೇ ಪುಷ್ಪ ಮುಂದುವರೆದ ಭಾಗ.
ಈ ಮೂವರು ಈಗಾಗಲೇ ಆರ್ಯ ಮತ್ತು ಆರ್ಯ 2 ನಂತಹ ಸಾರ್ವಕಾಲಿಕ ಸೂಪರ್ ಹಿಟ್ ಆಲ್ಬಂಗಳನ್ನು ನೀಡಿ ಸಿನಿರಸಿಕರ ಮನಗೆದ್ದಿದ್ದಾರೆ. ಒಂದ್ಕಕಿಂತ ಒಂದು ಹಾಡುಗಳು ಸೂಪರ್ ಹಿಟ್.
ಇತ್ತೀಚೆಗೆ ದೇವಿ ಶ್ರೀಪ್ರಸಾದ್ ಸಂಗೀತ ಪ್ರೇಮಿಗಳಿಗೆ ಪುಷ್ಪ..ದಿ ರೈಸ್ (ಪುಷ್ಪ) ನೀಡಿ ಸಂಗೀತ ಪ್ರೇಮಿಗಳನ್ನು ನಿದ್ದೆಗೆಡಿಸಿದ್ದಾರೆ, ಬಿಡುಗಡೆಗೊಂಡ ಪ್ರತಿ ಭಾಷೆಯಲ್ಲೂ ಹಾಡುಗಳು ಹಿಟ್ ಆಗಿವೆ.
ಪುಷ್ಪಾ 2
ಟ್ರೆಂಡ್ ಸೆಟ್ಟರ್ ಆಗಿ ನಿಲ್ಲುವಂತೆ ಪುಷ್ಪ ಸಿನಿಮಾದಲ್ಲಿ ಪ್ರತಿ ಹಾಡನ್ನೂ ಡಿಎಸ್ಪಿ ಕಂಪೋಸ್ ಮಾಡಿ ತೋರಿಸಿದ್ದಾರೆ, ಇಂದಿಗೂ ಹಾಡುಗಳು ಸಿನಿರಸಿಕರ ಮನಗೆದ್ದಿದೆ. ಪುಷ್ಪಾ ಸೀಕ್ವೆಲ್ ಪುಷ್ಪಾ..ದಿ ರೂಲ್ (ಪುಷ್ಪಾ 2) ಬರಲಿದೆಯಂತೆ. ಸದ್ಯದಲ್ಲೇ ಚಿತ್ರ ಸೆಟ್ಟೇರಲಿದೆ, ಈ ಬಗ್ಗೆ ತಯಾರಿ ಜೋರಾಗಿ ನಡೆದಿದೆ.
ದೇವಿ ಶ್ರೀ ಪ್ರಸಾದ್ ಈಗಾಗಲೇ ಚಿತ್ರಕ್ಕಾಗಿ ಮೂರು ಹಾಡುಗಳನ್ನು ರಚಿಸಿದ್ದಾರೆ. ಎರಡನೇ ಭಾಗಕ್ಕೆ ಹೊಂದಿಕೆಯಾಗುವಂತೆ ಕಂಪೋಸ್ ಮಾಡಿದ್ದಾರಂತೆ. ಲೇಟೆಸ್ಟ್ ಟಾಕ್ ಪ್ರಕಾರ, ಪುಷ್ಪ 2 ಗಾಗಿ ಮೂರು ಹಾಡುಗಳನ್ನು ಸಿದ್ಧಪಡಿಸಲಾಗಿದೆ. ಆದರೆ, ಸುಕುಮಾರ್ ಸಿನಿಮಾ ವಿಶೇಷ ಹಾಡು ಅಥವಾ ಐಟಂ ಸಾಂಗ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
Pushpa Cinema Trailer
Pushpa Movie Dialogue
Follow Us on : Google News | Facebook | Twitter | YouTube