ಆಪ್ತಮಿತ್ರ ಸಿನಿಮಾ ನಂತರ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ದೂರಾಗಿದ್ದು ಏಕೆ? ಇವರ ಸ್ನೇಹದಲ್ಲಿ ಬಿರುಕು ಮೂಡಲು ಕಾರಣ ಗೊತ್ತಾ?

Vishnuvardhan / Dwarakish : ಸ್ನೇಹಿತರೆ ಕನ್ನಡ ಸಿನಿಮಾ ರಂಗದಲ್ಲಿ ಕಳ್ಳ ಕುಳ್ಳ ಎಂದು ಪ್ರಖ್ಯಾತಿ ಪಡೆದಿದ್ದಂತಹ ಡಾಕ್ಟರ್ ವಿಷ್ಣುವರ್ಧನ್ (Senior Actor Vishnuvardhan) ಹಾಗೂ ದ್ವಾರಕೀಶ್ (Senior Actor Dwarakish) ಸ್ನೇಹ ಎಷ್ಟರ ಮಟ್ಟಿಗೆ ಬಲವಾಗಿತ್ತು ಎಂಬುದು ನಮ್ಮೆಲ್ಲರಿಗೂ ಗೊತ್ತೇ ಇದೆ. ವಿಷ್ಣುವರ್ಧನ್ ಸ್ನೇಹಕ್ಕೆ ಬೆಲೆ ಕೊಡುತ್ತಿದ್ದಂತಹ ವ್ಯಕ್ತಿ. ಈ ಕಾರಣದಿಂದ ಅವರಿಗೆ ಕನ್ನಡ ಸಿನಿಮಾರಂಗದಲ್ಲಿ (Kannada Cinema Industry) ಅಪಾರ ಸ್ನೇಹಿತರಿದ್ದರು.
ವಿಷ್ಣುವರ್ಧನ್ ಅವರ ಆತ್ಮೀಯ ಸ್ನೇಹಿತರು ಎನ್ನುತ್ತಿದ್ದ ಹಾಗೆ ನಮ್ಮೆಲ್ಲರ ತಲೆಗೆ ತಟ್ಟಂತ ಬರುವುದು ಕುಚಿಕು ಗೆಳೆಯ ಅಂಬರೀಶ್ (Rebel Star Ambarish) ಹಾಗೂ ಕನ್ನಡದ ಕುಳ್ಳ ದ್ವಾರಕೀಶ್. ಹೌದು ಗೆಳೆಯರೇ ವಿಷ್ಣುವರ್ಧನ್ ಈ ಇಬ್ಬರ ಜೊತೆ ಬಹಳ ಮಧುರವಾದ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಹಾಗೂ ಹೆಚ್ಚಿನ ಸಿನಿಮಾಗಳಲ್ಲಿ ಒಟ್ಟೊಟ್ಟಿಗೆ ಅಭಿನಯಿಸುತ್ತಿದ್ದರು.
ಅಂದು ವಿಷ್ಣು ಸರ್ ಕಪಾಳಕ್ಕೆ ಹೊಡೆದು ಬಿಟ್ಟಿದ್ದ ಅವಿನಾಶ್, ಆ ನಂತರ ವಿಷ್ಣುವರ್ಧನ್ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?
ಹೀಗಿರುವಾಗ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಅವರ ಸ್ನೇಹವು ಆಪ್ತಮಿತ್ರ ಸಿನಿಮಾದ ಬಳಿಕ ಕೊಂಚ ಬಿರುಕು ಕಂಡಿತು ಎಂಬ ಗಾಳಿ ಸುದ್ದಿ ಆಗಿನ ಕಾಲದಿಂದಲೂ ಹರಿದಾಡುತ್ತಲೆ ಇದೆ. ಇದರ ಅಸಲಿ ಸತ್ಯ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೆ ಬದುಕು ಕೈ ಕೊಡಲು ಪ್ರಾರಂಭ ಮಾಡಿದಾಗ ದ್ವಾರಕೀಶ್ ಅವರು ಹೊಸ ಹೊಸ ನಟರನ್ನು ಹಾಕಿಕೊಂಡು ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಆ ಸಿನಿಮಾಗಳೆಲ್ಲವೂ ಸೋತು ನೆಲಕಚ್ಚುತ್ತಿತ್ತು ಹೀಗೆ ನಿರ್ಮಾಣ ಹಾಗೂ ನಟನೆ ಎರಡರಲ್ಲಿಯೂ ಸೋಲನ್ನು ಅನುಭವಿಸುತ್ತಿದ್ದಂತಹ ದ್ವಾರಕೀಶ್ ಅವರು ತಮ್ಮ ಹತ್ತಿರ ಇದ್ದಂತಹ ಆಸ್ತಿಯನ್ನೆಲ್ಲ ಕಳೆದುಕೊಳ್ಳುತ್ತಾರೆ.
15 ವರ್ಷವಿದ್ದಾಗ 35 ವರ್ಷದ ನಟನನ್ನು ಮದುವೆಯಾದ ನಟಿ ಸರಿತಾ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ?
ಅಷ್ಟೇ ಅಲ್ಲದೆ ಮನೆಯನ್ನು ಸಹ ಮಾರಿಬಿಡುತ್ತಾರೆ, ಸಿನಿಮಾ ಮಾಡುವುದಕ್ಕಾಗಿ ತಾವು ಮಾಡಿದಂತಹ ಸಾಲ ತೀರಿಸಲಾಗದೆ ದ್ವಾರಕೀಶ್ ಅವರು ಬೀದಿಗೆ ಬಂದುಬಿಡುತ್ತಾರೆ. ಆ ಸಂದರ್ಭದಲ್ಲಿ ಈ ಒಂದು ಮಾಹಿತಿ ವಿಷ್ಣುವರ್ಧನ್ ಅವರ ಕಿವಿಗೆ ಬಿದ್ದು ನನ್ನ ಸ್ನೇಹಿತನಿಗೆ ಏನಾದರೂ ಸಹಾಯ ಮಾಡಬೇಕೆಂದು ವಿಷ್ಣುವರ್ಧನ್ ಮುಂದಾದಾಗ ದ್ವಾರಕೀಶ್ ಅವರಿಂದ ಒಂದು ರೂಪಾಯಿಯನ್ನು ತೆಗೆದುಕೊಳ್ಳುವುದಿಲ್ಲ.
ಸರಿ ಆಯ್ತು ಸಿನಿಮಾದಲ್ಲಾದರೂ ಅಭಿನಯಿಸು ಎಂದು ವಿಷ್ಣುವರ್ಧನ್ ತಮ್ಮ ಆಪ್ತಮಿತ್ರ ಸಿನಿಮಾದಲ್ಲಿ ನಟಿಸುವಂತೆ ಕೇಳಿಕೊಳ್ಳುತ್ತಾರೆ. ಹೀಗೆ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆದು ಅಧಿಕ ದಿನಗಳ ಕಾಲ ತೆರಿಗೆ ಮೇಲೆ ರಾರಾಜಿಸುತ್ತದೆ. ಆಪ್ತಮಿತ್ರ ಸಿನಿಮಾದ ನಂತರ ದ್ವಾರಕೀಶ್ ಮತ್ತೆ ಕಳೆದುಕೊಂಡದ್ದನ್ನು ಪಡೆದುಕೊಂಡರು.
ಮನೆಯನ್ನು ಮರು ಖರೀದಿ ಮಾಡಿದರು ಹಾಗೂ ಹಣವನ್ನು ಸಂಪಾದನೆ ಮಾಡಲು ಮುಂದಾದರು. ವಿಷ್ಣು ದಾದಾ ಕೊಟ್ಟಂತಹ ಅವಕಾಶವನ್ನು ಉಪಯೋಗಿಸಿಕೊಂಡು ಮತ್ತೆ ಬದುಕಿನಲ್ಲಿ ಸಕ್ಸಸ್ ಕಡೆಗೆ ಮುಖ ಮಾಡಿದ ದ್ವಾರಕೇಶ್ ಅವರು ವಿಷ್ಣುವರ್ಧನ್ ಅವರಿಗೆ ಒಂದು ದೊಡ್ಡ ಮಟ್ಟದ ಬ್ರೇಕ್- ಬೇಕಿತ್ತು, ಆದ್ದರಿಂದ ನಾನು ಈ ಸಿನಿಮಾ ಮಾಡಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿಬಿಡುತ್ತಾರೆ. ಈ ಘಟನೆಯ ನಂತರ ವಿಷ್ಣು ಮತ್ತು ದ್ವಾರಕೀಶ್ ಅವರ ಸ್ನೇಹ ಅಂತರ ಕಂಡುಕೊಂಡಿತು.
ಈ ವಿಚಾರದ ಉತ್ತರ ಇನ್ನೂ ಸಿಕ್ಕಿಲ್ಲವಾದರೂ ಇನ್ನು ಈ ಬಗ್ಗೆ ಗುಸುಗುಸು ನಡೆಯುತ್ತಲೇ ಇದೆ, ಆದರೆ ಸ್ನೇಹಿತರೆ ಇವರ ಕಾಂಬಿನೇಷನ್ ಸಿನಿಮಾಗಳು ಈಗಲೂ ನಮ್ಮ ನಿಮ್ಮನ್ನು ರಂಜಿಸುವುದರಲ್ಲಿ ಎರಡು ಮಾತಿಲ್ಲ. ಅಂತಹ ಹಿಟ್ ಜೋಡಿ ಇವರ ಚಿತ್ರಗಳು, ಆಗಿನ ಕಾಲದಲ್ಲಿ ಸೂಪರ್ ಡೂಪರ್ ಹಿಟ್ ಆಗುತ್ತಿದ್ದವು. ಇವರ ಕಾಂಬಿನೇಷನ್ ಎಂದೊಡನೆ ಅಂದು ಸಿನಿಮಾ ಪಕ್ಕಾ ಸಕ್ಸಸ್ ಎಂದು ಫಿಕ್ಸ್ ಆಗಿಬಿಡುತ್ತಿದ್ದರು ಅಭಿಮಾನಿಗಳು.
What was the Reason for Dwarakish and Vishnuvardhan friendship to break after the movie Apthamitra




