ಬರೋಬ್ಬರಿ 500 ದಿನ ಯಶಸ್ವಿ ಪ್ರದರ್ಶನ ಕಂಡ ಜನುಮದ ಜೋಡಿ ಚಿತ್ರ ನಟಿ ಶಿಲ್ಪಾ ಸಿನಿಮಾ ರಂಗ ಕೈಬಿಟ್ಟಿದ್ದು ಏಕೆ ಗೊತ್ತಾ?
90ರ ದಶಕದಲ್ಲಿ ಕನ್ನಡ ಚಿತ್ರಗಳಿಗೆ (Kannada Cinema) ಏನೂ ಬರ ಇರಲಿಲ್ಲ ಒಂದರ ಮೇಲೆ ಒಂದು ಅದ್ಭುತ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು, 90ರ ದಶಕದಲ್ಲಿ ಬಿಡುಗಡೆಯಾದ ಎಲ್ಲಾ ಸಿನಿಮಾಗಳು ಬಾಕ್ಸಾಫೀಸ್ ಕಲೆಕ್ಷನ್ ಮಾಡುವಲ್ಲಿ ಯಶಸ್ಸು ಕಂಡಿದ್ದವು, ಅದೇ ಸಮಯದಲ್ಲಿ 1996ರಲ್ಲಿ ಬಿಡುಗಡೆಯಾದ ಶಿವಣ್ಣ (Actor Shiva Rajkumar) ಮತ್ತು ಶಿಲ್ಪಾ (Actress Shilpa) ನಟನೆಯ ಜನುಮದ ಜೋಡಿ (Janumada Jodi Cinema) ಸಾಕಷ್ಟು ಸದ್ದು ಮಾಡಿತ್ತು.
ಜನುಮದ ಜೋಡಿ ನೋಡದವರೇ ಇಲ್ಲ ಎಂಬುವಂತೆ ಸತತವಾಗಿ 500 ದಿನಗಳವರೆಗೂ ಓಡಿ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು, ಜನುಮದ ಜೋಡಿ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಶಿಲ್ಪಾ ಅವರು ನಟಿಸಿದ್ದರು.
ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಐಂದ್ರಿತಾ ರೇ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ದೂರವಾಗಿದ್ದು ಏಕೆ ಗೊತ್ತೇ?
ಅಂದಿನ ಕಾಲಕ್ಕೆ ಸಿನಿಮಾ ದಾಖಲೆಗಳನ್ನು ಸೃಷ್ಟಿಸಿತ್ತು, ಜನುಮದ ಜೋಡಿ ಸಿನಿಮಾದ ಮುಖಾಂತರ ಶಿಲ್ಪಾ ಅವರು ಕನ್ನಡಿಗರ ಮನಸಲ್ಲಿ ಅಚ್ಚ ಹಸಿರಂತೆ ಉಳಿದರು, ಇನ್ನು ಶಿಲ್ಪಾ ಅವರ ಬಗ್ಗೆ ಹೇಳುವುದಾದರೆ, ಅವರ ನಿಜವಾದ ಹೆಸರು ಚಿಪ್ಪಿ ರೆಂಜಿತ್ ಎಂದು ಮತ್ತು ಅವರು 1993ರಲ್ಲಿ ಪಾದ್ಯೆಮ್ ಎಂಬ ಮಲಯಾಳಂ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.
ಮೊದಮೊದಲು ಅವರು ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿದ್ದರು ಕೂಡ, 1996 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಜನುಮದ ಜೋಡಿ ಚಿತ್ರದಲ್ಲಿ ನಟಿಸಿದ್ದರು.
ರಾಕಿ ಬಾಯ್ ತಾಯಿ ಪಾತ್ರ ಮಾಡಿದ ಅರ್ಚನಾ ಜೋಯಿಸ್ ಕೆಜಿಎಫ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತೇ?
ಅದಾದ ನಂತರ ಅವರಿಗೆ ಸಿಕ್ಕ ಯಶಸ್ಸು ಅಷ್ಟಿಷ್ಟಲ್ಲ, ಅವರಿಗೆ ಅಂತಲೇ ಕನ್ನಡದಲ್ಲಿ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡರು. ಇನ್ನು ಶಿಲ್ಪಾ ಅವರಿಗೆ ಜನುಮದ ಜೋಡಿ ಚಿತ್ರದಲ್ಲಿ ಅಭಿನಯಿಸಿದಕ್ಕೆ ಅತ್ಯುತ್ತಮ ನಟಿ ಎಂದು ಗುರುತಿಸಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಕೊಡಲಾಯಿತು.
ಕನ್ನಡದಲ್ಲೇ ಗೆದ್ದು ಹೆಸರು ಮಾಡಿದ ಶಿಲ್ಪಾ ಅವರು ಕೊನೆಯದಾಗಿ ಚಿತ್ರರಂಗ ಬಿಟ್ಟಿದ್ದು ಕನ್ನಡ ಸಿನಿಮಾ ಒಂದರಲ್ಲಿ ನಟಿಸಿದ ಮೇಲೆಯೇ, ಶಿಲ್ಪಾ ಅವರು 2004ರಲ್ಲಿ ಕನ್ನಡದ ಪಾಂಡವ ಎಂಬ ಚಿತ್ರದಲ್ಲಿ ನಟಿಸಿ ಚಿತ್ರ ರಂಗವನ್ನು ಕೈಬಿಟ್ಟರು.
ಅದಾದ ನಂತರ ಮಲಯಾಳಂನ ನಿರ್ಮಾಪಕರಾದ ಎಮ್ ರಂಜಿತ್ ಅವರನ್ನು ಮದುವೆಯಾಗಿ ಒಂದಷ್ಟು ಧಾರವಾಹಿಗಳಲ್ಲಿ ಮತ್ತು ದೂರದರ್ಶನದಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಅದಾದ ನಂತರ ಅವರದೇ ಆದಂತ ಒಂದು ಸ್ವಂತ ಪ್ರೊಡಕ್ಷನ್ ಹೌಸ್ ಕಟ್ಟಿಕೊಂಡರು.
ಅಮೇರಿಕಾ ಅಮೇರಿಕಾ ಸಿನಿಮಾ ಮೂಲಕ ಮಿಂಚಿದ್ದ ನಟಿ ಹೇಮಾ ಪ್ರಭಾತ್ ಸಿನಿಮಾ ರಂಗದಿಂದ ದೂರಾಗಲು ಕಾರಣವೇನು ಗೊತ್ತಾ?
ಶಿಲ್ಪ ಅವರು ನಿರ್ಮಾಪಕಿ ಆದಮೇಲೆ, ಅವರ ಗಂಡ ನಿರ್ದೇಶನ ಮಾಡುವ ಸಿನಿಮಾಗಳಿಗೆ ಇವರೇ ಪ್ರೊಡಕ್ಷನ್ ಮಾಡಿದರು, ಆದರೆ ಇವರ ಪ್ರೊಡಕ್ಷನ್ನಲ್ಲಿ ಮೂಡಿ ಬಂದ ಚಿತ್ರಗಳು ಸಾಕಷ್ಟು ಯಶಸ್ಸು ಕಾಣದ ಕಾರಣ ಹಣವನ್ನೆಲ್ಲ ಕಳೆದುಕೊಂಡು ಮತ್ತೆ ಧಾರಾವಾಹಿ ಲೋಕಕ್ಕೆ ಬಂದು ಒಂದಷ್ಟು ಹಣವನ್ನು ಗಳಿಸಿಕೊಂಡು ಆರ್ಥಿಕವಾಗಿ ಮುಂದುವರೆದರು.
ಸಿನಿಮಾ ರಂಗ ಬಿಟ್ಟರು ಕೂಡ ಇವರನ್ನು ಕೈ ಹಿಡಿದಿದ್ದು ಮಾತ್ರ ಧಾರಾವಾಹಿ ಲೋಕ ಏಕೆಂದರೆ ಇವರದೇ ಪ್ರೊಡಕ್ಷನ್ ನಲ್ಲಿ ತಮಿಳು ಮತ್ತೆ ಮಲಯಾಳಂನಲ್ಲಿ ಎರಡು ದಾರವಾಹಿಗಳು ಸೂಪರ್ ಹಿಟ್ ಆದವು.
ನಟಿ ಸುಮಲತಾ ಅವರ ತಂದೆ ಕೂಡ ಓರ್ವ ಪ್ರಖ್ಯಾತ ಸೆಲೆಬ್ರಿಟಿ, ಅಷ್ಟಕ್ಕೂ ಅವರು ಯಾರು ಗೊತ್ತಾ?
ಅದಾದ ನಂತರ ಕಿರುತೆರೆಯ ಲೋಕದಲ್ಲಿ ಇವರು ದೊಡ್ಡ ನಿರ್ಮಾಪಕಿಯಾಗಿ ಹೆಸರು ಮಾಡಿದರು, ಇನ್ನು ಇವರಿಗೆ ಅವಂತಿಕ ಎಂಬ ಒಬ್ಬಳೇ ಮಗಳಿದ್ದು ಮಗಳು ಕೂಡ ನೋಡಲು ಥೇಟ್ ಅಮ್ಮನಂತೆ ಕಾಣುತ್ತಾರೆ, ಈಗ ಶಿಲ್ಪಾ ಅವರು ನೋಡಲು ಸಾಕಷ್ಟು ಬದಲಾಗಿದ್ದು , ಅವರ ಗಂಡ ಮತ್ತು ಮಗಳ ಜೊತೆ ಸುಖ ಸಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ
Do you know why the Janumada Jodi Actress Shilpa left the film industry