ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನ
KNT [ Kannada News Today] :
ಕಿಶೋರಿ ಬಲ್ಲಾಳ್, ಎಂದೆಡೆ ನಮ್ಮ ಕಣ್ಣ ಮುಂದೆ ಬರೋದು ತಾಯಿ, ಅಜ್ಜಿ ಪಾತ್ರಗಳಿಗೆ ಜೀವತುಂಬುತ್ತಿದ್ದ ಕನ್ನಡ ಕಲಾವಿದರು, ಹಿರಿಯ ಟಿವಿ ನಟಿ ಕಿಶೋರಿ ಬಲ್ಲಾಳ್.
ಹಲವು ಸಿನಿಮಾ, ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನಟಿ ಕಿಶೋರಿ ಬಲ್ಲಾಳ್ ನಿಧನರಾಗಿದ್ದಾರೆ. ಅನೇಕ ಸಿನಿಮಾಗಳಲ್ಲಿ ಅಜ್ಜಿ, ತಾಯಿ ಪಾತ್ರಗಳ ಮೂಲಕ ನಮ್ಮನ್ನು ರಂಜಿಸಿದ್ದ ನಟಿ ಹಿರಿಯ ನಟಿ ಕಿಶೋರಿ ಬಲ್ಲಾಳ್ ಇನ್ನಿಲ್ಲ. ಅವರು ರವಿ ಗರಣಿ ನಿರ್ದೇಶನದ ‘ಅಮೃತವರ್ಷಿಣಿ’ ಧಾರಾವಾಹಿಯಲ್ಲಿ ಸಹ ನಟಿಸಿದ್ದರು.
ಹಿರಿಯ ನಟಿ ಕಿಶೋರಿ ಬಲ್ಲಾಳ್ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆ ಸೇರಿದ್ದ ಅವರು ನಿಧನರಾಗಿದ್ದಾರೆ ಎಂದು ಮಾದ್ಯಮಕ್ಕೆ ಅವರ ಸೊಸೆ ಅಹಲ್ಯಾ ಬಲ್ಲಾಳ್ ತಿಳಿಸಿದ್ದಾರೆ.
ಕಿಶೋರಿ ಬಲ್ಲಾಳ್ ರವರು 1960ರಲ್ಲಿ ‘ಇವಳೆಂಥ ಹೆಂಡತಿ’ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದರು. 72 ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಕಿಶೋರಿ ಬಲ್ಲಾಳ್ ರಿಗೆ ಸಲ್ಲುತ್ತದೆ. ‘ಸ್ವದೇಶ್’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಕಿಶೋರಿ ಬಲ್ಲಾಳ್ ನಟಿಸಿದ್ದರು. ಹಲವಾರು ಹಿಂದಿ ಸಿನಿಮಾ, ಜಾಹೀರಾತಿನಲ್ಲಿಯೂ ಸಹ ಕಿಶೋರಿ ಬಲ್ಲಾಳ್ ಅಭಿನಯಿಸಿದ್ದರು.
Web Title : The famous Kannada TV actress kishori ballal is no more
ಕನ್ನಡ ನ್ಯೂಸ್ ನವೀಕರಣಗಳಿಗಾಗಿ ನಮ್ಮ Facebook | Twitter । YouTube News Channel ಅನುಸರಿಸಿ. Latest News ಜೊತೆಗೆ Breaking News ನೀವಿರುವಲ್ಲಿಯೇ ಪಡೆಯಿರಿ.