Welcome To Kannada News Today

Ram charan Teja, ರಿಯಲ್ ಲೈಫ್ Hero, ಅಭಿಮಾನಿ ಕುಟುಂಬಕ್ಕೆ 10 ಲಕ್ಷ ಸಹಾಯ

Telugu Hero Ram charan Teja donates Rs 10 lakh to his fan family

🌐 Kannada News :

ಕನ್ನಡ ನ್ಯೂಸ್ ಟುಡೇ

ಸಿನಿಮಾ : ಮೆಗಾ ಹೀರೋ ರಾಂಚರಣ್ ತೇಜ್ ತಮ್ಮ ಮಾನವೀಯತೆಯನ್ನು ತೋರಿಸಿದ್ದಾರೆ. ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಚಿರಂಜೀವಿ ಫ್ಯಾನ್ ಕ್ಲಬ್ ಮುಖಂಡ ನೂರ್ ಮೊಹಮ್ಮದ್ ಅವರ ಕುಟುಂಬಕ್ಕೆ ಸಹಾಯ ಹಸ್ತ ಚಾಚುವ ಮೂಲಕ ಅವರಿಗೆ ಸಾಂತ್ವಾನ ಹೇಳಿದ್ದಾರೆ..

ಖುದ್ದು  ರಾಂಚರಣ್ ತೇಜ್ ರವರೆ, ಅಭಿಮಾನಿ ಮನೆಗೆ ಕರೆ ಮಾಡಿ ಅವರ ಮನೆಗೆ ತೆರಳಿ ರೂ. 10 ಲಕ್ಷ ಚೆಕ್ ಅವರಿಗೆ ಹಸ್ತಾಂತರಿಸಲಾಯಿತು. ಈ ಸಮಯದಲ್ಲಿ ಮಾತನಾಡಿದ ರಾಂಚರಣ್, “ಅಭಿಮಾನಿಯಾಗಿ ಅವರ ಸೇವೆಗಳನ್ನು ಎಂದಿಗೂ ಮರೆಯಲಾಗುವುದಿಲ್ಲ ಎಂದರು. ರಾಂಚರಣ್ ತೇಜ್ ನೂರ್ ಮೊಹಮ್ಮದ್ ಕುಟುಂಬದೊಂದಿಗೆ ಸುಮಾರು 45 ನಿಮಿಷಗಳನ್ನು ಕಳೆದರು.

ಚಿರಂಜೀವಿ ಫ್ಯಾನ್ ಕ್ಲಬ್‌ನ ನಾಯಕರಾಗಿ ನೂರ್ ಅನೇಕ ಚಟುವಟಿಕೆಗಳನ್ನು ಆಯೋಜಿಸಿದ್ದರು. ಅವರ ಇತ್ತೀಚಿನ ಮರಣದ ನಂತರ, ಮೆಗಾಸ್ಟಾರ್ ಚಿರಂಜೀವಿ ಕೂಡ ಸಿಕಂದರಾಬಾದ್‌ನಲ್ಲಿರುವ ಅವರ ಮನೆಗೆ ತೆರಳಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಆ ಸಮಯದಲ್ಲಿ, ರಾಮ್ ಚರಣ್ ವಿದೇಶದಲ್ಲಿ ಇದ್ದ ಕಾರಣ ಭೇಟಿಗೆ ಸಾಧ್ಯವಾಗಿರಲಿಲ್ಲ.

ರಾಂಚರಣ್ ತೇಜ್ ನೂರ್ ಮೊಹಮ್ಮದ್ ಅವರ ಮಗನಿಗೂ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೂ ಬಾಲಕಿಯರ ಮದುವೆಗೆ ಸಹಾಯ ಮಾಡುವುದಾಗಿ ತಿಳಿದುಬಂದಿದೆ. ಈ ಸಂದರ್ಭಲ್ಲಿ ನೂರ್ ಅವರ ಕುಟುಂಬ ಮೆಗಾಸ್ಟಾರ್ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದೆ. ನೂರ್ ಮೊಹಮ್ಮದ್ ಅವರು ಡಿಸೆಂಬರ್ 8, 2019 ರಂದು ನಿಧನರಾದರು. 

Web Title : Telugu Hero Ram charan Teja donates Rs 10 lakh to his fan family
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ  Facebook  | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.


 

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile