ನಟ ಸುನಿಲ್ ಪ್ರಯಾಣಿಸುತ್ತಿದ್ದ ಕಾರಿಗೆ ಅಂದು ಅಪಘಾತವಾದಾಗ ಅಸಲಿಗೆ ನಡೆದಿದ್ದು ಏನು ಗೊತ್ತಾ? ನಟಿ ಮಾಲಾಶ್ರೀ ಮಾತ್ರ ಪಾರಾಗಿದ್ದು ಹೇಗೆ?
ನಟ ಸುನಿಲ್ ರವರು ಏಪ್ರಿಲ್ 1, 1964 ರಲ್ಲಿ ಉಡುಪಿ ಜಿಲ್ಲೆಯ ಯೇಡ್ತಡಿ ಎಂಬ ಊರಿನಲ್ಲಿ ಜನಿಸಿದರು, ದುರಾದೃಷ್ಟವಶಾತ್ 24 ಜುಲೈ 1994 ರಂದು 30ರ ವಯಸ್ಸಿದ್ದಾಗ ಕಾರ್ ಆಕ್ಸಿಡೆಂಟ್ ಅಲ್ಲಿ ಕೊನೆ ಉಸಿರೆಳೆದರು.
ಕನ್ನಡ ಚಿತ್ರರಂಗದ 90ರ ದಶಕದಲ್ಲಿ ಚಾಕಲೇಟ್ ಹೀರೋ ಎಂದೆ ಖ್ಯಾತಿಯಾಗಿದ್ದ ನಟ ಸುನಿಲ್ (Kannada Actor Sunil) ಬದುಕಿದ್ದು ಮಾತ್ರ ಬರಿ 30 ವರ್ಷ, ಅಷ್ಟು ವರ್ಷಗಳಲ್ಲೇ ಅವರು 27 ಸಿನಿಮಾಗಳಲ್ಲಿ ನಟಿಸಿದ್ದರು. ಅವುಗಳಲ್ಲಿ ಎರಡು ತೆಲುಗು ಚಿತ್ರ ಮತ್ತು ಒಂದು ತಮಿಳು ಚಿತ್ರ.
ಸರಿಸುಮಾರು 27 ಚಿತ್ರಗಳಲ್ಲಿ, ನಟಿಸಿದ್ದ ಸುನಿಲ್ ರವರು ಕನ್ನಡದಲ್ಲಿ 24 ಚಿತ್ರಗಳಲ್ಲಿ ನಟಿಸಿ ಗೆದ್ದಂತಹ ಮಹಾನ್ ನಟ, ಅವರ ಮೊದಲ ಚಿತ್ರ ಬಿಸಿರಕ್ತ 1989 ರಲ್ಲಿ ತೆರೆ ಕಂಡಿತ್ತು, ಅವರ ಕೊನೆಯ ಚಿತ್ರ 1994ರಲ್ಲಿ ತೆರೆಕಂಡ ಪಂಜರದ ಗಿಳಿ.
ಬರೋಬ್ಬರಿ 500 ದಿನ ಯಶಸ್ವಿ ಪ್ರದರ್ಶನ ಕಂಡ ಜನುಮದ ಜೋಡಿ ಚಿತ್ರ ನಟಿ ಶಿಲ್ಪಾ ಸಿನಿಮಾ ರಂಗ ಕೈಬಿಟ್ಟಿದ್ದು ಏಕೆ ಗೊತ್ತಾ?
ಅವರು ನಟಿಸಿದ ಹಲವಾರು ಚಿತ್ರಗಳಲ್ಲಿ ಇನ್ನೂ ಅಚ್ಚಳಿಯದೆ ಉಳಿದಿರುವ ಚಿತ್ರಗಳೆಂದರೆ 1990 ರಲ್ಲಿ ತೆರೆಕಂಡ ಶ್ರುತಿ(Shruthi Kannada film), 1991ರಲ್ಲಿ ತೆರೆಕಂಡ ಸಿಬಿಐ ಶಿವ, 1992 ರಲ್ಲಿ ತೆರೆಕಂಡ ಸಿಂಧೂರ ತಿಲಕ ಮತ್ತು 1992 ರಲ್ಲಿ ತೆರೆಕಂಡ ಬೆಳ್ಳಿ ಕಾಲುಂಗುರ (Belli Kalungura)
ನಟ ಸುನಿಲ್ ರವರು ಏಪ್ರಿಲ್ 1, 1964 ರಲ್ಲಿ ಉಡುಪಿ ಜಿಲ್ಲೆಯ ಯೇಡ್ತಡಿ ಎಂಬ ಊರಿನಲ್ಲಿ ಜನಿಸಿದರು, ದುರಾದೃಷ್ಟವಶಾತ್ 24 ಜುಲೈ 1994 ರಂದು 30ರ ವಯಸ್ಸಿದ್ದಾಗ ಕಾರ್ ಆಕ್ಸಿಡೆಂಟ್ ಅಲ್ಲಿ ಕೊನೆ ಉಸಿರೆಳೆದರು.
ಕನ್ನಡದಲ್ಲಿ ಟಾಪ್ ನಟಿಯಾಗಿ ಮಿಂಚಿದ್ದ ಐಂದ್ರಿತಾ ರೇ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ದೂರವಾಗಿದ್ದು ಏಕೆ ಗೊತ್ತೇ?
ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಬರಿ ಐದು ವರ್ಷಗಳು ಮಾತ್ರ, ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ(RV college) ಓದುತ್ತಿದ್ದ ಸುನಿಲ್ ಅವರ ನಿಜವಾದ ಹೆಸರು ರಾಮಕೃಷ್ಣ (Actor Sunil real name Ramakrishna) ಎಂದು, ಅವರು ಹೆಚ್ಚಿನ ಸಿನಿಮಾಗಳನ್ನು ಮಾಲಾಶ್ರೀ (Kannada Actress Malashri) ಅವರ ಜೊತೆ ಅಭಿನಯಸಿದ್ದಾರೆ.
ಅಂದು ಜುಲೈ 23 1994 ರಂದು ಹೈದರಾಬಾದ್ ನಲ್ಲಿ ದಿನವೆಲ್ಲ ಶೂಟಿಂಗ್ ಮುಗಿಸಿ, ರಾತ್ರಿಯಾಗುತ್ತಿದ್ದಂತೆ ಮಾಲಾಶ್ರೀ ಅವರ ಜೊತೆ ಚಿಕ್ಕೋಡಿಯಲ್ಲಿ ನಡೆಯುತ್ತಿದ್ದ ರಸಮಂಜರಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಕಾರಣ ಚಿಕ್ಕೋಡಿಗೆ ಕಾರಿನ ಮುಖಾಂತರ ಪ್ರಯಾಣ ಬೆಳೆಸಿದರು,
ಚಿಕ್ಕೋಡಿಯಲ್ಲಿ ನಡೆಯುತ್ತಿದ್ದ ರಸಮಂಜರಿ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಅದಾಗಲೇ ರಾತ್ರಿ 3 ಗಂಟೆ ಆಗಿತ್ತು, ಕಾರ್ಯಕ್ರಮದಲ್ಲಿ ಬಿಜಿಯಾಗಿದ್ದ ಸುನಿಲ್ ರವರು ಸುಸ್ತಾದ ಕಾರಣ ತಮ್ಮ ಕಾರ್ ಡ್ರೈವರ್ ಗೆ, ಇಂದು ರಾತ್ರಿ ಇಲ್ಲೇ ಉಳಿಯೋಣ ಎಂದು ಹೇಳಿದರು.
ರಾಕಿ ಬಾಯ್ ತಾಯಿ ಪಾತ್ರ ಮಾಡಿದ ಅರ್ಚನಾ ಜೋಯಿಸ್ ಕೆಜಿಎಫ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಲಕ್ಷ ಗೊತ್ತೇ?
ಆದರೆ ಕಾರ್ ಡ್ರೈವರ್ ಈಗಲೇ ಹೊರಟು ಬಿಡೋಣ ಸರ್ ನಾಳೆ ಬೆಳಿಗ್ಗೆ ನನ್ನ ಮಗನ ಹುಟ್ಟುಹಬ್ಬ ಇದೆ ನಾನು ಹೋಗಲೇಬೇಕು ಎಂದು ಹೇಳುತ್ತಾರೆ, ಅವರ ಮಾತನ್ನು ನಿರಾಕರಿಸದ ಸುನಿಲ್ ಅವರು ಸರಿ ಹೋಗೋಣ ನಡೆ ಎಂದು ಕಾರಿನಲ್ಲಿ ಪ್ರಯಾಣ ಬೆಳೆಸುತ್ತಾರೆ.
