KGF ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ರಾಮ್ ಚರಣ್ ಸಿನಿಮಾ

Ram Charan movie with KGF director: ಈ ಹಿಂದೆ ಪ್ರಶಾಂತ್ ನೀಲ್ ರಾಮ್ ಚರಣ್ ಅವರನ್ನು ಭೇಟಿಯಾದಾಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲಿದೆ ಎಂದು ಎಲ್ಲರೂ ಭಾವಿಸಿದ್ದರು.

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಇತ್ತೀಚಿನ ಮಲ್ಟಿಸ್ಟಾರರ್ ಚಿತ್ರ ‘RRR’ ಬಾಕ್ಸ್ ಆಫೀಸ್ನಲ್ಲಿ ಸೆನ್ಸೇಷನಲ್ ಹಿಟ್ ಆಗಿದೆ. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಯಂಗ್ ಟೈಗರ್ ಎನ್ ಟಿಆರ್ ಮತ್ತೊಬ್ಬ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಚರಣ್ ಅವರ ಪವರ್ ಪ್ಯಾಕ್ಡ್ ಪರ್ಫಾರ್ಮೆನ್ಸ್ ಎಲ್ಲಾ ವರ್ಗದ ಪ್ರೇಕ್ಷಕರಿಂದ ಅಗಾಧ ಪ್ರತಿಕ್ರಿಯೆಯನ್ನು ಪಡೆಯಿತು. ಈ ಸಿನಿಮಾದ ನಂತರ ಚರಣ್ ತಮ್ಮ ಮುಂದಿನ ಸಿನಿಮಾವನ್ನು ಈಗಾಗಲೇ ಆರಂಭಿಸಿದ್ದು, ಚಿತ್ರೀಕರಣವನ್ನು ವೇಗವಾಗಿ ನಡೆಸುತ್ತಿದ್ದಾರೆ.

ತಮಿಳಿನ ಸ್ಟಾರ್ ಡೈರೆಕ್ಟರ್ ಶಂಕರ್ ಅವರ ನಿರ್ದೇಶನದಲ್ಲಿ ಚರಣ್ ತಮ್ಮ ವೃತ್ತಿಜೀವನದ 15 ನೇ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಪ್ರೇಕ್ಷಕರು ಹಾಗೂ ಸಿನಿ ವಲಯದಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

KGF ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ರಾಮ್ ಚರಣ್ ಸಿನಿಮಾ

ಈ ಸಿನಿಮಾದ ನಂತರ ಚರಣ್ ಮುಂದಿನ ಸಿನಿಮಾ ಯಾರ ಜೊತೆ ಮಾಡ್ತಾರೆ ಅನ್ನೋದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಈ ಜೊತೆಗೆ ಚಿತ್ರರಂಗದಲ್ಲಿ ಹಲವು ನಿರ್ದೇಶಕರ ಹೆಸರು ಕೇಳಿ ಬರುತ್ತಿದೆ. ಅವರಲ್ಲಿ ಜರ್ಸಿ ಚಿತ್ರದ ನಿರ್ದೇಶಕ ಗೌತಮ್ ತಿಣ್ಣನೂರಿ ಮತ್ತು ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್ ಸೇರಿದ್ದಾರೆ.

ಆದರೆ, ಈ ಹಿಂದೆ ಪ್ರಶಾಂತ್ ನೀಲ್ ಚರಣ್ ಅವರನ್ನು ಭೇಟಿಯಾದಾಗ ಇವರಿಬ್ಬರ ಕಾಂಬಿನೇಷನ್ ನಲ್ಲಿ ಸಿನಿಮಾ ಬರಲಿದೆ ಎಂದು ಎಲ್ಲರೂ ಭಾವಿಸಿದ್ದರು. ಶೀಘ್ರದಲ್ಲೇ ಈ ಬಗ್ಗೆ ಪ್ರಕಟಣೆ ಹೊರಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದರು…. ಆದರೆ ಈಗ ಅದು ಕೇವಲ ವದಂತಿ ಎಂದು ಗೊತ್ತಾಗಿದೆ.

ಪ್ರಶಾಂತ್ ನೀಲ್ ಜೊತೆ ರಾಮ್ ಚರಣ್

ಸದ್ಯ ಕೆಜಿಎಫ್2 ಸಿನಿಮಾ ಪ್ರಚಾರದಲ್ಲಿ ನಿರತರಾಗಿರುವ ಪ್ರಶಾಂತ್ ನೀಲ್ ಸಂದರ್ಶನವೊಂದರಲ್ಲಿ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕೆಜಿಎಫ್ 2 ನಂತರ ಪ್ರಭಾಸ್ ಜೊತೆ ಸಲಾರ್ ಸಿನಿಮಾ, ನಂತರ ತಾರಕ್ ಜೊತೆ ಒಂದು ಸಿನಿಮಾ, ಉಗ್ರಂ ಹೀರೋ ಜೊತೆ ಇನ್ನೊಂದು ಸಿನಿಮಾ.. ಹೀಗೆ ಸಾಲು ಸಾಲು ಸಿನಿಮಾಗಳು ಬರುತ್ತಿವೆ ಎಂದ ಅವರು ರಾಮ್ ಚರಣ್ ಬಗ್ಗೆ ಪ್ರಸ್ತಾಪಿಸಿಲ್ಲ.

ಇದರೊಂದಿಗೆ ಚರಣ್-ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಕೇವಲ ವದಂತಿ ಎಂದು ಪ್ರೇಕ್ಷಕರು ಫಿಕ್ಸ್ ಆಗಿದ್ದಾರೆ. ಅಲ್ಲದೆ ಪ್ರಶಾಂತ್ ನೀಲ್ ವಿರುದ್ಧ ಮೆಗಾ ಅಭಿಮಾನಿಗಳು ಕಿಡಿಕಾರಿದ್ದಾರೆ.

KGF ಡೈರೆಕ್ಟರ್ ಜೊತೆ ರಾಮ್ ಚರಣ್ ಸಿನಿಮಾ

Follow Us on : Google News | Facebook | Twitter | YouTube