Pushpa The Rule: ಪುಷ್ಪ… ದಿ ರೈಸ್’ (Pushpa The Rise) ಚಿತ್ರದ ಯಶಸ್ಸಿನ ನಂತರ… ಅದರ ಮುಂದುವರಿದ ಭಾಗವೇ ‘ಪುಷ್ಪ ದಿ ರೂಲ್’ (Pushpa The Rule – ಪುಷ್ಪ 2) ಚಿತ್ರಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.. ಪುಷ್ಪಾ ಸಿನಿಮಾಟೋಗ್ರಾಫರ್ ಶೇರ್ ಮಾಡಿರುವ ಲೇಟೆಸ್ಟ್ ಫೋಟೋ ನೋಡಿ ಅಲ್ಲು ಅರ್ಜುನ್ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ.
‘ಪುಷ್ಪ: ದಿ ರೂಲ್’ ಸಿನಿಮಾ ಅಭಿಮಾನಿಗಳ ಬಹು ನಿರೀಕ್ಷಿತ ಸೀಕ್ವೆನ್ಸ್‌ಗಳಲ್ಲಿ ಒಂದಾಗಿದೆ. ಈ ಬಗ್ಗೆ ನಿರ್ಮಾಪಕರು ಘೋಷಿಸಿದಾಗಿನಿಂದ, ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಯಶ್ ಗೆ ಎರಡು ಮೆಗಾ ಆಫರ್! ನೋ ಅಂದ ರಾಕಿಬಾಯ್
ಅವರ ನಿರೀಕ್ಷೆಗೆ ತಕ್ಕಂತೆ ಈ ಬಾರಿ ಇನ್ನಷ್ಟು ಚನ್ನಾಗಿ ಮೂಡಿ ಬರಲು ಚಿತ್ರತಂಡ ತಯಾರಿ ನಡೆಸುತ್ತಿದೆ. ಲೊಕೇಶನ್, ವಿಶುವಲ್ ಎಫೆಕ್ಟ್ ಇತ್ಯಾದಿ ತಂತ್ರಜ್ಞಾನದ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ ಎಂದು ವರದಿಯಾಗಿದೆ. ಮತ್ತು ಪುಷ್ಪಾ ಸಿನಿಮಾಟೋಗ್ರಾಫರ್ ಮಿರೋಸ್ಲಾ ಕುಬಾ ಬ್ರೋಜೆಕ್ ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಇತ್ತೀಚಿನ ಫೋಟೋ ಎಲ್ಲರನ್ನು ಆಕರ್ಷಿಸುತ್ತಿದೆ.
ಅಲ್ಲುಅರ್ಜುನ್ ಅವರ ಫೋಟೋ ಶೂಟ್‌ಗೆ ಸಂಬಂಧಿಸಿದ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ ಮತ್ತು “ಸಾಹಸ ಪ್ರಾರಂಭವಾಗಿದೆ. ಐಕಾನ್ ಸ್ಟಾರ್ ಅಲ್ಲುಅರ್ಜುನ್ ಅವರಿಗೆ ಧನ್ಯವಾದಗಳು..” ಎಂದು ಬರೆದುಕೊಂಡಿದ್ದಾರೆ.
ವಾಟ್ಸಾಪ್ ಬಳಕೆದಾರರಿಗೆ ಭರ್ಜರಿ ಅಪ್ ಡೇಟ್, ಬಂತು ಹೊಸ ವೈಶಿಷ್ಟ್ಯ
ಈ ಫೋಟೋ ನೋಡಿದ ಬನ್ನಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಅವರು ತಮ್ಮ ಸಂತೋಷವನ್ನು ಕಾಮೆಂಟ್‌ಗಳ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. 2024ರ ರಾಷ್ಟ್ರ ಪ್ರಶಸ್ತಿಗೆ ಈ ಒಂದು ಫೋಟೋ ಸಾಕು’ ಎಂದು ಒಬ್ಬರು ಹೇಳಿದರೆ… ಭಾರತೀಯ ಬಾಕ್ಸ್ ಆಫೀಸ್ ಬುಡಮೇಲು ಮಾಡಲು ಬನ್ನಿ ತಯಾರಿ ನಡೆಸುತ್ತಿದ್ದಾರೆ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ಮೀಮ್ ಗಳು ಹರಿದಾಡುತ್ತಿದ್ದು, ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಎಂದಿದ್ದಾರೆ.
The cinematographer shared the latest photo of Pushpa 2 Pushpa The Rule
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.