RRR ನಿರ್ದೇಶಕ SS Rajamouli ಅವರ ಸೂಪರ್‌ಹಿಟ್ ಸಿನಿಮಾಗಳು
RRR Director SS Rajamouli: ಎಸ್ ಎಸ್ ರಾಜಮೌಳಿ ನಿರ್ದೇಶನದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ, ಬಹುತೇಕ ಎಲ್ಲಾ ಚಿತ್ರಗಳು ಸೂಪರ್ ಹಿಟ್. ಆರ್‌ಆರ್‌ಆರ್‌ಗೂ ಮುನ್ನ ರಾಜಮೌಳಿ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ..
ಎಸ್ ಎಸ್ ರಾಜಮೌಳಿ ನಿರ್ದೇಶನದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ, ಬಹುತೇಕ ಎಲ್ಲಾ ಚಿತ್ರಗಳು ಸೂಪರ್ ಹಿಟ್. ಆರ್‌ಆರ್‌ಆರ್‌ಗೂ ಮುನ್ನ ರಾಜಮೌಳಿ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ..
RRR (ಆರ್‌ಆರ್‌ಆರ್)
ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ RRR ಬಿಡುಗಡೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್, ಜೂನಿಯರ್ NTR, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ನಟಿಸಿದ್ದಾರೆ.
RRR ಚಿತ್ರವು ಅಭಿಮಾನಿಗಳಿಂದ ಮತ್ತು ವಿಮರ್ಶಾತ್ಮಕವಾಗಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಆರ್‌ಆರ್‌ಆರ್‌ಗೂ ಮುನ್ನ ರಾಜಮೌಳಿ ಹಲವು ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ.
Bahubali (ಬಾಹುಬಲಿ)
ಈ ಚಿತ್ರ 2015 ರಲ್ಲಿ ಬಿಡುಗಡೆಯಾಯಿತು. ಚಿತ್ರವು ಜಾಗತಿಕವಾಗಿ 650 ಕೋಟಿ ಗಳಿಸಿತ್ತು. ಚಿತ್ರದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿದ್ದರು.
ಬಾಹುಬಲಿ ಚಿತ್ರದ ನಿರ್ದೇಶನ, ಕಥೆ, ನಟನೆ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಅನುಷ್ಕಾ ಶೆಟ್ಟಿ ಮತ್ತು ತಮನ್ನಾ ಭಾಟಿಯಾ ಮುಖ್ಯ ಭೂಮಿಕೆಯಲ್ಲಿದ್ದರು, ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸನ್ನು ಪಡೆಯಿತು.
Bahubali 2 (ಬಾಹುಬಲಿ 2)
ಈ ಐತಿಹಾಸಿಕ ಚಿತ್ರ ಬಾಹುಬಲಿ 2 ಎಲ್ಲಾ ದಾಖಲೆಗಳನ್ನು ಮುರಿಯಿತು. ಮತ್ತು ಈ ಚಿತ್ರ ಜಾಗತಿಕವಾಗಿ 1800 ಕೋಟಿ ಗಳಿಸಿತ್ತು. ಒಂದಕ್ಕಿಂತ ಒಂದು ಸಿನಿಮಾ ಸಿನಿರಸಿಕರ ನಿರೀಕ್ಷೆ ಕಡಿಮೆ ಮಾಡಲಿಲ್ಲ.
ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ಮೈಲಿಗಲ್ಲು ಮುರಿದ ಮೊದಲ ಭಾರತೀಯ ಚಿತ್ರ ಇದಾಗಿದೆ. ಚಿತ್ರದಲ್ಲಿ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಮುಖ್ಯ ಭೂಮಿಕೆಯಲ್ಲಿದ್ದರು.
EEga – Makkhi (ಈಗ)
2012 ರಲ್ಲಿ ಬಂದ ಕಾಲ್ಪನಿಕ ನಾಟಕ (ಈಗ) ಮಕ್ಕಿ ಕೂಡ ಹಿಟ್ ಆಗಿತ್ತು. ಈ ಚಿತ್ರದ ಕಥೆ ಅಭಿಮಾನಿಗಳನ್ನು ಸೆಳೆಯಿತು. ಈ ಚಿತ್ರ 130 ಕೋಟಿ ಗಳಿಸಿ ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿತ್ತು.
Magadhira (ಮಗಧೀರ)
ಕಾಜಲ್ ಮತ್ತು ರಾಮ್ ಚರಣ್ ಅವರ 2009 ರ ತೆಲುಗು ಚಿತ್ರ ಮಗಧೀರ ಪುನರ್ಜನ್ಮದ ಕಥೆಯನ್ನು ಆಧರಿಸಿದೆ. ಈ ಚಿತ್ರವು 2 ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿತು ಮತ್ತು ಚಿತ್ರವು 150 ಕೋಟಿ ಗಳಿಸಿತು.
Yamadonga (ಯಮದೊಂಗ)
ಈ ಚಿತ್ರವು 2007 ರಲ್ಲಿ ತೆರೆಕಂಡ ಸಿನಿಮಾ. ಜೂನಿಯರ್ NTR ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದರು. ಇದು ಅವರ ವೃತ್ತಿಜೀವನದ ಅತಿದೊಡ್ಡ ಬ್ಲಾಕ್ಬಸ್ಟರ್ ಆಯಿತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು..
Follow Us on : Google News | Facebook | Twitter | YouTube