ಚಿತ್ರರಂಗದಿಂದ ದೂರವಾದ ಗಾಳಿಪಟ ಸಿನಿಮಾ ನಟಿ ಡೈಸಿ ಬೋಪಣ್ಣ ಈಗ ಹೇಗಿದ್ದಾರೆ ಏನ್ ಮಾಡ್ತಿದ್ದಾರೆ ಗೊತ್ತಾ?

ನಟಿ ಡೈಸಿ ಬೋಪಣ್ಣ ಅವರ ಬಗ್ಗೆ ಹೇಳುವುದಾದರೆ ಕನ್ನಡ ಚಿತ್ರರಂಗ ಕಂಡ ಸಹಜ ನಟನೆ ಗ್ಲಾಮರಸ್ ನಟಿಯರಲ್ಲಿ ಇವರು ಒಬ್ಬರು. ಕೊಡಗಿನಲ್ಲಿ ಜನಿಸಿದ ಈ ನಟಿ ಪ್ರಾರಂಭದಿಂದ ಚಿತ್ರಕಲೆ ಬಗ್ಗೆ ಆಸಕ್ತಿ ಹೊಂದಿದ್ದರು.

Bengaluru, Karnataka, India
Edited By: Satish Raj Goravigere

ಕನ್ನಡ ಚಿತ್ರರಂಗದಲ್ಲಿ 2007 ರಲ್ಲಿ ತೆರೆಕಂಡ ಗಣೇಶ್ ಅಭಿನಯದ ಗಾಳಿಪಟ ಚಿತ್ರವು (Kannada Gaalipata Cinema) ಬಹಳ ದಿನಗಳ ಕಾಲ ಬಹಳ ವಿಜೃಂಭಣೆಯಿಂದ ತನ್ನ ಸಿನಿಮಾ ಚಾಪನ್ನು ಎಲ್ಲೆಡೆ ಹಬ್ಬಿಸಿತ್ತು.

ಇನ್ನು ಈ ಚಿತ್ರದಲ್ಲಿ ನಟನೆ ಮಾಡಿರುವ ಡೈಸಿ ಬೋಪಣ್ಣ (Actress Daisy Bopanna) ಅವರ ಬಗ್ಗೆ ಹೇಳುವುದಾದರೆ ಕನ್ನಡ ಚಿತ್ರರಂಗ ಕಂಡ ಸಹಜ ನಟನೆ ಗ್ಲಾಮರಸ್ ನಟಿಯರಲ್ಲಿ ಇವರು ಒಬ್ಬರು. ಕೊಡಗಿನಲ್ಲಿ ಜನಿಸಿದ ಈ ನಟಿ ಪ್ರಾರಂಭದಿಂದ ಚಿತ್ರಕಲೆ ಬಗ್ಗೆ ಆಸಕ್ತಿ ಹೊಂದಿದ್ದರಿಂದ ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್ ಡಿಗ್ರಿ ಕೂಡ ಪಡೆದುಕೊಂಡರು.

ಚಿತ್ರರಂಗದಿಂದ ದೂರವಾದ ಗಾಳಿಪಟ ಸಿನಿಮಾ ನಟಿ ಡೈಸಿ ಬೋಪಣ್ಣ ಈಗ ಹೇಗಿದ್ದಾರೆ ಏನ್ ಮಾಡ್ತಿದ್ದಾರೆ ಗೊತ್ತಾ? - Kannada News

ಶಂಕರ್ ನಾಗ್ ಅವರ ಹೊಸ ಜೀವನ ಸಿನಿಮಾ ನಟಿ ದೀಪಿಕಾ ಅವರ ಈಗಿನ ನಿಜ ಜೀವನ ಹೇಗಿದೆ ಗೊತ್ತಾ?

ನಂತರ ಚಿತ್ರರಂಗಕ್ಕೆ ಪದಾರ್ಪಣೆ (Kannada Film Industry) ಮಾಡಿದ ಈ ನಟಿ ಭಗವಾನ್, ರಾಮ ಶಾಮ ಭಾಮ, ಗಾಳಿಪಟ ಹೀಗೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟು ಕನ್ನಡ ಚಿತ್ರರಂಗದಲ್ಲಿ ಬಹಳ ಬೇಡಿಕೆಯ ನಟಿಯಾಗಿ ಬೆಳೆದರು.

ಆದರೆ ಸಡನ್ ಆಗಿ 2012 ರಲ್ಲಿ ಚಿತ್ರರಂಗದಿಂದ ದೂರ ಸರಿದ ನಟಿ ಡೈಸಿ ಬೋಪಣ್ಣ ಅವರು ಈಗ ಏನು ಮಾಡುತ್ತಿದ್ದಾರೆ ಹಾಗೂ ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ? ಆ ಮಾಹಿತಿ ಸಂಪೂರ್ಣವಾಗಿ ತಿಳಿಸುತ್ತೇವೆ ಮುಂದೆ ಓಧಿ.

2011 ರಲ್ಲಿ ಬಿಸಿನೆಸ್ ಮ್ಯಾನ್ ಅಮಿತ್ ಜಾಜು ಅವರನ್ನು ಮದುವೆಯಾದ ನಟಿ ಡೈಸಿ ಬೋಪಣ್ಣ ಅವರು ಗಂಡನ ಜೊತೆಗೆ ಮುಂಬೈನಲ್ಲಿ ವಾಸ ಮಾಡಲು ಶುರು ಮಾಡಿದರು. ಅದಾಗಲೇ ಚಿತ್ರರಂಗದಿಂದ ದೂರ ಸರಿದಿದ್ದ ಈ ನಟಿ ಮದುವೆ ಆದ ನಂತರ ಇವರು ತಮ್ಮನ್ನು ತಾವು ಬೇರೆ ರಂಗದಲ್ಲಿ ತೊಡಗಿಸಿಕೊಂಡರು.

Kannada Actress Daisy Bopanna

ನಟ ಸುನಿಲ್ ಪ್ರಯಾಣಿಸುತ್ತಿದ್ದ ಕಾರಿಗೆ ಅಂದು ಅಪಘಾತವಾದಾಗ ಅಸಲಿಗೆ ನಡೆದಿದ್ದು ಏನು ಗೊತ್ತಾ? ನಟಿ ಮಾಲಾಶ್ರೀ ಮಾತ್ರ ಪಾರಾಗಿದ್ದು ಹೇಗೆ?

ತಾವು ಮನೆಯಲ್ಲಿ ಕೆಲಸವಿಲ್ಲದೆ ಬಿಡುವಿದ್ದಾಗ ಅದ್ಭುತ ಪೇಂಟಿಂಗ್ ಗಳನ್ನು ಮಾಡುವ ಈ ನಟಿ ಈಗ ಇವರು ಬೇರೆಯ ಕೆಲಸವನ್ನು ಶುರು ಮಾಡಿಕೊಂಡಿದ್ದಾರೆ.

ನಟಿ ಡೈಸಿ ಬೂಪಣ್ಣ ಅವರು ಈಗ ಫೋಟೋಗ್ರಾಫರ್ ಆಗಿ ಸಕ್ಕತ್ ಫೇಮಸ್ ಆಗಿದ್ದಾರೆ. ಮೊದಲು ಫ್ಯಾಮಿಲಿ ಫೋಟೋಶೂಟ್ಗಳನ್ನು ಮಾಡುತ್ತಿದ್ದ ಈ ನಟಿ ಈಗ ಮುಂಬೈನಲ್ಲಿ ಟಾಪ್ ಮೋಸ್ಟ್ ಮಾಡೆಲ್ ಫೋಟೋಗ್ರಾಫರ್ ಆಗಿ ಹೆಸರು ಮಾಡಿದ್ದಾರೆ.

ತಾವೇ ಮೇಕಪ್ ಆಗು ರೆಡಿ ಮಾಡಿ ಫೋಟೋಶೂಟ್ ಮಾಡುವ ನಟಿ ಡೈಸಿ ಬೂಪಣ್ಣ ಅವರು ಮುಂಬೈನಲ್ಲಿ ಅತಿ ದೊಡ್ಡ ಫೋಟೋಗ್ರಾಫರ್ ಆಗಿ ತಮ್ಮ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ.

ಬರೋಬ್ಬರಿ 500 ದಿನ ಯಶಸ್ವಿ ಪ್ರದರ್ಶನ ಕಂಡ ಜನುಮದ ಜೋಡಿ ಚಿತ್ರ ನಟಿ ಶಿಲ್ಪಾ ಸಿನಿಮಾ ರಂಗ ಕೈಬಿಟ್ಟಿದ್ದು ಏಕೆ ಗೊತ್ತಾ?

ನಟಿ ಡೈಸಿ ಬೋಪಣ್ಣನಾನು ಪ್ರಸಿದ್ಧ ನಟಿ ಹೀಗಾಗಿ ಸಿನಿಮಾವನ್ನು ಮಾತ್ರ ಮಾಡಬೇಕು ಎಂಬ ಆಲೋಚನೆಯನ್ನು ಪಕ್ಕಕ್ಕೆ ಇಟ್ಟು ಹೀಗೆ ಚಿತ್ರರಂಗ ಹೊರತಾಗಿ ಬೇರೆ ರಂಗದಲ್ಲಿಯೂ ಹೆಸರು ಮಾಡಬೇಕೆಂಬ ಮನವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿರುವ ಡೈಸಿ ಬೋಪಣ್ಣ ಅವರ ಆಲೋಚನೆ ಧೈರ್ಯ ಹಾಗೂ ಪರಿಶ್ರಮವನ್ನು ಮೆಚ್ಚಲೇಬೇಕು.

ಚಿತ್ರರಂಗದಲ್ಲಿ ಅಭಿನಯ ಮಾಡುವ ಎಲ್ಲಾ ನಟ ಹಾಗೂ ನಟಿಯರು ಅವಕಾಶಗಳು ಇಲ್ಲ ಎಂದು ಕೊರಗದೆ ಇವರಂತೆ ಬೇರೆ ಲೋಕದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂಬ ಮನಸ್ಸನ್ನು ಮಾಡಿಕೊಂಡರೆ ಅವರಿಗೂ ಒಳ್ಳೆಯ ಹೆಸರು ಬರುತ್ತದೆ ಹಾಗೂ ಅವರನ್ನು ಬೇರೆ ಲೋಕದಲ್ಲಿ ಗುರುತಿಸಿಕೊಂಡ ಹೆಮ್ಮೆಯೂ ಸಹ ಅವರಿಗೆ ಇರುತ್ತದೆ.

What is the reason behind Kannada Actress Daisy Bopanna left the film industry