ಆದರೆ ಅಂದು ಬೆಳಿಗ್ಗೆ ಜುಲೈ 24 1994 ಚಿತ್ರದುರ್ಗದ ಮಾದನಾಯಕನಹಳ್ಳಿಯ ಬಳಿ ಬರುತ್ತಿರುವ, ತಮಿಳುನಾಡು ರಿಜಿಸ್ಟ್ರೇಷನ್ TN 45- 7278, ನಂಬರ್ ಲಾರಿ ಸುನಿಲ್ ರವರ ಕಾರಿಗೆ ಡಿಕ್ಕಿ ಹೊಡೆದುಬಿಟ್ಟಿತ್ತು.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಡ್ರೈವರ್ ಆ ಕ್ಷಣದಲ್ಲೇ ಮೃತಪಟ್ಟಿದ್ದರು, ಕಾರಿನ ಹಿಂದೆ ಸೀಟ್ನಲ್ಲಿ ಕೂತಿದ್ದ ಸುನಿಲ್ ರವರಿಗೆ ಬೀಕರವಾದ ಗಾಯಗಳಾಗಿದ್ದವು, ಸುನಿಲ್ ರವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿಯಲ್ಲೇ ಸುನಿಲ್ ರವರು ಇಹಲೋಕ ತ್ಯಜಿಸಿ ಬಿಟ್ಟಿದ್ದರು.
ಅಮೇರಿಕಾ ಅಮೇರಿಕಾ ಸಿನಿಮಾ ಮೂಲಕ ಮಿಂಚಿದ್ದ ನಟಿ ಹೇಮಾ ಪ್ರಭಾತ್ ಸಿನಿಮಾ ರಂಗದಿಂದ ದೂರಾಗಲು ಕಾರಣವೇನು ಗೊತ್ತಾ?
ಮಗನ ಹುಟ್ಟುಹಬ್ಬಕ್ಕೆ ಬರುತ್ತಿದ್ದ ಕಾರ್ ಡ್ರೈವರ್ ಕೂಡ ಮನೆ ತಲುಪಲಿಲ್ಲ, ಕಾರ್ ಡ್ರೈವರ್ ಸುನಿಲ್ ರವರ ಮಾತು ಕೇಳಿದ್ದರೆ ಇಂದು ಇಬ್ಬರು ಕೂಡ ಉಳಿಯುತ್ತಿದ್ದರು.
ಸುನಿಲ್ ರವರ ಪಕ್ಕದಲ್ಲಿ ಕುಳಿತಿದ್ದ ಮಾಲಾಶ್ರೀ ಅವರಿಗೆ ಸಾಕಷ್ಟು ಸಣ್ಣ ಪುಟ್ಟ ಗಾಯಗಳಾಗಿದ್ದವು, ಮಾಲಾಶ್ರೀ ಅವರು ಕಾಲಕ್ರಮೆಣ ಚೇತರಿಸಿಕೊಂಡರು, ಆದರೆ ಸುನಿಲ್ ರವರು ಮಾತ್ರ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದರು.
ನಟಿ ಸುಮಲತಾ ಅವರ ತಂದೆ ಕೂಡ ಓರ್ವ ಪ್ರಖ್ಯಾತ ಸೆಲೆಬ್ರಿಟಿ, ಅಷ್ಟಕ್ಕೂ ಅವರು ಯಾರು ಗೊತ್ತಾ?
ಸುನಿಲ್ ರವರು ಉನ್ನತ ಶಿಖರದಲ್ಲಿದ್ದ ಕಾರಣ ಈ ಆಕ್ಸಿಡೆಂಟನ್ನು ಯಾರೋ ಬೇಕು ಅಂತಲೇ ಮಾಡಿಸಿದ್ದಾರೆ ಎಂಬ ಮಾತುಗಳು ಈಗಲೂ ಕೇಳಿಬರುತ್ತವೆ, ಏನೇ ಆದರೂ ಸುನಿಲ್ ರವರನ್ನು ಕಳೆದುಕೊಂಡ ಕನ್ನಡ ಇಂಡಸ್ಟ್ರಿ ಅಂದು ಮೂಕ ವಿಸ್ಮಿತವಾಯಿತು. ಇಂದಿಗೂ ನಟ ಸುನಿಲ್ ಅವರ ಅಪಾರ ಅಭಿಮಾನಿಗಳು ಅವರನ್ನು ಸದಾ ನೆನೆಯುತ್ತಾರೆ. ಈಗಲೂ ಟಿವಿಯಲ್ಲಿ ಅವರ ಸಿನಿಮಾಗಳು ಬಂದರೆ ತಪ್ಪದೆ ನೋಡುತ್ತಾರೆ.
what happened when Kannada Actor Sunil Car met with an accident that day