Technology

ಬಂತು ನೋಡಿ ಸತ್ತವರ ಜೊತೆಗೂ ಮಾತನಾಡೋ ತಂತ್ರಜ್ಞಾನ! ಬೆರಗಾದ ಜನತೆ

ಈ ಪ್ರಪಂಚವೇ ಬಹಳ ವಿಚಿತ್ರ ನೋಡಿ. ಇಲ್ಲಿ ಯಾವಾಗ ಏನು ನಡೆಯುತ್ತೆ ಅಂತ ಯಾರಿಗೂ ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ. ಅದರಲ್ಲೂ ಇಂದಿನ ತಂತ್ರಜ್ಞಾನ (technology) ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಮನುಷ್ಯರು ಮಾಡಬೇಕಾದ ಪ್ರತಿಯೊಂದು ಕೆಲಸವನ್ನು ಕೂಡ ತಂತ್ರಜ್ಞಾನದ ಮೂಲಕ ಮೆಷಿನ್ (machines) ಗಳೇ ನಿಭಾಯಿಸುತ್ತವೆ.

ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಸವಾಲುಗಳನ್ನು ಎದುರಿಸಿ ಆ ಸವಾಲುಗಳಿಗೆ ಉತ್ತರವನ್ನು ನೀಡಿದೆ. ಅಂತಹ ಜನರಿಗೆ ಬಹಳ ಹತ್ತಿರವಾಗಿರುವ ಒಂದು ಹೊಸ ತಂತ್ರಜ್ಞಾನ ಅಂದ್ರೆ ಅದು AI.

AI technology that amazes people

ಕೇವಲ 30 ಸಾವಿರಕ್ಕೆ ಖರೀದಿಸಿ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್! ಸಿಂಗಲ್ ಓನರ್

ಎ ಐ ಹೊಸ ತಂತ್ರಜ್ಞಾನ!

(Artificial Intelligence) ಇತ್ತೀಚಿನ ದಿನಗಳಲ್ಲಿ ಹೇಳಲಾಗದೆ ಇರುವಷ್ಟು ದೊಡ್ಡ ಸಾಧನೆಗಳನ್ನು ಮಾಡಿದೆ ಎನ್ನಬಹುದು. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ AI tools ನ್ನು ಬಳಸಲಾಗುತ್ತಿದೆ. ಮನುಷ್ಯರು ಮಾಡಬೇಕಾದ ಬಹುತೇಕ ಎಲ್ಲಾ ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯ ಈ ತಂತ್ರಜ್ಞಾನಕ್ಕೆ ಇದೆ.

ಆದರೆ ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ನಾವು ನಂಬಲು ಸಾಧ್ಯವಾಗದೆ ಇರುವಂತಹ ಒಂದು ಹೊಸ ಆವಿಷ್ಕಾರ (new invention) ವನ್ನು ಮಾಡಲಾಗಿದೆ. ಅದೇನಂದ್ರೆ ಈ ತಂತ್ರಜ್ಞಾನದ ಮೂಲಕ ಇನ್ನು ಮುಂದೆ ಸತ್ತವರ ಜೊತೆಗೂ ಮಾತನಾಡಬಹುದು.

ಸತ್ತವರ ಜೊತೆಗೂ ಮಾತನಾಡಬಹುದಾದ AI ತಂತ್ರಜ್ಞಾನ ಬೆಳವಣಿಗೆ!

ಹೌದು, ಇದನ್ನು ಖಂಡಿತವಾಗಿಯೂ ನಂಬುವುದಕ್ಕೆ ಕಷ್ಟ ಆಗಬಹುದು ಆದರೂ ಮನುಷ್ಯ ಏನನ್ನಾದರೂ ಸಾಧಿಸಬಲ್ಲ ಎನ್ನುವುದಕ್ಕೆ ಇದು ದೊಡ್ಡ ಉದಾಹರಣೆ ಅನ್ನಬಹುದು. ಸಿರಿಯನ್ ನಟಿ, ಸಿರಿನ್ ಮಲಾಸ್ ಎನ್ನುವವಳು ಈ ಹೊಸ ತಂತ್ರಜ್ಞಾನದ ಆವಿಷ್ಕಾರದ ಪ್ರಯೋಜನ ಪಡೆದುಕೊಂಡಿದ್ದಾರೆ ಎನ್ನಬಹುದು.

ನಾವು ನಮ್ಮ ಪ್ರೀತಿ ಪಾತ್ರರನ್ನು ಆಕಸ್ಮಿಕವಾಗಿ ಕಳೆದುಕೊಂಡಾಗ ಆಗುವ ದುಃಖ ಅಷ್ಟಿಷ್ಟಲ್ಲ. ಅದು ಬಹುಶಹ ಜೀವನಪೂರ್ತಿ ನಮ್ಮ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ಎಷ್ಟೋ ಬಾರಿ ಕೆಲವು ವ್ಯಕ್ತಿಗಳು ಸಾಯುವುದಕ್ಕೂ ಮೊದಲು ಒಮ್ಮೆ ಅವರ ಬಳಿ ಮಾತನಾಡಬೇಕಿತ್ತು ಅಂತ ಯೋಚನೆ ಬಂದಾಗ ಅದು ಮನಸ್ಸನ್ನು ಇನ್ನಷ್ಟು ಹಾಳು ಮಾಡುತ್ತದೆ. ಇಂತಹ ನೋವುಗಳನ್ನು ಅನುಭವಿಸುವವರಿಗಾಗಿ ಎಐ ಟೂಲ್ ಗಳನ್ನು ಬಳಸಿ ಈ ಹೊಸ ತಂತ್ರಜ್ಞಾನವನ್ನು ಕಂಡುಹಿಡಿಯಲಾಗಿದೆ.

ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇಡುವಂತಿಲ್ಲ! ಹೊಸ ರೂಲ್ಸ್

chats to dead mother using AIತಾಯಿಯ ಬಳಿ ಸತ್ತ ನಂತರವೂ ಮಾತನಾಡಲು ಆಕೆ ಮಾಡಿದ್ದೇನು?

ಡಿಸೆಂಬರ್ ಪ್ರಾಜೆಕ್ಟ್ ಏ ಐ ಆಧಾರಿತ ಬೋಟ್ ಸಿಸ್ಟಮ್ ಮೂಲಕ ಆಕೆ ತನ್ನ ತಾಯಿಯನ್ನು ನೆನಪಿಸಿಕೊಳ್ಳುತ್ತಾಳೆ. AI ತಂತ್ರಜ್ಞಾನ ಬಳಸಿ ತನ್ನ ಸತ್ತ ತಾಯಿಯ ಜೊತೆಗೆ ಮಾತನಾಡುವಂತಹ ಭಯಾನಕ ಕೆಲಸವನ್ನು ಮಾಡುತ್ತಾಳೆ.

ಮಲಾಸ್, 2015 ರಲ್ಲಿ ಸಿರಿಯಾ ತೊರೆದು ಜರ್ಮನ್ ಗೆ ಶಿಫ್ಟ್ ಆಗುತ್ತಾಳೆ. ಆದ್ರೆ ಆಕೆಗೆ ಮಗುವಾದ ನಂತರ ತಂದೆ ತಾಯಿಯನ್ನು ನೋಡುವ ನೆನಪಾಗುತ್ತೆ. ಅಗೆ ತಾಯಿ 82 ವರ್ಷ ವಯಸ್ಸಿನಲ್ಲಿ ಮೂತ್ರಪಿಂಡ ವೈಫಲ್ಯದ ಕಾರಣದಿಂದ ಜೀವ ಕಳೆದುಕೊಂಡಿರುತ್ತಾಳೆ.

ಈ ಅನಿರೀಕ್ಷಿತ ಘಟನೆಯನ್ನು ಮಲಾಸ್ ಸಹಿಸಲು ಸಾಧ್ಯವಾಗುವುದಿಲ್ಲ. ತಾಯಿಯ ಜೊತೆಗೆ ಮಾತನಾಡಬೇಕು ಎನ್ನುವ ಆಸೆ ಇರುತ್ತದೆ. ಆದ್ದರಿಂದ AI ತಂತ್ರಜ್ಞಾನದ ಮೂಲಕ ಸತ್ತ ನಂತರವೂ ತಾಯಿಯ ಬಳಿ ಮಾತನಾಡಲು ಆಕೆ ಹೊಸ ಪ್ರಯತ್ನ ಮಾಡುತ್ತಾಳೆ.

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹತ್ತು ಸಾವಿರ ಡಿಪಾಸಿಟ್ ಇಟ್ರೆ 7 ಲಕ್ಷ ಸಿಗಲಿದೆ

ಒಮ್ಮೆ ಮಾತನಾಡಲು ಕೇವಲ 10 ಡಾಲರ್!

ಸತ್ತ ತಾಯಿಯ ಬಳಿ ಮಾತನಾಡಲು ಮಲಾಸ್ ಗೆ AI ತಂತ್ರಜ್ಞಾನ ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿ ಸತ್ತಿರುವ ವ್ಯಕ್ತಿಯ ಜೊತೆಗೆ ಇರುವ ಸಂಬಂಧ ಹಾಗೂ ಮತ್ತಿತರ ವಿವರಗಳನ್ನು ಭರ್ತಿ ಮಾಡಿ ಒಂದು ಫಾರಂ ಕೊಡಬೇಕು ಅದಕ್ಕೆ 10 ಡಾಲರ್ ಚಾರ್ಜ್ ಮಾಡಲಾಗುತ್ತದೆ. ಹಾಗೂ ಒಂದು ಗಂಟೆಗಳವರೆಗೆ ಸತ್ತವರ ಜೊತೆಗೆ ಚಾಟ್ ಮಾಡಬಹುದು. ಇದು ಬಹಳ ವಿಚಿತ್ರ ಅನಿಸಿದರು ತಂತ್ರಜ್ಞಾನ ಬೆಳವಣಿಗೆಯಲ್ಲಿ ಒಂದು ದೊಡ್ಡ ಮೈಲಿಗಲ್ಲು ಎನ್ನಬಹುದು.

ಆದರೆ ಇದರ ಸತ್ಯಾಸತ್ಯತೆಯ ಬಗ್ಗೆ ಇನ್ನಷ್ಟು ಆವಿಷ್ಕಾರಗಳು ನಡೆಯುತ್ತಲೇ ಇವೆ. ಹಾಗಾಗಿ ನಮ್ಮ ದೇಶಕ್ಕೂ ಇದೊಂದು ತಂತ್ರಜ್ಞಾನ ಬಂದ್ರೆ ನಿಜಕ್ಕೂ ದೊಡ್ಡ ಬಿಸಿನೆಸ್ ಆಗೋದ್ರಲ್ಲಿ ಡೌಟ್ ಇಲ್ಲ ಅಲ್ವಾ?

AI technology that amazes people

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories