ಬ್ಯಾಂಕಿನ ವ್ಯವಹಾರವನ್ನು (bank transaction) ಬಹುತೇಕ ಎಲ್ಲರೂ ಮಾಡಿರುತ್ತೀರಿ ಅಲ್ವಾ? ಬ್ಯಾಂಕ್ ಅಂದ್ಮೇಲೆ ಅಲ್ಲಿ ಒಂದು ಖಾತೆಯನ್ನು ತೆರೆದಿರುತ್ತೀರಿ ಅದು ಉಳಿತಾಯ ಖಾತೆ (savings account) ಆಗಿರಬಹುದು, ಚಾಲ್ತಿ ಖಾತೆ, ಸ್ಯಾಲರಿ ಖಾತೆ, ಜಂಟಿ ಖಾತೆ ಹೀಗೆ ಬೇರೆ ಬೇರೆ ಖಾತೆಯನ್ನು ತೆರೆದು ಬ್ಯಾಂಕಿಂಗ್ ವ್ಯವಹಾರವನ್ನು ನಿರ್ವಹಿಸುತ್ತೀರಿ.
ಇಷ್ಟೆಲ್ಲಾ ಬ್ಯಾಂಕಿಂಗ್ (Banking) ವ್ಯವಹಾರ ಮಾಡುವ ನೀವು ಬ್ಯಾಂಕ್ ನಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು ಎಂದು ಗೊತ್ತಾ?
ಮಹಿಳೆಯರಿಗಾಗಿ ಹೊಸ ಯೋಜನೆ; ಸಿಗಲಿದೆ 15,000 ರೂಪಾಯಿ ಜೊತೆಗೆ ಉಚಿತ ಟ್ರೈನಿಂಗ್!
ಹೌದು, ಆರ್‌ಬಿಐ (Reserve Bank of India) ಈಗ ಹೊಸ ನಿಯಮ ಜಾರಿಗೆ ತಂದಿದ್ದು ಆದಾಯ ತೆರಿಗೆ ಇಲಾಖೆ (Income Tax department) ಕಣ್ಣು ತಪ್ಪಿಸಿ ನೀವು ಉಳಿತಾಯ ಖಾತೆಯಲ್ಲಿ ಇದಕ್ಕಿಂತ ಹೆಚ್ಚಿನ ಹಣವನ್ನು ಇಟ್ಟುಕೊಂಡರೆ ಹೆಚ್ಚುವರಿ ದಂಡ ಪಾವತಿಸಬೇಕು. ಹಾಗಾದ್ರೆ ಖಾತೆಯಲ್ಲಿ ಎಷ್ಟು ಹಣ ಇರಬಹುದು ಎನ್ನುವುದನ್ನು ನೋಡೋಣ.
ಮಿನಿಮಮ್ ಬ್ಯಾಲೆನ್ಸ್ ಇರಲೇಬೇಕು! (Maintain minimum balance)
ನೀವು ಯಾವುದೇ ಬ್ಯಾಂಕ್ ನ ಖಾತೆಯನ್ನು ತೆರೆದರು ಕೂಡ ಆಯಾ ಬ್ಯಾಂಕ್ ನ ನಿಯಮಕ್ಕೆ ಅನುಸಾರವಾಗಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಸರ್ಕಾರ ಜಾರಿಗೆ ತಂದಿರುವ ಜನ್ ಧನ್ ಖಾತೆಯನ್ನು ಹೊರತುಪಡಿಸಿ ಬೇರೆ ಎಲ್ಲಾ ಬ್ಯಾಂಕ್ ಖಾತೆಯಲ್ಲಿಯೂ ಕೂಡ ಕನಿಷ್ಠ 500 ರೂಪಾಯಿಗಳಿಂದ 10 ಸಾವಿರ ರೂಪಾಯಿಗಳವರೆಗೆ ಮಿನಿಮಮ್ ಬ್ಯಾಲೆನ್ಸ್ ಇರಲೇಬೇಕು. ಒಂದುವೇಳೆ ಈ ಬ್ಯಾಲೆನ್ಸ್ ಇಲ್ಲದೆ ಇದ್ದಲ್ಲಿ ನೀವು ವಾರ್ಷಿಕ ಶುಲ್ಕದ ಜೊತೆಗೆ ದಂಡವನ್ನು ಕೂಡ ಪಾವತಿಸಬೇಕು.
ಈ ಎಲ್ಐಸಿ ಯೋಜನೆಯಲ್ಲಿ ಐದು ವರ್ಷಕ್ಕೆ ನಿಮ್ಮ ಹಣ ಒನ್ ಟು ಡಬಲ್ ಆಗುತ್ತೆ!
ವರ್ಷಕ್ಕೆ ಎಷ್ಟು ಹಣ ಠೇವಣಿ ಮಾಡಬಹುದು?
ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 10 ಲಕ್ಷ ರೂಪಾಯಿಗಳನ್ನು ಠೇವಣಿ (deposit) ಮಾಡಬಹುದು. ಒಂದು ಬಾರಿಗೆ 50,000ಗಳಿಗಿಂತ ಹೆಚ್ಚಿನ ನಗದು ಠೇವಣಿ ಮಾಡಿದರೆ ಅದಕ್ಕೆ ಪ್ಯಾನ್ ಕಾರ್ಡ್ (PAN card) ಸಲ್ಲಿಕೆ ಮಾಡಬೇಕು
ಒಂದು ವೇಳೆ ನೀವು ಈ ರೀತಿ ಮಾಡದೆ ಇದ್ದಲ್ಲಿ ಬ್ಯಾಂಕ್ ಮೂಲಕ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ರವಾನೆ ಆಗುತ್ತದೆ ಹಾಗೂ ನಿಮ್ಮ ಉಳಿತಾಯ ಖಾತೆಯ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.
ಆರ್ ಬಿ ಐ ನ ನಿಯಮ ಏನು?
ಭಾರತೀಯ ನಾಗರಿಕರ ಮೇಲೆ ಆದಾಯ ತೆರಿಗೆ ಇಲಾಖೆ ತನ್ನ ದೃಷ್ಟಿಯನ್ನು ಇಟ್ಟಿರುತ್ತದೆ. ಹಾಗಾಗಿ ನೀವು ಆದಾಯ ತೆರಿಗೆ ಇಲಾಖೆಯ ಕಣ್ಣು ತಪ್ಪಿಸಿ ಹೆಚ್ಚುವರಿ ಹಣವನ್ನು ಇಟ್ಟುಕೊಳ್ಳುವಂತಿಲ್ಲ. ಅಥವಾ ಹಾಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ (Bank Account) ಹಣ ಇದ್ದರೂ ಕೂಡ ಆ ಆದಾಯದ ಮೂಲ ಯಾವುದು ಎನ್ನುವುದಕ್ಕೆ ಸರಿಯಾದ ದಾಖಲೆ ಹೊಂದಿರಬೇಕು.
ಒಂದುವೇಳೆ ದಾಖಲೆ ಇಲ್ಲದೆ ಇರುವ ಆದಾಯಕ್ಕೆ ತೆರಿಗೆ ಪಾವತಿ ಮಾಡಬೇಕು. 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಠೇವಣಿ ಮಾಡಿದರೆ ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಬೇಕಾಗುತ್ತದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹತ್ತು ಸಾವಿರ ಡಿಪಾಸಿಟ್ ಇಟ್ರೆ 7 ಲಕ್ಷ ಸಿಗಲಿದೆ
ಇದಕ್ಕಿಂತ ಹೆಚ್ಚಿನ ಮೊತ್ತ ಇದ್ದರೆ ಅಥವಾ 10 ಲಕ್ಷಕ್ಕೆ ಕೂಡ ನೀವು ನಿಮ್ಮ ಆದಾಯದ ಮೂಲವನ್ನು ಬಹಿರಂಗಪಡಿಸಬೇಕಾಗುತ್ತದೆ. ಹಾಗೆ ಮಾಡದೆ ಇದ್ದಲ್ಲಿ ನೀವು ಇಟ್ಟ ಠೇವಣಿಯ ಮೊತ್ತದ ಮೇಲೆ, 60% ನಷ್ಟು ತೆರಿಗೆ, 25% ನಷ್ಟು ಸರ್ಚಾರ್ಜ್ ಮತ್ತು 4%, ನಷ್ಟು ಸೆಸ್ ಪಾವತಿಸ ಬೇಕಾಗಬಹುದು.
ನಿಶ್ಚಿತ ಠೇವಣಿಗೆ ಬದಲಾಯಿಸಿ!
ಒಂದು ವೇಳೆ ನಿಮ್ಮ ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇದ್ದರೆ ಅದನ್ನು ಎಫ್ ಡಿ ಅಥವಾ ನಿಶ್ಚಿತ ಠೇವಣಿಯಾಗಿ ಪರಿವರ್ತಿಸಬಹುದು. ಇದಕ್ಕೆ ಆದಾಯ ತೆರಿಗೆ ರಿಯಾಯಿತಿ ಕೂಡ ಸಿಗುತ್ತದೆ ಬ್ಯಾಂಕ್ನಿಂದ ನೀವು ಪಡೆದುಕೊಳ್ಳುವ ಬಡ್ಡಿ ರೂ.10,000ಗಳಿಗಿಂತ ಹೆಚ್ಚಿಗೆ ಇದ್ದರೆ ಅದನ್ನು ಆದಾಯದ ಮೂಲ ಎಂದು ಪರಿಗಣಿಸಿ ಆ ಆದಾಯಕ್ಕೆ ಆದಾಯ ತೆರಿಗೆ ಸ್ಲಾಬ್ ಪ್ರಕಾರ ತೆರಿಗೆ ಪಾವತಿಸಬೇಕು.
ಸಿಹಿ ಸುದ್ದಿ! ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹಣ ಡಬಲ್ ಆಗುತ್ತೆ
ಈ ವಿಚಾರಗಳನ್ನು ನೀವು ತಿಳಿದುಕೊಂಡು ಬ್ಯಾಂಕ್ ವ್ಯವಹಾರವನ್ನು ನಡೆಸಿ ಹಾಗೂ ಎಷ್ಟೇ ಮೊತ್ತದ ಹಣವನ್ನು ಠೇವಣಿ ಮಾಡುವುದಿದ್ದರೂ ಕೂಡ ಆ ಹಣದ ಮೂಲ ಯಾವುದು ಎನ್ನುವ ದಾಖಲೆಗಳನ್ನು ನಿಮ್ಮ ಬಳಿ ಭದ್ರವಾಗಿ ಇಟ್ಟುಕೊಳ್ಳಿ. ಇಲ್ಲವಾದರೆ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆಯೋ ಅದಕ್ಕೆ 100% ನಷ್ಟು ಹೆಚ್ಚಿನ ದಂಡ ಪಾವತಿಸಬೇಕಾಗುತ್ತದೆ.
You cannot keep more money than this in the bank account
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.