ಅವನೊಬ್ಬ ಡೈರೆಕ್ಟರ್ ಏನ್ರೀ? ಎಂದು ಹೀಯಾಳಿಸಿದವರ ಮುಂದೆ ರಿಯಲ್ ಸ್ಟಾರ್ ಉಪ್ಪಿ ಮೆರೆದಿದ್ದು ಹೇಗೆ ಗೊತ್ತಾ?

ರಿಯಲ್ ಸ್ಟಾರ್ ಉಪೇಂದ್ರ (Real Star Upendra), ಕನ್ನಡ ಚಿತ್ರರಂಗದ (Kannada Film Industry) ರಿಯಲ್ ಸ್ಟಾರ್, ಬುದ್ಧಿವಂತ ಎಂಬೆಲ್ಲ ಬಿರುದನ್ನು ಪಡೆದು ತಮ್ಮ ಸ್ಪೆಷಲ್ ಅಭಿನಯ ಹಾಗೂ ನಿರ್ದೇಶನದಿಂದಲೇ ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.

ಉಪ್ಪಿ ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಿರ್ದೇಶನದಲ್ಲಿಯೂ (Direction) ತಮ್ಮದೇ ಆದ ಕೈಚಳಕವನ್ನು ತೋರಿಸಿ ಸದ್ಯ ಪ್ರಜಾಕೀಯ ಎಂಬ ರಾಜಕೀಯ ಸಂಘದ ಮೂಲಕ ಜನಸೇವೆ ಮಾಡಲು ಮುಂದಾಗಿದ್ದಾರೆ.

ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡು ಜನರಿಗೆ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬರುತ್ತಿರುವ ಉಪ್ಪಿ ಇಂದು ಬಹು ದೊಡ್ಡ ಮಟ್ಟದ ಹೆಸರು ಹಾಗೂ ಅಭಿಮಾನಿ ಬಳಗವನ್ನು (Upendra Fans) ಸಂಪಾದಿಸಿದ್ದಾರೆ.

ನಿನ್ನನ್ನು ಯಾರು ಮದುವೆಯಾಗುತ್ತಾರೆ, ಆನೆ ತರ ಇದೆಯಾ ಎಂದವರಿಗೆ ಕಡಕ್ ತಿರುಗೇಟು ಕೊಟ್ಟ ಬ್ರಹ್ಮಗಂಟು ಗುಂಡಮ್ಮ!

ಆದರೆ ಉಪೇಂದ್ರ ಅವರ ಸಿನಿ ಬದುಕು (Cine Journey) ಆರಂಭಿಕ ದಿನಗಳಲ್ಲಿ ಅಷ್ಟು ಸುಲಭವಾಗಿ ಇರಲಿಲ್ಲ. ಉಪೇಂದ್ರ ಯಾವುದೇ ಪ್ರಯತ್ನ ಮಾಡ ಹೊರಟರು ಕೆಲಕಾಣದ ಕೈಗಳು ಅದನ್ನು ಹಾಳು ಮಾಡಲು ಬರುತ್ತಿದ್ದರು.

ಅದಲ್ಲದೆ ಅವನದು ಒಂದು ಸಿನಿಮಾನ? ಏನ್ರೀ ಕೆಪ್ಯಾಸಿಟಿ ಇದೆ ಅವನಿಗೆ ಎಂದೆಲ್ಲ ಹೀಯಾಳಿಸುತ್ತಿದ್ದರಂತೆ. ಇವರೆಲ್ಲರ ಮುಂದೆ ಉಪ್ಪಿ ದೊಡ್ಡ ಮಟ್ಟದ ಸ್ಟಾರ್ ಆಗಿ ಬೆಳೆದದ್ದು ಹೇಗೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಉಪೇಂದ್ರ ಅವರ ಡೈರೆಕ್ಷನ್ ಎಂಬ ಹೆಸರು ಕೇಳುತ್ತಿದ್ದ ಹಾಗೆ ಕನ್ನಡ ಹಿಟ್ ಸಿನಿಮಾ (Kannada Hit Cinema) ನಮ್ಮೆಲ್ಲರ ನೆನಪಿಗೆ ಬಂದು ಬಿಡುತ್ತದೆ.‌ ಅದು ಮತ್ಯಾವುದು ಅಲ್ಲ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪ್ರೇಮ ಅಭಿನಯದ ಓಂ ಸಿನಿಮಾ.

