Yashoda Movie: ಅಮೇರಿಕ ಬಾಕ್ಸ್ ಆಫೀಸ್ ನಲ್ಲಿ ಯಶೋದಾ ಹವಾ!
Yashoda Movie: ಸ್ಟಾರ್ ಬ್ಯೂಟಿ ಸಮಂತಾ ಅಭಿನಯದ ಇತ್ತೀಚಿನ ಚಿತ್ರ 'ಯಶೋದಾ' ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಕಲೆಕ್ಷನ್ ವಿಚಾರದಲ್ಲಿ ಈ ಚಿತ್ರ ಸಖತ್ತಾಗಿದೆ ಎನ್ನುತ್ತವೆ ಚಿತ್ರದ ಮೂಲಗಳು.
Yashoda Movie: ಸ್ಟಾರ್ ಬ್ಯೂಟಿ ಸಮಂತಾ (Actress Samantha) ಅಭಿನಯದ ಇತ್ತೀಚಿನ ಚಿತ್ರ ‘ಯಶೋದಾ’ ಇತ್ತೀಚೆಗೆ ಬಿಡುಗಡೆಯಾಗಿದ್ದು ಬಾಕ್ಸ್ ಆಫೀಸ್‌ನಲ್ಲಿ(Box Office) ಸದ್ದು ಮಾಡುತ್ತಿದೆ. ಬಹುದಿನಗಳ ನಂತರ ಸಮಂತಾ ನೇರ ತೆಲುಗು ಸಿನಿಮಾದಲ್ಲಿ ನಟಿಸಿರುವುದರಿಂದ ಇಂಡಸ್ಟ್ರಿ ವಲಯದಲ್ಲಿ ಹಾಗೂ ಪ್ರೇಕ್ಷಕರಲ್ಲಿ ಈ ಸಿನಿಮಾದ ಮೇಲೆ ನಿರೀಕ್ಷೆ ಹುಟ್ಟಿಕೊಂಡಿದೆ.
ಸಮಂತಾ ರಿಜೆಕ್ಟ್ ಮಾಡಿದ 3 ಬಿಗ್ ಬಜೆಟ್ ಚಿತ್ರಗಳು
ಮತ್ತು ಈ ಚಿತ್ರವು ಅವರ ನಿರೀಕ್ಷೆಗಳಿಗೆ ಕಡಿಮೆಯಾಗದ ಕಾರಣ, ‘ಯಶೋದಾ’ ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರ ಈಗಾಗಲೇ ಕಲೆಕ್ಷನ್ (Collections) ನಲ್ಲಿ ಸದೃಢವಾಗಿದೆ ಎನ್ನುತ್ತವೆ ಚಿತ್ರದ ಮೂಲಗಳು. ಜೊತೆಗೆ ಈ ಚಿತ್ರಕ್ಕೆ ಹೊರದೇಶಗಳಲ್ಲಿ ಸೂಪರ್ ರೆಸ್ಪಾನ್ಸ್ ಸಿಗುತ್ತಿದೆ.
ಅದರಲ್ಲೂ ಅಮೇರಿಕಾದಲ್ಲಿ (America) ಈ ಚಿತ್ರ ಕಲೆಕ್ಷನ್ ಸುರಿಮಳೆ ಮಾಡುತ್ತಿದೆ. ಈ ಚಿತ್ರ ಈಗಾಗಲೇ ಅರ್ಧ ಮಿಲಿಯನ್ ಡಾಲರ್ ಗಡಿ ದಾಟಿದೆ.
ಡಿವೋರ್ಸ್ ರದ್ದು ಮಾಡಿ ಒಂದಾಗಲು ಸಮಂತಾ ನಿರ್ಧಾರ
ಇದೇ ವೇಗ ಮುಂದುವರೆದರೆ ಯಶೋದಾ ಚಿತ್ರ ಸಾಗರೋತ್ತರ ಮಿಲಿಯನ್ ಡಾಲರ್ ಕ್ಲಬ್ ಸೇರುವುದು ಖಚಿತ ಎನ್ನುತ್ತಿವೆ ಚಿತ್ರ ಮೂಲಗಳು. ಬಾಡಿಗೆ ತಾಯ್ತನದ ಮೇಲೆ ಮೂಡಿಬಂದಿರುವ ಈ ಥ್ರಿಲ್ಲರ್ ಸಿನಿಮಾದಲ್ಲಿ ಸಮಂತಾ ಅಭಿನಯ ಸಕತ್ತಾಗಿದೆ ಎನ್ನುತ್ತಾರೆ ಅಭಿಮಾನಿಗಳು (Samantha Fans). ಈ ಚಿತ್ರವನ್ನು ಹರಿ ಮತ್ತು ಹರೀಶ್ ಜಂಟಿಯಾಗಿ ನಿರ್ದೇಶಿಸಿದ್ದಾರೆ.
Yashoda is rocking the US box office
Follow us On
Google News |