Kannada Actor Upendraಕಾಲೇಜು ದಿನಗಳಲ್ಲಿ ಉಂಟಾಗುವಂತಹ ಪ್ರೇಮ್ ಕಹಾನಿಯನ್ನು ತಮ್ಮ ವಿಶೇಷ ನಿರ್ದೇಶನದ ಶೈಲಿಯ ಮೂಲಕ ಇನ್ನಷ್ಟು ಮೆರುಗುಗೊಳಿಸಿದಂತಹ ಉಪೇಂದ್ರ ಚಿತ್ರದ ಸಕ್ಸಸ್ಗೆ ಕಾರಣರಾದರು.

ಒಂದಲ್ಲ ಎರಡಲ್ಲ ರಾಜ್ ಬಿ ಶೆಟ್ಟಿ ಬಾಳಲ್ಲಿ ಬಂದ ಮೂವರು ಹುಡುಗಿಯರು ಸಹ ರಿಜೆಕ್ಟ್ ಮಾಡಿದ್ಯಾಕೆ ಗೊತ್ತಾ?

ಹೀಗೆ ಈ ಒಂದು ಸಿನಿಮಾ ಬಹು ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿದ ನಂತರ ಉಪೇಂದ್ರ ಅವರು ಕನ್ನಡ ಸಿನಿಮಾ ರಂಗದ (Kannada Cinema Industry) ಬಹು ಬೇಡಿಕೆಯ ನಿರ್ದೇಶಕರಾಗಿ ಹೊರಹೊಮ್ಮಿದರು. ಆದರೆ ಈ ಮುನ್ನ ಕಾಶಿನಾಥ್, ಕುಮಾರ್ ಗೋವಿಂದ್ ಅವರೊಡನೆ ಕೆಲಸ ಮಾಡಿದ ಶ್ ಸಿನಿಮಾ ಇಂದಿಗೂ ಕನ್ನಡದ ದಿ ಬೆಸ್ಟ್ ಸಸ್ಪೆನ್ಸ್ ಹಾರರ್ ಚಿತ್ರಗಳಲ್ಲಿ ಒಂದಾಗಿದೆ.

ಹೀಗೆ ಮೊದಲ ಪ್ರಯತ್ನದಲ್ಲಿ ಉಪೇಂದ್ರ ಅವರಿಗೆ ಸಾಕಷ್ಟು ಸಕಾರಾತ್ಮಕ ಹಾಗೂ ನಕಾರಾತ್ಮಕ ಕಮೆಂಟ್ಗಳು ಎದುರಾದವು. ಅದರಲ್ಲೂ ಸಿನಿಮಾದ ಪ್ರಚಾರಕ್ಕೆ ಇಳಿದಾಗ ಅದೆಷ್ಟೋ ಜನರು ಇದೇನ್ರೀ ಇಂಥ ಟೈಟಲ್ ಅನ್ನು ಇಟ್ಟರೆ ಸಿನಿಮಾವನ್ನು ನೋಡೋಕೆ ಜನ ಬರ್ತಾರಾ? ಎಂದು ಆಡಿಕೊಂಡಿದ್ದರು.

ಇದು ಒಂದು ಸಿನಿಮಾನ? ಏನ್ರೀ ಕೆಪ್ಯಾಸಿಟಿ ಇದೆ ಅವನಿಗೆ? ಎಂದು ಇತರ ನಿರ್ದೇಶಕರು ಹಾಗೂ ಡಿಸ್ಟ್ರಿಬ್ಯೂಟರ್ಗಳು ಮಾತನಾಡಿಕೊಂಡಿದ್ದರಂತೆ. ಇದಕ್ಕೆ ಉಪ್ಪಿ ಪ್ರಚಾರದ ವೇಳೆ ಮಾತನಾಡುವಾಗ ತಮ್ಮ ಸಿನಿಮಾಗಳ ಮೇಲೆ ನಿರ್ದೇಶಕರಿಗೆ ಮಾತ್ರ ಬಲವಾದ ನಂಬಿಕೆ ಇರುತ್ತದೆ. ಅದೊಂದಿದ್ದರೆ ಸಾಕು ಸಿನಿಮಾ ಗೆಲ್ಲಲು ಎಂಬ ಉತ್ತರ ಕೊಟ್ಟಿದ್ದರು. ಅದರಂತೆ ಅವರ ಸಿನಿಮಾಗಳು ಕನ್ನಡದ ಸೂಪರ್ ಹಿಟ್ ಸಿನಿಮಾಗಳಲ್ಲಿ ಸೇರಿಕೊಂಡಿವೆ.

Unknown Facts About Kannada Actor Real Star Upendra Cine Journey

TRENDING ARTICLES1 / 5
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories